ನವದೆಹಲಿ : ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪರೀಕ್ಷೆಗಳ ಸಂಖ್ಯೆಯಲ್ಲಿ ಕುಸಿತವಾಗಿದ್ದು, ಸಾಂಕ್ರಾಮಿಕ ರೋಗದ ಹರಡುವಿಕೆಯ ಪರಿಣಾಮಕಾರಿ ಜಾಡು ಇಡಿಯಲು ಮತ್ತು ಸೋಂಕು ನಿಯಂತ್ರಣಕ್ಕೆ ಪರೀಕ್ಷೆಯನ್ನ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್ಟಿ ಅಹುಜಾ ಅವ್ರು ಈ ಅಂಶದ ಬಗ್ಗೆ ತಕ್ಷಣ ಗಮನ ಹರಿಸಬೇಕು ಮತ್ತು ನಿರ್ದಿಷ್ಟ ಕ್ಷೇತ್ರಗಳಲ್ಲಿ ಪ್ರಕರಣ ಸಕಾರಾತ್ಮಕತೆಯ ಪ್ರವೃತ್ತಿಯನ್ನ ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರಾತ್ಮಕ ರೀತಿಯಲ್ಲಿ ಪರೀಕ್ಷೆಯನ್ನ ಹೆಚ್ಚಿಸುವಂತೆ ಸಲಹೆ ನೀಡಿದರು. ವಿಶ್ವ ಆರೋಗ್ಯ ಸಂಸ್ಥೆ ಕಾಳಜಿಯ ರೂಪಾಂತರ ಎಂದು ಹೆಸರಿಸಿರುವ ಒಮಿಕ್ರಾನ್ ಪ್ರಸ್ತುತ ದೇಶಾದ್ಯಂತ ಹರಡುತ್ತಿದೆ ಎಂದು ಅವ್ರು ಒತ್ತಿ ಹೇಳಿದ್ದಾರೆ. https://kannadanewsnow.com/kannada/healthy%cc%a4%cc%a4-winter-melon/ https://kannadanewsnow.com/kannada/six-students-drowned-in-river-the-death-of-six-students-the-care-of-two/ https://kannadanewsnow.com/kannada/corona-positive-on-one-day-child-in-gadaga/
Author: Kannada News
ನವದೆಹಲಿ : ದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ಭಯೋತ್ಪಾದಕರು ರಕ್ತ ಹರಿಸಲು ಮುಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಇತರ ಗಣ್ಯರ ಜೀವಕ್ಕೆ ಬೆದರಿಕೆ ಒಡ್ಡಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಗುಪ್ತಚರ ಒಂಬತ್ತು ಪುಟಗಳ ಮಾಹಿತಿ ನೀಡಿದ್ದು, ಭಾರತದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಾಜರಿರುವ ಪ್ರಧಾನಿ ಮೋದಿ ಮತ್ತು ಇತರ ಗಣ್ಯರಿಗೆ ಬೆದರಿಕೆ ಇದೆ ಎಂದು ಸೂಚಿಸಿದೆ. ಇನ್ನು ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಎಂಬ ಐದು ಮಧ್ಯ ಏಷ್ಯಾದ ರಾಷ್ಟ್ರಗಳ ನಾಯಕರನ್ನ ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಸಾಧ್ಯತೆಯಿದೆ. ಪಾಕಿಸ್ತಾನ/ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದಿಂದ ಹೊರಗಿರುವ ಗುಂಪುಗಳಿಂದ ಬೆದರಿಕೆ ಈ ಬಂದಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಈ ಗುಂಪುಗಳು ಉನ್ನತ ಸ್ಥಾನದಲ್ಲಿರುವ ಗಣ್ಯರನ್ನ ಗುರಿಯಾಗಿಟ್ಟುಕೊಂಡು ಸಾರ್ವಜನಿಕ ಸಭೆಗಳು, ನಿರ್ಣಾಯಕ ಸಂಸ್ಥೆಗಳು ಮತ್ತು ಜನನಿಬಿಡ ಸ್ಥಳಗಳನ್ನ ಹಾಳುಮಾಡುವ ಉದ್ದೇಶ ಹೊಂದಿವೆ. ಡ್ರೋನ್ ಬಳಸಿ ದಾಳಿಗೆ ಪ್ರಯತ್ನ..! ಭಯೋತ್ಪಾದಕ ಬೆದರಿಕೆಯ ಹಿಂದೆ ಲಷ್ಕರ್-ಎ-ತೊಯ್ಬಾ, ಪ್ರತಿರೋಧ ಪಡೆ, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್ ನಂತಹ…
