Author: Kannada News

ಹುಬ್ಬಳ್ಳಿ : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿದ್ದು, ಸಧ್ಯ ಹುಬ್ಬಳ್ಳಿಯ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಸ್ಫೋಟವಾಗಿದೆ. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ 15ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕಾಲೇಜನ್ನ ಸೀಲ್‌ಡೌನ್‌ ಮಾಡಲಾಗಿದೆ. ಇನ್ನು ಕಾಲೇಜಿನ ಸಿಬ್ಬಂದಿಗೆ, ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು, ಮುಂದಿನ ಆದೇಶದವರೆಗೆ ಕಾಲೇಜು ಸೀಲ್‌ ಡೌನ್‌ ಆಗಲಿದೆ. ಈ ಮಧ್ಯೆ ಒಟ್ಟಾರೇ ರಾಜ್ಯದಲ್ಲಿ ಇಂದು ಕೊರೊನಾ ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 28,723 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಕಳೆದ 24 ಗಂಟೆಯಲ್ಲಿ 2,21,205 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 20,121 ಸೇರಿದಂತೆ ರಾಜ್ಯಾದ್ಯಾಂತ 28,723 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ” ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-breaking-news-corona-blast-in-state-20121-in-bengaluru-28723-new-cases-detected-in-state-14-killed-in-virus/ https://kannadanewsnow.com/kannada/fraud-in-the-name-of-pm-kisan-samman-nidhi/ https://kannadanewsnow.com/kannada/breaking-news-gurulinga-sivakumarasri-lingaykya-the-presiding-officer-of-kalli-mutt-kalaburagi/

Read More

ಕಲಬುರಗಿ : ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದ ಕಳ್ಳಿ ಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯಶ್ರೀ ಲಿಂಗೈಕ್ಯರಾಗಿದ್ದಾರೆ. ಮಹಾಗಾಂವ ಗ್ರಾಮದ ಕಳ್ಳಿ ಮಠದ 50 ವರ್ಷದ ಗುರುಲಿಂಗ ಶಿವಾಚಾರ್ಯಶ್ರೀಗಳು ಇಂದು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅಂದ್ಹಾಗೆ, ಶ್ರೀಗಳು ಸಂಕ್ರಾಂತಿ ಪ್ರಯುಕ್ತ ಬೀದರ್‌ ಜಿಲ್ಲೆ ನಂದಗಾಂವ್‌ಗೆ ತೆರಳಿದ್ದರು. ಅಲ್ಲಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಬರುವಾಗ ಶ್ರೀಗಳಿಗೆ ಹೃದಯಾಘಾತವಾಗಿದ್ದು, ಲಿಂಗೈಕ್ಯರಾಗಿದ್ದಾರೆ. https://kannadanewsnow.com/kannada/bigg-breaking-news-dinakara-changes-course-sunlight-bows-to-gavi-gangadhareshwara/ https://kannadanewsnow.com/kannada/is-it-safe-for-pregnant-women-to-consume-cold-drinks/ https://kannadanewsnow.com/kannada/bigg-breaking-news-corona-blast-in-state-20121-in-bengaluru-28723-new-cases-detected-in-state-14-killed-in-virus/

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ( Coronavirus ) ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 28,723 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದೆ. ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು, ಕಳೆದ 24 ಗಂಟೆಯಲ್ಲಿ 2,21,205 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 20,121 ಸೇರಿದಂತೆ ರಾಜ್ಯಾದ್ಯಾಂತ 28,723 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ” ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ 28,723 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 12.98%ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದಾಗಿ ರಾಜ್ಯದಲ್ಲಿ 14 ಜನ ಸಾವನ್ನಪ್ಪಿದ್ದಾರೆ. ◾ರಾಜ್ಯದಲ್ಲಿ ಹೊಸ ಪ್ರಕರಣಗಳು : 28,723 ◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 20,121 ◾ರಾಜ್ಯದಲ್ಲಿ ಧನಾತ್ಮಕತೆಯ ದರ: 12.98% ◾ಡಿಸ್ಚಾರ್ಜ್ʼಗಳು: 3,105 ◾ಸಕ್ರಿಯ ಪ್ರಕರಣಗಳು ರಾಜ್ಯ: 1,41,337 (ಬೆಂಗಳೂರು- 101ಸಾವಿರ) ◾ಸಾವುಗಳು:14 (ಬೆಂಗಳೂರು- 07) ◾ಟೆಸ್ಟ್ʼಗಳು: 2,21,205…

