Author: KannadaNewsnow17

ಭೋಪಾಲ್ : ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ವಾರ ಕಳೆಯುತ್ತಾ ಬಂದರೂ ಈವರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿಲ್ಲ. ಇದರಿಂದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಿದ್ದು, ಸೋಮವಾರ ಇದಕ್ಕೆಲ್ಲಾ ತೆರೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಆಯ್ಕೆ ಸಂಬಂಧ ಮೂವರು ವೀಕ್ಷಕರು ಭೋಪಾಲ್‌ಗೆ ಸೋಮವಾರ ಆಗಮಿಸಲಿದ್ದಾರೆ. ಮಧ್ಯಪ್ರದೇಶದ ಸಿಎಂ ಸ್ಥಾನವನ್ನು ಹಾಲಿ ಸಿಎಂ ಶಿವರಾಜಸಿಂಗ್‌ ಚೌಹಾಣ್‌ ಉಳಿಸಿಕೊಳ್ಳುವರೇ ಅಥವಾ ಹೊಸಬರಿಗೆ ಅವಕಾಶ ಸಿಗಲಿದೆಯಾ ಎನ್ನುವ ಚರ್ಚೆಗಳು ರಾಜ್ಯ ಹಾಗೂ ಬಿಜೆಪಿ ವಲಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಈಗಾಗಲೇ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೆ. ಲಕ್ಷ್ಮಣ್​, ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ಇವರು ಸಲ್ಲಿಸುವ ವರದಿಯನ್ನು ಆಧರಿಸಿ ಬಿಜೆಪಿ ವರಿಷ್ಠರು ನೂತನ ಮುಖ್ಯಮಂತ್ರಿಯನ್ನು ಘೋಷಿಸಲಿದ್ದಾರೆ. ಭೋಪಾಲ್​ನಲ್ಲಿ ಸೋಮವಾರ ಮಧ್ಯಾಹ್ನ ಭೋಜನ ಕೂಟ ಏರ್ಪಡಿಸಲಾಗಿದ್ದು, ಇದಾದ…

Read More

ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಬಯಸದವರು ಹಾಗೂ ಮಾರುಕಟ್ಟೆ ಏರಿಳಿತಗಳನ್ನು ಸತತವಾಗಿ ಗಮನಿಸುವ ಜಂಜಾಟದಿಂದ ದೂರ ಇರಬಯಸುವವರು ಕೂಡ ಮ್ಯೂಚುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಸಾಕಷ್ಟು ಲಾಭ ಗಳಿಸಿಕೊಳ್ಳಬಹುದಾಗಿದೆ. ಈ ಫಂಡ್​ಗಳಲ್ಲಿ ಸಿಪ್​ ಮೂಲಕ ಹಣ ತೊಡಗಿಸಬಹುದು. ಅಂದರೆ, ತಿಂಗಳಿಗೊಮ್ಮೆ ಅಥವಾ ತ್ರೈಮಾಸಿಕಕ್ಕೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ನಿರ್ದಿಷ್ಟ ಹಣವನ್ನು ಈ ಫಂಡ್​ಗಳಲ್ಲಿ ಮಾಡುವುದೇ ಸಿಪ್​ ಆಗಿದೆ. ಈಕ್ವಿಟಿ ಮ್ಯೂಚುಯಲ್ ಫಂಡ್​ನಲ್ಲಿ ಹಣ ತೊಡಗಿಸುವವರು ತಮ್ಮ ಸಿಪ್​ ಹೂಡಿಕೆಗಳಿಂದ ದೀರ್ಘಾವಧಿಯಲ್ಲಿ ‘ಯೋಗ್ಯ’ ಆದಾಯವನ್ನು ಗಳಿಸಲು ಸಾಧ್ಯವಾಗಬಹುದಾಗಿದೆ. ಈಕ್ವಿಟಿ ಮ್ಯೂಚುಯಲ್ ಫಂಡ್​ಗಳು ಈಗಾಗಲೇ ಹೂಡಿಕೆದಾರರಿಗೆ ಎಷ್ಟು ಆದಾಯ ತಂದುಕೊಟ್ಟಿವೆ ಎಂಬುದನ್ನು ಪರಿಗಣಿಸಿ ಹೂಡಿಕೆ ಮಾಡುವುದು ಈ ನಿಟ್ಟಿನಲ್ಲಿ ಪ್ರಮುಖ ಲೆಕ್ಕಾಚಾರವಾಗಿದೆ. ಹಲವು ಈಕ್ವಿಟಿ ಮ್ಯೂಚುಯಲ್ ಫಂಡ್​ಗಳು ಕಳೆದ 10 ವರ್ಷಗಳಲ್ಲಿ ಶೇಕಡಾ 20ಕ್ಕೂ ಅಧಿಕ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ ಎನ್ನುವುದು ಅಚ್ಚರಿಯಾದರೂ ನೈಜ ಸಂಗತಿಯೇ ಆಗಿದೆ. ಅಂದರೆ, ಪ್ರತಿವರ್ಷ ಸರಾಸರಿ ಶೇಕಡಾ 20ಕ್ಕೂ ಅಧಿಕ ಲಾಭವನ್ನು ಇವು ನೀಡಿವೆ. ಸಿಪ್​ ಹೂಡಿಕೆ ಮಾಡಿದವರಿಗೆ ಇಷ್ಟೊಂದು…