ನವದೆಹಲಿ : ಮುಂಬರುವ ಐಪಿಎಲ್(IPL)ನಲ್ಲಿ ಇನ್ನೂ ಹೆಸರಿರದ ಲಕ್ನೋ ಫ್ರಾಂಚೈಸಿ(Lucknow franchise)ಯ ನಾಯಕತ್ವವನ್ನ ಕೆ.ಎಲ್. ರಾಹುಲ್(K L Rahul) ವಹಿಸಿಕೊಳ್ಳಲಿದ್ದಾರೆ ಎಂದು ಲೀಗ್ ಮೂಲಗಳು ಮಂಗಳವಾರ ತಿಳಿಸಿವೆ. ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ಬೃಹತ್ ಹರಾಜಿಗೆ ಮುಂಚಿತವಾಗಿ ಲಕ್ನೋ ಡ್ರಾಫ್ಟ್ʼನಿಂದ ಆಯ್ಕೆ ಮಾಡಿದ ಆಟಗಾರರಲ್ಲಿ ರಾಹುಲ್ ಒಬ್ಬರು ಎಂದು ತಿಳಿದುಬಂದಿದೆ. ಇತರ ಇಬ್ಬರು ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್(Marcus Stoinis) ಮತ್ತು ಅನ್ಕ್ಯಾಪ್ಡ್ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್(Ravi Bishnoi) ಆಗಿರಬಹುದು. ಇನ್ನು “ರಾಹುಲ್ ಲಕ್ನೋ ನಾಯಕರಾಗಲಿದ್ದಾರೆ. ಇತರ ಎರಡು ಡ್ರಾಫ್ಟ್ ಪಿಕ್ʼಗಳ ಬಗ್ಗೆ ತಂಡ ನಿರ್ಧರಿಸುತ್ತಿದೆ’ ಎಂದು ಐಪಿಎಲ್ ಮೂಲಗಳು ತಿಳಿಸಿವೆ. ರಾಹುಲ್ ಕಳೆದ ಎರಡು ಋತುಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ್ರು. https://kannadanewsnow.com/kannada/if-the-government-was-pauper-i-would-pay-my-teacher-ready-to-write-on-chhapa-paper-if-needed-h-d-ravanna/ https://kannadanewsnow.com/kannada/increasing-coronal-rise-in-maharashtra-haryana-gujarat-this-week-iit/ https://kannadanewsnow.com/kannada/kpcc-president-dk-shivakumar-visit-on-child-actress-samanvi-house/
ನವದೆಹಲಿ : ದೇಶದಲ್ಲಿ ಅನೇಕ ಆಘಾತಕಾರಿ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಸಧ್ಯ ಎಂಟು ವರ್ಷದ ಬಾಲಕಿಯೊಬ್ಬಳು ದೇವಾಲಯಕ್ಕೆ ಭೇಟಿ ನೀಡುವಾಗ ಅಪರಚಿತನೊಬ್ಬ ಪುಟ್ಟ ಬಾಲಕಿಯ ಮೇಲೆ ಅತ್ಯಚಾರವೆಸಗಿದ ಘೋರ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ದೆಹಲಿಯ ಅಲಿಪೋರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಬಾಲಕಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಸಹೋದರಿಯೊಂದಿಗೆ ಹತ್ತಿರದ ದೇವಾಲಯಕ್ಕೆ ಹೋಗಿದ್ದಳು. ನಡೆದುಕೊಂಡು ಹೋಗುವಾಗ ಆರೋಪಿಯೂ ಇಲ್ಲಿಗೆ ಬಂದಿದ್ದು, ಬಾಲಕಿಯನ್ನ ನಂಬಿಸಿ ಹತ್ತಿರದ ಕಾಡಿಗೆ ಕರೆದೊಯ್ದಿದ್ದಾನೆ. ನಂತ್ರ ಈ ಅವಕಾಶವನ್ನ ಬಳಸಿಕೊಂಡು ಆರೋಪಿ, ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದಾನೆ. ನಂತ್ರ, ಬಾಲಕಿಯನ್ನ ಸ್ಥಳದಲ್ಲಿ ಬಿಟ್ಟ ಆರೋಪಿ ಓಡಿಹೋಗಿದ್ದಾನೆ. ನಂತ್ರ ಸಂತ್ರಸ್ತೆ ಗಂಭೀರ ಸ್ಥಿತಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮನೆಗೆ ಮರಳಿದ್ದಾಳೆ. . ಅವಳು ತನ್ನ ಹೆತ್ತವರಿಗೆ ನಡೆದ ಎಲ್ಲವನ್ನೂ ಹೇಳಿದ್ದು, ಬಾಲಕಿಯ ಸಂಬಂಧಿಕರು ಅಲಿಪೋರ್ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪೋಕ್ಸೊ ಸೇರಿದಂತೆ…
ಬೆಂಗಳೂರು : ಟೆಸ್ಲಾ ಎಲೆಕ್ಟ್ರಾನಿಕ್ ಕಾರು ಉತ್ಪಾದನೆ ಘಟಕ(manufacturing unit) ಸ್ಥಾಪನೆಗೆ ಬಿಲಿಯನೇರ್ ಸ್ಥಾಪಕ ಎಲಾನ್ ಮಸ್ಕ್(Elon Musk) ಅವ್ರನ್ನ ಭಾರತದ ಹಲವು ರಾಜ್ಯಗಳು ಆಹ್ವಾನಿಸಿದ್ದು, ಸಧ್ಯ ಬೆಳೆಯುತ್ತಿರುವ ಈ ರಾಜ್ಯಗಳ ಪಟ್ಟಿಗೆ ಕರ್ನಾಟಕ ಸೇರಿಕೊಂಡಿದೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವ್ರು ಟ್ವೀಟ್ ಮೂಲಕ ಆಹ್ವಾನ ನೀಡಿದ್ದು, “400ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 45+ಇವಿ ಸ್ಟಾರ್ಟ್ ಅಪ್ʼಗಳು ಮತ್ತು ಬೆಂಗಳೂರು ಬಳಿ ಇರುವ ಇವಿ ಕ್ಲಸ್ಟರ್ʼನೊಂದಿಗೆ ಕರ್ನಾಟಕವು ಭಾರತದ ಇವಿ ಕೇಂದ್ರವಾಗಿ ಹೊರಹೊಮ್ಮಿದೆ. ಅದ್ರಂತೆ, ಎಲಾನ್ ಮಸ್ಕ್ ಅವ್ರ ಟೆಸ್ಲಾ ಸ್ಥಾವರವನ್ನ ಸ್ಥಾಪಿಸಲು ಕರ್ನಾಟಕ ಸೂಕ್ತ ತಾಣವಾಗಿದೆ” ಎಂದು ಆಹ್ವಾನಿಸಿದ್ದಾರೆ. ದೇಶವನ್ನ ಪ್ರವೇಶಿಸಲು ಸವಾಲುಗಳಿವೆ ಎಂದು ಟೆಸ್ಲಾ ಸಿಇಒ ಟ್ವೀಟ್ ಮಾಡಿದ ನಂತ್ರ ಕರ್ನಾಟಕವು, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡುಗಳೊಂದಿಗೆ ಸೇರಿ ಮಸ್ಕ್ ಅವರನ್ನ ಭಾರತಕ್ಕೆ ಆಹ್ವಾನಿಸಿದೆ. https://twitter.com/NiraniMurugesh/status/1483361756206739460?ref_src=twsrc%5Etfw%7Ctwcamp%5Etweetembed%7Ctwterm%5E1483361756206739460%7Ctwgr%5E%7Ctwcon%5Es1_&ref_url=https%3A%2F%2Fwww.deccanherald.com%2Fstate%2Ftop-karnataka-stories%2Fnow-karnataka-wants-elon-musks-tesla-1072222.html https://kannadanewsnow.com/kannada/bigg-breaking-news-encounter-between-army-naxals-on-telangana-chhattisgarh-border-four-naxals-udis/ https://kannadanewsnow.com/kannada/dk-shivakumar-speech-on-bjp-leaders/ https://kannadanewsnow.com/kannada/indian-army-rescued-14-people-who-were-caught-in-a-blizzard-in-kashmir/
