ನವದೆಹಲಿ : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ನಡುವೆ ಮೊಹಮ್ಮದ್ ಜುಬೈರ್ ವಿರುದ್ಧ ದೆಹಲಿ ಪೊಲೀಸರು ಶನಿವಾರ ಮೂರು ಹೊಸ ಸೆಕ್ಷನ್ಗಳಾದ 201 (ಸಾಕ್ಷ್ಯಾಧಾರಗಳ ನಾಶಕ್ಕಾಗಿ – ಫಾರ್ಮ್ಯಾಟ್ ಮಾಡಿದ ಫೋನ್ ಮತ್ತು ಡಿಲೀಟ್ ಮಾಡಿದ ಟ್ವೀಟ್ಗಳು), ಐಪಿಸಿಯ 120-(ಬಿ) (ಕ್ರಿಮಿನಲ್ ಪಿತೂರಿಗಾಗಿ) ಮತ್ತು ಎಫ್ಸಿಆರ್ಎಯ 35 ಹೊಸ ಸೆಕ್ಷನ್ಗಳನ್ನ ಸೇರಿಸಿದ್ದಾರೆ. ಈ ಪ್ರಕರಣದಲ್ಲಿ ಪಿತೂರಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲಾಗಿದ್ದು, ಆರೋಪಿ ವಿದೇಶಗಳಿಂದ ದೇಣಿಗೆ ಪಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜುಬೈರ್ ಪರ ವಕೀಲರು ದೆಹಲಿ ಹೈಕೋರ್ಟ್ʼನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜೂನ್ 27ರಂದು ಜುಬೈರ್ʼನನ್ನ ದೆಹಲಿ ಪೊಲೀಸರು ತಮ್ಮ ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಬಂಧಿಸಿದ್ದರು. ನಂತ್ರ ವಿಚಾರಣಾ ನ್ಯಾಯಾಲಯವು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿತು. ಇನ್ನು ಒಂದು ದಿನದ ಕಸ್ಟಡಿ ವಿಚಾರಣೆಯ ಅವಧಿ…
Author: Kannada News
ನವದೆಹಲಿ : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ನಡುವೆ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದೆಹಲಿ ಪೊಲೀಸರು ಶನಿವಾರ ಮೂರು ಹೊಸ ಸೆಕ್ಷನ್ಗಳಾದ 201 (ಸಾಕ್ಷ್ಯಾಧಾರಗಳ ನಾಶಕ್ಕಾಗಿ – ಫಾರ್ಮ್ಯಾಟ್ ಮಾಡಿದ ಫೋನ್ ಮತ್ತು ಡಿಲೀಟ್ ಮಾಡಿದ ಟ್ವೀಟ್ಗಳು), ಐಪಿಸಿಯ 120-(ಬಿ) (ಕ್ರಿಮಿನಲ್ ಪಿತೂರಿಗಾಗಿ) ಮತ್ತು ಎಫ್ಸಿಆರ್ಎಯ 35 ಹೊಸ ಸೆಕ್ಷನ್ಗಳನ್ನ ಸೇರಿಸಿದ್ದಾರೆ. ಈ ಪ್ರಕರಣದಲ್ಲಿ ಪಿತೂರಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲಾಗಿದ್ದು, ಆರೋಪಿ ವಿದೇಶಗಳಿಂದ ದೇಣಿಗೆ ಪಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜುಬೈರ್ ಪರ ವಕೀಲರು ದೆಹಲಿ ಹೈಕೋರ್ಟ್ʼನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜೂನ್ 27ರಂದು ಜುಬೈರ್ʼನನ್ನ ದೆಹಲಿ ಪೊಲೀಸರು ತಮ್ಮ ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಬಂಧಿಸಿದ್ದರು. ನಂತ್ರ ವಿಚಾರಣಾ ನ್ಯಾಯಾಲಯವು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿತು. ಇನ್ನು ಒಂದು ದಿನದ…
