Author: Kannada News

ಶೋಪಿಯಾನ್ : ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಶೋಪಿಯಾನ್(Shopian)ನಲ್ಲಿ ಭದ್ರತಾ ಪಡೆಗಳು(Security Forces) ಮತ್ತು ಉಗ್ರರ(Militants) ನಡುವೆ ಎನ್ ಕೌಂಟರ್(Encounter) ನಡೆದಿದ್ದು, ಒಬ್ಬ ಭಯೋತ್ಪಾದಕ(Terrorist) ಸಾವನ್ನಪ್ಪಿದ್ದಾನೆ. ಕಲ್ಬಿಲ್ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಏಜೆನ್ಸಿಗಳಿಗೆ ಮಾಹಿತಿ ಸಿಕ್ಕಿದ್ದು, ಇದರ ನಂತ್ರ ಆ ಪ್ರದೇಶದಲ್ಲಿ ತಪಾಸಣೆ ಕಾರ್ಯಾಚರಣೆ ನಡೆಯಿತು. ಏತನ್ಮಧ್ಯೆ, ಭಯೋತ್ಪಾದಕರು ಮನೆಯೊಂದರಲ್ಲಿದ್ದಾರೆ ಎಂದು ತಿಳಿದುಬಂದಿದೆ. ನಂತ್ರ ಅವನನ್ನ ಭದ್ರತಾ ಪಡೆಗಳು ಸುತ್ತುವರೆದಿವೆ. ತಕ್ಷಣ ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಸೇನೆಯೂ ಗುಂಡಿನ ಕಾಳಗ ನಡೆದಿದೆ. ಪರಿಣಾಮ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದು, ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳು ಈ ಪ್ರದೇಶವನ್ನ ತಲುಪಿವೆ. ಇನ್ನು ಸ್ಥಳಕ್ಕೆ ನಾಗರಿಕರ ಆಗಮನವನ್ನು ನಿಷೇಧಿಸಲಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆಯ ಹಿನ್ನೆಲೆಯಲ್ಲಿ ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿದೆ. ದಿನದಿಂದ ದಿನಕ್ಕೆ, ಭಯೋತ್ಪಾದಕರ ದುಷ್ಕೃತ್ಯಗಳನ್ನು ತಗ್ಗಿಸಲು ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. https://twitter.com/ANI/status/1484847599329112064?s=20 https://kannadanewsnow.com/kannada/filmy-style-wedding-groom-slapped-bride-who-danced-at-wedding-ceremony-only-what-happened-next-is-guessing/ https://kannadanewsnow.com/kannada/can-these-symptoms-be-omicron/ https://kannadanewsnow.com/kannada/breaking-news-ban-on-rally-roadshow-continues-election-commission-clarifies/

