ನವದೆಹಲಿ : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಮಧುಲಿಕಾ ರಾವತ್ ಅವ್ರ ಅಂತ್ಯಕ್ರಿಯೆಯನ್ನ ಸಕಲ ಸೇನಾ ಗೌರವದ ಮೂಲಕ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಬ್ರಾರ್ ಸ್ಕ್ವೇರ್ನಲ್ಲಿ ನೆರವೇರಿಸಲಾಯ್ತು. ರಾವತ್ ಅಂತ್ಯಕ್ರಿಯೆ ವೇಳೆ 800 ಸೇನಾಧಿಕಾರಿಗಳು ಭಾಗಿಯಾಗಿದ್ದು, 17 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದ್ರು. ಮೂರು ಸೇನಾ ಪಡೆಗಳ ಸದಸ್ಯರಿಂದ ವಾದ್ಯವೃಂದ ಮೊಳಗಿಸಲಾಯ್ತು. ಇನ್ನು ರಾವತ್ ಅವ್ರಿಗೆ ಕೊನೆಯದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭೂಸೇನೆ, ವಾಯುಪಡೆ, ನೌಕಪಡೆ ಅಧಿಕಾರಿಗಳು, ಅಂತಿಮವಾಗಿ ಕುಟುಂಬಸ್ಥರಿಂದ ರಾವತ್ ದಂಪತಿಗೆ ನಮನ ಸಲ್ಲಿಸಿದ್ರು. ರಾವತ್ ಅವ್ರ ಇಬ್ಬರು ಪುತ್ರಿಯರಾದ ಕೃತಿಕಾ, ತಾರಿಣಿಯಿಂದ ಅಂತಿಮ ವಿಧಿವಿಧಾನ ನೇರವೇರಿಸಿದ್ರು. ಅಂತ್ಯಸಂಸ್ಕಾರ ವಿಧಿವಿಧಾನ ಮುಕ್ತಾಯದ ನಂತ್ರ ರಾವತ್ ಪುತ್ರಿಯರಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸಲಾಯ್ತು. ಇನ್ನು ಸಕಲ ಸೇನಾ ಗೌರವಗಳ ಮೂಲಕ ದೇಶದ ಮೊಟ್ಟ ಮೊದಲ ರಕ್ಷಣಾಪಡೆ ಮುಖ್ಯಸ್ಥನಿಗೆ ಅಂತಿಮ ವಿದಾಯ ಹೇಳಲಾಯ್ತು. https://kannadanewsnow.com/kannada/fake-pakira-theft-in-kapu-udupi-news/ https://kannadanewsnow.com/kannada/biggnews-more-than-5-of-coronary-infection-found-in-borough-districts/ https://kannadanewsnow.com/kannada/am-not-says-becoming-cm-say-murugesh-nirani/
Author: Kannada News
ನವದೆಹಲಿ : ಎಲ್ಪಿಜಿ ಸಿಲಿಂಡರ್ʼಗಳಿಗೆ (LPG gas cylinder) ಸರ್ಕಾರ ಮತ್ತೊಮ್ಮೆ ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ಹಣವನ್ನ ಗ್ರಾಹಕರ ಖಾತೆಗೆ ವರ್ಗಾಯಿಸಲಾಗಿದೆ. ವರದಿಗಳ ಪ್ರಕಾರ, ಎಲ್ ಪಿಜಿ ಅನಿಲ ಗ್ರಾಹಕರಿಗೆ (LPG customers) ಈಗ ಪ್ರತಿ ಸಿಲಿಂಡರ್ʼಗೆ 79.26 ರಿಂದ 237.78 ರೂ.ಗಳವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಹಾಗಾಗಿನೇ ನಿಮ್ಮ ಖಾತೆಗೂ ಸಬ್ಸಿಡಿ ಹಣ ಬಂದಿದೆಯೇ ಎಂದು ನೋಡಲು ನಿಮ್ಮ ಬ್ಯಾಂಕ್ ಖಾತೆಯನ್ನ ಪರಿಶೀಲಿಸಿ. ಸಬ್ಸಿಡಿಗಳಲ್ಲಿ ಸಮಸ್ಯೆ ಇತ್ತು..! ಸಬ್ಸಿಡಿಯಲ್ಲಿ ಎಷ್ಟು ಹಣ ಸಿಗುತ್ತದೆ ಎಂಬ ಗೊಂದಲ ಅನೇಕ ಜನರಿಗೆ ಇತ್ತು. ಎಲ್ ಪಿಜಿ ಅನಿಲ ಗ್ರಾಹಕರು ಸಬ್ಸಿಡಿಯಾಗಿ ಪ್ರತಿ ಸಿಲಿಂಡರ್ʼಗೆ 79.26ರೂ. ಪಡೆಯುತ್ತಿದ್ರೆ, ಕೆಲವರು 158.52 ಅಥವಾ 237.78 ರೂ.