ಬೆಂಗಳೂರು: ಶುಕ್ರವಾರ ಇಲ್ಲವೇ ಶನಿವಾರ ರಾಜ್ಯ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಳವಾಗಿದೆ. ನಾಳೆ ಯುಗಾದಿ ಹಬ್ಬವಿದ್ದು, ಮರು ದಿನ ಹೊಸ ತಡುಕು ಇರುವುದರಿಂದ ಈ ಸಮಯದಲ್ಲಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಿದ್ರೆ, ಅಂದೇ ನೀತಿ ಸಂಹಿತೆಯನ್ನು ಜಾರಿ ಮಾಡಬೇಕಾದ ಅನಿವಾರ್ಯತೆ ಕೂಡ ನಿರ್ಮಾಣವಾಗುತ್ತದೆ, ಆದರಿಂದ ಹಬ್ಬ ಮುಗಿದ ಬಳಿಕ ಅಂದ್ರೆ ಶುಕ್ರವಾರ ಇಲ್ಲವೇ ಶನಿವಾರ ಕರ್ನಾಟಕ ರಾಜ್ಯ ವಿಧಾನಸಭಾ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎನ್ನಲಾಗುತ್ತಿದೆ. ಇನ್ನೂ ಎರಡು ಹಂತದಲ್ಲಿ ಈ ಬಾರಿ ಕೂಡ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಚುನಾವಣೆ ನಡೆಯುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ. ಬಹುಶಃ ಏಪ್ರಿಲ್ 10 ರಿಂದ ಏಪ್ರಿಲ್ 15ರೊಳಗೆ ಎರಡು ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯನ್ನೂ ಕೂಡ ರಾಜಕೀಯ ಪಂಡಿತರು ಊಹಿಸಿದ್ದು, ಎಲ್ಲದಕ್ಕೂ ಶೀಘ್ರದಲ್ಲಿ ಉತ್ತರ ಸಿಗಲಿದೆ. ಇನ್ನೂ ಈ ನಡುವೆ ಪ್ರಮುಖ ರಾಜಕೀಯ ಪಾರ್ಟಿಗಳ ಚುನಾವಣಾ ಯಾತ್ರೆಗಳು ಕೂಡ ಇಂದಿಗೆ ಮುಕ್ತಯವಾಗುತ್ತಿರುವುದನ್ನು ಕೂಡ ನಾವು ಕಾಣಬಹುದಾಗಿದೆ.
Author: kanandanewslive
ಮಂಡ್ಯ: ನಾಳೆ ಕಾಂಗ್ರೆಸ್ ಪಕ್ಷದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ (Congress Candidates List) ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು. ಅವರು ಇಂದು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ತೆರಳಿ ಮಂಗಳವಾರ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದರು. ಇದೇ ವೇಳೇ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ದೆಹಲಿಗೆ ವಾಪಸ್ ಆದ ಬಳಿಕ ಅಭ್ಯರ್ಥೀಗಳ ಪಟ್ಟಿಯನ್ನು ಬಿಡುಗಡೆ ಮಡಲಾಗುವುದು ಅಂತ ತಳಿಸಲಾಗಿತ್ತು, ಅದರಂತೆ ನಾಳೆ ಯುಗಾದಿ ಹಬ್ಬದಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು. ಸಿದ್ದರಾಮಯ್ಯ ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶವಿದೆ. ಕೋಲಾರ, ವರುಣ, ಬಾದಾಮಿ, ಚಾಮುಂಡೇಶ್ವರಿ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಲಿ. ಅವರ ಅನುಕೂಲ ನೋಡಿಕೊಂಡು ತೀರ್ಮಾನ ಮಾಡಲಿ. ಎಲ್ಲಿ ತೀರ್ಮಾನ ಮಾಡ್ತಾರೋ ಅಲ್ಲೇ ಅವಕಾಶ ಕೊಡ್ತೀವಿ ಅಂತ ತಿಳಿಸಿದರು.
ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಭಾರತೀಯ ಕ್ರಿಕೆಟ್ ಮಂಡಳಿಯು ಎರಡು ಕ್ರಿಕೆಟ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಶ್ರಮಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಅವರು‘ಕ್ರಿಕೆಟ್ ನಡೆಯಲಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ದೋಹಾದಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಸೈಡ್‌ಲೈನ್‌ನಲ್ಲಿ ಅಫ್ರಿದಿ ಮಾತನಾಡಿ, ‘ಎರಡೂ ದೇಶಗಳ ನಡುವೆ ಕ್ರಿಕೆಟ್ ನಡೆಯಲು ನಾನು ಮೋದಿ ಸಾಹಬ್‌ಗೆ ವಿನಂತಿಸುತ್ತೇನೆ ಅಂತ ಹೇಳಿದ ಅವರು , ‘ನಾವು ಯಾರೊಂದಿಗಾದರೂ ಸ್ನೇಹ ಹೊಂದಲು ಬಯಸಿದರೆ ಮತ್ತು ಅವರು ನಮ್ಮೊಂದಿಗೆ ಮಾತನಾಡದಿದ್ದರೆ ನಾವು ಏನು ಮಾಡಬಹುದು? ಬಿಸಿಸಿಐ ಅತ್ಯಂತ ಬಲಿಷ್ಠವಾದ ಮಂಡಳಿ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ನೀವು ಬಲಿಷ್ಠರಾಗಿದ್ದಾಗ ನಿಮಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನೀವು ಹೆಚ್ಚು ಶತ್ರುಗಳನ್ನು ಮಾಡಲು ಪ್ರಯತ್ನಿಸಬೇಡಿ, ನೀವು ಸ್ನೇಹಿತರನ್ನು ಮಾಡಿಕೊಳ್ಳಬೇಕು. ನೀವು ಹೆಚ್ಚು ಸ್ನೇಹಿತರನ್ನು ಮಾಡಿಕೊಂಡಾಗ, ನೀವು ಬಲಶಾಲಿಯಾಗುತ್ತೀರಿ’ ಎಂದು ಆಫ್ರಿದಿ ಹೇಳಿದರು.
ಕೊಚ್ಚಿ: ಅದು ಮಾಧ್ಯಮಗಳಾಗಲಿ ಅಥವಾ ಸರ್ಕಾರಿ ಏಜೆನ್ಸಿಗಳಾಗಲಿ, ಮಾನ್ಯ ಕಾರಣವಿಲ್ಲದೆ ನಾಗರಿಕರ ಖಾಸಗಿ ಜೀವನದಲ್ಲಿ ಇಣುಕುವ ಹಕ್ಕು ಯಾರಿಗೂ ಇಲ್ಲ. ಟಿವಿ ಚಾನೆಲ್‌ನ ಇಬ್ಬರು ಉದ್ಯೋಗಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿದೆ. ಸತ್ಯ ಮತ್ತು ನ್ಯಾಯಕ್ಕಾಗಿ ‘ತಥಾಕಥಿತ ಕ್ರುಸೇಡ್’ ಹೆಸರಿನಲ್ಲಿ ಅಥವಾ ಯಾರೊಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ಮಾಧ್ಯಮದವರು ಸಾಮಾನ್ಯ ನಾಗರಿಕರ ಖಾಸಗಿತನದ ಹಕ್ಕಿನೊಂದಿಗೆ ಘರ್ಷಣೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೆಲವು ಚಾನೆಲ್‌ಗಳು ಸುದ್ದಿಯನ್ನು ತೋರಿಸುವ ಬದಲು ತಮ್ಮ ವೃತ್ತಿಯಲ್ಲಿ ಅನೈತಿಕ ಆಚರಣೆಗಳನ್ನು ಬಿಂಬಿಸುತ್ತಿರುವುದು ಬೇಸರ ತಂದಿದೆ ಎಂದು ನ್ಯಾಯಮೂರ್ತಿ ವಿಜಿ ಅರುಣ್ ಹೇಳಿದ್ದಾರೆ. ಸಮಾಜದ ಒಂದು ವರ್ಗವು ಇಂತಹ ಸಂವೇದನಾಶೀಲ ಮತ್ತು ಕೊಳಕು ಸುದ್ದಿಗಳನ್ನು ನೋಡುತ್ತಿರಬಹುದು. ಇಂತಹ ಸುದ್ದಿಗಳನ್ನು ನಿಲ್ಲಿಸುವ ವ್ಯವಸ್ಥೆ ಇಲ್ಲದಿದ್ದರೆ ಸುದ್ದಿ ವಾಹಿನಿಗಳೇ ತಮ್ಮೊಳಗೆ ನೋಡಿಕೊಳ್ಳಬೇಕು. ಹೇಳಿದೆ.
