ಕೆಎನ್ಎನ್ಡಿಜಿಟಲ್ ಡೆಸ್ಕ್ : ವ್ಯಕ್ತಿಯೊಬ್ಬ ಝೋಮಾಟೋ ಮೂಲಕ ಗ್ರೇಟರ್ ನೋಯ್ಡಾ ವೆಸ್ಟ್(Greater Noida West)ನ ರೆಸ್ಟೋರೆಂಟ್(Restaurant)ವೊಂದರಿಂದ ಆರ್ಡರ್ ಮಾಡಿದ ಆಹಾರದಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊ ವೈರಲ್ ಆಗುತ್ತಿದ್ದು, ಈ ಬಗ್ಗೆ ಸಂತ್ರಸ್ತ ಗ್ರಾಹಕ ಟ್ವಿಟರ್ ಮೂಲಕ ಕಂಪನಿಗೆ ದೂರು ನೀಡಿದ್ದಾರೆ. ಕೋಸ್ತಾವ ಕುಮಾರ್ ಸಿನ್ಹಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ʼನಿಂದ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್ʼನಿಂದ ಬಂದ ಆಹಾರದಿಂದ ಹಲ್ಲಿ ಪತ್ತೆಯಾಗಿದೆ ಎಂದು ಆರೋಪಿದ್ದಾರೆ. ಇನ್ನು ಗ್ರೆನೊ ವೆಸ್ಟ್ʼನ ರೆಸ್ಟೋರೆಂಟ್ʼನಿಂದ ಆಹಾರವನ್ನ ಆರ್ಡರ್ ಮಾಡಲಾಗಿದೆ ಎಂದು ವೀಡಿಯೋ ಹೇಳಿದೆ. ಕೌಸ್ತವ್ ಕುಮಾರ್ ಸಿನ್ಹಾ, “ತಿನ್ನುವ ಆಹಾರದಲ್ಲಿ ಸತ್ತ ಹಲ್ಲಿಯನ್ನ ನೋಡಿ ಆಘಾತವಾಗಿದೆ. ಕೋವಿಡ್ನ ಮಧ್ಯೆ ಇದೆಲ್ಲ ಉದ್ದೇಶಪೂರ್ವಕವಾಗಿ ನಡೆಯುತ್ತಿದೆಯೇ ಎಂದನಿಸುತ್ತಿದ್ದು, ಇದೊಂದು ತುಂಬಾ ಕೆಟ್ಟ ಅನುಭವ” ಎಂದು ಬರೆದು ವಿಡಿಯೋ ಶೇರ್ ಮಾಡಿದ್ದಾರೆ. ಇನ್ನು ಈ ಟ್ವೀಟ್ʼಗೆ ಕಂಪನಿ ಪ್ರತಿಕ್ರಿಯಿಸಿದ್ದು, “ಪಂಜಾಬಿ ರಸೋಯ್ ಹೆಸರಿನ ರೆಸ್ಟೋರೆಂಟ್ʼನಿಂದ ಆಹಾರ ಆರ್ಡರ್ ಮಾಡಿರುವುದಾಗಿ ಗ್ರಾಹಕರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು…
Author: Kannada News
ನವದೆಹಲಿ: ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ (1993 Mumbai Serial Blast)ದ ಆರೋಪಿ ಸಲೀಂ ಘಾಜಿ (Salim Ghazi) ಶನಿವಾರ ಕರಾಚಿಯಲ್ಲಿ (Karachi) ಮೃತಪಟ್ಟಿದ್ದಾನೆ. ಮುಂಬೈ ಪೊಲೀಸ್ (Mumbai Police) ಮೂಲಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ ಐ ಹೇಳಿದೆ. ಸಲೀಂ ಘಾಜಿ, ದಾವೂದ್ ಇಬ್ರಾಹಿಂ (Dawood Ibrahim) ಗುಂಪಿನ ಸದಸ್ಯ ಡಾನ್ ಛೋಟಾ ಶಕೀಲ್ (Chota Shakeel)ಗೆ ನಿಕಟವಾಗಿದ್ದ ಈತ, ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಸಲೀಂ ಘಾಜಿ ಮುಂಬೈ ಸ್ಫೋಟದಲ್ಲಿ (Mumbai blasts) ಪ್ರಮುಖ ಆರೋಪಿಯಾಗಿದ್ದರೂ ಸ್ಫೋಟದ ನಂತ್ರ ದಾವೂದ್ ಇಬ್ರಾಹಿಂ ಮತ್ತು ಇತರ ಸಹಚರರೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸಲೀಂ ಘಾಜಿ ನಿರಂತರವಾಗಿ ತನ್ನ ಸ್ಥಳವನ್ನ ಬದಲಾಯಿಸಿದ್ದ. ಅನೇಕ ವರ್ಷಗಳ ಕಾಲ ದುಬೈನಲ್ಲಿ ವಾಸವಿದ್ದು, ನಂತ್ರ ಪಾಕಿಸ್ತಾನದಲ್ಲಿ ಛೋಟಾ ಶಕೀಲ್ ಜೊತೆ ಅಕ್ರಮ ವ್ಯಾಪಾರದಲ್ಲಿ ಸಕ್ರಿಯವಾಗಿದ್ದ. ಮೂಲಗಳ ಪ್ರಕಾರ, ಆತ ಕಳೆದ ಹಲವು ದಿನಗಳಿಂದ ರಕ್ತದೊತ್ತಡ ಮತ್ತು ಇತರ ಅನೇಕ ರೋಗಗಳಿಂದ…
ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2022-23ನೇ ಹಣಕಾಸು ವರ್ಷದ (FY23) ಬಜೆಟ್ʼನ್ನ ಫೆಬ್ರವರಿ 1, 2022ರಂದು ಮಂಡಿಸಲಿದ್ದಾರೆ. ಅದೇ ಸಮಯದಲ್ಲಿ, ಈ ಬಾರಿಯೂ, ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ʼನ ಭಾಗವಾಗಲಿದೆ. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ, ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 92 ವರ್ಷಗಳ ಹಳೆಯ ಪದ್ಧತಿಯನ್ನ ರದ್ದುಗೊಳಿಸಿದ್ದರು ಮತ್ತು 2017ರಿಂದ ಸಾಮಾನ್ಯ ಬಜೆಟ್ʼನಲ್ಲಿ ರೈಲ್ವೆ ಬಜೆಟ್ ಘೋಷಿಸಲು ಪ್ರಾರಂಭಿಸಿದ್ದರು. ಈ ಹಿಂದೆ, ರೈಲ್ವೆ ಸಚಿವರು ಸಾಮಾನ್ಯ ಬಜೆಟ್ʼಗೆ ಒಂದು ದಿನ ಮೊದಲು ಸಂಸತ್ತಿನಲ್ಲಿ ರೈಲ್ವೆ ಬಜೆಟ್ ಮಂಡಿಸುತ್ತಿದ್ದರು. ನೀತಿ ಆಯೋಗ ಸಲಹೆ ನೀಡಿತು..! ದಶಕಗಳಷ್ಟು ಹಳೆಯದಾದ ಈ ಪ್ರವೃತ್ತಿಯನ್ನ ಕೊನೆಗೊಳಿಸುವಂತೆ ನೀತಿ ಆಯೋಗವು ಸರ್ಕಾರಕ್ಕೆ ಸಲಹೆ ನೀಡಿತ್ತು. ವಿವಿಧ ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆ ಮತ್ತು ಚಿಂತನ ಮಂಥನದ ನಂತರ, ಸರ್ಕಾರವು ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ʼನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿತು. ಈ ಆಲೋಚನೆ ಪ್ರಾಯೋಗಿಕವಾಗಿತ್ತು. ಯಾಕಂದ್ರೆ, ರೈಲ್ವೆ ಬಜೆಟ್ʼನ ಪಾಲು…
ಗುರ್ಗಾಂವ್: ಹರಿಯಾಣದ ಗಡಿ ಭದ್ರತಾ ಪಡೆಯ ಅಧಿಕಾರಿಯಿಂದ ₹14 ಕೋಟಿ ನಗದು, ಒಂದು ಕೋಟಿ ಮೌಲ್ಯದ ಆಭರಣಗಳು ಮತ್ತು ಬಿಎಂಡಬ್ಲ್ಯೂ, ಜೀಪ್ ಮತ್ತು ಮರ್ಸಿಡಿಸ್ ಸೇರಿದಂತೆ ಏಳು ಐಷಾರಾಮಿ ಕಾರುಗಳನ್ನ ವಶಪಡಿಸಿಕೊಳ್ಳಲಾಗಿದೆ. ಗುರ್ ಗಾಂವ್ ಜಿಲ್ಲೆಯ ಮನೇಸರ್ʼನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆಯ ಪ್ರಧಾನ ಕಚೇರಿಯಲ್ಲಿ (NSG) ನೇಮಕಗೊಂಡಿದ್ದ ಬಿಎಸ್ಎಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ ಯಾದವ್ ಅವ್ರು ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಂತೆ ನಟಿಸಿ ಜನರಿಂದ ₹125 ಕೋಟಿ ಹೆಚ್ಚು ವಂಚಿಸಿದ್ದ ಅನ್ನೋ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರ್ಗಾಂವ್ ಪೊಲೀಸರು ಅಧಿಕಾರಿಯ ಪತ್ನಿ ಮಮ್ತಾ ಯಾದವ್, ಸಹೋದರಿ ರಿತು ಮತ್ತು ಸಹಚರನನ್ನ ಬಂಧಿಸಿದ್ದಾರೆ. ಐಪಿಎಸ್ ಅಧಿಕಾರಿಯಂತೆ ನಟಿಸಿದ ಯಾದವ್, ಎನ್ಎಸ್ಜಿ ಕ್ಯಾಂಪಸ್ʼನಲ್ಲಿ ನಿರ್ಮಾಣ ಗುತ್ತಿಗೆ ಪಡೆಯುವ ನೆಪವೊಡ್ಡಿ ಜನರಿಂದ ಕೋಟ್ಯಂತರ ರೂ. ಪಡೆದಿದ್ದಾರೆ. “ವಂಚನೆಯ ಎಲ್ಲಾ ಹಣವನ್ನ ಎನ್ ಎಸ್ ಜಿ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾಯಿಸಲಾಗಿದೆ. ಆಕ್ಸಿಸ್ ಬ್ಯಾಂಕ್ʼನಲ್ಲಿ ಮ್ಯಾನೇಜರ್ ಆಗಿರುವ ಅವರ ಸಹೋದರಿ ರಿತು ಯಾದವ್…