Read More

ನವದೆಹಲಿ : ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ತ್ವರಿತ ನ್ಯಾಯಾಲಯಗಳಲ್ಲಿ 2023 ಜನವರಿ 31ರವರೆಗೆ ದೇಶದಲ್ಲಿ 2,43,237 ಪ್ರಕರಣಗಳು ಬಾಕಿ ಉಳಿದಿವೆ ಎಂದು ಭಾರತೀಯ ಮಕ್ಕಳ ರಣಾ ನಿಧಿಯು ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ. ಈ ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡಲು ಕನಿಷ್ಠ 9 ವರ್ಷಗಳು ಬೇಕಾಗುತ್ತದೆ. ಅರುಣಾಚಲ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಪೋಕ್ಸೊ ಪ್ರಕರಣಗಳನ್ನು ಪರಿಹರಿಸಲು 25 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. 2022ರಲ್ಲಿ ಕೇವಲ ಮೂರು ಪ್ರತಿಶತ ಪೋಕ್ಸೊ ಪ್ರಕರಣಗಳಲ್ಲಿ ಶಿಕ್ಷೆಯನ್ನು ನೀಡಲಾಗಿದೆ ಎಂದು ಅಧ್ಯಯನವು ತಿಳಿಸಿದೆ. 2019ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ತ್ವರಿತಗತಿಯ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಯಿತು. ಇದನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ 2026 ರವರೆಗೆ ಮುಂದುವರಿಸಲು 1900 ಕೋಟಿ ರೂಪಾಯಿಗಳ ಬಜೆಟ್​ ಮೊತ್ತವನ್ನು ನಿಗದಿಪಡಿಸಲು ಭಾರತ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡಿದೆಯಾಗಿದೆ.

Read More

ಲಖನೌ : ತನ್ನ ಹೆಸರಿಗೆ ಆಸ್ತಿ ಬರೆಯಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆತ್ತ ತಾಯಿಯ ಶಿರಚ್ಛೇದ ಮಾಡಿ ರುಂಡದ ಸಮೇತ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ತಾಳಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಜಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕಮಲಾ ದೇವಿ (65) ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆರೋಪಿ ದಿನೇಶ್​ ಪಾಸಿ (35) ತಲೆಮಾರಿಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚಕ್ರೇಶ್​ ಮಿಶ್ರಾ ಆರೋಪಿ ದಿನೇಶ್​ ಪಾಸಿ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ತನ್ನ ತಾಯಿಯೊಂದಿಗೆ ಆಸ್ತಿ ವಿಚಾರವಾಗಿ ಜಗಳವಾಡುತ್ತಿದ್ದ. ಶನಿವಾರ ಸಂಜೆ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ ಕೃಷಿ ಬ್ಲೇಡ್​ನಿಂದ ತನ್ನ ತಾಯಿಯ ತಲೆ ಕಡಿದಿದ್ದಾನೆ. ಕೊಲೆ ಮಾಡಿದ ಆರೋಪಿ ತನ್ನ ತಾಯಿಯ ರುಂಡದ ಸಮೇತ ಪರಾರಿಯಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಮೃತದೇಹವನ್ನು ಮರಣೋತ್ತರ…

