Author: Kannada News

ಬೆಂಗಳೂರು :  ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 291 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು,  ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,96,148 ಕ್ಕೆ ಏರಿಕೆಯಾಗಿದೆ.  ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ 8 ಮಂದಿ ಮೃತಪಟ್ಟಿದ್ದು,  ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,211 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 6,416 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. https://kannadanewsnow.com/kannada/arasikere-bjp-worker-clash-news/ ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 185 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,56,452 ಕ್ಕೆ ಏರಿಕೆಯಾಗಿದೆ. 12,56,452 ಸೋಂಕಿತರ ಪೈಕಿ 12,35,281 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ  ಕೊರೊನಾ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾದಿಂದ ಈವರೆಗೆ 16,337 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 4,833 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. https://twitter.com/DHFWKA/status/1465683324999852033?ref_src=twsrc%5Etfw%7Ctwcamp%5Etweetembed%7Ctwterm%5E1465683324999852033%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fbengaluru%2Fkarnataka-new-corona-cases-death-toll-total-covid19-active-coronavirus-cases-on-november-30-gbd-302548.html https://kannadanewsnow.com/kannada/dl-renewal-has-your-drivers-license-expired-sit-at-home-and-update-this-way/

Read More

ಬೆಂಗಳೂರು :  ಕೊರೊನಾದ ಹೊಸ ತಳಿ ಒಮಿಕ್ರಾನ್ ಮತ್ತೆ ಜನರನ್ನು ಆತಂಕ್ಕೆ ದೂಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು  ಕೈಗೊಂಡಿದೆ. https://kannadanewsnow.com/kannada/siddu-and-devegowda-are-love-birds/ ಬೆಂಗಳೂರಿನಲ್ಲಿ ಕೂಡ ಒಮಿಕ್ರಾನ್ ಡೆಡ್ಲಿ ವೈರಸ್ ಮೇಲೆ ಬಿಬಿಎಂಪಿ ಹದ್ದಿನ ಕಣ್ಣಿಟ್ಟಿದ್ದು,  , ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. 1) ಮೊಬೈಲ್ ಲಸಿಕಾ ಕೇಂದ್ರಗಳ ಹೆಚ್ಚಳ 2) ಬೆಂಗಳೂರು ಗಡಿಭಾಗದಲ್ಲಿ ದಿನದು ಇಪ್ಪತ್ತನಾಲ್ಕು ಗಂಟೆ ಕಟ್ಟೆಚ್ಚರ 3) ನಗರದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್ಸ್ ಗಳ ನಿಯೋಜನೆ 4) ಮನೆ ಮನೆಗೆ ತೆರಳಿ ಲಸಿಕೆ ಅಭಿಯಾನ 5) ವಾರ್ಡ್ ಮಟ್ಟದಲ್ಲಿ ಆಟೋಗಳಿಗೆ ಧ್ವನಿ ವರ್ದಕ ಕಟ್ಟಿ ಒಮಿಕ್ರಾನ್ ಬಗ್ಗೆ ತಿಳುವಳಿಕೆ ಹೋಟೆಲ್. ರೆಸ್ಟೋರೆಂಟ್, ಚಿತ್ರಮಂದಿರಗಳ ಸಿಬ್ಬಂದಿಗಳ ಸಂಪೂರ್ಣ ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸುವುದು ಸೇರಿದಂತೆ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಕೊರೊನಾದ ಹೊಸ ತಳಿ ಒಮಿಕ್ರಾನ್ ಮತ್ತೆ ಜನರನ್ನು ಆತಂಕ್ಕೆ ದೂಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು  ಕೈಗೊಂಡಿದೆ. ಬೆಂಗಳೂರಿನಲ್ಲಿ…

Read More

ಮೈಸೂರು  : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿ.ಟಿ ದೇವೇಗೌಡ ಅವರು ಲವ್ ಬರ್ಡ್ ( LOVE BIRDS) ಇದ್ದಂತೆ ಎಂದು ಸಚಿವ ಎಸ್ ಟಿ ಸೋಮಶೇಖರ್ ವ್ಯಂಗ್ಯವಾಡಿದರು. https://kannadanewsnow.com/kannada/big-breaking-news-omikron-anxiety-background-new-guidelines-published-by-central-government/ ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಬ್ಬರು ಯಾರಿಗೆ ಲವ್ ಆಗುತ್ತದೆ , ಯಾವಾಗ ಡಿವೋರ್ಸ್ ಆಗುತ್ತದೆ ಎಂಬುದು ಮಾತ್ರ ಅವರಿಗೆ ಗೊತ್ತು, ಪೂಜೆ ಮಾ ಡಿಸಿದ ಕೂಡಲೇ ಎಲ್ಲರೂ ಸಿಎಂ ಆಗಲ್ಲ, ಪೂಜೆ ಮಾಡಿದ ಕೂಡಲೇ ಸಿಎಂ ಆಗುವುದಾದರೆ ಎಲ್ಲರೂ ಪೂಜೆ ಮಾಡಿಸುತ್ತಿದ್ದರು. ಸಿದ್ದರಾಮಯ್ಯ ಹಾಗೂ ಜಿ.ಟಿ ದೇವೇಗೌಡ ಅವರು ಲವ್ ಬರ್ಡ್ ಇದ್ದಂತೆ ಎಂದು ಸಚಿವ ಎಸ್ ಟಿ ಸೋಮಶೇಖರ್ ವ್ಯಂಗ್ಯವಾಡಿದರು. https://kannadanewsnow.com/kannada/early-open-to-farmer-struggle-centre-seeks-formation-of-committee-on-minimum-support-price/

Read More

ಕೆಎನ್ ಎನ್ ಡಿಜಿಟಲ್ ಡೆಸ್ಕ್ :  ಅಲ್ಪಸಂಖ್ಯಾತ ಸಮುದಾಯದ ( minority Students ) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು  15/12/2021ರ ವರೆಗೆ ವಿಸ್ತರಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ಜೈನರು, ಮುಸ್ಲಿಂ, ಕ್ರಿಶ್ವಿಯನ್, ಸಿಖ್, ಪಾರಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 30 ರವರೆಗೆ ಅವಕಾಶ ನೀಡಿತ್ತು, ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಇದೀಗ ಡಿಸೆಂಬರ್ 15 ರ ವರೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿ ಆದೇಶಿಸಿದೆ. https://kannadanewsnow.com/kannada/bignews-common-entrance-test-for-uvc-and-pg-courses-for-central-vvs-from-next-year-significant-announcement-from-ugc/ ವಿದ್ಯಾರ್ಥಿಗಳು ನಲ್ಲಿ  https://ssp.postmatric.karnataka.gov.in  ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಬಗ್ಗೆ ಯಾವುದೇ ಗೊಂದಲವಿದ್ದಲ್ಲಿ ವಿದ್ಯಾರ್ಥಿಗಳು ತಾಲೂಕು ಅಲ್ಪಸಂಖ್ಯಾತ ನಿಗಮ ಅಥವಾ ಶಾಲಾ, ಕಾಲೇಜು ಸಂಪರ್ಕಿಸಬಹುದಾಗಿದೆ. https://kannadanewsnow.com/kannada/bmtc-bus-pass-imp-inforamtion-for-students/

