ಕೆಎನ್ ಎನ್ ನ್ಯೂಸ್ ಡೆಸ್ಕ್ : ಅರಿಶಿನ ಹಾಲು ಕುಡಿಯುವುದರಿಂದ ದೇಹಕ್ಕೆ ವಿವಿಧ ಪ್ರಯೋಜನೆಗಳಿವೆ. ಇದರಲ್ಲಿರುವ ಗುಣಲಕ್ಷಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದಾಗ್ಯೂ,ಕೋವಿಡ್ ನಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಅರಿಶಿನ ಹಾಲನ್ನು ಕುಡಿಯುವುದರಿಂದ ಸುಲಭವಾಗಿ ಪರಿಹಾರ ಪಡೆಯಬಹುದು ಎಂದು ಆಯುರ್ವೇದ ತಜ್ಞರು ಸೂಚಿಸುತ್ತಾರೆ. ಅರಿಶಿನವು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಇದು ಅನಾರೋಗ್ಯಕರ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ನೀಡುತ್ತದೆ. ಇದನ್ನು ಪ್ರತಿದಿನ ಕುಡಿಯುವ ಮೂಲಕ, ದೀರ್ಘಕಾಲದ ಕಾಯಿಲೆಗಳನ್ನು ಸಹ ತಪ್ಪಿಸಬಹುದು. ಆದಾಗ್ಯೂ, ಈ ಹಾಲನ್ನು ಹೆಚ್ಚು ಕುಡಿಯುವುದರಿಂದ ಗಂಭೀರ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈಗ ನೀವು ಹೆಚ್ಚು ಕುಡಿದರೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳೊಣ ಈ ರೀತಿಯ ಜನರು ಹಳದಿ ಹಾಲನ್ನು ಕುಡಿಯಬಾರದು: 1. ನಿಮಗೆ ಹೊಟ್ಟೆಯ ಸಮಸ್ಯೆ ಇದೆಯೇ? ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಜನರು ಅರಿಶಿಣ ಹಾಲನ್ನು ಕುಡಿಯಬಾರದು ಎಂದು…
Author: kanandanewslive
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಚಿರತೆ ಈಗ ನಾಟಿಕೋಳಿ ಬೇಟೆಯಾಡಿ ತಿಂದಿರುವ ಘಟನೆ ನಡೆದಿದೆ. ರಾತ್ರಿವೇಳೆ ಕೋಳಿ ಫಾರಂಗೆ ನುಗ್ಗಿದ ಚಿರತೆ ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ಹಾಕಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಗಚಿಹಳ್ಳಿ ಗ್ರಾಮದ ಕುಟುಂಬವೊಂದು ತಮ್ಮ ಜೀವನ ಆಧಾರಕ್ಕಾಗಿ ಊರಿನ ಹೊರಭಾಗದಲ್ಲಿದ್ದ ತೋಟದಲ್ಲಿ ನಾಳಿ ಕೋಳಿ ಫಾರಂ ಮಾಡಿಕೊಂಡಿದ್ದರು. ಇದಕ್ಕಾಗಿ ತೋಟದಲ್ಲಿ ಸುಸಜ್ಜಿತವಾದ ಫಾರಂ ನಿರ್ಮಿಸಿ ಜಾಲರಿಯನ್ನು ಕೂಡ ಅಳವಡಿಸಿದ್ದರು. ಆದರೆಹೊಲದಲ್ಲಿರುವ ನಾಟಿ ಕೋಳಿ ಫಾರಂ ಒಳಗೆ ನುಗ್ಗಿರುವ ಚಿರತೆ ಬರೋಬ್ಬರು 200 ಕೋಳಿಗಳ ರಕ್ತವನ್ನು ಹೀರಿದೆ. ಕೆಲವು ಕೋಳಿಗಳನ್ನು ಸಂಪೂರ್ಣವಾಗಿ ತಿಂದಿದ್ದು, ಇನ್ನು ಕೆಲವು ಕೋಳಿಗಳ ರಕ್ತವನ್ನು ಮಾತ್ರ ಹೀರಿಕೊಂಡು ಕೆಲವು ಭಾಗವನ್ನು ತಿಂದು, ಅರ್ಧ ದೇಹವನ್ನು ಬಿಟ್ಟು ಹೋಗಿದೆ. ಇದರಿಂದ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿಂದ ಚಿರತೆಗಳ ಕಾಟ ತಗ್ಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಜನತೆಗೆ ಈಗ ಚಿರತೆ ಹಾವಳಿಯ ಆತಂಕ ಹೆಚ್ಚಾಗಿದೆ. https://kannadanewsnow.com/kannada/do-you-consume-too-much-salt-the-risk-of-a-heart-attack-is-high-revealed-by-research/…