Read More

ಹೊಸದಿಲ್ಲಿ : ದೆಹಲಿಯಿಂದ ಅಯೋಧ್ಯೆಗೆ ಶ್ರೀರಾಮ ಪಾದಯಾತ್ರೆಗೆ ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಮತ್ತು ಅಶ್ವಿನಿ ಚೌಬೆ ಅವರು ಇಂದು ಚಾಲನೆ ನೀಡಿದರು. 635 ಕಿಲೋಮೀಟರ್ ದೂರವನ್ನು 41 ದಿನಗಳಲ್ಲಿ ಕ್ರಮಿಸಲಾಗುತ್ತಿದೆ. ಭಕ್ತಿ ಮತ್ತು ಸೇವೆಯ ಸಂದೇಶವನ್ನು ಹರಡಲು ಇಸ್ಕಾನ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. 2024 ಜನವರಿ 22, ರಂದು ಅಯೋಧ್ಯೆಯಲ್ಲಿ ದೇವಾಲಯವನ್ನು ತೆರೆಯುವ ಮೊದಲು, ಇಸ್ಕಾನ್ ಅಯೋಧ್ಯೆ ಮತ್ತು ದೇಶದ ಇತರ ಭಾಗಗಳಲ್ಲಿ ಭಗವಾನ್ ಶ್ರೀರಾಮನ ಬೋಧನೆಗಳನ್ನು ಪ್ರತಿ ಮನೆಗೆ ಕೊಂಡೊಯ್ಯಲು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮಾತನಾಡಿ, ದೆಹಲಿಯಿಂದ ಅಯೋಧ್ಯೆಗೆ ಶ್ರೀರಾಮ ಪಾದಯಾತ್ರೆಯು ನನ್ನ ಕ್ಷೇತ್ರದಿಂದ ಪ್ರಾರಂಭವಾಗುತ್ತಿರುವುದು ನನಗೆ ತುಂಬಾ ವಿಶೇಷವಾಗಿದೆ.ಈ ಪಾದಯಾತ್ರೆಯು ಭಗವಾನ್ ರಾಮನ ಹೆಸರಿನಲ್ಲಿ ನಡೆಯುವುದು ಬಹಳ ವಿಶೇಷವಾಗಿದೆ” ಎಂದು ಹೇಳಿದರು.

Read More

ಹುಬ್ಬಳ್ಳಿ : ರಾಜ್ಯ ಸರಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆ ಪಕ್ಷಕ್ಕೇನು ನೈತಿಕತೆ ಇದೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿದೆ ಮುಳಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಮಾತನಾಡಲು ವಿಷಯವೇ ಇಲ್ಲವಾಗಿದೆ. ಹಿಂದೆ 40 ಪರ್ಸೆಂಟ್ ಸರಕಾರ ಎಂದು ಆರೋಪ ಮಾಡಿದಾಗ ಅದರಿಂದ ಹೊರ ಬರಲು ಸಾಧ್ಯವಾಗದೇ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರೇ, ಚುನಾವಣೆಗೆ ಅವರಿಗೆ ದುಡ್ಡು ಎಲ್ಲಿಂದ ಬರುತ್ತೆ ಎನ್ನುವುದನ್ನು ಮೊದಲು ತಿಳಿಸಲಿ ಎಂದರು. ಈಡಿಗ ಸಮಾವೇಶ ರಾಜಕೀಯ ಪ್ರೇರಿತ ಎಂದ ಕಾಂಗ್ರೆಸ್ ನಾಯಕ ಬಿ.ಕೆ .ಹರಿಪ್ರಸಾದ್ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಅವರು ಒಂದು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು ಕಾಳಜಿ ತೆಗೆದುಕೊಳ್ಳುತ್ತಾರೆ. ಅವರನ್ನು ಕರೆದು ಮಾತನಾಡಿಸಿ ಸರಿ ಮಾಡುವ ಕೆಲಸ ಮಾಡುತ್ತಾರೆ. ರಾಜಕಾರಣ ಅಂದರೆ ಹಾಗೆ, ಏನು ಮಾಡಲಿಕ್ಕಾಗುವುದಿಲ್ಲ.…