ಚಂಡೀಗಢ : ಪಾಕಿಸ್ತಾನದ ಮೂರು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಪಂಜಾಬ್ನ ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಭಾರತಕ್ಕೆ ಗಡಿ ದಾಟಿದ್ದು, ಆ ಮಗುವನ್ನ ಬಿಎಸ್ಎಫ್ ಸಿಬ್ಬಂದಿ ತನ್ನ ಪೋಷಕರಿಗೆ ಹಿಂದಿರುಗಿಸಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಭಾರತೀಯ ಗಡಿಯಲ್ಲಿ ಮಗು ಅಳುತ್ತಿರುವುದನ್ನು ನೋಡಿದ್ದಾರೆ. ಬಿಎಸ್ಎಫ್ ಯೋಧರು ಮಗುವನ್ನು ಎತ್ತಿಕೊಂಡು ತಮ್ಮ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಮಗುವನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇಡೀ ಸಂಗತಿಯೇನು..? ಗಡಿ ಭದ್ರತಾ ಪಡೆ (BSF) ಅಧಿಕಾರಿಗಳು ಪಡೆದ ಮಾಹಿತಿಯ ಆಧಾರದ ಮೇಲೆ, ಪಂಜಾಬ್ನ ಫಿರೋಜ್ಪುರ ಸೆಕ್ಟರ್ನ ಗಡಿ ಪ್ರದೇಶದಲ್ಲಿ ಮೂರು ವರ್ಷದ ಬಾಲಕ ಆಕಸ್ಮಿಕವಾಗಿ ಗಡಿಯನ್ನ ದಾಟಿ ಭಾರತಕ್ಕೆ ಪ್ರವೇಶಿಸಿದ್ದಾನೆ ಎಂದು ವರದಿಯಾಗಿದೆ. ಶುಕ್ರವಾರ ಸಂಜೆ 7 ಗಂಟೆಗೆ ಭಾರತೀಯ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ಮಗುವನ್ನ ಗುರುತಿಸಿದ್ದಾರೆ. ಯೋಧರ ಪ್ರಕಾರ, ಮಗು ಅಳುವುದನ್ನ ಮತ್ತು “ಪಾಪಾ, ಪಾಪಾ” ಎಂದು…
ನವದೆಹಲಿ : ಕಳೆದ ವರ್ಷ ಕಾಂಗ್ರೆಸ್ ತೊರೆದ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎನ್ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ಮಾಜಿ ಸಿಎಂ ಕಚೇರಿ ಶನಿವಾರ ತಿಳಿಸಿದೆ. ಶನಿವಾರ ನಡೆದ ಬೃಹತ್ ಬೆಳವಣಿಗೆಯಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗುತ್ತಾರೆ ಎಂದು ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದ್ದು, ಈ ಪ್ರಮುಖ ಸಾಂವಿಧಾನಿಕ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಸಿಂಗ್, 1980 ಮತ್ತು 2014ರಲ್ಲಿ 4 ಬಾರಿ ಶಾಸಕರಾಗಿ ಮತ್ತು ಲೋಕಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಕೊನೆಗೊಳ್ಳುತ್ತದೆ. ಅಂದ್ಹಾಗೆ, ಕ್ಯಾಪ್ಟನ್ ಸಿಂಗ್ ತಮ್ಮ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ʼನ್ನ ಶೀಘ್ರದಲ್ಲೇ ಬಿಜೆಪಿಯೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ, ಅವರು ಮುಂದಿನ ವಾರ ಲಂಡನ್ನಿಂದ ಹಿಂದಿರುಗಿದ ನಂತ್ರ ಈ ಪ್ರಸ್ತಾಪದ ಬಗ್ಗೆ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ಮೈದಾನದಲ್ಲಿ ತಮ್ಮ ಭಾವನೆಗಳನ್ನ ವ್ಯಕ್ತ ಪಡಿಸೋದಿಲ್ಲ. ಆದ್ರೆ, ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ರಿಷಭ್ ಪಂತ್ ಶತಕ ಬಾರಿಸಿದ್ದೇ ತಡ ರಾಹುಲ್ ಸಂತೋಷಕ್ಕೆ ಪಾರವೇ ಇರ್ಲಿಲ್ಲ. ಡ್ರೆಸ್ಸಿಂಗ್ ರೂಮ್ನಿಂದ ಆಟದ ಮೇಲೆ ನಿಗಾ ವಹಿಸಿದ್ದ ದ್ರಾವಿಡ್, ತಮ್ಮ ಆಸನದಿಂದ ಎದ್ದು, ರಿಷಭ್ 100 ರನ್ಗಳ ಗಡಿಯನ್ನ ದಾಟಲು 2ನೇ ರನ್ ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಂತೆ ಎರಡೂ ಕೈಗಳನ್ನ ಮೇಲಕ್ಕೆತ್ತಿ, ಕೂಗುತ್ತಾ ಸಂಭ್ರಮಿಸಿದರು. ಮುಖ್ಯ ಕೋಚ್ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವಂತೆ ಕಾಣ್ತಿತ್ತು. ದ್ರಾವಿಡ್ ಯುವಕನ ಮೈಲಿಗಲ್ಲನ್ನ ತುಂಬಾನೇ ಖುಷಿಯಿಂದ ಆಚರಿಸಿದರು. ಅಂದ್ಹಾಗೆ, ರಿಷಭ್ ಕೇವಲ 89 ಎಸೆತಗಳಲ್ಲಿ 100 ರನ್ ಗಡಿ ದಾಟಿದರು. ರಿಷಭ್ ಭಾರತದ ಪರ ಸಮಯೋಚಿತ ಶತಕವನ್ನ ಬಾರಿಸಿದ್ದು, ಅವರ ಹೊಡೆತವು ಸಂದರ್ಶಕರನ್ನ ಕಠಿಣ ಪರಿಸ್ಥಿತಿಯಿಂದ ರಕ್ಷಿಸಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ತಂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಾಗ 71/4 ರನ್…
ಮುಂಬೈ : ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಕ ಬಾಲಕಿಗೆ ತನ್ನ 16 ವಾರಗಳ ಗರ್ಭಧಾರಣೆಯನ್ನ ಕೊನೆಗೊಳಿಸಲು ಅನುಮತಿ ನೀಡಿದೆ. ಅವಳು ತನ್ನ ಗರ್ಭಧಾರಣೆಯನ್ನ ಮುಂದುವರಿಸಲು ಅನುಮತಿಸಿದ್ರೆ ಅದು “ಅವಳ ಮೇಲೆ ಹೊರೆಯಾಗುವುದಲ್ಲದೆ, ಅದು ಅವಳ ಮಾನಸಿಕ ಆರೋಗ್ಯಕ್ಕೆ ಗಂಭೀರ ಗಾಯವನ್ನ ಉಂಟು ಮಾಡುತ್ತದೆ” ಎಂದು ಅಭಿಪ್ರಾಯಪಟ್ಟಿದೆ. ಕೊಲೆ ಪ್ರಕರಣದ ಆರೋಪಿಯಾಗಿರುವ ಅಪ್ರಾಪ್ತ ವಯಸ್ಕನನ್ನು ನಿರೀಕ್ಷಣಾ ಗೃಹದಲ್ಲಿ ವಶಕ್ಕೆ ಪಡೆಯಲಾಗಿದೆ. ನ್ಯಾಯಮೂರ್ತಿಗಳಾದ ಎ.ಎಸ್. ಚಂದುರ್ಕರ್ ಮತ್ತು ಊರ್ಮಿಳಾ ಜೋಶಿ-ಫಾಲ್ಕೆ ಅವರ ವಿಭಾಗೀಯ ಪೀಠವು ಜೂನ್ 27ರಂದು ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ಅನುಮತಿ ನೀಡುವಾಗ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ಅದು “ಸಂತಾನೋತ್ಪತ್ತಿ ಆಯ್ಕೆಯನ್ನು ಹೊಂದುವ ಮಹಿಳೆಯ ಹಕ್ಕು ಭಾರತದ ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಕಲ್ಪಿಸಲಾಗಿರುವಂತೆ ಅವಳ ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ” ಎಂದು ಹೇಳಿದೆ. “ಮಗುವನ್ನು ಹೆರಲು ಅವಳನ್ನ ಒತ್ತಾಯಿಸಲಾಗುವುದಿಲ್ಲ… ಮಗುವಿಗೆ ಜನ್ಮ ನೀಡಬೇಕೇ ಅಥವಾ ಬೇಡವೇ ಎಂಬ ಆಯ್ಕೆ ಆಕೆಗಿದೆ” ಎಂದು ನ್ಯಾಯಾಧೀಶರು…