ಕೆಎನ್ ಎನ್ ನ್ಯೂಸ್ ಡೆಸ್ಕ್ : ಉಪ್ಪು ನಮ್ಮ ಹೃದಯದ ಆರೋಗ್ಯಕ್ಕೆ ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ವೈದ್ಯರು ಯಾವಾಗಲೂ ಹೇಳಿದ್ದಾರೆ. ಏಕೆಂದರೆ ನೀವು ಹೆಚ್ಚು ಉಪ್ಪು ಸೇವಿಸಿದರೆ, ದೇಹವು ಹೆಚ್ಚು ನೀರನ್ನು ಉಳಿಸಿಕೊಳ್ಳುತ್ತದೆ. ಇದು ರಕ್ತದ ಪರಿಮಾಣವನ್ನು ಹೆಚ್ಚಿಸುತ್ತದೆ. ಇದು ಹೃದಯವನ್ನು ಹೆಚ್ಚು ಕೆಲಸ ಮಾಡಲು ಒತ್ತಾಯಿಸುತ್ತದೆ. ಆ ಮೂಲಕ ರಕ್ತದೊತ್ತಡದ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಉಪ್ಪಿನಲ್ಲಿರುವ ಸೋಡಿಯಂ ರಕ್ತದೊತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಳೆದ ವಾರ, ವಿಶ್ವ ಆರೋಗ್ಯ ಸಂಸ್ಥೆ ಸೋಡಿಯಂ ಸೇವನೆಯನ್ನು ಏಕೆ ಕಡಿಮೆ ಮಾಡಬೇಕು ಎಂಬುದರ ಕುರಿತು ಮೊದಲ ರೀತಿಯ ವರದಿಯನ್ನು ಬಹಿರಂಗಪಡಿಸಿದೆ. 2025 ರ ವೇಳೆಗೆ ಸೋಡಿಯಂ ಬಳಕೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅದು ಎಲ್ಲಾ ದೇಶಗಳಿಗೆ ಸಲಹೆ ನೀಡಿದೆ. ಆದಾಗ್ಯೂ, ಅನೇಕ ದೇಶಗಳು ಅವರ ಸಲಹೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಅದು ಎಚ್ಚರಿಸಿದೆ ಮತ್ತು ಇದು ಭವಿಷ್ಯದಲ್ಲಿ ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ವಿಶ್ವ…
ಕೆಎನ್ ಎನ್ ನ್ಯೂಸ್ ಡೆಸ್ಕ್: ಚಿಕನ್ ಮತ್ತು ಪನೀರ್ ಎರಡರಲ್ಲೂ ಪ್ರೋಟೀನ್ ಸಮೃದ್ಧವಾಗಿದೆ. ಸ್ನಾಯು ನಿರ್ಮಾಣ ಮತ್ತು ದುರಸ್ತಿಗೆ ಎರಡೂ ಉಪಯುಕ್ತವಾಗಿವೆ. ತೂಕ ಇಳಿಸಿಕೊಳ್ಳಲು ಇವೆರಡರಲ್ಲಿ ಯಾವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ತೂಕ ಇಳಿಸಿಕೊಳ್ಳಲು ಇವೆರಡರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಅನೇಕ ಜನರಿಗೆ ಗೊಂದಲ ಮೂಡಿದೆ. ಚಿಕನ್ ಅಥವಾ ಪನೀರ್. ಏಕೆಂದರೆ ಎರಡರಲ್ಲೂ ಹೆಚ್ಚಿನ ಪ್ರೋಟೀನ್ ಗಳಿವೆ. ಎರಡೂ ಸ್ನಾಯು ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ. ಆದರೆ ಇವೆರಡರ ನಡುವೆ ಸ್ವಲ್ಪ ವ್ಯತ್ಯಾಸವಿದೆ. ತೂಕ ಇಳಿಸಿಕೊಳ್ಳಲು ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ನೀವು ತಿಳಿದುಕೊಳ್ಳಬೇಕು.ಚಿಕನ್ ನಲ್ಲಿ ಪ್ರೋಟೀನ್ ಹೆಚ್ಚು ಇದೆ. ಇದು ಕಡಿಮೆ ಕ್ಯಾಲೊರಿ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇದು ಅಮೈನೊ ಆಮ್ಲಗಳಿಂದ ಸಮೃದ್ಧವಾಗಿದೆ ಮತ್ತು ಸ್ನಾಯು ನಿರ್ಮಾಣ ಮತ್ತು ದುರಸ್ತಿಗೆ ಅತ್ಯಗತ್ಯ. ಚಿಕನ್ ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಸಾಕಷ್ಟು ಇರುತ್ತದೆ. ವಿಟಮಿನ್ ಬಿ 12 ದೇಹದ ಶಕ್ತಿಯನ್ನು ಸ್ಥಿರವಾಗಿಡಲು ನರಮಂಡಲವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.…