Read More

ಕಡಲೂರು : ಇತ್ತೀಚಿನ ದಿನಗಳಲ್ಲಿ ವಧು-ವರ ನೃತ್ಯ ಮಾಡುತ್ತಾ ತಮ್ಮ ಮದುವೆಯನ್ನ ಸಂಭ್ರಮಿಸೋದು ಸಾಮಾನ್ಯವಾಗಿದೆ. ಆದ್ರೆ, ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ವಧು ನೃತ್ಯ ಮಾಡಿದ್ದು, ಮೂರು ಜನರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಹೌದು, ಮದುವೆ ಕಾರ್ಯಕ್ರಮದಲ್ಲಿ ಮನಸೋ ಇಚ್ಛೆ ಕುಣಿಯುತ್ತಿದ್ದ ವಧುವನ್ನ ಕಂಡು ವರ ಕೆಂಡಾಮಂಡಲನಾಗಿದ್ದು, ವಧುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತ್ರ ನಡೆದಿದ್ದು ಮಾತ್ರ ಊಹಿಸಲಾಧ್ಯ. ಅಂದ್ಹಾಗೆ, ಸ್ಥಳೀಯ ಪ್ರಸಿದ್ಧ ಉದ್ಯಮಿಯ ಮಗಳು ಇದೇ ಜನವರಿ 20ರಂದು ತಮಿಳುನಾಡಿನ ಕಡಂಪುಲಿಯೂರು ಗ್ರಾಮದಲ್ಲಿ ಮದುವೆಯಾಗಬೇಕಾಗಿತ್ತು. ಇವ್ರು ಪನ್ರುತಿಯಿಂದ ಬಂದ ವಧು ಮತ್ತು ಪೆರಿಯಾಕಟ್ಟೆಪುರಂನ ವರ, ನವೆಂಬರ್ 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಎಂದು ವರದಿಯಾಗಿದೆ. ಮದುವೆಗೆ ಒಂದು ದಿನ ಮೊದಲು ಜನವರಿ 19ರಂದು, ಅವ್ರ ಮದುವೆಯ ಸಮಾರಂಭಗಳಲ್ಲಿ ಸಾಕಷ್ಟು ನೃತ್ಯವಿತ್ತು. ಆರಂಭದಲ್ಲಿ ಸಂತೋಷ ಮನೆ ಮಾಡಿತ್ತು. ಕೆಲವು ವರದಿಗಳ ಪ್ರಕಾರ, ವಧುವಿನ ಸೋದರ ಸಂಬಂಧಿ ಅವರೊಂದಿಗೆ ಸೇರಿಕೊಂಡಾಗ ವರನು ಕೋಪಗೊಂಡಿದ್ದಾನೆ. ಇನ್ನು ವಧು ಆತನ ಜೊತೆ ಸೇರಿ ಹೆಜ್ಜೆ ಹಾಕುತ್ತಿದ್ದಂತೆ ಕೆಂಡಮಂಡಲಗೊಂಡು ಆಕೆಗೆ ಕಪಾಳಮೋಕ್ಷ…

Read More

ನವದೆಹಲಿ : ರಾಜಕೀಯ ಪಕ್ಷಗಳು ಆಯೋಜಿಸುವ ರ್ಯಾಲಿಗಳು(Rally) ಮತ್ತು ರೋಡ್ ಶೋಗಳ(Roadshow) ಮೇಲೆ ನಿಷೇಧ ಹೇರಿರುವ ಭಾರತ ಚುನಾವಣಾ ಆಯೋಗ(Election Commission of India), ಈಗಾಗ್ಲೇ ವಿಧಿಸಿದ ನಿರ್ಬಂಧಗಳು(Restrictions imposed) ಈ ವಾರ ಮುಂದುವರಿಯಲಿವೆ ಎಂದಿದೆ. ಮೂಲಗಳ ಪ್ರಕಾರ, ಕೊರೊನಾ ಸೋಂಕು ಮತ್ತು ಲಸಿಕೆಯ ಸ್ಥಿತಿಯನ್ನ ಪರಿಶೀಲಿಸಲು ನಡೆದ ಚುನಾವಣಾ ಆಯೋಗದ ಸಭೆಯಲ್ಲಿ ಇದನ್ನ ಒಪ್ಪಲಾಗಿದೆ. ಪ್ರಚಾರದ ಇತರ ವಿಧಾನಗಳಲ್ಲಿ ಕೆಲವು ಸಡಿಲಿಕೆಗಳಿವೆ ಎಂದು ಮೂಲಗಳು ಹೇಳುತ್ತವೆ. ಶನಿವಾರ ನಡೆದ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಎಲ್ಲಾ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು. ಇದಲ್ಲದೆ, ಎಲ್ಲಾ ಐದು ಚುನಾವಣಾ ರಾಜ್ಯಗಳ ಉನ್ನತ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಆಯುಕ್ತರು ಸಹ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ರಾಜ್ಯಗಳ ಆರೋಗ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ಲಸಿಕೆ ಮತ್ತು ಸೋಂಕಿನ ಬಗ್ಗೆ ಇಲ್ಲಿಯವರೆಗೆ ಆಗಿರುವ ಪ್ರಗತಿಯ ಬಗ್ಗೆ ವಿವರಿಸಿದರು. ಅವರೊಂದಿಗೆ ಸಂವಾದ ನಡೆಸಿ ಕೇಂದ್ರ ಆರೋಗ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಲಾಯಿತು. ಅದರ ನಂತರ ನಿಷೇಧವನ್ನ…