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 17ರಂದು ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಕಾರ್ಯಸೂಚಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾತ್ರಿ 8:30ಕ್ಕೆ ‘ವಿಶ್ವದ ಸ್ಥಿತಿ’ ವಿಶೇಷ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಈ ವರ್ಚುವಲ್ ಈವೆಂಟ್ 2022ರ ಜನವರಿ 17 ರಿಂದ 21 ರವರೆಗೆ ನಡೆಯಲಿದ್ದು, ಇದನ್ನು ಜಪಾನ್ ಪ್ರಧಾನಿ ಕಿಶಿಡಾ ಫುಮಿಯೊ ಸೇರಿದಂತೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಉದ್ದೇಶಿಸಿ ಮಾತನಾಡಲಿದ್ದಾರೆ. ಉರ್ಸುವಾ ವಾನ್ ಡೆರ್ ಲೆಯೆನ್, ಯುರೋಪಿಯನ್ ಆಯೋಗದ ಅಧ್ಯಕ್ಷ ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾದ ಪ್ರಧಾನಿ, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಇದ್ರಲ್ಲಿ ಇರಲಿದ್ದಾರೆ. ಈ ಕಾರ್ಯಕ್ರಮವು ಉದ್ಯಮದ ನಾಯಕರು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ. ಅವರು ಇಂದು ಜಗತ್ತು ಎದುರಿಸುತ್ತಿರುವ ನಿರ್ಣಾಯಕ ಸವಾಲುಗಳ ಬಗ್ಗೆ ಚರ್ಚಿಸಲಿದ್ದಾರೆ ಮತ್ತು ಅವುಗಳನ್ನ ಹೇಗೆ ಪರಿಹರಿಸಬೇಕೆಂದು ಚರ್ಚಿಸುತ್ತಾರೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ. https://twitter.com/ANI/status/1482715416963477504?s=20 https://kannadanewsnow.com/kannada/punajb-cm-chenni-letter-to-election-commisiion/ https://kannadanewsnow.com/kannada/obc-scholarship-knn-desk/ https://kannadanewsnow.com/kannada/india-open-badminton-lakshya-sen-wins-mens-singles-title-after-defeating-defending-world-champion-loh-keen-you/
ನವದೆಹಲಿ : ಸ್ಟಾರ್ ಇಂಡಿಯನ್ ಶಟ್ಲರ್ ಲಕ್ಷ್ಯ ಸೇನ್ ಅವರು ಹಾಲಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೀನ್ ಯೂ ಅವರನ್ನು 24-22, 21-17ರಿಂದ ಸೋಲಿಸಿ ಇಂಡಿಯಾ ಓಪನ್ʼನ ಪುರುಷರ ಸಿಂಗಲ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರು. ಸೇನ್ ವಿಶ್ವ ಚಾಂಪಿಯನ್ ಶಿಪ್ ಸೆಮಿ ಫೈನಲ್ʼಗೆ ಬಂದ ಒಂದು ತಿಂಗಳ ನಂತರ ಐತಿಹಾಸಿಕ ಪ್ರಶಸ್ತಿ ಗೆಲುವು ದಕ್ಕಿದೆ. ಅಂದ್ಹಾಗೆ, ದಿನದ ಆರಂಭದಲ್ಲಿ, ಮೂರು ಬಾರಿ ವಿಶ್ವ ಚಾಂಪಿಯನ್ʼಗಳಾದ ಮೊಹಮ್ಮದ್ ಅಹ್ಸಾನ್ ಮತ್ತು ಇಂಡೋನೇಷ್ಯಾದ ಹೆಂಡ್ರಾ ಸೆಟಿಯಾವನ್ ವಿರುದ್ಧ ನೇರ ಆಟದ ಗೆಲುವು ದಾಖಲಿಸಿದ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಭಾರತ ಓಪನ್ʼನ ಡಬಲ್ಸ್ ಪ್ರಶಸ್ತಿಯನ್ನ ಗೆದ್ದ ಭಾರತದ ಮೊದಲ ಪುರುಷರ ತಂಡ ಎಂಬ ಹೆಗ್ಗಳಿಕೆಗೆ ಪಡೆದರು. https://kannadanewsnow.com/kannada/bigg-breaking-news-corona-big-blast-in-the-state-21071-in-bengaluru-34047-new-cases-detected-in-the-state-13-killed-in-virus/ https://kannadanewsnow.com/kannada/obc-scholarship-knn-desk/ https://kannadanewsnow.com/kannada/punajb-cm-chenni-letter-to-election-commisiion/
