ಕೆನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾ ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ವಿಶ್ವದ್ಯಾಂತ ಆತಂಕ ಸೃಷ್ಟಿಸಿದೆ. ಈಗಿರುವಾಗ ಬ್ರಿಟನ್ ವಿಜ್ಞಾನಿಯೊಬ್ಬರು ಮಹತ್ವದ ಹೇಳಿಕೆ ನೀಡಿದ್ದು, ಅವ್ರ ಔಷಧಿ ಸೊಟ್ರೋವಿಮಾಬ್(Sotrovimab) ಒಮಿಕ್ರಾನ್ನ ಪ್ರತಿ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ. US ಪಾಲುದಾರ VIR (VIR) ಜೈವಿಕ ತಂತ್ರಜ್ಞಾನದ ಸಹಯೋಗದೊಂದಿಗೆ ಔಷಧವನ್ನ ಅಭಿವೃದ್ಧಿಪಡಿಸಿದೆ. ಈಗ ಈ ಔಷಧಿ ಓಮಿಕ್ರಾನ್ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಓಮಿಕ್ರಾನ್ ವಿರುದ್ಧ ಯಾವ ಔಷಧಿ ಪರಿಣಾಮಕಾರಿಯಾಗಿದೆ? ಕಂಪನಿ ಹೊರಡಿಸಿದ ಹೇಳಿಕೆಯಲ್ಲಿ, ಕಂಪನಿಯು ತನ್ನ ಔಷಧಿ ಸೊಟ್ರೋವಿಮಾಬ್ ಓಮಿಕ್ರಾನ್ ಹೊಂದಿರುವ 37 ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಹೇಳಿಕೊಂಡಿದೆ. ಕಳೆದ ವಾರವೂ, ಪ್ರಿ-ಕ್ಲಿನಿಕಲ್ ಪರೀಕ್ಷೆಗಳ ನಂತ್ರ, ಸೊಟ್ರೋವಿಮಾಬ್ ಔಷಧಿ ಒಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. WHO ಉಲ್ಲೇಖಿಸಿರುವ ಪ್ರತಿಯೊಂದು ರೂಪಾಂತರದ ವಿರುದ್ಧವೂ ಈ ಔಷಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯು ಒತ್ತಿಹೇಳಿದೆ. ಅವರ ಔಷಧವು ಮೊನೊಕ್ಲೋನಲ್ ಆಂಟಿಬಾಡಿ ಎಂದು ಕಂಪನಿಯು…
Author: Kannada News
ಬೆಂಗಳೂರು : ಇತ್ತೀಚಿಗಷ್ಟೇ ರಾಜ್ಯದ 15 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಸಧ್ಯ ಈ ಅಧಿಕಾರಿಗಳ ವಿರುದ್ಧ ರಾಜ್ಯದ ವಿವಿಧ ಎಸಿಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಜ್ಯದ ವಿವಿಧ ಎಸಿಬಿ ಠಾಣೆಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಅದ್ರಂತೆ, ಬೆಂಗಳೂರು ಅಧಿಕಾರಿಗಳ ಎಸಿಬಿ ತಂಡ ನಡೆಸಿದ ಬೆಂಗಳೂರು ಪ್ರಮುಖ ನಾಲ್ವರು ಅಧಿಕಾರಿಗಳ ಮೇಲೆ ನಗರ ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅದ್ರಂತೆ, ಬಿಬಿಎಂಪಿ ಎಫ್ಡಿಸಿ ಎಂ.ಮಾಯಣ್ಣ, ಬಿಬಿಎಂಪಿ ಗ್ರೂಪ್ ಡಿ ನೌಕರ ಜಿ.ವಿ ಗಿರಿ, ಸಕಾಲ ಆಡಳಿತಾಧಿಕಾರಿ ಎಲ್.ಸಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆ ಫಿಸಿಯೋಥೆರಪಿಸ್ಟ್ ಎಸ್.ಎನ್ ರಾಜಶೇಖರ್ ವಿರುದ್ಧ ಬೆಂಗಳೂರು ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಮುಂದಿನ ಹಂತದಲ್ಲಿ ಈ ಅಧಿಕಾರಿಗಳ ವಿರುದ್ಧ ಪೊಲೀಸರು ತನಿಖೆ ನಡೆಸಲಿದ್ದಾರೆ. https://kannadanewsnow.com/kannada/school-bus-accident-in-davanagere-20-children-injure/ https://kannadanewsnow.com/kannada/indira-gandhi-national-open-university-recruitment-2021/ https://kannadanewsnow.com/kannada/continue-accident-in-bengalore/
ಹೈದರಾಬಾದ್ : ಮಹೆಬೂಬಾಬಾದ್ ಜಿಲ್ಲೆಯಲ್ಲಿ ಭಾನುವಾರ ತನ್ನ ಮೇಲೆ ಪೊಲೀಸ್ ಹಲ್ಲೆ ಮಾಡಿದ್ದಾರೆ ಎಂದು ತೆಲಂಗಾಣದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಆ ವ್ಯಕ್ತಿ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ವಾಗ್ವಾದದ ವಿಡಿಯೋ ಸಧ್ಯ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಶ್ರೀನಿವಾಸ್ ಮತ್ತು ಅವರ ಮಗಳು ತರಕಾರಿ ಖರೀದಿಸಲು ಹೋಗುತ್ತಿದ್ದಾಗ ಪೊಲೀಸ್ ಕಾನ್ಸ್ಟೆಬಲ್ ಹೆಲ್ಮೆಟ್ ಧರಿಸದ ಕಾರಣ ಅವರನ್ನ ತಡೆದಿದ್ದಾರೆ. ಆಗ ಸಬ್ಇನ್ಸ್ ಪೆಕ್ಟರ್ ಮುನೀರ್ಲುಲ್ಲಾ ಮಧ್ಯಪ್ರವೇಶಿಸಿ ಮಗಳ ಮುಂದೆಯೇ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದ್ರಿಂದ ಕೋಪಗೊಂಡ ಶ್ರೀನಿವಾಸ್ “ನಾನು ಹೆಲ್ಮೇಟ್ ಹಾಕಿಲ್ಲ. ತಪ್ಪು ಮಾಡಿದ್ದೇನೆ, ಒಪ್ಪಿಕೊಳ್ತೀನಿ. ಅದಕ್ಕಾಗಿ ನೀವು ನನಗೆ ಎಷ್ಟು ದಂಡ ಕಟ್ಟಬೇಕು ಹೇಳಿ. ನಾನು ಅದನ್ನ ಕೊಡ್ತೀನಿ. ಅದ್ಬಿಟ್ಟು, ನೀವು ನನ್ನ ಮಗಳ ಮುಂದೆಯೇ ನನ್ನನ್ನ ಹೊಡೆದಿದ್ದು ಯಾಕೆ? ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ಆಗ ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಆಗಮಿಸಿದ್ದಾರೆ ಎನ್ನಲಾಗ್ತಿದೆ. ವೈರಲ್ ವಿಡಿಯೋದಲ್ಲಿ, ಶ್ರೀನಿವಾಸ್ ಸಬ್ ಇನ್ಸ್ ಪೆಕ್ಟರ್ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಬಿಸಿ ಚರ್ಚೆಯಲ್ಲಿ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan Mantri Kisan Samman Nidhi Yojana)ಯ ಫಲಾನುಭವಿಗಳಿಗೆ ಸಂತಸದ ಸುದ್ದಿಯಿದೆ. 