Author: Kannada News

ಡಿಜಿಟಲ್ ಡೆಸ್ಕ್ :   ಜಪಾನ್​​ನ ಹೊನ್ಶು ಪ್ರದೇಶದ ಆಗ್ನೇಯ ಭಾಗದಲ್ಲಿ ಇಂದು ಸಂಜೆ ಪ್ರಬಲ ಭೂಕಂಪ ( Earthquake ) ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಸಂಜೆ 6 ಗಂಟೆಗೆ ಜಪಾನ್ ನಲ್ಲಿ ಭೂಕಂಪ ಸಂಭವಿಸಿದ್ದು,  ರಿಕ್ಟರ್​ ಮಾಪಕದಲ್ಲಿ 6.5ರಷ್ಟು ದಾಖಲಾಗಿದೆ ಎಂದು ಹೇಳಲಾಗಿದೆ., ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/today-257-corona-case-in-karnataka/ https://kannadanewsnow.com/kannada/bangalore-house-theef-stole-the-gold/ https://twitter.com/ANI/status/1465304831317331971?ref_src=twsrc%5Etfw%7Ctwcamp%5Etweetembed%7Ctwterm%5E1465304831317331971%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fworld%2Fearthquake-of-magnitude-6-5-jolts-in-japan-lxk-302124.html https://kannadanewsnow.com/kannada/public-holidays-in-2022-how-many-holidays-are-there-in-a-year-which-month-how-many-days-off-here-are-full-details/

Read More

ಬೆಂಗಳೂರು : ಕಳ್ಳತನ ಮಾಡಲು ಖದೀಮರು ಅದೆಂತಹ ಪ್ಲ್ಯಾನ್ ಮಾಡುತ್ತಾರೆ ಎಂಬುದನ್ನು ಸಿನಿಮಾಗಳಲ್ಲಿ ಹೆಚ್ಚಾಗಿ ನೋಡಿರುತ್ತೀರಿ, ಇದೀಗ ಅದೇ ತೆರನಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖದೀಮರು ಖತರ್ ನಾಕ್ ಪ್ಲ್ಯಾನ್ ಮಾಡಿದ್ದು, ವ್ಯಾಕ್ಸಿನ್ ಹಾಕುವ ನೆಪದಲ್ಲಿ ಬಂದು ಖದೀಮರು ಚಿನ್ನಾಭರಣ ದೋಚಿದ್ದಾರೆ. https://kannadanewsnow.com/kannada/kadugolla-janapada-sogadu-program-in-hiriyur/ ಏನಿದು ಘಟನೆ ಆರೋಗ್ಯ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಮೂವರು ಪಿಸ್ತೂಲ್​ ತೋರಿಸಿ ದರೋಡೆ ಮಾಡಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್​ಬಿಎಂ ಕಾಲೊನಿಯಲ್ಲಿ ನಡೆದಿದೆ. ಕೊರೊನಾ ಲಸಿಕೆ ಹಾಕುವುದಾಗಿ ಸಂಪತ್ ಎಂಬುವವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಬೆದರಿಸಿ  150 ಗ್ರಾಂ ಚಿನ್ನಾಭರಣ ದೋಚಿ, ಪರಾರಿಯಾಗಿದ್ದಾರೆ. https://kannadanewsnow.com/kannada/public-holidays-in-2022-how-many-holidays-are-there-in-a-year-which-month-how-many-days-off-here-are-full-details/ ಕಾರು ಹಾಗೂ ಬೈಕಿನಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ. https://kannadanewsnow.com/kannada/today-257-corona-case-in-karnataka/

Read More

* ರಂಜಿತ್ ಶೃಂಗೇರಿ ಬೆಂಗಳೂರು :   ರಾಜ್ಯದ ‘OBC’ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಿದ್ಯಾರ್ಥಿ ವೇತನಕ್ಕೆ ( SCHOLARSHIP)  ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ. https://kannadanewsnow.com/kannada/kuvempu-vv-date-extended/ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2021-22 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ , ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ದಿನಾಂಕ 30:11:2021 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು, ಇದೀಗ ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳ ಮನವಿ ಮೇರೆಗೆ ಡಿಸೆಂಬರ್ 31 ರವರೆಗೆ ವಿಸ್ತರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/omicron-omicron-spread-is-dangerous-a-serious-warning-from-the-who/

Read More

ಶಿವಮೊಗ್ಗ :  2021-22 ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ಪದವಿಗಳ ಪ್ರವೇಶಾತಿ ದಿನಾಂಕ ವಿಸ್ತರಿಸಿ ಕುವೆಂಪು ವಿವಿ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ 2000 ರೂ ಗಳ ದಂಡ ಶುಲ್ಕದೊಂದಿಗೆ ದಿನಾಂಕ 20:11:2021 ರವರೆಗೆ ಪ್ರವೇಶಾತಿ ದಿನಾಂಕ ವಿಸ್ತರಿಸಲಾಗಿತ್ತು, ಇದೀಗ ಮುಂದುವರೆದು ರೂ 3000 ರೂಗಳ ದಂಡ ಶುಲ್ಕದೊಂದಿಗೆ ಡಿಸೆಂಬರ್ 6 ರವರೆಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಹಾಗೆಯೇ ವಿಳಂಬ ಪ್ರವೇಶ ಪಡೆದ ವಿದ್ಯಾರ್ಥಿಗಳ ಹಾಜರಾತಿಯನ್ನು ಸರಿದೂಗಿಸಲು ವಿಶೇಷ ತರಗತಿ ತೆಗೆದುಕೊಳ್ಳಲು ವಿವಿಯ ಶೈಕ್ಷಣಿಕ ವಿಭಾಗದ ಉಪಕುಲಸಚಿವರು ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/good-news-account-holders-of-these-16-banks-will-get-5-lakh-worth-of-benefit-which-of-those-banks-heres-the-full-information/ https://kannadanewsnow.com/kannada/omicron-omicron-spread-is-dangerous-a-serious-warning-from-the-who/

Read More


best web service company