Read More

ನವದೆಹಲಿ : ಫೆಬ್ರವರಿ 1, 2020ರ ನಡುವೆ ಕೊನೆಗೊಳ್ಳಬೇಕಾಗಿದ್ದ ಕೆಲವು ಚಾಲನಾ ಪರವಾನಗಿ(driving licences)ಗಳ ಸಿಂಧುತ್ವ(Validity)ವನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್(Kailash Gahlot ) ಶುಕ್ರವಾರ ಸಂಜೆ ಘೋಷಿಸಿದರು. ಇನ್ನು “ದೆಹಲಿಯ ಸಾಮಾನ್ಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸಾರಿಗೆ ಇಲಾಖೆ ಎಲ್ಲಾ ಕಲಿಕಾ ಪರವಾನಗಿಗಳು ಮತ್ತು ಭಾರಿ ಚಾಲನಾ ಪರವಾನಗಿಗಳ ಸಿಂಧುತ್ವವನ್ನು ಮುಂದಿನ ಮೂರು ತಿಂಗಳವರೆಗೆ ಅಂದರೆ 31.03.2022 ರವರೆಗೆ ವಿಸ್ತರಿಸಲು ನಿರ್ಧರಿಸಿದೆ, ದೆಹಲಿ ಸರ್ಕಾರ ಯಾವಾಗಲೂ ಸಾಮಾನ್ಯ ಜನರೊಂದಿಗೆ ನಿಂತಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಂದ್ಹಾಗೆ, ಸಾರಿಗೆ ಇಲಾಖೆಯ ಪ್ರಕಾರ, ಕಲಿಯುವವರ ಪರವಾನಗಿಯ ಸಿಂಧುತ್ವವನ್ನು ಈ ಹಿಂದೆ ಜನವರಿ 31,2022ಕ್ಕೆ ವಿಸ್ತರಿಸಲಾಗಿತ್ತು. https://kannadanewsnow.com/kannada/bigg-news-3-months-after-recovery-from-corona-infection-booster-dose-will-be-given-union-government/ https://kannadanewsnow.com/kannada/monkey-fever-%ca%bckfd%ca%bc-hit-the-country-shivamogga-woman-gets-monkey-fever-hospitalised/ https://kannadanewsnow.com/kannada/sairam-bhatt-donor-of-265-houses-in-kasargod/

Read More

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿಯ ಕುಡಿಗೆ(Kudige) ಗ್ರಾಮದ 57 ವರ್ಷದ ಮಹಿಳೆಗೆ ಕೋತಿ ಜ್ವರ(Monkey fever) ಅಂತಾ ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆ (KFD) ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಆರೋಗ್ಯ ಅಧಿಕಾರಿ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದ್ದು, “ರೋಗಿಯು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ರು. ನಂತರ ಅವ್ರು ರಕ್ತದ ಮಾದರಿಯನ್ನ ಕೆಎಫ್‌ಡಿಗಾಗಿ ಪರೀಕ್ಷೆಗೆ ಕಳಿಸಲಾಗುತ್ತಿದ್ದು, ಕೋತಿ ಜ್ವರ ದೃಢಪಟ್ಟಿದೆ” ಎಂದರು. ಅಂದ್ಹಾಗೆ, ಕೋತಿ ಜ್ವರ ಎಂದೂ ಕರೆಯಲ್ಪಡುವ ಕ್ಯಾಸನೂರು ಅರಣ್ಯ ರೋಗ (KFD) ಕ್ಯಾಸನೂರು ಅರಣ್ಯ ರೋಗದ ವೈರಸ್(Casanur forest disease virus)ನಿಂದ ಉಂಟಾಗುತ್ತದೆ. ಇದು ಪ್ರಾಥಮಿಕವಾಗಿ ಮಾನವರು ಮತ್ತು ಕೋತಿಗಳನ್ನ ಬಾಧಿಸುತ್ತದೆ. ಇನ್ನು ಈ ಕೆಎಫ್ ಡಿಯ ಪ್ರಮುಖ ಲಕ್ಷಣಗಳೆಂದ್ರೆ, ಚಳಿ, ಮುಂಭಾಗದ ತಲೆನೋವು, ದೇಹ ನೋವು ಮತ್ತು ಐದರಿಂದ 12 ದಿನಗಳವರೆಗೆ ತೀವ್ರ ಜ್ವರ ಇರುತ್ತೆ. https://twitter.com/ANI/status/1484753448394686466?s=20 https://kannadanewsnow.com/kannada/bigg-news-426-cases-of-omikron-sub-lineage-%ca%bcba-2-virus-detected-amid-corona-liquet/ https://kannadanewsnow.com/kannada/lic-get-%e2%82%b9-12000-per-month-after-paying-just-1-love-for-this-project/ https://kannadanewsnow.com/kannada/bigg-news-3-months-after-recovery-from-corona-infection-booster-dose-will-be-given-union-government/