10ನೇ ಕಂತು ಪಡೆಯಲು, ಮೋದಿ ಸರ್ಕಾರವು ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು (PM Kisan Beneficiary List) ಬಿಡುಗಡೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಹಣವನ್ನ ಡಿಸೆಂಬರ್ 15 ಮತ್ತು 25ರ ನಡುವೆ ಯಾವಾಗ ಬೇಕಾದರೂ ರೈತರ ಖಾತೆಗೆ ವರ್ಗಾಯಿಸಬಹುದು. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನ ಮೋದಿ ಸರ್ಕಾರ ಮಾಡಿದೆ. ಹಾಗಾಗಿ ನೀವು ತಕ್ಷಣ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? ಅನ್ನೋದನ್ನ ಪರಿಶೀಲಿಸಿ. ಅಂದ್ಹಾಗೆ, ಸಣ್ಣ ಮತ್ತು ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಯಡಿ ರೈತರಿಗೆ ವರ್ಷದಲ್ಲಿ 3 ಕಂತುಗಳಲ್ಲಿ 6,000 ರೂ. ಪ್ರತಿ 4 ತಿಂಗಳಿಗೊಮ್ಮೆ ರೈತರು ತಮ್ಮ ಖಾತೆಯಲ್ಲಿ 2,000 ರೂ. ಪಡೆಯುತ್ತಾರೆ. ಈವರೆಗೆ ರೈತರ ಖಾತೆಗೆ 9 ಕಂತುಗಳಲ್ಲಿ…
ಭೋಪಾಲ್ : ಕೆಲವು ದಿನಗಳ ಹಿಂದೆ ಭೋಪಾಲ್ನಲ್ಲಿ, ಡ್ರೈನೇಜ್ ನೀರಿನಿಂದ ತರಕಾರಿಗಳನ್ನ ತೊಳೆಯುವ ವೀಡಿಯೊ ವೈರಲ್ ಆಗಿತ್ತು. ಈಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗ್ತಿದ್ದು, ಇದ್ರಲ್ಲಿ ಕೆಲವು ಯುವಕರು ಮಿನರಲ್ ವಾಟರ್ ಕ್ಯಾನ್ನಲ್ಲಿ ಡ್ರೈನ್ ವಾಟರ್ ತುಂಬುತ್ತಿರುವುದನ್ನ ಕಾಣಬೋದು. ಹೌದು, ಪೈಪ್ ಒಡೆದು ಹರಿಯುತ್ತಿರುವ ನೀರನ್ನ ಕ್ಯಾನ್ಗಳಲ್ಲಿ ತುಂಬಿಸುತ್ತಿರುವುದು ವೈರಲ್ ಆಗಿರುವ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಲ್ಲದೇ ಈ ನೀರು ತುಂಬಿದ ಕ್ಯಾನ್ಗಳನ್ನ ಆಟೋದಲ್ಲಿ ಲೋಡ್ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭೋಪಾಲ್ನಲ್ಲಿ ಮಿನರಲ್ ವಾಟರ್ ಹೆಸರಿನಲ್ಲಿ ಜನರಿಗೆ ಡ್ರೈನ್ ವಾಟರ್ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ವೈರಲ್ ವೀಡಿಯೊ ಕಾಣಿಸಿಕೊಂಡ ನಂತರ, ಆಡಳಿತವು ಸಹ ಕ್ರಮಕ್ಕೆ ಮುಂದಾಗಿದೆ. ನಂತರ ಐಪಿಸಿ ಸೆಕ್ಷನ್ 269ರ ಅಡಿಯಲ್ಲಿ ಅಪರಿಚಿತ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ವ್ಯಕ್ತಿಗಳನ್ನ ಗುರುತಿಸಿದ ನಂತ್ರ, ಬಂಧಿಸಬೋದು. ಸಂಭವಿಸಬಹುದು. ಭೋಪಾಲ್ನ ವಿವಿಧ ಸ್ಥಳಗಳಲ್ಲಿ ಅಂತಹ ಕ್ಯಾನ್ಗಳನ್ನ ತುಂಬುವ ಮೂಲಕ ಸ್ಥಾವರದಿಂದ ಖನಿಜಯುಕ್ತ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ್ದು, ಕಣ್ಮರೆಯಾಗುತ್ತಿರುವ ಸಂದೇಶ(disappearing messages)ಗಳ ವೈಶಿಷ್ಟ್ಯದ ಕಾರ್ಯಕ್ಷಮತೆಯನ್ನ ವಿಸ್ತರಿಸಿದೆ. ಎಲ್ಲಾ ಹೊಸ ಚಾಟ್(New Chat)ಗಳಿಗೆ ಡೀಫಾಲ್ಟ್(Default) ಆಗಿ ಕಣ್ಮರೆಯಾಗುವ ಸಂದೇಶಗಳನ್ನ(disappearing messages) ಆನ್ ಮಾಡುವ ಆಯ್ಕೆಯನ್ನ ಬಳಕೆದಾರರಿಗೆ ನೀಡಿದೆ. ಈ ಮೂಲಕ ನೀವು ಆಯ್ಕೆ ಮಾಡಿದ ಸಮಯದೊಳಗೆ ನಿಮ್ಮ ಮೆಸೇಜ್ ಕಣ್ಮರೆಯಾಗುತ್ತೆ. ಈ ಕುರಿತು ಹೇಳಿಕೆಯೊಂದನ್ನ ಬಿಡುಗಡೆ ಮಾಡಿರುವ ವಾಟ್ಸಾಪ್, “ಈ ಆಯ್ಕೆ ಸಕ್ರಿಯಗೊಳಿಸಿದಾಗ, ನೀವು ಅಥವಾ ಇನ್ನೊಬ್ಬ ವ್ಯಕ್ತಿಯು ಪ್ರಾರಂಭಿಸುವ ಎಲ್ಲಾ ಹೊಸ ಚಾಟ್ʼಗಳು ನಿಮ್ಮ ಆಯ್ಕೆಯ ಅವಧಿಯಲ್ಲಿ ಕಣ್ಮರೆಯಾಗುತ್ತವೆ. ಇದು ಗ್ರೂಪ್ ಮೆಸೇಜ್ಗಳಿಗೂ ಅನ್ವಯಿಸುತ್ತೆ” ಎಂದಿದೆ. ಇನ್ನು ಈ ಹೊಸ ವೈಶಿಷ್ಟ್ಯವು ಐಚ್ಛಿಕವಾಗಿದ್ದು, ನಿಮ್ಮ ಅಸ್ತಿತ್ವದಲ್ಲಿರುವ ಯಾವುದೇ ಚಾಟ್ʼಗಳನ್ನ ಬದಲಾಯಿಸುವುದಿಲ್ಲ ಅಥವಾ ಅಳಿಸುವುದಿಲ್ಲ ಎಂದು ಕಂಪನಿ ಹೇಳಿದೆ. ಅಂದ್ಹಾಗೆ, ವಾಟ್ಸಪ್ ಕಳೆದ ವರ್ಷ ಕಣ್ಮರೆಯಾಗುತ್ತಿರುವ ಸಂದೇಶಗಳನ್ನ ಪರಿಚಯಿಸಿತು. ಇತ್ತೀಚೆಗೆ ಫೋಟೋಗಳು ಮತ್ತು ವೀಡಿಯೊಗಳನ್ನ ಒಮ್ಮೆ ಮಾತ್ರ ವಿಕ್ಷಣೆ ಅಂದ್ರೆ ಮೆಸೇಜ್ ನೋಡಿದ ತಕ್ಷಣ ಕಣ್ಮರೆಯಾಗುವ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗ. ಮೂತ್ರಪಿಂಡಗಳು ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನ ನಿರ್ವಹಿಸುತ್ತವೆ. ಮೂತ್ರಪಿಂಡಗಳು ಮೂತ್ರದಲ್ಲಿ ಕೆಟ್ಟ ವಸ್ತುಗಳನ್ನ ಹೊರಹಾಕುತ್ತವೆ. ಇವು ಆರೋಗ್ಯವಾಗಿರಲು ನಿಮಗೆ ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನೀರು ಬೇಕು. ನಿಮಗೆ ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದು ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಜನರು ಕಿಡ್ನಿ ಸೋಂಕು, ಕಿಡ್ನಿ ಕ್ಯಾನ್ಸರ್, ಕಿಡ್ನಿ ವೈಫಲ್ಯದ ಜೊತೆಗೆ ಕಿಡ್ನಿ ಸ್ಟೋನ್ಗಳಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದರೆ, ಸೋಡಿಯಂ ಮತ್ತು ಇತರ ಖನಿಜಗಳು ಒಟ್ಟಿಗೆ ಸೇರುತ್ತವೆ. ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಸದ್ಯ ಕಿಡ್ನಿ ಸ್ಟೋನ್ ಸಮಸ್ಯೆ ವೇಗವಾಗಿ ಹರಡುತ್ತಿರುವಂತೆ ಕಾಣುತ್ತಿದೆ. ಆದಾಗ್ಯೂ, ಕೆಲವೊಮ್ಮೆ ಮೂತ್ರಪಿಂಡದಲ್ಲಿ ಕಲ್ಲುಗಳು ತುಂಬಾ ಚಿಕ್ಕದಾಗಿರುತ್ತವೆ. ಅವುಗಳನ್ನ ಬೇಗ ಗುರುತಿಸಲು ಸಾಧ್ಯವಾಗದೇ ಇರಬಹುದು. ಇನ್ನು ಮೂತ್ರಪಿಂಡದ ನೋವು ತುಂಬಾ ಅಸಹನೀಯ ಎಂದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಮೂತ್ರಪಿಂಡ ಕಾಯಿಲೆಗೆ ಸಂಬಂಧಿಸಿದ ಕೆಲವು ಲಕ್ಷಣಗಳು…
ಕೆಎನ್ಎನ್ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಸಿಹಿ ಆಹಾರವನ್ನ ತಿನ್ನಲು ಇಷ್ಟಪಡ್ತಾರೆ. ಸಿಹಿತಿಂಡಿಗಳಲ್ಲಿಯೂ ಬಹುತೇಕರಿಗೆ ಜಿಲೇಬಿ ಅಂದ್ರೆ ಪಂಚಪ್ರಾಣ, ಯಾಕಂದ್ರೆ, ಅಷ್ಟೊಂದು ರುಚಿಕರವಾಗಿರುತ್ತೆ ಈ ಸಿಹಿ ತಿಂಡಿ. ಜಿಲೇಬಿ, ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಲಭ್ಯವಿದೆ. ಜಿಲೇಬಿಯನ್ನು ಎಲ್ಲಾ ರೀತಿಯ ಹಿಟ್ಟು, ಜೋಳದ ಹಿಟ್ಟು, ತುಪ್ಪ, ಸಕ್ಕರೆ, ಅಡಿಗೆ ಸೋಡಾ, ಮೊಸರು, ಕೇಸರಿ ಮತ್ತು ಹೆಚ್ಚಿನವುಗಳಿಂದ ತಯಾರಿಸಲಾಗುತ್ತದೆ. ಅನೇಕ ಹಬ್ಬ, ಜಾತ್ರೆಗಳಲ್ಲಿ ಜಿಲೇಬಿ ವಿಶೇಷ ಸ್ಥಾನ ಪಡೆದಿದೆ. ಈ ಅದ್ಭುತ ಸಿಹಿ ತಿಂಡಿ ಬಹಳ ವರ್ಷಗಳ ಹಿಂದೆಯೇ ನಮ್ಮ ದೇಶಕ್ಕೆ ಬಂದಿತು. ಇನ್ನೂ ಇದನ್ನ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಜಿಲೇಬಿ ತಯಾರಿಸ್ತಾರೆ. ಚಳಿಗಾಲ ಬಂತೆಂದ್ರೆ, ಜನ ಹಾಲಿನ ಜಿಲೇಬಿ ತಿಂತಾರೆ. ದೇಶದ ಅನೇಕ ಭಾಗಗಳಲ್ಲಿ ಜನರು ಜಿಲೇಬಿಗಳೊಂದಿಗೆ ಬಿಸಿ ಕೆನೆ ಹಾಲನ್ನು ತಿನ್ನಲು ಬಯಸುತ್ತಾರೆ. ಆದ್ರೆ, ಹಾಲಿನೊಂದಿಗೆ ಜಿಲೇಬಿ ತಿನ್ನುವುದ್ರಿಂದ ರುಚಿ ಹೆಚ್ಚುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನ ಲಭಿಸುತ್ವೆ. ಹಾಗಾದ್ರೆ, ಹಾಲಿನಲ್ಲಿ ಜಿಲೇಬಿಯದ್ದಿ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಆರು ತಿಂಗಳಲ್ಲಿ ಎರಡು ಕೋಟಿ ಭಾರತೀಯರು ತಮ್ಮ ವಾಟ್ಸಾಪ್ ಖಾತೆಯನ್ನು ಕಳೆದುಕೊಂಡಿದ್ದಾರೆ. ಅಂದ್ರೆ ಅವ್ರು