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವುದಕ್ಕೆ ಅವರ ಪಕ್ಷದವರೇ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಾಕಷ್ಟು ನೀವುಗಳನ್ನು ಅನುಭವಿಸಿದ್ದಾರೆ. ಹೀಗಾಗಿ ಅವರನ್ನು ಸೋಲಿಸಲು ಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ರಾಷ್ಟ್ರೀಯ ಪಕ್ಷದಲ್ಲಿ ಸಿಎಂ ಅಭ್ಯರ್ಥಿಗೆ ಕ್ಷೇತ್ರವೇ ಸಿಗುತ್ತಿಲ್ಲ ಅಂದರೆ ಏನು ಅರ್ಥ? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಈ ರೀತಿಯ ಸ್ಥಿತಿ ಬರಬಾರದಿತ್ತು. ಈ ರೀತಿ ಗೊಂದಲ ಸೃಷ್ಟಿ ಮಾಡಿದ್ದು ಅವರ ಪಕ್ಷದವರೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಸಿದ್ದರಾಮಯ್ಯ ಅವರ ಕ್ಷೇತ್ರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ಅವರ ಪಕ್ಷದಲ್ಲೇ ಅವರನ್ನು ರಾಜಕೀಯವಾಗಿ ಮುಗಿಸುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ. https://kannadanewsnow.com/kannada/siddaramaiah-can-contest-in-any-field-dk-sivakumar/ ಇನ್ನು ಮಾ.26 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಸಿಎಂ H.D ಕುಮಾರಸ್ವಾಮಿ ಹೇಳಿದರು.ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಮಾ.26 ರಂದು ಜೆಡಿಎಸ್ ಅಭ್ಯರ್ಥಿಗಳ…
ತುಮಕೂರು: ಕಾಂಗ್ರೆಸ್ ರಾಜ್ಯದಲ್ಲಿ ಧೂಳಿಪಟವಾಗಲಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದೀಗ ಕಾಂಗ್ರೆಸ್ ಎಲ್ಲಿದೆ, ಅದರ ಕಾಲ ಯಾವಾಗೋ ಮುಗಿದು ಹೋಗಿದೆ. ತಮ್ಮ ಅಸ್ಥಿತ್ವಕ್ಕಾಗಿ ಕಾಂಗ್ರೆಸ್ ಹುಡುಕಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ನಾನು ಸಿಎಂ ಹುದ್ದೆಯನ್ನು ತ್ಯಜಿಸಿದ್ದೂ ಸಹ ಸ್ವಂತ ನಿರ್ಧಾರದಿಂದ. ನನಗೆ ಯಾರೂ ಬಲವಂತಮಾಡಿ ಅಧಿಕಾರದಿಂದ ಕೆಳಗೆ ಇಳಿಸಿಲ್ಲ. ಕಾಂಗ್ರೆಸ್‌ನ ಕೆಲವರು ನನ್ನ ರಾಜೀನಾಮೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ.ಇದರಲ್ಲಿ ಕಾಂಗ್ರೆಸ್‌ನವರು ಯಶಸ್ವಿಯೂ ಆಗುವುದಿಲ್ಲ. ಕಾಂಗ್ರೆಸ್‌ನವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. https://kannadanewsnow.com/kannada/breaking-news-liquor-scam-case-manish-sisodias-custody-extended-till-april-5-manish-sisodia/ ಇದನ್ನು ವೀರಶೈವ ಲಿಂಗಾಯತ ಸಮಾಜದವರು ಯಾರೂ ನಂಬಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು. ಈ ಕ್ಷೇತ್ರದ ಶಾಸಕರಾಗಿರುವ ಮಸಾಲಾ ಜಯರಾಮ್ ಸರ್ಕಾರದಿಂದ ಸುಮಾರು 1500 ಕೋಟಿಗೂ ಹೆಚ್ಚು ಹಣ ತಂದು ಹಲವಾರು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ ಎಂದರು. https://kannadanewsnow.com/kannada/good-news-for-farmers-ahead-of-ugadi-pm-kisan-samman-yojana-releases-funds/