Read More

ನವದೆಹಲಿ : ಕೊರೊನಾ ವೈರಸ್ ಸೋಂಕು(Corona virus infection) ತಗುಲಿರುವ ವ್ಯಕ್ತಿಗಳಿಗೆ ಮುನ್ನೆಚ್ಚರಿಕೆ ಡೋಸ್(Precautionary dose) ಸೇರಿದಂತೆ ಕೋವಿಡ್ ಲಸಿಕೆ(Covid vaccine)ಯನ್ನ ಅವ್ರು ಚೇತರಿಸಿಕೊಂಡ ಮೂರು ತಿಂಗಳು(Three months) ನೀಡಲಾಗುವುದು ಎಂದು ಕೇಂದ್ರ ಸರ್ಕಾರ(Central Government) ತಿಳಿಸಿದೆ. ಕೋವಿಡ್ ಸೋಂಕಿಗೆ ಒಳಗಾದ ಅರ್ಹರಿಗೆ ಮುನ್ನೆಚ್ಚರಿಕೆ ಡೋಸ್ʼಗಳ ಆಡಳಿತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಾರ್ಗದರ್ಶನ ಕೋರಿದ್ದರಿಂದ ಈ ನಿರ್ದೇಶನ ಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೆಲ್(Vikas Sheel) ಅವ್ರು ಶುಕ್ರವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಇದ್ರಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವ್ರಿಗೆ ಮೂರು ತಿಂಗಳ ನಂತ್ರ ಮುನ್ನೆಚ್ಚರಿಕೆ ಡೋಸ್ ನೀಡಬೇಕು ಎಂದಿದ್ದಾರೆ. ಪತ್ರದಲ್ಲಿ “ದಯವಿಟ್ಟು ಗಮನಿಸಿ: ಸಾರ್ಸ್-2 ಕೋವಿಡ್-19 ಅನಾರೋಗ್ಯವನ್ನು ಲ್ಯಾಬ್ ಪರೀಕ್ಷೆಯಿಂದ ಸಾಬೀತುಪಡಿಸಿದ ವ್ಯಕ್ತಿಗಳು, ಔಷಧ ಪ್ರಮಾಣ ಸೇರಿದಂತೆ ಎಲ್ಲಾ ಕೋವಿಡ್ ಲಸಿಕೆಯನ್ನ ಚೇತರಿಸಿಕೊಂಡ ನಂತ್ರ 3 ತಿಂಗಳು ಮುಂದೂಡಲಾಗುವುದು” ಎಂದು ಅವರು ಸುದ್ದಿ ಸಂಸ್ಥೆ ಪಿ.ಟಿ.ಐ. ಉಲ್ಲೇಖಿಸಿದ್ದಾರೆ. ಇನ್ನು “ಸಂಬಂಧಪಟ್ಟ ಅಧಿಕಾರಿಗಳಿಗೆ ದಯವಿಟ್ಟು…

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಯುನೈಟೆಡ್ ಕಿಂಗ್ ಡಮ್(United Kingdom)ನ ಆರೋಗ್ಯ ಅಧಿಕಾರಿಗಳು ಬಿಎ.2(BA.2) ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಕೋವಿಡ್-19ರ ಒಮಿಕ್ರಾನ್ ರೂಪಾಂತರ(Omikron variant)ದ ಉಪ ವಂಶಾವಳಿಯಾಗಿದೆ(Sub-genealogy) ಎಂದು ರಾಯಿಟರ್ಸ್ ವರದಿ ಮಾಡಿದೆ. ಯುಕೆ ಆರೋಗ್ಯ ಭದ್ರತಾ ಸಂಸ್ಥೆ, BA.2 ವೈರಸ್‌ನ್ನ ತನಿಖೆಯ ಅಡಿಯಲ್ಲಿ ಒಂದು ರೂಪಾಂತರವೆಂದು ಪರಿಗಣಿಸಿದ್ದು, ಇದು ಬೆಳವಣಿಗೆಯ ಅನುಕೂಲ ಹೊಂದಬಹುದು ಎಂದಿದೆ. ಆದರೆ, ಈ BA.2 ಇನ್ನೂ ಕಾಳಜಿಯ ರೂಪಾಂತರವೆಂದು ಹೆಸರಿಸಲಾಗಿಲ್ಲ. ಒಮಿಕ್ರಾನ್ ರೂಪಾಂತರದ ಈ ಉಪ-ವಂಶಾವಳಿಯೂ ಒಮಿಕ್ರಾನ್ʼನಲ್ಲಿ ಕಂಡುಬರುವ ನಿರ್ದಿಷ್ಟ ರೂಪಾಂತರವನ್ನ ಹೊಂದಿಲ್ಲ, ಇದು ಡೆಲ್ಟಾದಿಂದ ಸುಲಭವಾಗಿ ಪ್ರತ್ಯೇಕಿಸಲು ಕಷ್ಟವಾಗುತ್ತದೆ ತಜ್ಞರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ. ಯುಕೆ ಈ ಹೊಸ ರೂಪಾಂತರದ ಕೋವಿಡ್-19ನ 426 ಪ್ರಕರಣಗಳನ್ನ ಅನುಕ್ರಮಗೊಳಿಸಿದೆ. ಯುಕೆ ಜೊತೆಗೆ, ತನಿಖೆಯಲ್ಲಿರುವ ರೂಪಾಂತರದ ಹೆಚ್ಚಿನ ಪ್ರಕರಣಗಳು ಡೆನ್ಮಾರ್ಕ್, ಭಾರತ, ಯುಕೆ, ಸ್ವೀಡನ್ ಮತ್ತು ಸಿಂಗಾಪುರದಿಂದ ವರದಿಯಾಗಿವೆ. ಇನ್ನು ಬಿಎ.2 ನಿಂದಾಗಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯನ್ನ ಡೆನ್ಮಾರ್ಕ್ ವರದಿ ಮಾಡಿದ್ದು, 2022ರ ಎರಡನೇ…

Read More

ಬಾಲಿ : ಇಂಡೋನೇಷ್ಯಾ(Indonesia)ದ ಹೊಸ ರಾಜಧಾನಿಯನ್ನಾಗಿ ನುಸಂತರಾ(Nusantara)ವನ್ನ ಆಯ್ಕೆ ಮಾಡಲಾಗಿದ್ದು, ಶೀಘ್ರವೇ ನುಸಂತರಾಗೆ ರಾಜಧಾನಿ ಪಟ್ಟ ಸಿಗಲಿದೆ. ಅಂದ್ಹಾಗೆ, ಸಧ್ಯ ಇರುವ ರಾಜಧಾನಿ ಜಕಾರ್ತಾದಲ್ಲಿ ನೀರಿನ ಕೊರತೆ, ಪರಿಸರ ಮಾಲಿನ್ಯ ಸೇರಿದಂತೆ ಹಲವು ಕೊರತೆಗಳು ಎದುರಾಗಿವೆ. ಹಾಗಾಗಿ ನುಸಂತರಾದಲ್ಲಿ ಹೊಸ ರಾಜಧಾನಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಇದು ಜಕಾರ್ತಾದಿಂದ 2 ಸಾವಿರ ಕಿಮೀ ದೂರದಲ್ಲಿದೆ. ಅದ್ರಂತೆ, ಇದಕ್ಕೆ ಸಂಬಂಧಿಸಿದ ವಿಧೇಯಕವನ್ನ ಸಂಸತ್‌ನಲ್ಲಿ ಈಗಾಗಲೇ ಅಂಗೀಕರಿಸಲಾಗಿದೆ. https://kannadanewsnow.com/kannada/jobs-in-police-departemet-karnataka/ https://kannadanewsnow.com/kannada/good-news-to-karnataka-nithin-gadkari-green-signal-to-improoveshiradi-ghat-road-im/ https://kannadanewsnow.com/kannada/siddagange-sri-sivakumara-swamijis-3rd-year-commemoration-tomorrow-decision-to-celebrate-simple/