Read More

ಬೆಂಗಳೂರು :  2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಈಗಾಗಲೇ ಆರಂಭವಾಗಿದ್ದು,  ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 14:11:2021 ರಿಂದ ವಿದ್ಯಾರ್ಥಿ ಪಾಸುಗಳನ್ನು ಬಿಎಂಟಿಸಿ ವಿತರಣೆ ಮಾಡುತ್ತಿದೆ. https://kannadanewsnow.com/kannada/bignews-common-entrance-test-for-uvc-and-pg-courses-for-central-vvs-from-next-year-significant-announcement-from-ugc/ ಅದರಂತೆ 1 ರಿಂದ 10 ನೇ ತರಗತಿ, ಪಿಯುಸಿ, ಪದವಿ, ಡಿಪ್ಲೋಮಾ ಸೇರಿದಂತೆ ವಿವಿಧ ಕೋರ್ಸ್ ನ ವಿದ್ಯಾರ್ಥಿಗಳು ಪಾಸ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದು, ಪಾಸು ಪಡೆಯಲು ಸಮಯಾವಕಾಶ ನೀಡುವ ಸಲುವಾಗಿ ಬಿಎಂಟಿಸಿ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಲು 2021-22 ನೇ ಸಾಲಿನ ಶಾಲಾ/ಕಾಲೇಜಿನ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ಡಿಸೆಂಬರ್ 15 ರವರೆಗೆ ಮಾತ್ರ ಉಚಿತವಾಗಿ  ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಡಿಸೆಂಬರ್ 15 ರೊಳಗಾಗಿ ವಿದ್ಯಾರ್ಥಿಗಳು ಪಾಸ್ ಮಾಡಿಸುವಂತೆ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದೆ. https://kannadanewsnow.com/kannada/bigg-update-no-lockdown-in-state-do-not-listen-to-speculation-cm-appeals-to-people-of-the-state/

Read More

ಡಿಜಿಟಲ್ ಡೆಸ್ಕ್ : ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ ನೀಡಿದ್ದಾರೆ. ಸಿಇಒ ಜ್ಯಾಕ್ ಡಾರ್ಸೆ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಇದು ತಕ್ಷಣವೇ ಜಾರಿಗೆ ಬರುತ್ತದೆ. ಕಂಪನಿಯ ನೂತನ ಸಿಇಒ ಆಗಿ ಪರಾಗ್ ಅಗರವಾಲ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಂಪನಿ ಸೋಮವಾರ ತಿಳಿಸಿದೆ. ಸ್ವತಃ ಜ್ಯಾಕ್ ಡಾರ್ಸೆ ಪ್ರಕರಣೆ ಮೂಲಕ ಈ ಮಾಹಿತಿ ನೀಡಿದ್ದು, “ಟ್ವಿಟರ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದೇನೆ. ಇನ್ನು ನೂತನ ಸಿಇಒ ಆಗಿ ಪರಾಗ್ ಅಗರವಾಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ. “ಸಹ-ಸಂಸ್ಥಾಪಕರಿಂದ ಸಿಇಒ ವರೆಗೆ, ಎಕ್ಸಿಕ್ ಚೇರ್ʼನಿಂದ ಮಧ್ಯಂತರ-ಸಿಇಒ ವರೆಗೆ ನಮ್ಮ ಕಂಪನಿಯಲ್ಲಿ ಸುಮಾರು 16 ವರ್ಷಗಳ ಪಾತ್ರ ವಹಿಸಿಕೊಂಡಿದ್ದ ನಾನು ಅಂತಿಮವಾಗಿ ಹೊರಡುವ ಸಮಯ ಬಂದಿದೆ ಎಂದು ನಿರ್ಧರಿಸಿದೆ. ಪರಾಗ್ (ಪರಾಗ್ ಅಗರ್ವಾಲ್) ನಮ್ಮ ಸಿಇಒ ಆಗುತ್ತಿದ್ದಾರೆ” ಎಂದಿದ್ದಾರೆ. https://twitter.com/ANI/status/1465349144411705349?ref_src=twsrc%5Etfw%7Ctwcamp%5Etweetembed%7Ctwterm%5E1465349144411705349%7Ctwgr%5E%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbig-breaking-news-jack-darcy-steps-down-as-twitter-ceo-parag-agarwal-appointed-successor%2F

