Author: kannadanewsnow

ಚಿಕ್ಕಮಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಾಫಿನಾಡು ಭಾರಿ ಮಳೆಯಿಂದಾಗಿ ಹಳ್ಳದಲ್ಲಿ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಎಸ್.ಡಿ.ಆರ್.ಎಫ್. ತಂಡ ಆಗಮಿಸಿದೆ. https://kannadanewsnow.com/kannada/the-government-has-ordered-the-appointment-of-3708-pu-guest-lecturers-in-the-state-the-salary-has-also-been-increased/ ಸೋಮವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ಹೋಗುವಾಗ ಕಾಲು ಕೆಸರಾಯಿತೆಂದು ಹಳ್ಳದಲ್ಲಿ ತೊಳೆದುಕೊಳ್ಳುವ ವೇಳೆ ಆಯಾತಪ್ಪಿ ಬಿದ್ದ ಒಂದನೇ ತರಗತಿ ಬಾಲಕಿ ಸುಪ್ರಿತಾ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ಅಂದಿನಿಂದಲೂ ನಿರಂತರ 40 ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದರೂ ಬಾಲಕಿ ಪತ್ತೆಯಾಗಲಿಲ್ಲ. ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಈಜು ಪಟುಗಳು 15 ಕಿ.ಮೀ ಉದ್ದದ ಹಳ್ಳದಲ್ಲಿ ಬಾಲಕಿಗಾಗಿ ಹುಡುಕಾಡಿದರು. ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಿಂದ 20 ಜನರ ಎಸ್‌.ಡಿ.ಆರ್.ಎಫ್. ತಂಡ ಆಗಮಿಸಿದೆ.

Read More

ಅಮರಾತಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಇದೀಗ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಭರ್ಜರಿ ಗಿಫ್ಟ್‌ ಕೊಟ್ಟಿದ್ದಾರೆ. https://kannadanewsnow.com/kannada/the-government-has-ordered-the-appointment-of-3708-pu-guest-lecturers-in-the-state-the-salary-has-also-been-increased/ ಅವರ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಬೃಹತ್ ಕಟೌಟ್ ಸ್ಥಾಪಿಸುವ ಮೂಲಕ ವಿಜಯವಾಡದ ಅಭಿಮಾನಿಗಳು ಅದ್ದೂರಿಯಾಗಿ ಬರ್ತ್ ಡೇ‌ ಆಚರಿಸಲು ಮುಂದಾಗಿದ್ದಾರೆ. ನಾಳೆ ಅಂದರೆ ಜುಲೈ 7 ರಂದು ಧೋನಿ ಹುಟ್ಟುಹಬ್ಬವಿದೆ. ಹಾಗಾಗಿ ಅಭಿಮಾನಿಗಳು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.ವಿಜಯವಾಡದ ಅಭಿಮಾನಿಗಳು 41 ಅಡಿ ಎತ್ತರದ ಕಟೌಟ್‌ನಲ್ಲಿ ಧೋನಿ ರಾರಾಜಿಸುತ್ತಿದೆ. https://twitter.com/CricCrazyJohns/status/1544365070271930368?cxt=HHwWgICjkav21-4qAAAA

Read More

ಬೆಂಗಳೂರು: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವಣೆ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ. https://kannadanewsnow.com/kannada/post-mortem-begins-at-kims-hospital/ ಅತಿಥಿ ಉಪನ್ಯಾಸಕರಿಗೆ ಈಗಿನ 9 ಸಾವಿರ ರೂ. ಗೌರವ ಸಂಭಾವನೆಯನ್ನು 12 ಸಾವಿರ ರೂ.ಗೆ ಹೆಚ್ಚಿಸಲು ಸರಕಾರವು ಅನುಮೋದನೆ ನೀಡಿದೆ. ಗೌರವ ಸಂಭಾವನೆಯನ್ನು ಹದಿನೈದು ಸಾವಿರ ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದ್ದರೂ, ಸರಕಾರವು ಮಾಸಿಕವಾಗಿ ಮೂರು ಸಾವಿರ ರೂ. ಹೆಚ್ಚಿಸಿದೆ.ರಾಜ್ಯ ಸರಕಾರವು ಒಟ್ಟು 3708 ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಇವುಗಳಲ್ಲಿ ೨೦೨೩ರ ಏಪ್ರಿಲ್‌ ಒಂದರವರೆಗೆ ಖಾಲಿಯಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ಸಂಖ್ಯೆ 3271 ಇದೆ. ಬಡ್ತಿ, ವಯೋನಿವೃತ್ತಿ, ನಿಧನ ಮತ್ತು ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳ ಸಂಖ್ಯೆ 100 ಇದೆ.

Read More

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಣೋತ್ತರ ಪರೀಕ್ಷೆ ಆರಂಭಗೊಂಡಿದೆ. https://kannadanewsnow.com/kannada/lalu-prasad-yadav-in-hospital-pm-modi-dials-son-tejashwi-for-update/ ನಗರದ ಕಿಮ್ಸ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಆರಂಭವಾಗಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಗುರೂಜಿ ಮೃತದೇಹ ಇದೆ.ಇದೀಗ ಗುರೂಜಿಯ ಮರಣೋತ್ತರ ಪರೀಕ್ಷೆಯನ್ನು ವೈದ್ಯ ಸುನೀಲ್‌ ಬಿರಾದಾರ ನಡೆಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Read More

ಪಾಟ್ನಾ: ಆರ್‌ ಜೆಡಿ ಮುಖ್ಯಸ್ಥ ಲಾಲುಪ್ರಸಾದ್‌ ಯಾದವ್‌ ಮನೆಯಲ್ಲಿ ಜಾರಿ ಬಿದ್ದು, ಅವರ ಭುಜದ ಮೂಳೆಗೆ ಹೊಡೆತ ಬಿದ್ದಿದೆ. ಹೀಗಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. https://kannadanewsnow.com/kannada/maitri-menstrual-cup-scheme-launched-today-how-to-use-a-menstrual-cup/ ಇದರಿಂದ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರನಿಗೆ ಕರೆ ಮಾಡಿ ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತಂತೆ ಆರ್‌ಜೆಡಿ ವಕ್ತಾರ ಚಿತ್ರರಂಜನ್ ಗಗನ್ ಅವರು ಮಾತನಾಡಿದ್ದು, ಪ್ರಧಾನಿ ಮೋದಿ ಅವರು ಮಂಗಳವಾರ ತೇಜಸ್ವಿ ಯಾದವ್ ಅವರೊಂದಿಗೆ ಕರೆ ಮಾಡಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ ಮತ್ತು ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

Read More

ಕೆಎನ್‌ ಎನ್‌ ನ್ಯೂಸ್‌ : ಈಗಾಗಲೇ ಸರ್ಕಾರ ಶುಚಿ ಕಾರ್ಯಕ್ರಮದಡಿಯಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಲಾಗಿದೆ. ಇದೀಗ ಮತ್ತೊಂದು ಹೊಸ ನಿಯಮ ಜಾರಿ ತರಲಾಗಿದೆ. https://kannadanewsnow.com/kannada/shocked-to-see-my-sons-act/ ಇಂದಿನಿಂದ ಮುಟ್ಟಿನ ಕಪ್‌ ಎಂದು ಕರೆಯಲ್ಪಡುವ ಮೆನ್ಸ್‌ಟ್ರುಯೆಲ್‌ ಕಪ್‌ಗಳನ್ನು ನೀಡಲಿದೆ.ಮುಟ್ಟಿನ ಕಪ್‌ ನೀಡುವ ಯೋಜನೆಗೆ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತದೆ. ಈ ಉತ್ಪನ್ನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಆರಂಭದಲ್ಲಿ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ ಬಳಕೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವೂ ಆಗಬೇಕಿದೆ. ಈ ಯೋಜನೆಯ ಫಲಿತಾಂಶವನ್ನು ಅವಲೋಕಿಸಿ ಮುಂದಿನ ಹಂತದಲ್ಲಿ ಇತರೆ ಜಿಲ್ಲೆಗಳಿಗೂ ಮುಟ್ಟಿನ ಕಪ್‌ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರಕಾರ ಮಾಹಿತಿ ನೀಡಿದೆ.ವಿಶೇಷವೆಂದರೆ ಹದಿಹರೆಯದ ಹೆಣ್ಣುಮಕ್ಕಳ ನೈರ್ಮಲ್ಯಕ್ಕಾಗಿ ಇಂತಹ ಯೋಜನೆಯನ್ನು ಪರಿಚಯಿಸಿದ ಮೊದಲ ರಾಜ್ಯವೆಂಬ ಹೆಮ್ಮೆಗೆ ಕರ್ನಾಟಕ ಪಾತ್ರವಾಗಲಿದೆ. ಮೊದಲ ಹಂತದಲ್ಲಿ…

Read More

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ್‌ ಶಿರೂರು ತಾಯಿ ಬಸಮ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಗುರೂಜಿ ಸಾವಿನ ಸುದ್ದಿ ಕೇಳಿ ನಿಜಕ್ಕೂ ಶಾಕ್‌ ಆಗಿದೆ. ಆದರೆ ನನ್ನ ಮಗ ಯಾಕೆ ಹಾಗೆ ಮಾಡಿದ ಅಂತಾ ಗೊತ್ತಾಗಿಲ್ಲ. ನನಗೆ ವಿಷಯನೇ ಗೊರ್ತಿಲಿಲ್ಲ , ಟಿವಿ ನೋಡಿದ ಮೇಲೆ ಗೊತ್ತಾಗಿದ್ದು. ಗುರೂಜಿ ಜೊತೆ ಅವರ ಸಂಬಂಧ ಚೆನ್ನಾಗಿ ಇತ್ತು ಎಂದು ತಾಯಿ ಬೇಸರ ವ್ಯಕ್ತಪಡಿಸಿದ್ರು. https://kannadanewsnow.com/kannada/kannaguruji-is-our-god-fathers-son/ ನಾವು ಕಲಘಟಗಿಯಲ್ಲಿ ಇದ್ದೀವಿ. ಅವನ ಪಾಡಿಗೆ ದುಡಿದುಕೊಂಡು ಜೀವನ ಮಾಡುತ್ತಿದ್ದ. ಒಂದು ದಿನನೂ ಮಗ ಮತ್ತು ಸೊಸೆ ನಡುವೆ ಯಾವುದೇ ಜಗಳವಾಗಿರಲಿಲ್ಲ. ಅಪಾರ್ಟ್‌ ಮೆಂಟ್‌ , ಪ್ಲ್ಯಾಟ್‌ ಬಗ್ಗೆ ನನಗೆ ಏನು ಗೊತ್ತಿಲ್ಲ. ಆದರೆ  ಇದೀಗ ನನ್ನ ಮಗನ ಕೃತ್ಯ ನೋಡಿ ಶಾಕ್‌ ಆಯ್ತು ಎಂದು ಬೇಸರ ವ್ಯಕ್ತಪಡಿಸಿದ್ರು.

Read More

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ್‌ ಶಿರೂರು ಪತ್ನಿ ವನಜಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಗುರೂಜಿಯನ್ನು ದೇವರಂತೆ ಕಾಣುತ್ತಿದ್ದೆವು. ಅವರು ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ನನ್ನ ಗಂಡನೇ ಹತ್ಯೆ ಮಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದು ವನಜಾಕ್ಷಿ ಕಣ್ಣೀರು ಹಾಕಿದ್ದಾರೆ. ನಾನು ೧೫ ವರ್ಷ ಗುರೂಜಿ ಜೊತೆ ಕೆಲಸ ಮಾಡಿದ್ದೆ. ಆಗಾ ಅವರು ನಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರು ನಮಗೆ ದೇವರು, ತಂದೆಯ ತರಹ ಎಂದು ಹೇಳಿದ್ದಾರೆ. ಇನ್ನು ನನ್ನ ಮತ್ತು ಗಂಡ ಹತ್ತಿರ ಯಾವುದೇ ಬೇನಾಮಿ ಆಸ್ತಿ ಇಲ್ಲ. ಗುರೂಜಿ ನಮಗೆ ಆಸ್ತಿ ನೀಡಿರಲಿಲ್ಲ. ಒಂದೇ ಪ್ಲ್ಯಾಟ್‌ ಇತ್ತು. ಆದರೆ ಅದನ್ನ ಸಾಲ ಮಾಡಿ ಖರೀದಿ ಮಾಡಿದ್ದೀವಿ ಎಂದು ಬೇಸರ ವ್ಯಕ್ತಪಡಿದ್ರು.