Read More

ತುಮಕೂರು : ನಾಳೆ ಸಿದ್ದಗಂಗೆ ಮಠಾಧೀಶರಾಗಿದ್ದ ದಿವಂಗತ ಶ್ರೀ ಶಿವಕುಮಾರ ಸ್ವಾಮೀಜಿ(Sri Sivakumara Swamiji) ಅವ್ರು 3ನೇ ವರ್ಷದ ಪುಣ್ಯ ಸ್ಮರಣೆಯಿದೆ. ಕೊರೊನಾ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿಯೇ ಸರಳವಾಗಿ ಆಚರಿಸಲು ಮಠದ ಆಡಳಿತ ಮಂಡಳಿ(Mutt Management) ನಿರ್ಧರಿಸಿದೆ. ಇನ್ನು ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸಹ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆಯ ದರ್ಶನ ಪಡೆಯಲಿದ್ದಾರೆ ಎನ್ನಲಾಗ್ತಿದೆ. ಅದ್ರಂತೆ, ರಾಜ್ಯದಲ್ಲಿ ಇಂದು ಕೊರೋನಾ ( Coronavirus ) ಮಹಾಸ್ಪೋಟವೇ ಉಂಟಾಗಿದ್ದು, ಕಳೆದ 24 ಗಂಟೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅರ್ಧ ಲಕ್ಷಕ್ಕೆ ಸಮೀಪಿಸಿವೆ. 47,754 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಸೋಂಕಿನಿಂದಾಗಿ 29 ಮಂದಿ ಸಾವನ್ನಪ್ಪಿದ್ದಾರೆ. https://kannadanewsnow.com/kannada/good-news-to-karnataka-nithin-gadkari-green-signal-to-improoveshiradi-ghat-road-im/ https://kannadanewsnow.com/kannada/shiradi-ghat-road-signal-to-develop-central-minister-nithin-gadkari/ https://kannadanewsnow.com/kannada/jobs-in-police-departemet-karnataka/

Read More

ಬೆಂಗಳೂರು : ರೈತ ಬಾಂಧವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ(Atma Nirbhar Bharat Abhiyan Yojana) ಶೇ.15 ರಷ್ಟು ಸಹಾಯಧನ(Subsidy) ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai) ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, “ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಿದೆ. ಈ ಮೂಲಕ ಪಿಎಂಎಫ್‌ಎಂಇ ಯೋಜನೆಯ(PMFME Project) ಸಹಾಯಧನ ಶೇ.50 ರಷ್ಟಾಗಿದೆ. ಇನ್ನು ಈ ಯೋಜನೆ ರೈತರ ಆದಾಯ ದ್ವಿಗುಣಗೊಳಿಸಲಿದೆ” ಎಂದರು. ಇನ್ನು ಕೇಂದ್ರ ಸರ್ಕಾರದ ಯೋಜನೆಗೆ ಪೂರಕವಾಗಿ ರಾಜ್ಯದಲ್ಲಿ ಪ್ರತ್ಯೇಕ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಈ ಮೂಲಕ ಕೃಷಿ ಉತ್ಪನ್ನಗಳ, ಉಪ ಉತ್ಪನ್ನಗಳ ತಯಾರಿಕೆಗೆ ರೈತರಿಗೆ ಸಹಕಾರ ನೀಡಲಿದೆ ಎಂದು ಹೇಳಿದರು. https://kannadanewsnow.com/kannada/big-update-bomb-blast-kills-at-least-3-injures-20-in-lahore-pakistan/ https://kannadanewsnow.com/kannada/dk-shivakumar-reaction-nalapad-case/ https://kannadanewsnow.com/kannada/pariksha-pe-charcha-2022/

Read More


best web service company