ಅಥಣಿ : ಮಾಸ್ಕ್ ಹಾಕೋದು, ಬಿಡೋದು ನನ್ನ ವೈಯಕ್ತಿಕ ವಿಚಾರ. ಯಾವುದೇ ನಿರ್ಬಂಧವಿಲ್ಲವೆಂದು ನಿನ್ನೆ ರಾತ್ರಿ ಪ್ರಧಾನಿಯೇ ಹೇಳಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿಗೆ ಅವ್ರಿಗೆ ಮಾಧ್ಯಮದವ್ರು ಸಚಿವರಾಗಿ ನೀವೇ ಮಾಸ್ಕ್ ಹಾಕಿಲ್ಲವಲ್ಲ ಎಂದು ಪ್ರಶ್ನಿಸಿದಾಗ ಸಚಿವರು ಬೇಜವಾಬ್ದಾರಿ ವರ್ತನೆ ಮೆರೆದಿದ್ದಾರೆ. “ನಿನ್ನೆ ರಾತ್ರಿ ಪ್ರಧಾನಿಯವ್ರೇ ಹೇಳಿದ್ದಾರೆ. ಯಾವುದೇ ನಿರ್ಬಂಧವಿಲ್ಲವೆಂದು ವಿಧಿಸುವುದಿಲ್ಲ. ಸ್ವಂತ ಜವಾಬ್ದಾರಿ ಹೊತ್ತು ಮಾಸ್ಕ್ ಹಾಕ್ಬೇಕು, ಹಾಕೋದು ಬಿಡೋದು ಅವ್ರಿಗೆ ಬಿಟ್ಟದ್ದು. ಆ ಪ್ರಕಾರ ನನಗೂ ಬಿಟ್ಟದ್ದು. ಹಾಗಾಗಿ ಮಾಸ್ಕ್ ಹಾಕೋದು, ಬಿಡೋದು ನನ್ನ ವೈಯಕ್ತಿಯ ವಿಚಾರ. ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹೀಗಾಗಿ ಹಾಕಿಲ್ಲ. ಇನ್ನು ನಾನು ಮಾಸ್ಕ್ ಹಾಕದಿದ್ದರೆ ಏನೂ ತೊಂದರೆಯಾಗುವುದಿಲ್ಲ” ಎಂದಿದ್ದಾರೆ. https://kannadanewsnow.com/kannada/online-scam-did-you-know-that-money-in-your-account-is-unknown-doing-so-will-be-back-in-72-hours/ https://kannadanewsnow.com/kannada/kollegala-mla-n-mahesh-test-covid19-positive/ https://kannadanewsnow.com/kannada/bigg-breaking-news-encounter-between-army-naxals-on-telangana-chhattisgarh-border-four-naxals-udis/
ಕೆಎನ್ಎನ್ಡಿಜಿಟಲ್ ಡೆಸ್ಕ್ : ತೆಲಂಗಾಣ -ಛತ್ತೀಸ್ಗಢ(Telangana -Chhattisgarh) ರಾಜ್ಯದ ಗಡಿಯಲ್ಲಿ ಸೇನಾ ಕಾರ್ಯಾಚರಣೆ(Army Operation) ನಡೆಸುತ್ತಿದ್ದು, ಇದುವರೆಗೂ ಭದ್ರತಾ ಪಡೆಗಳು ನಾಲ್ವರು ನಕ್ಸಲರ(Four Naxals)ನ್ನ ಹೊಡೆದುರುಳಿಸಿದ್ದಾರೆ. ಈ ಕುರಿತು ಛತ್ತೀಸ್ ಗಢದ ಐಜಿ ಬಸ್ತಾರ್ ಪಿ ಸುಂದರರಾಜ್ ಅವ್ರು ಮಾಹಿತಿ ನೀಡಿದ್ದು, “ತೆಲಂಗಾಣ-ಛತ್ತೀಸ್ ಗಢದ ಗಡಿ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದ್ದು, ಭದ್ರತಾ ಪಡೆಗಳು 4 ನಕ್ಸಲೀಯರನ್ನ ಹೊಡೆದುಳಿಸಿವೆ. ಇನ್ನು ಈ ಗುಂಡಿನ ಚಕಮಕಿಯಲ್ಲಿ ಗ್ರೇಹೌಂಡ್ಸ್ ಯೋಧರೊಬ್ಬರು ಗಾಯಗೊಂಡಿದ್ದಾರೆ. ಇನ್ನವ್ರನ್ನ ಚಿಕಿತ್ಸೆಗಾಗಿ ವಾರಂಗಲ್ʼಗೆ ಏರ್ ಲಿಫ್ಟ್ ಮಾಡಲಾಗಿದೆ. ಇನ್ನು ಶೋಧ ಕಾರ್ಯಚಾರಣೆ ಮುಂದುವರೆದಿದೆ” ಎಂದರು. https://twitter.com/ANI/status/1483354042533220354?s=20 https://kannadanewsnow.com/kannada/bigg-news-west-bengal-tamil-nadu-not-in-stills-from-republic-day-parade-centre-clarifies/ https://kannadanewsnow.com/kannada/never-apply-this-color-to-the-southeast-to-avoid-disruptions-in-trade/ https://kannadanewsnow.com/kannada/online-scam-did-you-know-that-money-in-your-account-is-unknown-doing-so-will-be-back-in-72-hours/
ಕೆಎನ್ಎನ್ಡಿಜಿಟ್ ಡೆಸ್ಕ್ : ಇಂಗ್ಲೆಂಡ್ ತಂಡದ ಸ್ಟಾರ್ ಕ್ರಿಕೆಟಿಗ ಬೆನ್ ಸ್ಟೋಕ್ಸ್(Star cricketer Ben Stokes) ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ನಿಂದ ಹಿಂದೆ ಸರಿದಿದ್ದಾರೆ. ಇನ್ನು ಈ ಹಿಂದೆ ಇಂಗ್ಲೆಂಡ್ ನಾಯಕ ಜೋ ರೂಟ್(Joe Root) ಕೂಡ ಐಪಿಎಲ್ʼನಲ್ಲಿ ಆಡೋದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಸ್ಟಾರ್ ಆಟಗಾರರಾಗಿದ್ದ ಬೆನ್ ಸ್ಟೋಕ್ಸ್, ನಾಯಕ ಜೋ ರೂಟ್ ನಂತರ ಐಪಿಎಲ್ನಿಂದ ಹಿಂದೆ ಸರಿದ ಇಂಗ್ಲೆಂಡ್ ಟೆಸ್ಟ್ ತಂಡದ ಎರಡನೇ ಸದಸ್ಯರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಇತ್ತೀಚೆಗೆ ಮುಕ್ತಾಯಗೊಂಡ ಆಶಸ್ ಸರಣಿಯಲ್ಲಿ ಸ್ಟೋಕ್ಸ್ ಅತ್ಯುತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗ್ಲಿಲ್ಲ. ಅವರು 326 ರನ್ ಗಳಿಸಿದರು ಮತ್ತು ಕೇವಲ ನಾಲ್ಕು ವಿಕೆಟ್ ಗಳನ್ನು ಪಡೆದರು. ಇನ್ನು ತಂಡವು ಆಸ್ಟ್ರೇಲಿಯಾ ವಿರುದ್ಧ 4-0ರಿಂದ ಸೋಲಾನುಭವಿಸಿತು. ಇನ್ನು ಸ್ಟೋಕ್ಸ್ ಈ ವರ್ಷದ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಅಂದ್ಹಾಗೆ, ಸ್ಟೋಕ್ಸ್ 2021ರ ಐಪಿಎಲ್ʼನ ಮೊದಲ ಭಾಗದಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಭಾಗವಾಗಿದ್ದು, ಬೆರಳಿನ ಗಾಯದ ನಂತ್ರ…
ನವದೆಹಲಿ : ಗಣರಾಜ್ಯೋತ್ಸವ ಪರೇಡ್(Republic Day parade)ಗಾಗಿ ಪಶ್ಚಿಮ ಬಂಗಾಳ(West Bengal) ಮತ್ತು ತಮಿಳುನಾಡಿ(Tamil Nadu)ನ ಸ್ತಂಬ್ಧಚಿತ್ರ(tableau)ವನ್ನ ಕೇಂದ್ರ ಮರುಪರಿಶೀಲಿಸುವುದಿಲ್ಲ ಎಂದು ರಕ್ಷಣಾ ಸಚಿವರ(Defence Minister) ಹಿರಿಯ ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ. ನವದೆಹಲಿಯಲ್ಲಿ 