ನವದೆಹಲಿ:ಅಮೆರಿಕ ಮತ್ತು ಯುರೋಪ್‌ನಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟಿನಿಂದಾಗಿ ವಿಶ್ವದಾದ್ಯಂತ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ದಾಖಲೆಯ ಜಿಗಿತ ದಾಖಲಾಗಿದೆ. ಸೋಮವಾರ, ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,400 ರೂ.ಗಳಷ್ಟು ಹೆಚ್ಚಾಗಿದೆ ಮತ್ತು 10 ಗ್ರಾಂಗೆ 60,100 ರೂ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ಜನರು, ವಿಶೇಷವಾಗಿ ಭಾರತೀಯರು, ಹೂಡಿಕೆಗೆ ಹೆಚ್ಚು ಆದ್ಯತೆಯ ಆಯ್ಕೆಯಾಗಿ ಚಿನ್ನವನ್ನು ಪರಿಗಣಿಸುತ್ತಾರೆ. ಕಳೆದ 17 ವರ್ಷಗಳಲ್ಲಿ ಚಿನ್ನದ ಬೆಲೆ ಆರು ಬಾರಿ ಏರಿಕೆಯಾಗಿದೆ. ಚಿನ್ನದ ಬೆಲೆ ಏಕೆ ಹೆಚ್ಚುತ್ತಿದೆ? ಚಿನ್ನದ ಬೆಲೆ ಏರಿಕೆ, ಯುಎಸ್ ಮತ್ತು ಇತರ ದೇಶಗಳಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು, ದುರ್ಬಲ ಡಾಲರ್, ಸುರಕ್ಷಿತ ಧಾಮ ಬೇಡಿಕೆ ಮತ್ತು ಷೇರು ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ ಹೇಳುತ್ತದೆ. ಷೇರುಪೇಟೆಗಳ ಕುಸಿತದಿಂದ ಚಿನ್ನಕ್ಕೆ ದೊರೆತ ಬೆಂಬಲದಿಂದಾಗಿ ವಾರದ ಹಿಂದೆ 55 ಸಾವಿರದ ಆಸುಪಾಸಿನಲ್ಲಿ ವಹಿವಾಟಾಗುತ್ತಿದ್ದ ಚಿನ್ನ 10 ಗ್ರಾಂಗೆ 60 ಸಾವಿರ ರೂ.ಗಳ ಗಡಿ ದಾಟಿದೆ.
ಚನ್ನೈ: ತಮಿಳು ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರ ವಿಚ್ಛೇದನವಾಗಿದೆ. ಈ ನಡುವೆ ನಟ ಬೈಲ್ವಾನ್ ರಂಗನಾಥನ್ ನಟ ಧನುಶ್ ಮತ್ತೆ ಮದುವೆಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಬೈಲ್ವಾನ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ನಟರ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗಪಡಿಸಿದ್ದು, ಧನುಷ್ ದಕ್ಷಿಣ ಭಾರತದ ನಟಿ ಮೀನಾ ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ಬೈಲ್ವಾನ್ ಹೇಳಿದ್ದಾರೆ, ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಧನುಷ್ ಕಡಿದುಕೊಂಡಿರುವುದರಿಂದ ಜುಲೈನಲ್ಲಿ ಮೀನಾಳನ್ನು ಮದುವೆಯಾಗುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಮದುವೆಯಾಗದೆ ಇಬ್ಬರೂ ಒಟ್ಟಿಗೆ ವಾಸಿಸುವ ಸಾಧ್ಯತೆಯಿದೆ ಎಂದು ಬೈಲ್ವಾನ್ ತಮ್ಮ ಚಾನೆಲ್‌ನಲ್ಲಿ ಹೇಳಿದ್ದಾರೆ.
ಕೆಎನ್‌ಎನ್‌ಸಿನಿಮಾಡೆಸ್ಕ್: ಕಾಮಿಡಿ ಪಾತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ಕೋಮಲ್ ಕಾರಣಾಂತರಗಳಿಂದ ತುಸು ಸಮಯ ತೆರೆಮರೆಗೆ ಸರಿದಿದ್ದರು. ಈಗ ಉಂಡೆನಾಮ ಚಿತ್ರದ ಮೂಲಕ ಮತ್ತೆ ಅಭಿಮಾನಿಗಳನ್ನ ನಗಿಸಲು ಪರದೆಯ ಮೇಲೆ ಹಾಜರಾಗ್ತಿದ್ದಾರೆ.ಹೌದು ಕೋಮಲ್ ಅವರು ನಾಯಕ ನಟರಾಗಿ ಮತ್ತೆ ನಮ್ಮಂದೆ ಕಾಮಿಡಿ ಕಮಾಲ್ ಮಾಡಲು ಬರ್ತಿರುವ ಚಿತ್ರಕ್ಕೆ ಉಂಡೆನಾಮ ಎಂಬ ಕ್ಯಾಚೀ ಟೈಟಲ್ ಫಿಕ್ಸ್ ಆಗಿದೆ.ಅಂದಹಾಗೆ ಈ ಚಿತ್ರ ಇದೇ ಏಪ್ರಿಲ್ ೧೪ ರಂದೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಕಲ ತಯಾರಿ ಮಾಡಿಕೊಂಡಿದೆ. ‘ಎನ್. ಕೆ. ಸ್ಟುಡಿಯೋಸ್’ ಬ್ಯಾನರಿನಲ್ಲಿ ಸಿ. ನಂದಕಿಶೋರ್ ನಿರ್ಮಿಸಿರುವ ‘ಉಂಡೆನಾಮ’ ಚಿತ್ರದ ತಾರಗಣದಲ್ಲಿ ಯಾರೀದಾರೆ ಅಂತ ನೋಡೋದಾದ್ರೆ ಕೋಮಲ್ ಅವರ ಜೊತೆ ಹರೀಶ್ ರಾಜ್, ಧನ್ಸಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಂಕ್ ಜನಾರ್ಧನ್ ಮುಂತಾದ ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಕೆ. ಎಲ್. ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್ ಸಂಭ್ರಮ ಸಂಗೀತ ನಿರ್ದೇಶನವಿದೆ. ಚಿತ್ರಕ್ಕೆ ನವೀನ್ ಕುಮಾರ್…
ಕೆಎನ್‌ಎನ್‌ಸಿನಿಮಾಡೆಸ್ಕ್: ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಸಿನೆಮಾಗಳಲ್ಲಿ ಪೆಂಟಗನ್ ಸಿನೆಮಾ ತನ್ನ ರಿಲೀಸ್ ದಿನಾಂಕವನ್ನ ಘೋಷಣೆ ಮಾಡಿಕೊಂಡಿದೆ. ಹಾಡುಗಳು ಮತ್ತು ಟೀಸರ್ ಮೂಲಕ ಗಮನ ಸೆಳೆದಿದ್ದ ‘ಪೆಂಟಗನ್’ ಕಥಾಸಂಕಲನದ ರೀತಿ ಮೂಡಿಬಂದಿರುವ ವಿಶೇಷ ಪಟ್ಟಿಗೆ ಸೇರಲಿದೆ ಎಂಬ ಕಾರಣದಿಂದಲೂ ಹಾಗು ಪಾತ್ರವರ್ಗ ಮತ್ತು ೫ ನಿರ್ದೇಶಕರ ಆಕ್ಷನ್ ಕಟ್ ಹೇಳಿರುವ ಸಂಗತಿ ಹೀಗೆ ಹಲವು ಆಯಾಮಗಳಿಂದ ಕುತೂಹಲ ಹುಟ್ಟುಹಾಕಿದೆ. ಚಿತ್ರರಂಗದಲ್ಲಿ ಒಂದಲ್ಲ ಒಂದು ಭಿನ್ನ ವಿಭಿನ್ನ ಪ್ರಯತ್ನಗಳು ನಡೀತಾ ಇರುತ್ತವೆ. ಆ ಸಾಲಿಗೀಗ ಪೆಂಟಗನ್ ಸಿನೆಮಾ ಸೇರ್ಪಡೆಯಾಗಲಿದೆ. ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ ಉಸ್ತುವಾರಿ ವಹಿಸಿರುವ ಈ ಪೆಂಟಗನ್ ಪ್ರಾಜೆಕ್ಟ್ ನಲ್ಲಿ 5 ಭಿನ್ನವಾದ ಕಥೆಗಳ ಸಂಕಲನದ ಸಿನಿಮಾ ಮೂಡಿಬಂದಿದೆ. ಈ ಪ್ರಾಜೆಕ್ಟ್ನ ಉಸ್ತುವಾರಿಯ ಜೊತೆಗೆ ಗುರು ದೇಶಪಾಂಡೆ ಅವರು ನಿರ್ಮಾಣದೊಂದಿಗೆ ಒಂದು ಕಥೆಯನ್ನು ನಿರ್ದೇಶಿಸಿದ್ದಾರೆ.ಒಂದೇ ಸಿನೆಮಾ ನೋಡಲೆಂದು ಬಂದ ಪ್ರೇಕ್ಷಕರಿಗೆ ೫ ಕಥೆಗಳ ಮನರಂಜನೆಯ ಔತಣಕೂಟಕ್ಕೆ ಇದೇ ಏಪ್ರಿಲ್ 7 ರಂದು ಮುಹೂರ್ತ ಫಿಕ್ಸ್ ಆಗಿದೆ. ‘ಜಿ ಸಿನಿಮಾಸ್’ ಬ್ಯಾನರ್…
ಕೆಎನ್‌ಎನ್‌ಸಿನಿಮಾಡೆಸ್ಕ್: ನಟ, ಸುಚೇಂದ್ರ ಪ್ರಸಾದ್ ನಿರ್ದೇಶನದ ಮಾವು ಬೇವು ಸಿನೆಮಾ ಈ ಬಾರಿಯ 14 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಹೌದು ಸುಚೇಂದ್ರ ಪ್ರಸಾದ್ ಅಂದ್ರೆ ನೆನಪಾಗೋದು ಅವರ ಶುದ್ದ ಕನ್ನಡ,ಅಮೋಘ ನಟನೆ,ಮತ್ತು ಹೈಲೆಟ್ ಆಗೋ ವಾಯ್ಸ್ . ಸಾಕಷ್ಟು ಸಿನೆಮಾಗಳ ಮೂಲಕ ಭಿನ್ನ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿರುವ ಸುಚೇಂದ್ರ ಪ್ರಸಾದ್ ತಮ್ಮದೇ ಆದ ಛಾಪು ಮೂಡಿಸಿಕೊಂಡವರು. ಇದೀಗ `ಮಾವು ಬೇವು’ ಎಂಬ ಭಿನ್ನ ಕಥಾನಕದ, ಸದಭಿರುಚಿಯ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಸಧ್ಯ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿರುವ ಮಾವು ಬೇವು ಸಿನೆಮಾ ಬೆಂಗಳೂರು ಅಂತರಾಷ್ಟ್ರಿಯ ಸಿನಿಮೋತ್ಸವದಲ್ಲಿ ಮೊದಲ ಬಾರಿಗೆ ಪರದೆ ಮೇಲೆ ಮೂಡಿ ಬರಲಿದೆ. ಇದು ಸಿನೆಮಾ ತಂಡದ ಪಾಲಿಗೆ ಸಿಕ್ಕ ಮೊದಲ ಯಶಸ್ಸಲ್ಲದೇ ಬೇರೆನಲ್ಲ. ಈಗಿನ ಸಮಾಜದಲ್ಲಿ ನಡೆಯುವ ಘಟನೆಗಳಾಧಾರಿತ ಈ ಕಾಲಘಟ್ಟದ ತಲ್ಲಣ, ಸಾಂಸಾರಿಕ, ಸಾಮಾಜಿಕ ನೈಜತೆಗಳನ್ನೊಳಗೊಂಡ ಮಾವು ಬೇವು ಚಿತ್ರ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ ಅಂದ್ರೆ ಪ್ರತಿಷ್ಠೆಯ ಸಂಗತಿಯೂ ಹೌದು. ಈ ಮೂಲಕ ಮೊದಲ…
ಕೆಎನ್‌ಎನ್‌ಸಿನಿಮಾಡೆಸ್ಕ್: ಹರಿಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪದವಿ ಪೂರ್ವ ಸಿನೆಮಾ ಕಳೆದ ಡಿಸೆಂಬರ್ 30 ರಂದು ಬಿಡುಗಡೆಯಾಗಿತ್ತು.ಟೀನೇಜ್ ಕಹಾನಿಯೊಂದಿಗೆ ಅಪ್ಪ ಮಗನ ಕನಸಿನ ಕಹಾನಿಯ ಈ ಕಥೆಗೆ ಸಿನಿಪ್ರಿಯರು ಫಿದಾ ಆಗಿದ್ದರು. ಈಗ ಸಿನೆಮಾ ೧೪ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಿಂಚಲಿದೆ. ಹೌದು ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಜಂಟಿಯಾಗಿ ನಿರ್ಮಿಸಿದ್ದ ಪದವಿ ಪೂರ್ವ ಚಿತ್ರದ ಕಥೆ ಸಾಗುವುದು 1995-96ರ ಕಾಲಘಟ್ಟದಲ್ಲಿ. ಮೊಬೈಲ್ ಫೋನ್‌ಗಳಿಲ್ಲದ ಆ ಕಾಲವನ್ನು ನಿರ್ದೇಶಕ ಹರಿಪ್ರಸಾದ್ ಸುಂದರವಾಗಿ ಚಿತ್ರಿಸಿಕೊಟ್ಟಿದ್ದಾರೆ. ಈ ಕಹಾನಿ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೇ ಸನ್ ನೆಕ್ಸ್ಟ್ ಡಿಜಿಟಲ್ ಲೋಕದಲ್ಲೋ ಮನೆ ಮನೆ ತಲುಪಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ಸು ಗಳಿಸಿತ್ತು. ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆ ಯಾಗಿದ್ದು ಚಿತ್ರತಂಡಕ್ಕೆ ಮತ್ತೊಂದು ಗೆಲುವಿನ ಗರಿ ಕೊಟ್ಟು, ಪರದೆಯಲ್ಲಿ ಅನಾವರಣಗೊಳ್ಳಲು ಸಜ್ಜಾಗಿದೆ. ಪೃಥ್ವಿ ಶಾಮನೂರು ನಾಯಕನಾಗಿ ಹೊಸ ಪರಿಚಯವಾಗಿರುವ ಪದವಿ ಪೂರ್ವ ಸಿನ್ಮಾಗೆ ಅಂಜಲಿ ನಾಯಕಿಯಾಗಿದ್ದು, ಯಶಾ ಶಿವಕುಮಾರ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.ಸಂತೋಷ್ ರೈ…