ಗಳನ್ನು ಪಡೆದಿದ್ದಾರೆ. ನೀವು ಸಬ್ಸಿಡಿ ಪಡೆಯುತ್ತಿದ್ದರೆ ಮನೆಯಲ್ಲಿ ಕೂಳಿತು ಈ ರೀತಿ ಪರಿಶೀಲಿಸಿ..! >> ಮೊದಲು ನೀವು ಇಂಡಿಯನ್ ಆಯಿಲ್ ವೆಬ್ ಸೈಟ್ https://cx.indianoil.in/ ಭೇಟಿ ನೀಡಬೇಕಾಗುತ್ತದೆ. >> ನೀವು ಈಗ ಸಬ್ಸಿಡಿ ಸ್ಥಿತಿಯನ್ನ ಕ್ಲಿಕ್ ಮಾಡಿ, ಮುಂದುವರಿಯಬೇಕಾಗುತ್ತದೆ. >> ನಂತರ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತವು 10 ಅಂಕಿಗಳ ಮೊಬೈಲ್ ಸಂಖ್ಯೆಗಳನ್ನ ಏಕೆ ಹೊಂದಿದೆ ಅನ್ನೋದನ್ನ ನೀವು ಎಂದಾದ್ರೂ ಯೋಚಿಸಿದ್ದೀರಾ..? ಇಲ್ಲದಿದ್ರೆ, ನಾವಿಂದು ನಿಮಗೆ ಅದರ ಹೇಳಲಿದ್ದೇವೆ. ಇಂದು ಪ್ರಪಂಚದಾದ್ಯಂತ ಮೊಬೈಲ್ ಫೋನ್ʼಗಳನ್ನ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಈ ಆಧುನಿಕ ಯುಗವನ್ನ ವೇಗಗೊಳಿಸುವಲ್ಲಿ ಮೊಬೈಲ್ ಫೋನ್ʼಗಳು ಪ್ರಮುಖ ಪಾತ್ರ ವಹಿಸಿವೆ. ಈಗ ಜಗತ್ತು ಪ್ರಪಂಚಕ್ಕಿಂತ ಜಾಗತಿಕ ಕುಟುಂಬವಾಗಿದೆ. ಆದ್ದರಿಂದಲೇ ಈ ಯುಗವನ್ನ ಜಾಗತೀಕರಣ ಎಂದು ಕರೆಯಲಾಗುತ್ತದೆ. ಇನ್ನು ಮನುಷ್ಯರ ನಡುವಿನ ಭೌಗೋಳಿಕ ದೂರವನ್ನ ಮೊಬೈಲ್ ಫೋನ್ʼಗಳು ತೊಡೆದು ಹಾಕಿವೆ. ಈ ತಂತ್ರಜ್ಞಾನದಿಂದ, ದೂರದ ಸ್ಥಳದಲ್ಲಿರುವ ನಮ್ಮ ಸಂಬಂಧಿಕರೊಂದಿಗೆ ಗಂಟೆಗಳ ಕಾಲ ಮಾತನಾಡಬಹುದು. ಆದಾಗ್ಯೂ, ಫೋನ್ʼನಲ್ಲಿ ಅವನೊಂದಿಗೆ ಮಾತನಾಡುವ ಮೊದಲು ಅವ್ರ ಸಂಖ್ಯೆಯನ್ನ ಡಯಲ್ ಮಾಡಬೇಕು ಅಲ್ವಾ..? ಭಾರತದಲ್ಲಿ ಮೊಬೈಲ್ ಸಂಖ್ಯೆಗಳು ಏಕೆ 10 ಅಂಕಿಗಳಾಗಿವೆ? ಎಂದು ಅನೇಕರು ಆಶ್ಚರ್ಯ ಪಟ್ಟಿರಬೋದು. ಅದ್ಯಾಕೆ ಅನ್ನೋ ಮಾಹಿತಿ ಮುಂದಿದೆ. ಭಾರತದಲ್ಲಿ 10 ಅಂಕಿಗಳ ಫೋನ್ ಸಂಖ್ಯೆಗಳು ಏಕೆ? ಇದರ ಹಿಂದಿನ ದೊಡ್ಡ ಕಾರಣವೆಂದ್ರೆ, ಸರ್ಕಾರದ ರಾಷ್ಟ್ರೀಯ ಸಂಖ್ಯೆ…
ಮುಂಬೈ : ಮುಂಬೈನ ಡಿಯೋನಾರ್ ಪ್ರದೇಶದಲ್ಲಿ ತನ್ನ ಸ್ನೇಹಿತೆಗೆ ಕರೆ ಸ್ವೀಕರಿಸದ ಕಾರಣ 24 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನ ಮಾನವ್ ಲಾಲ್ವಾನಿ ಎಂದು ಗುರುತಿಸಲಾಗಿದೆ. ಮೃತ ಯುವಕ ತಡರಾತ್ರಿವರೆಗೂ ಮತ್ತು ಆತನ ಸ್ನೇಹಿತ – ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಟ್ರೋಂಬೇ ಪೊಲೀಸ್ ಠಾಣೆ ಹಿರಿಯ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಪಾರ್ಟಿ ಮುಗಿಸಿ ಮನೆಗೆ ಬಂದ ಯುವಕ, ತನ್ನ ಸ್ನೇಹಿತೆಗೆ ಕರೆ ಮಾಡಿದ್ದಾನೆ. ಆದ್ರೆ, ಯುವತಿ ಆತನ ಕರೆಯನ್ನ ಸ್ವೀಕರಿಸಿಲ್ಲ. ಪಟ್ಟು ಬಿಡದ ಯುವಕ ಮತ್ತೆ ಮತ್ತೆ ಕರೆ ಮಾಡಿದ್ದಾನೆ. ಆದ್ರೆ, ಯುವತಿ ಕರೆಗೆ ಪ್ರತಿಕ್ರಿಯಿಸದ ಕಾರಣ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು. ಮಂಗಳವಾರ ಬೆಳಿಗ್ಗೆ ಯುವಕ ಟೆರೇಸ್ʼನಲ್ಲಿ ನೇತಾಡುತ್ತಿರುವುದನ್ನ ಅವನ ಪೋಷಕರು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸಂತ್ರಸ್ತನ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಹೆಚ್ಚಿನ ತನಿಖೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ವಿವಾಹವಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ʼ ನಲ್ಲಿ ಹಂಚಿಕೊಂಡಿದ್ದಾರೆ. “ಈ ಕ್ಷಣಕ್ಕೆ ನಮ್ಮನ್ನು ಕರೆತಂದ ಎಲ್ಲರಿಗೂ ನಮ್ಮ ಹೃದಯಾಳದಿಂದ ಕೃತಜ್ಞತೆಗಳು. ನಾವು ಒಟ್ಟಿಗೆ ಈ ಹೊಸ ಪ್ರಯಾಣವನ್ನ ಪ್ರಾರಂಭಿಸುತ್ತಿದ್ದು, ನಿಮ್ಮ ಎಲ್ಲರ ಪ್ರೀತಿ ಮತ್ತು ಆಶೀರ್ವಾದಗಳನ್ನ ಕೋರುತ್ತೇವೆ” ಎಂದು ವಿಕ್ಕಿ ಬರೆದಿದ್ದಾರೆ. ಕತ್ರಿನಾ ಕೆಂಪು ಲೆಹೆಂಗಾದಲ್ಲಿ ಬೆರಗುಗೊಳಿಸುವಂತೆ ಕಾಣುತ್ತಿದ್ರೆ, ವಿಕ್ಕಿ ದೊಡ್ಡ ದಿನಕ್ಕೆ ಬಿಳಿ ಉಡುಪನ್ನ ಆಯ್ಕೆ ಮಾಡಿಕೊಂಡಿದ್ದಾರೆ. https://www.instagram.com/p/CXRDUNSvWlZ/?utm_source=ig_web_copy_link https://kannadanewsnow.com/kannada/vicky-kaushalkatrina-kaifvicky-katrina-weddingvicky-kaushal-weddingkatrina-kaif-wedding/ https://kannadanewsnow.com/kannada/%ca%bcwhatsapp%ca%bc-important-announcement-introduction-of-mutual-cryptocurrency-transaction-facility-early-release/ https://kannadanewsnow.com/kannada/pm-modi-pays-last-respect-to-11-veera-senanis-including-general-bipin-rawat-wife-madhulika-santwana-to-family-members/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಕ್ರಿಪ್ಟೋಕರೆನ್ಸಿ ಭವಿಷ್ಯವಾಗಿದ್ದು, ಇದನ್ನ ಗಮನದಲ್ಲಿಟ್ಟುಕೊಂಡ ವಾಟ್ಸಾಪ್, ಕ್ರಿಪ್ಟೋಕರೆನ್ಸಿ ಪಾವತಿಯ ಪೈಲಟ್ ಪ್ರಾರಂಭಿಸಿದೆ. ಕ್ರಿಪ್ಟೋಕರೆನ್ಸಿಗಳಲ್ಲಿನ ವಹಿವಾಟುಗಳನ್ನ ವಾಟ್ಸಾಪ್ನಲ್ಲಿಯೂ ಮಾಡಬಹುದು. ಆದಾಗ್ಯೂ, ಇದು ಪ್ರಸ್ತುತ ಪರೀಕ್ಷೆಯ ರೂಪದಲ್ಲಿದ್ದು, ಇದನ್ನು ಸೀಮಿತ ಬಳಕೆದಾರರಿಗಾಗಿ ಹೊರ ತರಲಾಗುತ್ತಿದೆ. ವಾಟ್ಸಾಪ್ ಚಾಟ್ನಲ್ಲಿಯೇ ಕ್ರಿಪ್ಟೋಕರೆನ್ಸಿ ವಹಿವಾಟಿನ ವೈಶಿಷ್ಟ್ಯವನ್ನು ನೀಡಿದೆ. ಇದಕ್ಕಾಗಿ, ಕಂಪನಿಯು ಮೆಟಾ (ಫೇಸ್ಬುಕ್)ನ ನೋವಿ ಪ್ಲಾಟ್ಫಾರ್ಮ್ ಅನ್ನು ಬಳಸಿದೆ. ಅಂದ್ಹಾಗೆ, ಫೇಸ್ಬುಕ್ ಒಂದು ತಿಂಗಳ ಹಿಂದೆ ಪರೀಕ್ಷೆಯಾಗಿ ನೋವಿ ಡಿಜಿಟಲ್ ವ್ಯಾಲೆಟ್ʼನ್ನ ಪರಿಚಯಿಸಿತು. ವಾಟ್ಸಾಪ್ ಸಿಇಒ ವಿಲ್ ಕ್ಯಾತ್ಕಾರ್ಟ್ ವಾಟ್ಸಾಪ್ನ ಈ ಹೊಸ ಪೈಲಟ್ ವೈಶಿಷ್ಟ್ಯವನ್ನ ಘೋಷಿಸಿದ್ದಾರೆ. ವಾಟ್ಸಾಪ್ನಲ್ಲಿ ಕ್ರಿಪ್ಟೋಕರೆನ್ಸಿಯನ್ನ ಕಳುಹಿಸುವುದು ಸಾಮಾನ್ಯ ಲಗತ್ತನ್ನ ಕಳುಹಿಸುವಂತೆಯೇ ಇರುತ್ತದೆ ಎಂದು ಗಮನಿಸಬೇಕಾದ ಅಂಶವಾಗಿದೆ. ಉದಾಹರಣೆಗೆ, ನೀವು ವಾಟ್ಸಾಪ್ನಲ್ಲಿ ಯಾರಿಗಾದರೂ ಫೈಲ್ ಅಥವಾ ಫೋಟೋವನ್ನ ಕಳುಹಿಸುವಂತೆಯೇ, ಕ್ರಿಪ್ಟೋಕರೆನ್ಸಿಗಳನ್ನು ಕಳುಹಿಸಬಹುದು. ಈ ವೈಶಿಷ್ಟ್ಯವನ್ನ ಬಳಸುವುದು ಸಹ ಸುಲಭವಾಗುತ್ತದೆ. ಸದ್ಯಕ್ಕೆ USನಲ್ಲಿ ಮಾತ್ರ ಈ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದು Android ಮತ್ತು iPhone ಎರಡಕ್ಕೂ ಇರುತ್ತದೆ. ಕ್ರಿಪ್ಟೋಕರೆನ್ಸಿ ಕಳುಹಿಸಲು,…
ನವದೆಹಲಿ : ತಮಿಳುನಾಡಿನ ಕೂನೂರ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿ ಇತರ 11 ವೀರಾ ಸೇನಾನಿಗಳಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ರು. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ರಕ್ಷಣಾ ಅಧಿಕಾರಿಗಳ ಪಾರ್ಥಿವ ಶರೀರವನ್ನು ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದಲ್ಲಿ ಗುರುವಾರ ಸಂಜೆ ರಾಷ್ಟ್ರ ರಾಜಧಾನಿಗೆ ತರಲಾಯಿತು. ಅಂತಿಮ ದರ್ಶನಕ್ಕಾಗಿ ದೆಹಲಿಯ ಪಾಲಂ ವಾಯುನೆಲೆಯಲ್ಲಿ ಇರಿಸಲಾಗಿದ್ದು, ಅವರ ಕುಟುಂಬಗಳು ಸೇರಿ ಸಂಬಂಧಿಕರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಸಧ್ಯ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್ ಎಸ್ ಎ ಅಜಿತ್ ದೋವಲ್ ಅಂತಿಮ ನಮನ ಸಲ್ಲಿಸಿದ್ರು. ನಂತ್ರ ಕುಟುಂಬ ಸದಸ್ಥರಿಗೆ ಸಂತ್ವಾನ ಹೇಳುವ ಪ್ರಯತ್ನ ಮಾಡಿದ್ರು. ಈ ಮಧ್ಯೆ ಎಲ್ಲರ ಕಣ್ಣು ತೇವವಾಗಿಯೇ ಉಳಿದಿತ್ತು. https://twitter.com/ANI/status/1468968903690764295?s=20 https://kannadanewsnow.com/kannada/bigg-breaking-news-sri-lanka-bhutan-nepal-military-force-arrive-stake-in-cds-bipin-rawat-to-pay-last-respects-funeral-likely-tomorrow/ https://kannadanewsnow.com/kannada/pejavarra-shree-reaction-to-pejavara-shree/ https://kannadanewsnow.com/kannada/big-shock-for-a-newly-wed-who-went-to-the-honeymoon-room-feed-a-sleeping-pill-a-vile-act-by-a-husband/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ಹುಡುಗಿಯೂ ತನ್ನ ಮದುವೆ ಬಗ್ಗೆ ಅನೇಕ ಕನಸುಗಳನ್ನ ಹೊಂದಿರ್ತಾಳೆ.ಅದ್ರಂತೆ, ಮದುವೆಯ ನಂತ್ರ ಅವಳು ಹೊಸ ಸಂತೋಷದ ಜೀವನದ ಭರವಸೆಯಲ್ಲಿ ತನ್ನ ಮನೆಯ ಹೊಸ್ತಿಲನ್ನ ದಾಟುತ್ತಾಳೆ. ಆದ್ರೆ, ಕೆಲವೊಮ್ಮೆ ಕನಸುಗಳು ಇದ್ದಕ್ಕಿದ್ದಂತೆ ಮುರಿದು ಹೋಗುತ್ವೆ. ಇಟಾವಾ ನಗರದಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದೆ. ತನ್ನ ಮೊದಲ ರಾತ್ರಿಯೇ ಕರಾಳ ರಾತ್ರಿಯಾಗಿ ಉಳಿಯಲಿದೆ ಅನ್ನೋದು ಮದುವೆಯ ನಂತ್ರ ತನ್ನ ಅತ್ತೆಯ ಮನೆಗೆ ಬಂದ ಸ್ವತಃ ಯುವತಿಗೆ ಗೊತ್ತಿರಲಿಲ್ವೇನು. ಯಾಕಂದ್ರೆ, ಮಧುಚಂದ್ರಕ್ಕೆಂದು ಕೊಣೆಯೊಳಗೊದ ನವವಧುವಿನ ಸ್ಥಿತಿ ಸಧ್ಯ ಚಿಂತಾಜನಕವಾಗಿದೆ. ನವೆಂಬರ್ 28ರಂದು ಯುವತಿಯ ಮದುವೆ ನಡೆದಿದ್ದು, ನವೆಂಬರ್ 29ರಂದು ಗಂಡನ ಮನೆಗೆ ಆಗಮಿಸಿದ್ದಾಳೆ. ಇನ್ನು ಸಂಬಂಧಿಕರು ಕೂಡ ರಾತ್ರಿ ಶಾಸ್ತ್ರೋತ್ರವಾಗಿ ಮಧುಚಂದ್ರಕ್ಕೆಂದು ಯುವತಿಯನ್ನ ಕೋಣೆಗೆ ಕಳುಹಿಸಿಕೊಟ್ಟಿದ್ದಾರೆ. ನಂತ್ರ ಆ ವಧುವನ್ನ ಪುಸಲಾಯಿಸಿದ ವರ ಆಕೆಗೆ ಮಾತ್ರೆಯೊಂದನ್ನ ಕೊಟ್ಟು ತಿನ್ನುವಂತೆ ಒತ್ತಾಯಿಸಿದ್ದಾನೆ. ಆಕೆಯೂ ಮಾತ್ರೆ ತೆಗೆದುಕೊಂಡಿದ್ದು, ನಂತ್ರ ಮೂರ್ಛೆ ತಪ್ಪಿದ್ದಾಳೆ. ನಂತ್ರ ಆ ಯುವತಿಯ ಮೇಲೆ ಆಕೆಯ ಪತಿ ಮತ್ತು ಆತನ…