2022ರ ಗಣರಾಜ್ಯೋತ್ಸವ ಪರೇಡ್ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಸ್ತಂಬ್ಧಚಿತ್ರಗಳನ್ನ ಹೊರಗಿಡಾಲಾಗಿದೆ. ಈ ಕುರಿತು ಪ್ರಧಾನಿ ಮೋದಿಯವ್ರಿಗೆ ಪತ್ರ ಬರೆದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ತಮ್ಮ ರಾಜ್ಯಗಳ ಸ್ತಂಬ್ಧಚಿತ್ರಗಳನ್ನ ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ, ಸಧ್ಯ ಕೇಂದ್ರ ಸರ್ಕಾರ ಈ ಮನವಿಯನ್ನ ತಿರಸ್ಕರಿಸಿದ್ದು, ಮರು ಪರಿಶೀಲಿಸುವುದಿಲ್ಲ ಎಂದಿದೆ. ಅಂದ್ಹಾಗೆ, ಮಮತಾ ಬ್ಯಾನರ್ಜಿ ಅವ್ರು ಪತ್ರದಲ್ಲಿ “ನಮ್ಮ ಸ್ವಾತಂತ್ರ್ಯದ 75ನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಚರಿಸಲು ರಾಷ್ಟ್ರದ ಸಮಾರಂಭದಲ್ಲಿ ಅದರ ವೀರ ಸ್ವಾತಂತ್ರ್ಯ ಹೋರಾಟಗಾರರ ಈ ಕೊಡುಗೆಗೆ ಯಾವುದೇ ಸ್ಥಾನವಿಲ್ಲ ಎಂದು ಕಂಡುಕೊಳ್ಳುವುದು ಆಘಾತಕಾರಿಯಾಗಿದೆ” ಎಂದಿದ್ದಾರೆ ಎಂದು ವರದಿಯಾಗಿದೆ. ಇನ್ನು ನವದೆಹಲಿಯಲ್ಲಿ 2022ರ ಗಣರಾಜ್ಯೋತ್ಸವ ಪರೇಡ್ನಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನ ಪ್ರದರ್ಶಿಸುವ…
ನವದೆಹಲಿ : ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್(Telegram) ಸರ್ವರ್ ಡೌನ್(Server Down) ಆಗಿದ್ದು, ಪ್ರವೇಶಿಸಲು ಸಾಕಷ್ಟು ತೊಂದರೆಯಾಗ್ತಿದೆ. ಈ ಬಗ್ಗೆ ಬಳಕೆದಾರರು, ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್(Micro blogging site Twitter)ನಲ್ಲಿ ದೂರು ನೀಡುತ್ತಿದ್ದಾರೆ. ಟೆಲಿಗ್ರಾಮ್ ತೆರೆಯುವಾಗ ಅಪ್ಡೇಟ್ ಮಾಡುವಂತೆ ಮೇಲಿನ ಪರದೆಯ ಮೇಲೆ ಬರೆಯಲಾಗಿದೆ. ಇನ್ನು ಡೌನ್ ಡಿಟೆಕ್ಟರ್ ಸೈಟ್ ಸಹ ಟೆಲಿಗ್ರಾಮ್ ಡೌನ್ ಎಂದು ವರದಿ ಮಾಡಿದೆ. ಭಾರತೀಯ ಕಾಲಮಾನ ರಾತ್ರಿ 8.19 ರಿಂದ ಟೆಲಿಗ್ರಾಮ್ ಸಮಸ್ಯೆಯನ್ನ ಎದುರಿಸುತ್ತಿದೆ ಎಂದು ಡೌನ್ಡೆಕ್ಟರ್ ಟ್ವೀಟ್ ಮಾಡಿದೆ. ಬಳಕೆದಾರರು ಈ ಬಗ್ಗೆ ವರದಿ ಮಾಡುತ್ತಿದ್ದಾರೆ. ಟೆಲಿಗ್ರಾಮ್ ಡೌನ್ ಆಗಿರುವಾಗ ಅನೇಕ ಬಳಕೆದಾರರು ಟ್ವಿಟರ್ನಲ್ಲಿ ಮೀಮ್ಗಳನ್ನ ಹಂಚಿಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟೆಲಿಗ್ರಾಮ್ ಕಾರ್ಯನಿರ್ವಹಿಸುತ್ತಿಲ್ಲ. ಇದು ಕೆಲವು ಬಳಕೆದಾರರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ರೆ, ಅನೇಕ ಬಳಕೆದಾರರು ಸರ್ವರ್ ಡೌನ್ ಎಂದು ದೂರುತ್ತಿದ್ದಾರೆ. ಈ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಎಲ್ಲಾ ಬಳಕೆದಾರರಿಗೆ ಟೆಲಿಗ್ರಾಮ್…