Read More

ಬೆಂಗಳೂರು : ನಗರದ ಗವಿಪುರಂನಲ್ಲಿರುವ ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರ ದೇಗುಲದಲ್ಲಿರುವ ಮಹಾ ಶಿವನಿಗೆ ಸೂರ್ಯರಶ್ಮಿ ಸ್ವರ್ಶವಾಗಿದೆ. ಇಂದು ಮಕರ ಸಂಕ್ರಾಮಣದ ದಿನ ಸೂರ್ಯ ತನ್ನ ಪಥವನ್ನ ಬದಲಾಯಿಸುತ್ತಾನೆ. ಅದ್ರಂತೆ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ ಸೂರ್ಯ ಇಂದು, ಗವಿಗಂಗಾಧರೇಶ್ವರನನ್ನ ನಮಿಸಿದ್ದಾನೆ. ದೇವಾಲಯದಲ್ಲಿರುವ ಲಿಂಗದ ಮುಂದಿರುವ ನಂದಿಕೊಂಬಿನಿಂದ ಹಾದು ಶಿವನ ಸ್ಪರ್ಶ ಮಾಡಿದ ಸೂರ್ಯ ರಶ್ಮಿ, ಗವಿ ಗಂಗಾಧರನಿಗೆ ಸಂಕ್ರಮಣದ ಅಭಿಷೇಕ ಮಾಡಿದೆ. ಇನ್ನು ಈ ಸೂರ್ಯರಶ್ಮಿ ಸ್ಪರ್ಶ ನಂತರ ಲಿಂಗರೂಪಿ ಶಿವನಿಗೆ ವಿಶೇಷ ಅಭಿಷೇಕ ಮಾಡಲಾಯ್ತು. ಅಂದ್ಹಾಗೆ, ಕೋವಿಡ್‌ ಕಾರಣದಿಂದ ಗವಿಗಂಗಾಧರೇಶ್ವರನನ್ನ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ನೀಡಲಾಗಿಲ್ಲ. ಅಂದ್ಹಾಗೆ, ಕಳೆದ ವರ್ಷ ಸಂಕ್ರಾಂತಿಯ ದಿನ ಕೊನೆ ಕ್ಷಣದಲ್ಲಿ ಮೋಡ ಕವಿದ ಕಾರಣ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳಲಿಲ್ಲ. ಇದು ಮುಂದಾಗುವ ಆಪಾಯ ಸೂಚನೆ ಎಂದೇ ಆನೇಕರು ಹೇಳಿದ್ರು. ಅದ್ರಂತೆ, ಕಳೆದ ವರ್ಷ ಕೊರೊನಾ ಕಾರಣ ಕಾರಣದಿಂದ ಸಾವಿರಾರು ಜನರು ಸಾವನ್ನಪ್ಪಿದ್ರು. ಇನ್ನು ಆನೇಕ ಗಣ್ಯರು ಕೂಡ ಅಕಾಲಿಕವಾಗಿ ಸಾವನ್ನಪ್ಪಿದ್ರು. ಆದ್ರೆ,…