Read More

ಡಿಜಿಟಲ್ ಡೆಸ್ಕ್ :  ಚಲನಚಿತ್ರ ನಿರ್ಮಾಪಕ ಸಿ. ಆರ್. ಮನೋಹರ್ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು  ಸಿ. ಆರ್. ಮನೋಹರ್ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜೀನಾಮೆ ಸಲ್ಲಿಸಿದರು. ಸಭಾಪತಿಗಳು ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ಕೋಲಾರ ಸ್ಥಳೀಯ ಸಂಸ್ಥೆಗಳಿಂದ ಸಿ. ಆರ್. ಮನೋಹರ್ ಜೆಡಿಎಸ್‌ನಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮನೋಹರ್ ಪಕ್ಷಕ್ಕೆ ರಾಜೀನಾಮೆ ಕಳಿಸುತ್ತೇನೆ. ಡಿಸೆಂಬರ್ 2ರಂದು ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ” ಎಂದು ಹೇಳಿದರು. ಸಿ. ಆರ್.‌ ಮನೋಹರ್ ಅವರ ಪರಿಷತ್ ಅವಧಿ ಕೆಲವೇ ದಿನಗಳಲ್ಲಿ ಅಂತ್ಯಗೊಳ್ಳಲಿದ್ದು, . ಚುನಾವಣಾ ಆಯೋಗ ಈಗಾಗಲೇ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.

Read More

ಡಿಜಿಟಲ್ ಡೆಸ್ಕ್ : ಆನ್ ಲೈನ್ ನಲ್ಲಿ ‘ವಿಸ್ಕಿ’ ಆರ್ಡರ್ ಮಾಡಿ ನಟಿಯೊಬ್ಬರು 3 ಲಕ್ಷ ಕಳೆದುಕೊಂಡ ಘಟನೆ ಮುಂಬೈ ನಲ್ಲಿ  ವರದಿಯಾಗಿದೆ. ಹಿರಿಯ ನಟಿಯೊಬ್ಬರು ತನ್ನ ಸೋದರಳಿಯನಿಗಾಗಿ ಆನ್ ಲೈನ್ ನಲ್ಲಿ 4800 ರೂ ಮೌಲ್ಯದ ವಿಸ್ಕಿ ಆರ್ಡರ್ ಮಾಡಿದ್ದರು. ಆದರೆ ಅದು ಡೆಲಿವರಿಯಾಗದ ಕಾರಣ ಅಲ್ಲಿದ್ದ ನಂಬರ್ ಗೆ ಕರೆ ಮಾಡಿ ಹಣ ಮರು ಪಾವತಿಸಲು ಕೋರಿದ್ದಾರೆ. ಆಗ ಸೈಬರ್ ಕಳ್ಳರು ಕ್ರಿಮಿನಲ್ ಬುದ್ದಿ ತೋರಿಸಿ ನಮ್ಮ ವೆಬ್ ಸೈಟ್ ಲ್ಲಿ ನೊಂದಣಿಯಾದರೆ ಮಾತ್ರ ಹಣ ಮರುಪಾವತಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ನಟಿ ಕ್ರೆಡಿಟ್ ಕಾರ್ಡ್ ಬಳಸಿ ನೊಂದಣಿ ಮಾಡಿಕೊಂಡು ಒಟಿಪಿ ಹಂಚಿಕೊಂಡಿದ್ದಾರೆ. ಬಳಿಕ ಖದೀಮರು ನಟಿಯ ಖಾತೆಯಲ್ಲಿದ್ದ 3 ಲಕ್ಷ ರೂ ದೋಚಿದ್ದಾರೆ . ಬಳಿಕ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. https://kannadanewsnow.com/kannada/good-news-for-teacher-vacancies-expected-ugc-notified-for-recruitment-of-thousands-of-faculty-in-vv-colleges/ https://kannadanewsnow.com/kannada/12-opposition-mps-suspended-for-violent-behaviour-in-previous-session/ ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವ್ಯವಹಾರದಲ್ಲಿ ಗ್ರಾಹಕರು ಭಾರೀ ಮೋಸಕ್ಕೊಳಗಾಗುತ್ತಿದ್ದು, ದಿನನಿತ್ಯ ಇಂತಹ ಹಲವಾರು ಘಟನೆಗಳು ವರದಿಯಾಗುತ್ತಲಿರುತ್ತದೆ. https://kannadanewsnow.com/kannada/twitter-ceo-jack-dorsey-to-step-down/