ತಮ್ಮ ಖಾತೆ ಬಳಸದಂತೆ ವಾಟ್ಸಾಪ್ ನಿರ್ಬಂಧಿಸಿದೆ. ಅಕ್ಟೋಬರ್ ತಿಂಗಳಲ್ಲಿ 20 ಲಕ್ಷದ 69 ಸಾವಿರ ಖಾತೆಗಳನ್ನ ಬ್ಯಾನ್ ಮಾಡಲಾಗಿದೆ. ಇನ್ನು ಈ ಆ್ಯಪ್ ಸೆಪ್ಟೆಂಬರ್ನಲ್ಲಿ ಸುಮಾರು 30 ಲಕ್ಷ ಖಾತೆಗಳನ್ನ ಅಳಿಸಿದೆ. ತಿಂಗಳಿಗೆ 20, 30 ಲಕ್ಷಕ್ಕೆ ಕಡಿಮೆ ಇಲ್ಲದ ಖಾತೆಗಳನ್ನ ಬ್ಯಾನ್ ಮಾಡುತ್ತಿದೆ. ಇದುವರೆಕಗೂ ಈ ಸಂಖ್ಯೆ ಎರಡು ಕೋಟಿ ದಾಟಿದೆ. ವಾಟ್ಸಾಪ್ ಏಕೆ ಹೀಗೆ ಮಾಡುತ್ತಿದೆ..? ಆಕ್ಷೇಪಾರ್ಹ ನಡುವಳಿಕೆ ಹೆಸರಿನಲ್ಲಿ ವಾಟ್ಸಾಪ್ ಮಾಲೀಕತ್ವದ ಮೆಟಾ ಕಂಪನಿಯು ಬಂದ ದೂರುಗಳ ಆಧಾರದ ಮೇಲೆ ಖಾತೆಗಳನ್ನ ಪರಿಶೀಲಿಸಿ ಬ್ಯಾನ್ ಮಾಡಿದೆ ಎಂದು ಹೇಳುತ್ತದೆ. ಇವುಗಳ ಮೂಲಕ ಯಾವುದೇ ಮಾಹಿತಿ ಹರಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಬಹಿರಂಗಪಡಿಸಿದೆ. ಒಂದು ಖಾತೆಗೆ 500 ದೂರುಗಳು ಬಂದರೆ ಆ ಖಾತೆಯನ್ನು ಕೊನೆಗೊಳಿಸಲಾಗುವುದು ಎಂದು WhatsApp ಹೇಳುತ್ತದೆ. ಭಾರತದಲ್ಲಿ ಐಟಿ ನಿಯಮಗಳು 2021 ಜಾರಿಗೆ ಬರುವುದರೊಂದಿಗೆ, ಇಲ್ಲಿ ಹೆಚ್ಚು…
ನವದೆಹಲಿ : ಉದ್ಯೋಗ ನಿರೀಕ್ಷಿತರಿಗೆ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡಲು ಸುವರ್ಣಾವಕಾಶವಿದೆ. ವಾಸ್ತವವಾಗಿ, ರಕ್ಷಣಾ ಸಚಿವಾಲಯವಾದ ಡಿಫೆನ್ಸ್ ಎಸ್ಟೇಟ್ಸ್ ಆರ್ಗನೈಸೇಷನ್ ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್, ಸಬ್ ಡಿವಿಜನಲ್ ಆಫೀಸರ್ ಗ್ರೇಡ್-2 ಮತ್ತು ಹಿಂದಿ ಟೈಪಿಸ್ಟ್ 97 ಹುದ್ದೆಗಳನ್ನ ನೇಮಕ ಮಾಡಿದೆ. ಅದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಪೋಸ್ಟ್ʼಗಳಿಗೆ ಅರ್ಜಿಗಳನ್ನು ಆಫ್ ಲೈನ್ ಮೋಡ್ʼನಲ್ಲಿ ಪೋಸ್ಟ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 15, 2022 ಸಂಜೆ 5 ಗಂಟೆ ಆಗಿದೆ. ಖಾಲಿ ಇರುವ ಒಟ್ಟು 97 ಹುದ್ದೆಗಳಲ್ಲಿ ಅತಿ ಹೆಚ್ಚು 89 ಹುದ್ದೆಗಳು ಉಪ ವಿಭಾಗಾಧಿಕಾರಿ ಗ್ರೇಡ್-2 ಆಗಿವೆ. ಕಿರಿಯ ಹಿಂದಿ ಅನುವಾದಕ 7 ಹುದ್ದೆಗಳಿವೆ. ಹಿಂದಿ ಟೈಪಿಸ್ಟ್ ಕೇವಲ 1 ಹುದ್ದೆಯಿದೆ. ಇನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಅಗತ್ಯ ಶೈಕ್ಷಣಿಕ ಅರ್ಹತೆಗಳು ಮತ್ತು ಅನುಭವ..! * ಉಪ ವಿಭಾಗಾಧಿಕಾರಿ ಗ್ರೇಡ್- 2 – 10ನೇ ತರಗತಿ…