Read More

ನವದೆಹಲಿ : ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು(Pv Sindhu) ಅವ್ರು ಶುಕ್ರವಾರ ಕೆ.ಡಿ.ಜಾದವ್ ಕ್ರೀಡಾಂಗಣ(K.D Jadhav Stadium)ದಲ್ಲಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಪಂದ್ಯಾವಳಿ ಸರಣಿ(BWF World Tour Tournament)ಯ ಭಾಗವಾಗಿರುವ ಭಾರತ ಓಪನ್ 2022(India Open 2022)ರ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. 36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 21-7, 21-18ರ ನೇರ ಸೆಟ್ʼಗಳಲ್ಲಿ ಅಶ್ಮಿತಾ ಚಾಲಿಹಾ ಅವರನ್ನ ಸೋಲಿಸಿದರು. ಸಿಂಧು ಹೊರತುಪಡಿಸಿ, ಶಟ್ಲರ್ʼ ಳಾದ ಲಕ್ಷ್ಯ ಸೇನ್ ಮತ್ತು ಆಕರ್ಷಿ ಕಶ್ಯಪ್ ಸೆಮೀಸ್ʼಗೆ ಪ್ರವೇಶಿಸಿದ ಇತರರಾಗಿದ್ದಾರೆ. https://twitter.com/ANI/status/1481934059266015236?s=20 https://kannadanewsnow.com/kannada/sankranti-gift-to-the-public-rs-20-at-cooking-oil-price-decrease-edible-oil-prices-decline/ https://kannadanewsnow.com/kannada/omicron-symptom-beware-of-these-symptoms-on-the-skin-contact-the-doctor-without-neglecting-it/ https://kannadanewsnow.com/kannada/bigg-breaking-news-three-ssb-soldiers-killed-9-injured-four-critical-after-high-voltage-hit/

Read More

ಸುಪಾಲ್ : ಬಿಹಾರದ ಸುಪಾಲ್‌ನಲ್ಲಿ ಹೈ ವೋಲ್ಟೇಜ್ ವೈರ್(high voltage wire) ತಗುಲಿದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಲ್ಲಿ ಒಂಬತ್ತು ಯೋಧರು ಗಾಯಗೊಂಡಿದ್ದು, ಎಲ್ ಎನ್ ವಿಭಾಗೀಯ ಆಸ್ಪತ್ರೆ(LN Divisional Hospital)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, SSB 45 ಬಿ ಬೆಟಾಲಿಯನ್ ವಿರ್ಪುರ್ ಪ್ರಧಾನ ಕಚೇರಿಯ ಯೋಧರು ಸಾವನ್ನಪ್ಪಿದ್ದಾರೆ. ಡೇರೆಗಳನ್ನ ಸ್ಥಾಪಿಸುವಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗ್ತಿದ್ದು, ಗಾಯಗೊಂಡ ಯೋಧರಲ್ಲಿ 4 ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಎಲ್ಲಾ ಯೋಧರು ವಿರ್ಪುರದ ಸಶಸ್ತ್ರ ಸೀಮಾ ಬಾಲ್ 45ನೇ ಬೆಟಾಲಿಯನ್ʼನಲ್ಲಿ ತರಬೇತಿ ಪಡೆಯುತ್ತಿದ್ದರು. https://kannadanewsnow.com/kannada/omicron-symptom-beware-of-these-symptoms-on-the-skin-contact-the-doctor-without-neglecting-it/ https://kannadanewsnow.com/kannada/how-much-do-you-know-about-directions-do-you-know-why-the-south-is-good/ https://kannadanewsnow.com/kannada/sankranti-gift-to-the-public-rs-20-at-cooking-oil-price-decrease-edible-oil-prices-decline/