Read More

ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಈಗಾಗಲೇ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ್ ಎಂದು ತಿಳಿಸಿದ್ದಾರೆ. https://kannadanewsnow.com/kannada/assault-on-daba-owner-for-asking-the-lunch-bill-in-gadag/ ನಗರದಲ್ಲಿ ಮಾತನಾಡಿದ ಅವರು, ಕಳೆದ 5 ದಿನಗಳಿಂದ ಖಾಸಗಿ ಹೊಟೇಲ್‍ನಲ್ಲಿಯೇ ಚಂದ್ರಶೇಖರ್ ಗುರೂಜಿ ತಂಗಿದ್ದರು. ಅವರ ಕಾಲಿಗೆ ನಮಸ್ಕಾರ ಮಾಡುವ ನೆಪದಲ್ಲಿ ಮಧ್ಯಾಹ್ನ ಈ ಕೃತ್ಯ ಎಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಹಲವಾರು ಬಾರಿ ಚಾಕುವಿನಿಂದ ಇರಿದಿದ್ದಾರೆ ಎಂದಿದ್ದಾರೆ. ಗುರೂಜಿ ಗಂಭೀರ ಗಾಯಗೊಂಡಿದ್ದರು. ಅಸ್ಪತ್ರೆಗೆ ದಾಖಲಿಸಲಾಯಿತ್ತು. ಅದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಕೇಸ್‍ನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ.

Read More

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೆವಿನಕಟ್ಟಿ ಬಳಿ ಊಟದ ಬಿಲ್ ಕೇಳಿದಕ್ಕೆ ಕುಡಿದ ಮತ್ತಿನಲ್ಲಿ 6 ಜನ ಪುಂಡರು ಡಾಬಾ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ನಡೆದಿದೆ. https://kannadanewsnow.com/kannada/amazing-video-of-a-cheetah-sat-on-the-roof-of-a-safari-vehicle-is-now-going-viral-on-social-media/ ಶ್ರೀಶೈಲ ಕಳ್ಳಿಮಠ ಎಂಬುವರಿಗೆ ಸೇರಿದ ಲಕ್ಕಿ ಡಾಬಾ ಪೀಸ್, ಪೀಸ್ ಆಗಿದೆ. ಮುಶಿಗೇರಿ ಗ್ರಾಮದ ಅರವಿಂದ್ ಅಂಗಡಿ ಹಾಗೂ ಸ್ನೇಹಿತರು ಸೇರಿ ದಾಂಧಲೆ ಮಾಡಿದ್ದಾರೆ. ಅರವಿಂದ್ ಅಂಗಡಿ ಬಾಗಲಕೋಟೆ ನವನಗರ ಠಾಣೆ ಪ್ರೋಫೆಷನಲ್ ಪಿಎಸ್ ಆಗಿ ಕೆಲಸ ಮಾಡುತ್ತಿದ್ದು, ಇವರ ಜೊತೆ ಆರ್ಮಿ ಯುವಕರು ಸಹ ಇದ್ದರು.ರಜೆಗೆಂದು ಊರಿಗೆ ಬಂದಿದ್ದ ಅರವಿಂದ್ ಅಂಗಡಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಆರ್ಮಿ ಯುವಕ ಹಾಗೂ ಇತರೆ 6 ಜನ ಸ್ನೇಹಿತರೊಂದಿಗೆ ಊಟಕ್ಕಾಗಿ ಡಾಬಾಗೆ ಬಂದಿದ್ದರು. ಈ ವೇಳೆ ಕಂಠ ಪೂರ್ತಿ ಕುಡಿದು, ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದಾರೆ. ನಂತರ ಊಟದ ಬಿಲ್ ಕೇಳಿದಕ್ಕೆ ನಾವು ಯಾರು ಅಂತ ತಿಳಿದಿದೆಯಾ? ನಮ್ಮನ್ನೇ ಬಿಲ್ ಕೇಳ್ತಿಯಾ ಅಂತ ಅಧಿಕಾರದ ಮದ ಹಾಗೂ ಕುಡಿದ ಅಮಲಿನಲ್ಲಿ…

Read More


best web service company