ನವದೆಹಲಿ : ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (CDS General Bipin Rawat), ಅವ್ರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ತಮಿಳುನಾಡಿನ ನೀಲಗಿರಿಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Chopper Crash) ನಿಧನರಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರ ಶವಗಳನ್ನ ಇಂದು ದೆಹಲಿಗೆ ತರಲಾಗುವುದು. ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ಸಲ್ಲಿಸಲಿದ್ದಾರೆ. ಇನ್ನು ಜನರಲ್ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯಲ್ಲಿ ಶ್ರೀಲಂಕಾ ಸೇನಾ ಮುಖ್ಯಸ್ಥ ಮತ್ತು ಸೇನಾ ಕಮಾಂಡರ್ ಜನರಲ್ ಶಾವೆಂದ್ರ ಸಿಲ್ವಾ ಭಾಗವಹಿಸಬಹುದು. ಶ್ರೀಲಂಕಾದ ಸೇನಾ ಮುಖ್ಯಸ್ಥರ ಜೊತೆಗೆ ನೇಪಾಳ ಮತ್ತು ಭೂತಾನ್ ಸೇನೆಯ ಉನ್ನತ ಅಧಿಕಾರಿಗಳು ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ದಿವಂಗತ ಜನರಲ್ ವಿಪಿನ್ ರಾವತ್ ಅವ್ರ ಅಂತಿಮ ಸಂಸ್ಕಾರ ನಾಳೆ ಅಂದರೆ ಶುಕ್ರವಾರ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆಯಲಿದೆ. ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿ ಇತರ…
ನವದೆಹಲಿ : ಸಿಬಿಐ ಅಧಿಕಾರಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಸಿಬಿಐ ಮತ್ತು ಇ.ಡಿ ನಿರ್ದೇಶಕರ(CBI and ED directors) ಅಧಿಕಾರಾವಧಿಯನ್ನ 5 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ. ಹೌದು, ಸಿಬಿಐ ಮತ್ತು ಇ.ಡಿ ನಿರ್ದೇಶಕರ(CBI and ED directors) ಅಧಿಕಾರಾವಧಿಯನ್ನ 5 ವರ್ಷಗಳ ಕಾಲ ವಿಸ್ತರಿಸುವ ಉದ್ದೇಶದಿಂದ ಲೋಕಸಭೆ ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ, 2021ಮತ್ತು ದೆಹಲಿ ಪೊಲೀಸ್ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ 2021ನ್ನ ಅಂಗೀಕರಿಸಿದೆ. ಈ ಮೂಲಕ ಸಿಬಿಐ ಮತ್ತು ಇ.ಡಿ ನಿರ್ದೇಶಕರ ಅಧಿಕಾರವಧಿ 5 ವರ್ಷ ವಿಸ್ತರಣೆಯಾಗಲಿದೆ. https://twitter.com/ANI/status/1468942871264837633?s=20 https://kannadanewsnow.com/kannada/miniority-scholarship-date-extended-koppa/ https://kannadanewsnow.com/kannada/cm-basavaraj-bommayi-speech-in-harihara/ https://kannadanewsnow.com/kannada/jackwelin-fernadis-farces-ed-enquiry/