Author: Kannada News

ನವದೆಹಲಿ:ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹಲವಾರು ವಿರೋಧ ಪಕ್ಷಗಳು ಭಾಗವಹಿಸಿದ್ದವು. ರಾಷ್ಟ್ರ ರಾಜಧಾನಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಈ ಸಭೆ ನಡೆಯಿತು. ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಮತ್ತೊಮ್ಮೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದವು, ಆದರೆ ಹಿರಿಯ ನಾಯಕ ಈ ಪ್ರಸ್ತಾಪವನ್ನು ನಿರಾಕರಿಸಿದರು ಎಂದು ವರದಿಯಾಗಿದೆ. “ಇಂದಿನ ವಿರೋಧ ಪಕ್ಷದ ಸಭೆಯಲ್ಲಿ, ಎಲ್ಲಾ ಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಶರದ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದವು, ಆದರೆ ಅವರ ಆರೋಗ್ಯದ ಕಾರಣದಿಂದಾಗಿ ನನಗೆ ಸಾಧ್ಯವಗೋದಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲಿಸುವಂತೆ ಎಲ್ಲಾ ಪಕ್ಷಗಳು ಅವರನ್ನು ವಿನಂತಿಸಿದವು” ಎಂದು ಸಿಪಿಐ ನಾಯಕ ಬಿನೋಯ್ ವಿಶ್ವಮ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಈ ನಡುವೆ ಫಾರೂಕ್…

Read More

ನವದೆಹಲಿ: ಉತ್ತರಾಖಂಡದ ಚಾರ್ಧಾಮ್ನ ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೆ ಭಕ್ತರಿಗೆ ಒಂದು ಲಕ್ಷ ರೂಪಾಯಿಗಳ ವಿಮೆಯನ್ನು ನೀಡಲು ಬದರೀನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಬುಧವಾರ ನಿರ್ಧರಿಸಿದೆ.

Read More

ಚಿಕ್ಕಮಗಳೂರು: ಅಕ್ರಮವಾಗಿ ಗೋಮಾಂಸ ಸಂಗ್ರಹ ಮಾಡುವ ಅಡ್ಡೆಗಳ ಮೇಲೆ ಚಿಕ್ಕಮಗಳೂರು ನಗರಸಭೆ ಅಧಿಕಾರಿಗಳು ದಾಳಿ ಮಾಡಿ ಮಟನ್‌ ಕಟ್‌ ಮಾಡುತ್ತಿದ್ದ ಸ್ಥಳವನ್ನು ಜೆಸಿಬಿಯಿಂದ ನೆಲಸಮ ಮಾಡಿರುವ ಘಟನೆ ನಡೆದಿದೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಕ್ರಮ ಕಸಾಯಿಖಾನೆಗಳ ಬಗ್ಗೆ ಜನರಿಂದ ದೂರು ಬರುತ್ತಿದ್ದವು, ಇದಲ್ಲದೇ ಕೆಲಲ ಹಿಂದೂ ಪರ ಸಂಘಟನೆಗಳು ನಗರಸಭೆಗೆ ಮನವಿ ಮಾಡಿದ್ದರು, ಹೀಗಾಗಿ ಪಾಲಿಕೆಯ ಅಧಿಕಾ ರಿಗಳು ಅಕ್ರಮ ಗೋಮಾಂಸ ಅಡ್ಡೆಗಳ ಮೇಲೆ ದಾಳಿ ಮಾಡಿ, ಜೆಸಿಬಿ ಮೂಲಕ ಅಕ್ರಮ ಶೆಡ್​ಗಳ ನೆಲಸಮ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಇದೇ ವೇಳೇ ಗೋಮಾಂಸ ಮಾರಾಟ ಮಾಡುತ್ತಿರುವ ಮನೆಗಳಿಗೆ ನೋಟಿಸ್ ನೀಡಲಾಗುತ್ತಿದೆ ಅಂತ ತಿಳಿಸಿದರು.