ಕೆಎನ್ ಎನ್ ನ್ಯೂಸ್ ಡೆಸ್ಕ್ : ಹಿಂದಿನ ಕಾಲದಲ್ಲಿ ಜನರು ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ದೀರ್ಘಕಾಲದವರೆಗೆ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದರು. ಮಾತ್ರೆಗಳನ್ನು ಬಳಸದೆ ತಮ್ಮ ಜೀವಿತಾವಧಿಯಲ್ಲಿ ಬದುಕುಳಿದ ಜನರನ್ನು ಸಹ ನಾವು ನೋಡುತ್ತೇವೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಅಂತಹ ಜೀವನಶೈಲಿ ಅಸಾಧ್ಯ. ಒತ್ತಡದ ಜೀವನಶೈಲಿಯನಿಂದ ದೈಹಿಕ ಚಟುವಟಿಕೆಯ ಕೊರತೆ, ಕೆಲಸದ ಒತ್ತಡಗಳು ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಬಿಪಿಗಳು ಮತ್ತು ಸಕ್ಕರೆಗಳು 30 ವರ್ಷಗಳನ್ನು ಪಡೆಯುತ್ತವೆ. ಹೃದ್ರೋಗಗಳು ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಆರೋಗ್ಯಕರ ಜೀವನವನ್ನು ನಡೆಸಲು ಏನು ಮಾಡಬೇಕು? ಜೀವನ ವಿಧಾನದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು? ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕು? ಸಂಶೋಧಕರು ಅಂತಹ ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ಒಂದೇ ರೀತಿ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸಬಾರದು. ಎಲ್ಲಾ ರೀತಿಯ ಆರೋಗ್ಯಕರ ಆಹಾರಗಳನ್ನು ಋತುಗಳಿಗೆ ಅನುಗುಣವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಆ ಆಹಾರದಲ್ಲಿ, ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀಜಗಳು, ದ್ವಿದಳ ಧಾನ್ಯಗಳಂತಹ ಸಸ್ಯ…
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಇನ್ನೇನು ಶೀಫ್ರದಲ್ಲೇ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಈ ಮೂಲಕ ರಾಜ್ಯದಲ್ಲಿ ನೀತಿ ಸಂಹಿತಿ ಜಾರಿಯಾಗಲಿದೆ. ಈಗಾಗಲೇ ಪೊಲೀಸರು ಮಾತ್ರ ಫುಲ್ ಅಲರ್ಟ್ ಆಗಿದ್ದಾರೆ. ಚುನಾವಣೆಗೆ ಮತದಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿರುವ ಆರೋಪ ಕೇಳಿಬಂದಿದೆ. ಮತದಾರರಿಗೆ ಕುಕ್ಕರ್, ಸೀರೆ, ಟೀವಿ, ಹಣ ಇತ್ಯಾದಿ ವೈಯಕ್ತಿಕ ಮತ್ತು ಗೃಹ ಬಳಕೆಯನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗ ರಾಜ್ಯದ ಎಲ್ಲ ಎಸ್ಪಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಳೆದ 1 ವಾರದಲ್ಲಿ ರಾಜ್ಯದ ಮತದಾರರಿಗೆ ಹಂಚಲು ತಂದಿದ್ದ 10 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ದಾಳಿ ವೇಳೆ ಮತ್ತು ಚೆಕ್ಪೋಸ್ಟ್ಗಳಲ್ಲಿ ಜಪ್ತಿ ಮಾಡಿದ್ದಾರೆ. ಜಪ್ತಿ ವೇಳೆ ಕುಕ್ಕರ್, ಸೀರೆ, ದಿನ ನಿತ್ಯದ ವಸ್ತುಗಳು, ನಗದು, ಚೆಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. https://kannadanewsnow.com/kannada/father-ks-eshwarappa-to-contest-from-shivamogga-this-time-i-am-not-contesting-son-k-e-kanthesh-%e0%b2%a6/ ಇನ್ನು ಗದಗ ಜಿಲ್ಲೆಯಲ್ಲಿ ದಾಖಲೆ ಇಲ್ಲದೇ ಮುಂಬೈನಿಂದ ಗದಗ…