Read More

ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ‘ಅಶಿಸ್ತಿನ ವರ್ತನೆ’ ಮತ್ತು ಸದನ ನಿಯಮ ಉಲ್ಲಂಘನೆ  ಆರೋಪದ ಮೇಲೆ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಹನ್ನೆರಡು ವಿರೋಧ ಪಕ್ಷದ ಸಂಸದರನ್ನ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಇದೀಗ ಅಮಾನತು ಸದಸ್ಯರು ನಾಳೆ ಸಭಾಪತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮಾನತುಗೊಂಡ 12 ಮಂದಿ ಸದಸ್ಯರು ನಾಳೆ ಸಭಾಪತಿಗಳನ್ನು ಭೇಟಿಯಾಗಿ ಕ್ಷಮೆ ಕೇಳಲಿದ್ದಾರೆ ಎನ್ನಲಾಗಿದೆ. https://kannadanewsnow.com/kannada/bangalore-house-theef-stole-the-gold/ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ‘ಅಶಿಸ್ತಿನ ವರ್ತನೆ’ ಮತ್ತು ಸದನ ನಿಯಮ ಉಲ್ಲಂಘನೆ  ಆರೋಪದ ಮೇಲೆ ಎಲಮರಮ್ ಕರೀಮ್ (CPM), ಫುಲೋ ದೇವಿ ನೇತಮ್ (INC), ಛಾಯಾ ವರ್ಮಾ (INC), ರಿಪುನ್ ಬೋರಾ (INC), ಬಿನೋಯ್ ವಿಸ್ವಾಮ್ (CPI), ರಾಜಮಣಿ ಪಟೇಲ್ (INC), ಡೋಲಾ ಸೇನ್ (TMC), ಶಾಂತಾ ಛೆಟ್ರಿ (TMC), ಸೈಯದ್ ನಾಸಿರ್ ಹುಸೇನ್ (INC), ಪ್ರಿಯಾಂಕಾ ಚತುರ್ವೇದಿ (Shiv Sena), ಅನಿಲ್ ದೇಸಾಯಿ (Shiv Sena) ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ (INC) ಇವರನ್ನು ಅಮಾನತುಗೊಳಿಸಲಾಗಿತ್ತು.…

Read More

ಚಿಕ್ಕಮಗಳೂರು  : ಪ್ರವಾಸಿಗರ ರಮಣೀಯ ತಾಣ ಎತ್ತಿನ ಭುಜಕ್ಕೆ ( Ettina Bhuja )  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬರುವ ರಮಣೀಯ, ಪ್ರೇಕ್ಷಣೀಯ ಸ್ಥಳ ಎತ್ತಿನಭುಜ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಎತ್ತಿನಭುಜ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಹೌದು, ಎತ್ತಿನ ಭುಜದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ತಾತ್ಕಾಲಿಕವಾಗ ಪ್ರವಾಸಿಗರಿಗೆ ( No entry ) ಬ್ರೇಕ್ ಹಾಕಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಎತ್ತಿನಭುಜದ ಸಮೀಪ ಮ್ಯಾರಥಾನ್ ಆಯೋಜನೆ ಮಾಡಿತ್ತು, ಈ ವಿಷಯ ತಿಳಿಯುತ್ತಿದ್ದಂತೆ ಹಲವರು ಇದನ್ನು ವಿರೋಧಿಸಿದ್ದರು. ಆದ್ದರಿಂದ ಅರಣ್ಯ ಇಲಾಖೆ ( Forest Departement ) ಎತ್ತಿನ ಭುಜಕ್ಕೆ ಹೋಗುವ ಮಾರ್ಗವನ್ನೇ ಬಂದ್ ಮಾಡಿದ್ದು, ಪ್ರವಾಸಿಗರಲ್ಲಿ ಭಾರೀ ನಿರಾಸೆ ಮೂಡಿದೆ. https://kannadanewsnow.com/kannada/earthquake-in-japan/ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರಿಂದ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಎತ್ತಿನ…

Read More


best web service company