Read More

ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ದೇಶಾದ್ಯಂತ ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಒಂದು ವರ್ಷದ ಹಿಂದೆ ವಿಶ್ವ ಮಾರುಕಟ್ಟೆಗಿಂತ ಹೆಚ್ಚಾಗಿದೆ. ಆದ್ರೆ, 2021ರ ಅಕ್ಟೋಬರ್ʼನಿಂದ ಅದು ಕುಸಿಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 167 ಮೌಲ್ಯ ಸಂಗ್ರಹ ಕೇಂದ್ರಗಳ ಪ್ರವೃತ್ತಿಯ ಪ್ರಕಾರ, ದೇಶಾದ್ಯಂತ ಪ್ರಮುಖ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯ ತೈಲದ ಚಿಲ್ಲರೆ ಬೆಲೆಗಳು ಪ್ರತಿ ಕೆ.ಜಿ.ಗೆ 5-20 ರೂ.ಗಳಷ್ಟು ಕಡಿಮೆಯಾಗಿವೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಮಂಗಳವಾರ ನೆಲಗಡಲೆ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ 180 ರೂ., ಸಾಸಿವೆ ಎಣ್ಣೆ ಪ್ರತಿ ಕೆ.ಜಿ.ಗೆ 184.59 ರೂ., ಸೋಯಾ ಎಣ್ಣೆ ಪ್ರತಿ ಕೆ.ಜಿ.ಗೆ 148.85 ರೂ. ಮತ್ತು ಸೂರ್ಯಕಾಂತಿ ಎಣ್ಣೆ ಪ್ರತಿ ಕೆ.ಜಿ.ಗೆ 162.4 ರೂ. ತಾಳೆ ಎಣ್ಣೆ ಪ್ರತಿ ಕೆ.ಜಿ.ಗೆ 128.5 ರೂ. ಇತ್ತು. ದತ್ತಾಂಶದ ಪ್ರಕಾರ, ಅಕ್ಟೋಬರ್ 1, 2021ಕ್ಕೆ ಹೋಲಿಸಿದ್ರೆ, ನೆಲಗಡಲೆ ಮತ್ತು ಸಾಸಿವೆ ಎಣ್ಣೆಯ ಚಿಲ್ಲರೆ ಬೆಲೆಗಳು ಪ್ರತಿ ಕೆ.ಜಿ.ಗೆ ರೂ.1.50-3 ರಷ್ಟು ಇಳಿಕೆಯಾಗಿವೆ. ಆದ್ರೆ,…

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ದೇಶದಲ್ಲಿ ಕೋವಿಡ್-19ರ ಒಮಿಕ್ರಾನ್ ರೂಪಾಂತರ(OmiCran transformation)ದ 5000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ಹರಡುವಿಕೆಯ ದೃಷ್ಟಿಯಿಂದ, ಇದು ಡೆಲ್ಟಾ(Delta) ರೂಪಾಂತರಕ್ಕಿಂತ ಮಾರಕವಾಗಿದೆ ಎಂದು ನಂಬಲಾಗಿದೆ. ಡೆಲ್ಟಾ ವಿರುದ್ಧದ ರೋಗಲಕ್ಷಣಗಳು ಸ್ವಲ್ಪ ಮಟ್ಟಿಗೆ ಒಮಿಕ್ರಾನ್‌ನಲ್ಲಿ ಕಂಡುಬರುತ್ತವೆ ಎಂದು ತಜ್ಞರು ನಂಬುತ್ತಾರೆ. ಆದ್ರೆ, ಇದು ಬಹಳ ವೇಗವಾಗಿ ಹರಡುತ್ತದೆ. ಒಮಿಕ್ರಾನ್‌ ಇತರ ರೂಪಾಂತರಗಳಿಗಿಂತ ಹಗುರವಾಗಿದೆ ಎಂದು ಸಂಶೋಧನೆ ತೋರಿಸುತ್ತದೆ ಮತ್ತು ಮೊದಲ ಅಧಿಕೃತ UK ವರದಿಯ ಪ್ರಕಾರ, ಈ ರೂಪಾಂತರದಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯವು ಡೆಲ್ಟಾ ರೂಪಾಂತರಕ್ಕಿಂತ 50 ರಿಂದ 70 ಪ್ರತಿಶತ ಕಡಿಮೆಯಾಗಿದೆ. ತಜ್ಞರ ಪ್ರಕಾರ, ಒಮಿಕ್ರಾನ್ʼನ ಲಕ್ಷಣಗಳು ಸೌಮ್ಯವಾಗಿದ್ದರೂ ಸಹ, ಅದನ್ನ ನೆಗಡಿಯಂತೆ ಲಘುವಾಗಿ ತೆಗೆದುಕೊಳ್ಳಬಾರದು. ಆದ್ರೆ, ನೀವು ಅದರ ಲಕ್ಷಣಗಳನ್ನ ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆಯಾಸ, ಕೀಲು ನೋವು, ಶೀತ ತಲೆನೋವು ಓಮಿಕ್ರಾನ್‌ನ 4 ಆರಂಭಿಕ ಮತ್ತು ಸಾಮಾನ್ಯ ಲಕ್ಷಣಗಳಾಗಿವೆ. ಇತರ ಅಧ್ಯಯನಗಳ ಪ್ರಕಾರ, ಸ್ರವಿಸುವ ಮೂಗು, ಸೀನುವಿಕೆ ಮತ್ತು ನೋಯುತ್ತಿರುವ ಗಂಟಲು, ಹಸಿವಿನ…