Read More

ಅವಿನಾಶ್‌ ಆರ್ ಭೀಮಸಂದ್ರ ತುಮಕೂರು/ಗುಬ್ಬಿ: ತುಮಕೂರಿನ ಗುಬ್ಬಿಯಲ್ಲಿ ಹಾಡಹಗಲೇ ಡಿಎಸ್‌ಎಸ್‌ ನಾಯಕನ ಬರ್ಬರ ಕೊಲೆಯಾಗಿದ್ದು, ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ. ಕೊಲೆಯಾದವನನ್ನು , ನರಸಿಂಹಮೂರ್ತಿ ಅಲಿಯಾಸ್‌ ಕುರಿಮೂರ್ತಿ(45) ತಿಳಿದು ಬಂದಿದೆ. ಇಂದು ಮಧ್ಯಾಹ್ನ ಗುಬ್ಬಿ ಪಟ್ಟಣದ ಬಳಿಯಲ್ಲಿರುವ ಜ್ಯೂನಿಯರ್‌ ಕಾಲೇಜಿನ ಬಳಿಯಲ್ಲಿ ಟೀ ಕುಡಿಯಲು ಬಂದ ವೇಳೆಯಲ್ಲಿ ಕಾರಿನಲ್ಲಿ ಬಂದ ಐವರು ನರಸಿಂಹಮೂರ್ತಿ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಅಂತ ಸ್ಥಳೀಯರು ಹೇಳಿದ್ದಾರೆ. ಘಟನ ಸ್ಥಳಕ್ಕೆ ಹಿರಿಯ ಪೋಲಿಸ್‌ ಅಧಿಕಾರಿಗಳು ಭೇಟಿ ನೀಡಿದ್ದು, ಪರಾರಿಯಾಗಿರುವ ಕೊಲೆ ಆರೋಪಿಯಾಗಿರುವರಿಗೆ ಬಲೆ ಬೀಸಿದ್ದಾರೆ. ಕೊಲೆಯಾದ ನರಸಿಂಹಮೂರ್ತಿ ಹಲವು ಅಪರಾಧ ಪ್ರಕರಣಗಳಲ್ಲಿ ಕೂಡ ಭಾಗಿದ್ದಾರೆ ಎನ್ನಲಾಗಿದ್ದು, ಕೊಲೆಗೆ ದ್ವೇಶವೇ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಪೋಲಿಸರಿಂದ ತಿಳಿದು ಬಂದಿದೆ.

Read More

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಜುಲೈ ಅಂತ್ಯದೊಳಗೆ 20 ವರ್ಷಗಳ ಅವಧಿಗೆ 72 ಗಿಗಾಹರ್ಟ್ಸ್ ಸ್ಪೆಕ್ಟ್ರಂ ಅನ್ನು ಹರಾಜು ಹಾಕುವ ದೂರಸಂಪರ್ಕ ಇಲಾಖೆಯ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಜುಲೈ ಅಂತ್ಯದೊಳಗೆ 20 ವರ್ಷಗಳ ಅವಧಿಗೆ 72 ಗಿಗಾಹರ್ಟ್ಸ್ ಸ್ಪೆಕ್ಟ್ರಂ ಅನ್ನು ಹರಾಜು ಹಾಕುವ ದೂರಸಂಪರ್ಕ ಇಲಾಖೆಯ (ಡಿಒಟಿ) ಪ್ರಸ್ತಾಪಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಮತ್ತು “ಉದ್ಯಮ 4.0 ಅಪ್ಲಿಕೇಶನ್ಗಳಲ್ಲಿ ಹೊಸ ಅಲೆಯನ್ನು ಉತ್ತೇಜಿಸಲು ಖಾಸಗಿ ಕ್ಯಾಪ್ಟಿವ್ ನೆಟ್ವರ್ಕ್ಗಳ ಅಭಿವೃದ್ಧಿ ಮತ್ತು ಸ್ಥಾಪನೆಯನ್ನು ಸಕ್ರಿಯಗೊಳಿಸಲು” ನಿರ್ಧರಿಸಿದೆ. ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಭಾರತದಲ್ಲಿ 5ಜಿ ಸ್ಪೆಕ್ಟ್ರನ್ ಹರಾಜಿನ ಬಗ್ಗೆ ಪ್ರಕಟಣೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. https://twitter.com/AshwiniVaishnaw/status/1536954289276321792 20 ವರ್ಷಗಳ ವ್ಯಾಲಿಡಿಟಿ ಅವಧಿಯ ಒಟ್ಟು 72097.85 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು 2022 ರ ಜುಲೈ ಅಂತ್ಯದ ವೇಳೆಗೆ ಹರಾಜಿಗೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪ್ರ ತೀದಿನ ಸೇವಿಸುವ ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳು ಬರುತ್ತದೆ ಹಾಗೆ ನಾವು ತಿನ್ನುವ ಕೆಟ್ಟ ಆಹಾರಗಳು ದೇಹದ ಮೇಲೆ ಹಾಗೇ ಆರೋಗ್ಯದ ಮೇಲೆ ಹಾನಿಯಾಗುತ್ತದೆ. ಕೆಟ್ಟ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣದಂತಹ ಸಮಸ್ಯ ಉಂಟಾಗುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಲಬದ್ದತೆ ಸಾಮನ್ಯ ಸಮಸ್ಯೆಯಾಗಿದೆ. ಅನೇಕರು ಈ ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದಾರೆ. ಆಹಾರ ಸೇವಿಸುವ ಪ್ರಕ್ರಿಯೆ ಎಷ್ಟು ಸರಾಗವಾಗಿ ಆಗುತ್ತದೆಯೋ ಹಾಗೆ ಅದೆ ರೀತಿ ದೇಹದಲ್ಲಿ ತಿಂದ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಕೂಡ ಚೆನ್ನಾಗಿ ಆಗಬೇಕು. ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಮಲದ ರೂಪದಲ್ಲಿ ದೇಹದಿಂದ ಹೊರಹೋಗುತ್ತದೆ. ದೇಹದಲ್ಲಿ ತಿಂದ ಆಹಾರ ಸರಿಯಾಗಿ ಜೀರ್ಣಾವಾದರೆ ಈ ಮಲಬದ್ಧತೆ ಬರುವುದಿಲ್ಲ . ದೇಹದಲ್ಲಿ ನಿರ್ಜಲೀಕರಣ ಆದಾಗ ಮಲಬದ್ಧತೆ ಸಮಸ್ಯೆ ಮಾತ್ರವಲ್ಲದೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ . ಮಲಬದ್ಧತೆ ಸಮಸ್ಯೆ ತುಂಬಾ ಸಮಯದಿಂದ ಕಾಡುತ್ತಿದ್ದರೆ, ಆಗ ನೀವು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹೆಣ್ಣುಮಕ್ಕಳು ಬೇಗ ಋತುಮತಿಯಾದರೂ ಪೀರಿಯಡ್ಸ್ ಮಾತ್ರ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.ಹೆಚ್ಚಿನ ಬಾರಿ ತಡವಾಗಿ ತಲೆ ನೋವು ತರುತ್ತದೆ. ಕೆಲವೊಮ್ಮೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಕಾರಣಕ್ಕೂ ಪೀರಿಯಡ್ಸ್ ಕಾರಣವಾಗುತ್ತದೆ. ಕೆಲವೊಮ್ಮೆ ಈ ಪೀರಿಯಡ್ಸ್ ಇರೆಗ್ಯುಲಾರಿಟಿಯಿಂದ ಬೊಜ್ಜಿನಂತ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭಗೊಳ್ಳುತ್ತದೆ.ಈ ಆಹಾರ ಸೇವನೆ ಮಾಡಿದರೆ ಪೀರಿಯಡ್ಸ್ ಸರಿಯಾಗಿ ಆಗುತ್ತದೆ. ಪಪ್ಪಾಯ ಹಣ್ಣು ಇಲ್ಲವೇ ಜ್ಯೂಸ್ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಪಪ್ಪಾಯ ಸೇವನೆಯು ಪೀರಿಯಡ್ಸ್ ಸೈಕಲ್ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಔಷಧೀಯ ಗುಣಗಳಿಂದ ಸಮೃದ್ಖವಾಗಿರುವ ಪಾರ್ಸ್ಲಿಯು ಅಡುಗೆಗೆ ರುಚಿ ಕೊಡುವುದಷ್ಟೇ ಅಲ್ಲ, ಮುಟ್ಟಿನ ಚಕ್ರವನ್ನೂ ನಿಯಮಿತಗೊಳಿಸುತ್ತದೆ. ಇದಕ್ಕೆ ಕಾರಣ ಪಾರ್ಸ್ಲಿಯಲ್ಲಿರುವ ಎಪಿಯೋಲ್ ಹಾಗೂ ಮಿರಿಸ್ಟಿಸಿನ್. ಶುಂಠಿ ಹಾಗೂ ಲವಂಗ ಎರಡೂ ಸೇರಿ ದೇಹದಲ್ಲಿ ಉಷ್ಣ ಹೆಚ್ಚಿಸುತ್ತವೆ. ಉಷ್ಣ ಹೆಚ್ಚಾದಾಗ ಮುಟ್ಟು ಬೇಗಾಗುತ್ತದೆ. ಪಾರ್ಸ್ಲಿ ಹಾಗೂ ಶುಂಠಿಯನ್ನು ಒಟ್ಟಿಗೆ ಹಾಕಿ ಕೂಡಾ ಟೀ ಮಾಡಬಹುದು. ಕೊತ್ತಂಬರಿ ಕಷಾಯ ಕೋವಿಡ್ ಸಮಯದಲ್ಲಿ ಬಹಳ ಜನಪ್ರಿಯತೆ ಪಡೆದಿತ್ತು.ಕೊತ್ತಂಬರಿ ಬೀಜ ಹಾಗೂ ಜೀರಿಗೆಯನ್ನು ಒಟ್ಟಾಗಿ…

Read More

ನವದೆಹಲಿ: ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ಅವರ ಜಲ್ವಾ ಮತ್ತೆ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ ನಂತರ, ಜೋ ರೂಟ್ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಬ್ಯಾಟ್ಸ್ಮನ್ ಆಗಿದ್ದಾರೆ. ಆಸ್ಟ್ರೇಲಿಯಾದ ದಂತಕತೆ ಮಾರ್ನಸ್ ಲಾಬುಶೇನ್ ಅವರನ್ನು ಹಿಂದಿಕ್ಕುವ ಮೂಲಕ ಜೋ ರೂಟ್ ಮತ್ತೆ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ, ಜೋ ರೂಟ್ ಈ ಮೊದಲು ನಂಬರ್ ಒನ್ ಬ್ಯಾಟ್ಸ್ಮನ್ ಆಗಿದ್ದರು ಮತ್ತು ಅವರು ಕೆಲವು ಸಮಯದಿಂದ ಅಗ್ರ 10 ರಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಜೋ ರೂಟ್ ಶತಕ ಬಾರಿಸಿದ್ದಾರೆ. ಇದರ ಆಧಾರದ ಮೇಲೆ, ಅವರು ಮೊದಲು ಎರಡನೇ ಸಂಖ್ಯೆಯನ್ನು ತಲುಪಿದರು ಮತ್ತು ನಂತರ ನಂಬರ್ ಒನ್ ಸಂಖ್ಯೆಯನ್ನು ತಲುಪಿದ್ದಾರೆ. ಜೋ ರೂಟ್ ಪ್ರಸ್ತುತ ತಮ್ಮ ಖಾತೆಯಲ್ಲಿ 897 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿದ್ದರೆ, ಮಾರ್ನಸ್ ಲಾಬುಶೇನ್ ಅವರ…