ಶಿವಮೊಗ್ಗ: ಈ ಬಾರಿ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಂದೆ ಕೆ.ಎಸ್ ಈಶ್ವರಪ್ಪ ಅವರೇ ಕಣಕ್ಕೆ ನಿಲ್ಲುತ್ತಾರೆ. ಆದರೆ ನಾನು ಸ್ಪರ್ಧಿಸುತ್ತಿಲ್ಲ ಎಂದು ಮಗ ಕೆ.ಈ ಕಾಂತೇಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾರೇ ಏನೇ ವಿರೋಧಿಸಿದ್ರೂ ನನ್ನ ತಂದೆ ಅವರಿಗೇ ಬಿಜೆಪಿ ಟಿಕೆಟ್ ಸಿಗುತ್ತದೆ. ನಾನು ಮುಂದಿನ ಬಾರಿ ಸ್ಪರ್ಧೆ ಮಾಡುತ್ತೇನೆ ಎಂದರು.ಕಳೆದ ವಿಧಾನ ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಕೇಳಿಬಂದಿತ್ತು. ನಂತರ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಹೆಸರು ಪ್ರಸ್ತಾಪ ಆಗಿತ್ತು. ನಾನು ಕೂಡ ತಂದೆ ಈಶ್ವರಪ್ಪ ಅವರಲ್ಲಿ ಸ್ಪರ್ಧಿಸುವ ಕುರಿತು ಪ್ರಸ್ತಾಪಿಸಿದ್ದೆ ಎಂದು ಹೇಳಿದ್ದಾರೆ. ನಾನು ಎಲ್ಲಿಯವರೆಗೆ ಚುನಾಯಿತ ಪ್ರತಿನಿಧಿಯಾಗಿ ರಾಜಕಾರಣದಲ್ಲಿ ಇರುತ್ತೇನೋ ಅಲ್ಲಿಯವರೆಗೂ ಸ್ಪರ್ಧೆ ಬೇಡವೆಂದು ತಂದೆ ಈಶ್ವರಪ್ಪ ನನಗೆ ಹೇಳಿದ್ದಾರೆ. ನಾನು ತಂದೆ ಹೇಳಿದ ಮಾತಿನಿಂದ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದೆ ಎಂದು ತಿಳಿಸಿದರು. ಈಗ ನನ್ನ ತಂದೆಗೆ 76 ವರ್ಷ ವಯಸ್ಸು. ಬಿಜೆಪಿ ಟಿಕೆಟ್ ಕೊಡ್ತಾರೋ, ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿದೆ.…
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡಿಕೊಂಡಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಮುಂದಿನ ಮುಂದಿನ ಎರಡು ಮೂರು ದಿನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ ಎಂದು ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2-3ದಿನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಇವತ್ತು ಮೊದಲ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ ಯುಗಾದಿ ಹಬ್ಬಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ 2-3ದಿನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಇನ್ನು ಬಿಜೆಪಿ ಸುಳ್ಳು ಆಶ್ವಾಸನೆ ಕೊಟ್ಟ ಹಾಗೆ ನಾವಯ ಹಾಗೆ ಮಾಡುವುದಿಲ್ಲ. ಕಳೆದ ಮೂರು ವರ್ಷಗಳಿಂದ ಜನರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ಕೆಟ್ಟ ಆಡಳಿತ ತೊಲಗಲಿ ಎಂದು ಬಿಜೆಪಿ…