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಒಡಿಶಾದ ರಾಜಧಾನಿ ಭುವನೇಶ್ವರ(Bhubaneswar)ದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ನವಜಾತ ಶಿಶು(Newborn baby) ಬಾಲ(Tail)ದೊಂದಿಗೆ ಜನಿಸಿದೆ. ಬಾಲದೊಂದಿಗೆ ಜನಿಸಿದ ಈ ಮಗುವನ್ನ ನೋಡಿ ವೈದ್ಯರು ಆಘಾತಕ್ಕೊಳಗಾದ್ರು. ನಂತ್ರ ಶಸ್ತ್ರಚಿಕಿತ್ಸೆ(Surgery) ಮೂಲಕ ಬಾಲ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದರು. ಅಂದ್ಹಾಗೆ, ಇಲ್ಲಿಯವರೆಗೆ, ಇಂತಹ 195 ಘಟನೆಗಳು ವಿಶ್ವಾದ್ಯಂತ ಸಂಭವಿಸಿದ್ದು, ಈ ಘಟನೆಗಳನ್ನ ಅಪರೂಪವೆಂದು ಪರಿಗಣಿಸಲಾಗುತ್ತದೆ. ಡಾ.ಅಶೋಕ್ ಕುಮಾರ್ ಮಹಾಪಾತ್ರ ಅವ್ರು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ನವಜಾತ ಶಿಶುವಿನ ಬೆನ್ನು ಹುರಿಯಲ್ಲಿ ವ್ಯತ್ಯಾಸವಿತ್ತು. ಅವನ ಬೆನ್ನಿನ ಮೇಲ್ಭಾಗದಲ್ಲಿ ಬಾಲವಿತ್ತು ಎಂದರು. ಅಂದ್ಹಾಗೆ, ಪುರಿ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಮಗು ಜನಿಸಿದೆ. ಬಾಲವಿರುವ ಮಗುವಿನ ಜನನವನ್ನ ಅಪರೂಪದ ಘಟನೆ ಎಂದು ಪರಿಗಣಿಸಲಾಗುತ್ತದೆ. ವಿಶ್ವದಲ್ಲಿ ಈವರೆಗೆ ಇಂತಹ 195 ಘಟನೆಗಳು ನಡೆದಿವೆ. ಹುಡುಗನಿಗೆ ಮೂರು ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಅನೇಕ ಶಿಶುಗಳು ಗರ್ಭದಲ್ಲಿರುವಾಗ ಬಾಲವನ್ನು ಹೊಂದಿರುತ್ತವೆ. ಆದ್ರೆ, ಎಂಟು ವಾರಗಳ ನಂತರ, ಅದು ಕಣ್ಮರೆಯಾಗುತ್ತದೆ. ಆದರೆ, ಕೆಲವೊಮ್ಮೆ ಬಾಲ ಮಾಯವಾಗುವುದಿಲ್ಲ…

Read More

ಕೆಎನ್‌ಎನ್‌ಡಿಜಿಟಲ್‌ : ಇಂಡೋನೇಷ್ಯಾ(Indonesia)ದ ಸುಂಡಾ ಜಲಸಂಧಿ(Sunda Strait)ಯಲ್ಲಿ ಶುಕ್ರವಾರ ಪ್ರಭಲ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ. https://kannadanewsnow.com/kannada/india-approves-37-4-million-deal-with-philippines/ https://kannadanewsnow.com/kannada/a-10-day-strain-that-infects-kovid-may-also-spread-to-others-a-study/ https://kannadanewsnow.com/kannada/former-punjab-minister-joginder-singh-mann-has-left-the-congress/

Read More


best web service company