Read More

ಕೆಎನ್‌ಎನ್‌ಸಿನಿಮಾಡೆಸ್ಕ್‌: ಹರಿಕಥೆಯಲ್ಲ ಗಿರಿಕಥೆ ಸಿನಿಮಾ ಸದ್ಯ ಗಾಂಧಿನಗರದಲ್ಲಿ ಎಲ್ಲರ ಮೆದುಳಿಗೂ ಕೆಲಸ ಕೊಟ್ಟಿರುವಂತ ಸಿನಿಮಾ ಎಂದೇ ಹೇಳಬಹುದು. ಆ ಕುತೂಹಲಕ್ಕೆ ಬ್ರೇಕ್ ಬೀಳುವ ಸಮಯವೇನು ಬಹಳ ದೂರವಿಲ್ಲ. ಜೂನ್ 23 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಆದರೆ ಅದಕ್ಕೂ ಮುನ್ನ ಸಿನಿಮಾದ ಬಗ್ಗೆ ಟ್ರೇಲರ್ ಮೂಲಕ ಹೊಸ ಸುಳಿವೊಂದನ್ನು ಬಿಟ್ಟುಕೊಟ್ಟಿದೆ. ಇಂದು ಆನಂದ್ ಆಡಿಯೋದಲ್ಲಿ ಹರಿಕಥೆಯಲ್ಲ ಗಿರಿಕಥೆ ಸಿನಿಮಾದ ಟ್ರೇಲರ್ ಔಟ್ ಆಗಿದ್ದು, ಪ್ರತಿಯೊಬ್ಬ ಡೈರೆಕ್ಟರ್ ಗಳ ಕನಸು ನನಸಾಗುವ ಸುಸಮ. ಇದು ಪಕ್ಕಾ ಹಿಟ್ ಎಂಬ ಕಮೆಂಟ್ ಗಳನ್ನು ಪಡೆಯುತ್ತಿದೆ. ಈ ಚಿತ್ರ ಇದೇ ತಿಂಗಳ 23ರಂದು ತೆರೆ ಕಾಣಲಿದೆ. .ಈ ಹಿಂದೆ ಚಿತ್ರತಂಡ ಮಾಧ್ಯಮದವರನ್ನು ಕರೆದು, ಸಿನಿಮಾದ ಬಗ್ಗೆ ಒಂದಷ್ಟು ಸ್ಪೆಷಲ್ ವಿಚಾರಗಳನ್ನು ಹೇಳಿಕೊಂಡಿತ್ತು. ಅಲ್ಲಿ ತನಕ ಇದೊಂದು ಕಾಮಿಡಿ ಜಾನರ್ ಸಿನಿಮಾವೆಂದಷ್ಟೇ ತಿಳಿದಿತ್ತು. ಆದರೆ ಸುದ್ದಿಗೋಷ್ಟಿಯಲ್ಲಿ ಈ ಸಿನಿಮಾ ಮೂವರು ಗಿರಿಗಳ ಸುತ್ತ ಸುತ್ತುವ ಭಯನಾಕ ಕಥೆ ಎಂಬ ಗುಟ್ಟು ರಟ್ಟುಮಾಡಿತ್ತು. ಇದೀಗ ಟ್ರೇಲರ್ ನಲ್ಲಿ ಆ…

Read More

ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ 1.5 ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ ಮಿಷನ್ ಮೋಡ್ನಲ್ಲಿ 10 ಲಕ್ಷ ನೇಮಕಾತಿಗಳನ್ನು ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ಮಾಹಿತಿಯನ್ನು ಟ್ವೀಟ್ ನಲ್ಲಿ ನೀಡಿದೆ. ಹೌದು, ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಮೋದಿ ಸರ್ಕಾರ 10 ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ ಎಂದು ಪ್ರಧಾನಿ ಕಚೇರಿಯ ಟ್ವೀಟ್ ನಲ್ಲಿ ತಿಳಿಸಲಾಗಿದೆ. https://twitter.com/PMOIndia

Read More


best web service company