ನವದೆಹಲಿ : ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದೆಹಲಿ ಪೊಲೀಸರು ಶನಿವಾರ ಮೂರು ಹೊಸ ಸೆಕ್ಷನ್ಗಳಾದ 201 (ಸಾಕ್ಷ್ಯಾಧಾರಗಳ ನಾಶಕ್ಕಾಗಿ – ಫಾರ್ಮ್ಯಾಟ್ ಮಾಡಿದ ಫೋನ್ ಮತ್ತು ಡಿಲೀಟ್ ಮಾಡಿದ ಟ್ವೀಟ್ಗಳು), ಐಪಿಸಿಯ 120-(ಬಿ) (ಕ್ರಿಮಿನಲ್ ಪಿತೂರಿಗಾಗಿ) ಮತ್ತು ಎಫ್ಸಿಆರ್ಎಯ 35 ಹೊಸ ಸೆಕ್ಷನ್ಗಳನ್ನ ಸೇರಿಸಿದ್ದಾರೆ. ಈ ಪ್ರಕರಣದಲ್ಲಿ ಪಿತೂರಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲಾಗಿದ್ದು, ಆರೋಪಿ ವಿದೇಶಗಳಿಂದ ದೇಣಿಗೆ ಪಡೆದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜುಬೈರ್ ಪರ ವಕೀಲರು ದೆಹಲಿ ಹೈಕೋರ್ಟ್ʼನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜೂನ್ 27ರಂದು ಜುಬೈರ್ʼನನ್ನ ದೆಹಲಿ ಪೊಲೀಸರು ತಮ್ಮ ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಬಂಧಿಸಿದ್ದರು. ನಂತ್ರ ವಿಚಾರಣಾ ನ್ಯಾಯಾಲಯವು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿತು. ಇನ್ನು ಒಂದು ದಿನದ ಕಸ್ಟಡಿ ವಿಚಾರಣೆಯ ಅವಧಿ ಮುಗಿದ ನಂತರ, ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಜುಬೈರ್ ಕಸ್ಟಡಿ ಅವಧಿಯನ್ನ ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಿದರು.
ನವದೆಹಲಿ : ಕೇಂದ್ರ ಸರ್ಕಾರವು ಮೂಲ ಆಮದು ಸುಂಕವನ್ನ ಶೇಕಡಾ 5ರಷ್ಟು ಹೆಚ್ಚಿಸಿದೆ. ಅದ್ರಂತೆ, ಶೇ.7.5 ಇದ್ದ ಆಮದು ಸುಂಕ ಶೇ.12.5ಕ್ಕೆ ಹೆಚ್ಚಾಗಿದೆ. ಆಮದು ಸುಂಕ ಹೆಚ್ಚಿಸಿದ ದಿನವೇ ಚಿನ್ನದ ಬೆಲೆ ರೂ.1,310ರಷ್ಟು ಏರಿಕೆ ಕಂಡಿರುವುದು ಗಮನಾರ್ಹ. ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಸತತ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗ್ತಿರುವುದ್ರಿಂದ ಆಭರಣ ಪ್ರಿಯರಿಗೆ ಶಾಕ್ ಆಗಿದೆ. ಗುರುವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,890 ರೂಪಾಯಿ ಇದ್ದು, ಶುಕ್ರವಾರ ರೂ.1,310 ಮತ್ತು ಶನಿವಾರ ರೂ.140 ಏರಿಕೆಯಾಯ್ತು. ಇನ್ನು ಎರಡು ದಿನಗಳಲ್ಲಿ 10 ಗ್ರಾಂ ಚಿನ್ನ 1,450 ರೂಪಾಯಿ ಏರಿಕೆಯಾಗಿದೆ. ಪ್ರಸ್ತುತ, 10 ಗ್ರಾಂ ಶುದ್ಧ ಚಿನ್ನದ ಬೆಲೆ ರೂ.52,340ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಪರಿಸ್ಥಿತಿ ಮುಂದುವರೆದಂತೆ ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ವಾರವೂ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಅಂದ್ಹಾಗೆ, ಡಾಲರ್ ಎದುರು ರೂಪಾಯಿ ದುರ್ಬಲವಾಗಿರುವುದರಿಂದ ಚಿನ್ನದ ಮೇಲಿನ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI).. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆ. ಇದು ದೇಶದ ಹಳ್ಳಿಗಳಿಗೂ ಹರಡಿರುವ ಬ್ಯಾಂಕಿಂಗ್ ಜಾಲವಾಗಿದ್ದು, ದೇಶಾದ್ಯಂತ 45 ಕೋಟಿಗೂ ಹೆಚ್ಚು ಗ್ರಾಹಕರನ್ನ ಹೊಂದಿದೆ. ಬ್ಯಾಂಕಿಂಗ್ ಸೇವೆಗಳನ್ನ ಗ್ರಾಹಕರಿಗೆ ಹತ್ತಿರ ತರಲು ಎಸ್ಬಿಐ ಹೆಚ್ಚು ಹೆಚ್ಚು ಶ್ರಮಿಸುತ್ತಿದೆ. ಶೀಘ್ರದಲ್ಲೇ ಎಸ್ಬಿಐ ವಾಟ್ಸಾಪ್ (WhatsApp) ಬ್ಯಾಂಕಿಂಗ್ ಸೇವೆಗಳನ್ನ ಒದಗಿಸಲಿದೆ. ಹೌದು, SBI ವಾಟ್ಸಾಪ್ ಬ್ಯಾಂಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಸ್ಬಿಐ ಅಧ್ಯಕ್ಷ ದಿನೇಶ್ ಖಾರಾ ಈ ವಿಷಯ ತಿಳಿಸಿದ್ದಾರೆ. ಅದ್ರಂತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್ ಬಿಐ ಗ್ರಾಹಕರು ವಾಟ್ಸಾಪ್ ಮೂಲಕ ಸೇವೆಗಳನ್ನ ಪಡೆಯಬಹುದಾಗಿದೆ. ಈಗಾಗಲೇ ಹಲವು ಬ್ಯಾಂಕ್ʼಗಳು ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆ ನೀಡುತ್ತಿರುವುದು ಗೊತ್ತೇ ಇದೆ. ಎಚ್ಡಿಎಫ್ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಕ್ಸಿಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನ ಒದಗಿಸುತ್ತಿವೆ. ಬಹುತೇಕ ಎಲ್ಲಾ ಖಾಸಗಿ ಬ್ಯಾಂಕ್ಗಳು…
ನವದೆಹಲಿ : ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಮೇ ತಿಂಗಳ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ಅಡಿಯಲ್ಲಿ ಮಾಸಿಕ ವರದಿಯನ್ನ ಬಿಡುಗಡೆ ಮಾಡಿದೆ. ಇತ್ತೀಚಿನ ವರದಿಯ ಪ್ರಕಾರ, ಮೆಸೇಜಿಂಗ್ ಅಪ್ಲಿಕೇಶನ್ ಒಂದು ತಿಂಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನ ನಿಷೇಧಿಸಿದೆ. ಈ ಬಳಕೆದಾರರು ಮುಖ್ಯವಾಗಿ ಪ್ಲಾಟ್ಫಾರ್ಮ್ನ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದಾರೆ ಎಂದು ವಾಟ್ಸಾಪ್ ಹೇಳಿದೆ. ಇನ್ನು ಇತ್ತೀಚಿನ ವರದಿಯು 1 ಮೇ 2022 ರಿಂದ 31 ಮೇ 2022 ರವರೆಗಿನ ಅವಧಿಯ ಮಾಹಿತಿಯನ್ನ ಒಳಗೊಂಡಿದೆ. ಹೊಸ ಮಾಸಿಕ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಾಪ್ ವಕ್ತಾರರು, “ಐಟಿ ನಿಯಮಗಳು 2021ರ ಪ್ರಕಾರ, ನಾವು ಮೇ 2022ರ ತಿಂಗಳ ನಮ್ಮ ವರದಿಯನ್ನ ಪ್ರಕಟಿಸಿದ್ದೇವೆ. ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳು ಮತ್ತು ವಾಟ್ಸಾಪ್ ತೆಗೆದುಕೊಂಡ ಸಂಬಂಧಿತ ಕ್ರಮ ಮತ್ತು ನಮ್ಮ ಪ್ಲಾಟ್ಫಾರ್ಮ್ಗಳಲ್ಲಿ ದುರುಪಯೋಗವನ್ನ ಎದುರಿಸಲು ವಾಟ್ಸಾಪ್ನ ಸ್ವಂತ ತಡೆಗಟ್ಟುವ ಕ್ರಮಗಳನ್ನ ಒಳಗೊಂಡಿದೆ.…