ಮಹಾರಾಷ್ಟ್ರ : ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ(International passengers) ಗುಡ್ ನ್ಯೂಸ್ ಸಿಕ್ಕಿದ್ದು, ಹಲವು ನಿರ್ಬಂಧದಲ್ಲಿ ಸಡಿಲಿಕೆ(Relaxation) ನೀಡಲಾಗಿದೆ. ಹೌದು, ಮುಂಬೈ ಸೇರಿದಂತೆ ದುಬೈ, ಯುಎಇಯಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಈಗ ಕಡ್ಡಾಯವಾಗಿ 7 ದಿನಗಳ ಹೋಮ್ ಕ್ವಾರಂಟೈನ್(home quarantine), ಆರ್ ಟಿ-ಪಿಸಿಆರ್(RT-PCR)ನಿಂದ ವಿನಾಯಿತಿ(Exception) ನೀಡಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಎಂಸಿ, “ದುಬೈ ಸೇರಿದಂತೆ ಯುಎಇಯಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಈಗ ಕಡ್ಡಾಯವಾಗಿ 7 ದಿನಗಳ ಹೋಮ್ ಕ್ವಾರಂಟೈನ್, ಆರ್ ಟಿ-ಪಿಸಿಆರ್ ನಿಂದ ವಿನಾಯಿತಿ ನೀಡಲಾಗಿದೆ” ಎಂದಿದೆ. https://kannadanewsnow.com/kannada/secret-lucky-a-wood-cutter-who-became-a-millionaire-overnight/ https://kannadanewsnow.com/kannada/today-34047-corona-virus-case-in-karnataka/ https://kannadanewsnow.com/kannada/bigg-breaking-news-corona-big-blast-in-the-state-21071-in-bengaluru-34047-new-cases-detected-in-the-state-13-killed-in-virus/
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ( Coronavirus ) ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 34,047 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 1,40,452 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 21,071 ಸೇರಿದಂತೆ ರಾಜ್ಯಾದ್ಯಾಂತ 34,047 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಮೂಕಲ ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982 ಮುಟ್ಟಿದೆ. ರಾಜ್ಯದಲ್ಲಿ 34,047 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 19.29%ಕ್ಕೆ ಏರಿಕೆಯಾಗಿದೆ. ಕೋವಿಡ್ʼನಿಂದಾಗಿ ರಾಜ್ಯದಲ್ಲಿ 13 ಮಂದಿ ಬಲಿಯಾಗಿದ್ದು, ಬೆಂಗಳೂರಿನಲ್ಲಿ 5 ಜನ ಸಾವನ್ನಪ್ಪಿದ್ದಾರೆ. https://kannadanewsnow.com/kannada/secret-lucky-a-wood-cutter-who-became-a-millionaire-overnight/ https://kannadanewsnow.com/kannada/breaking-news-corona-blast-in-the-state-meeting-likely-to-be-held-tomorrow-under-cm-bommai/ https://kannadanewsnow.com/kannada/today-34047-corona-virus-case-in-karnataka/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಿಹಾರದ ಕಿಶನ್ಗಂಜ್(Kishanganj in Bihar)ನಲ್ಲಿ ಕಟ್ಟಿಗೆ ಕಡಿಯುತ್ತಿದ್ದ ಬಡ ಕೂಲಿ ಕಾರ್ಮಿಕ(Wage worker) ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಈ ಬಗ್ಗೆ ಗ್ರಾಮದಲ್ಲಿ ನಾನಾ ರೀತಿಯ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು, ಆ ಕೂಲಿ ಕಾರ್ಮಿಕನ ಮಗ ಉಬೇಲುದಾಳ್ 15 ದಿನಗಳ ಹಿಂದೆ ಎಲ್ಲಿಂದಲೋ ರಹಸ್ಯವಾಗಿ ಹಣ ಪಡೆದಿದ್ದು, ಇದರಿಂದ ಆತ ಶ್ರೀಮಂತನಾಗಿದ್ದಾನೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನು ಹಲವರು ಆತ ಲಾಟರಿ ಟಿಕೆಟ್ ಖರೀದಿಸಿದ್ದು, ಅದರಲ್ಲಿ 1 ಕೋಟಿ ರೂ ತಗುಲಿದೆ ಎನ್ನುತ್ತಿದ್ದಾರೆ. ಇನ್ನು ಈ ವಿಷಯ ಎಸ್ಡಿಎಂಗೆ ತಲುಪಿದ್ದು, ಅವ್ರದನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ..! ಈ ಪ್ರಕರಣವು ಕಿಶನ್ಗಂಜ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ತೆಯುಸಾ ಪಂಚಾಯತ್ನಲ್ಲಿ ನಡೆದಿದೆ. ಇನ್ನು ಈ ಕೂಲಿ ಕಾರ್ಮಿಕರ ಒಂದೇ ಒಂದು ರಾತ್ರಿ ಕಳೆಯುವುದ್ರಲ್ಲಿ ಕೋಟ್ಯಾಧಿಪತಿಯಾದ ವಿಷ್ಯ ವೇಗವಾಗಿ ಹರಡುತ್ತಿದ್ದು, ವಿವಿಧ ವದಂತಿಗಳು ಹುಟ್ಟಿಕೊಂಡಿವೆ. ಇದ್ರಿಂದ ಭಯಗೊಂಡ ತಂದೆ ಮಗ ರಾತ್ರೋ ರಾತ್ರಿ ಊರಿಂದ ಕಾಲ್ಕಿತ್ತಿದ್ದು, ಇಬ್ಬರೂ…
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು(Corona virus) ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraja Bommai) ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಎಂ ಬೊಮ್ಮಾಯಿ ನಾಳೆ ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಎನ್ನಲಾಗ್ತಿದ್ದು, ಈ ಸಭೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್ ಹಾಗೂ ಆರ್. ಅಶೋಕ್, ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅಂದ್ಹಾಗೆ, ರಾಜ್ಯದಲ್ಲಿ ಸಧ್ಯ ವಿಧಿಸಿರುವ ಕಠಿಣ ರೂಲ್ಸ್ ಜನವರಿ 19ಕ್ಕೆ ಅಂತ್ಯವಾಗಲಿದ್ದು, ಈ ಕಠಿಣ ರೂಲ್ಸ್ ಮುಂದುವರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಇನ್ನು ಫೆಬ್ರವರಿಯಲ್ಲಿ ಏನು ಮಾಡಬೇಕೆಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತೆ ಎನ್ನಲಾಗ್ತಿದೆ. https://kannadanewsnow.com/kannada/big-shock-for-public-nandini-milk-price-increases-by-%e2%82%b93-per-litre/ https://kannadanewsnow.com/kannada/india-open-badminton-indias-satvik-sairaj-chirag-shetty-win-mens-doubles-title-after-beating-world-champions/ https://kannadanewsnow.com/kannada/novak-djokovic-deported-world-champion-who-flew-from-australia-to-dubai/