Read More

ಬಾಯಿ ಬಾರದ ಮೂಕ ಪ್ರಾಣಿಗಳು ದೇವರಿಗೆ ಸಮಾನವಾದದ್ದು. ಆದರೆ ಇಲ್ಲೊಬ್ಬ ಮಾನವೀಯತೆ ಇಲ್ಲದ ಪಾಪಿ ನಾಯಿಮರಿಯ ಕೈಯನ್ನು ಹಿಡಿದು ರಸ್ತೆಗೆ ಎಸೆದು ಬಳಿಕ ಕಾಲಿನಿಂದ ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ. ರಸ್ತೆ ಬದಿಯಲ್ಲಿ ಕುಳಿತಿರುವ ವ್ಯಕ್ತಿಯ ಪಕ್ಕಕ್ಕೆ ಎರಡು ನಾಯಿಮರಿಗಳು ಬಂದು ಆತನ ಪಕ್ಕದಲ್ಲಿ ಕುಳಿತಿರುತ್ತದೆ. ಆ ವೇಳೆ ಮುದ್ದು ಮುದ್ದು ಆಗಿರುವ ನಾಯಿಮರಿ ಆತನ ಜೊತೆ ಆಟಾಡುತ್ತಾ ಬರುತ್ತದೆ. ಆದರೆ ಈ ಕ್ರೂರಿ ಅ ನಾಯಿಮರಿಯನ್ನು ಕೈಯಿಂದ ರೋಡ್ ಗೆ ಎಸೆದು ಕಾಲಿನಿಂದ ತುಳಿದು ಸಾಯಿಸುತ್ತಾನೆ. ಆ ಪುಟ್ಟ ಪುಟ್ಟ ನಾಯಮರಿಗಳಿಗೆ ಏನು ತಿಳಿದಿದೆ ಹೇಳಿ. ಮೂಕ ಪ್ರಾಣಿಗಳಿಗೆ ಈ ರೀತಿ ಮಾಡಿದರೆ ಆಥ ಯಾವ ಕ್ರೂರಿ ಮನುಷ್ಯ ಹೇಳಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪಾಪಿಯ ವಿಡಿಯೋ ನೋಡಿ ಸ್ವತಹ ಮಧ್ಯಪ್ರದೇಶದ ಸಿಎಂ ಶಿವರಾಜ್​ ಸಿಂಗ್ ಚೌಹಣ್, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ…

Read More

ಅಲಹಾಬಾದ್ : ಪತ್ನಿ 18 ವರ್ಷ ಮೇಲ್ಪಟ್ಟವಳಾಗಿದ್ದರೆ ವೈವಾಹಿಕ ಜೀವನದಲ್ಲಿ ನಡೆಸುವ ಅತ್ಯಾಚಾರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಪ್ರಕಾರ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿ ವಿರುದ್ಧ ‘ಅನೈಸರ್ಗಿಕ ಅಪರಾಧ’ ಎಸಗಿದ ಆರೋಪಗಳಿಂದ ಪತಿಯನ್ನು ದೋಷಮುಕ್ತಿಗೊಳಿಸುವ ಸಂದರ್ಭ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಸ್ತಾಪಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಐಪಿಸಿಯ 377ನೇ ಸೆಕ್ಷನ್​ನಂಥ ನಿಯಮವಿಲ್ಲ ಎಂದು ಕೂಡ ಆದೇಶ ಪ್ರಕಟಿಸಿದ ನ್ಯಾಯಮೂರ್ತಿ ರಾಮ ಮನೋಹರ್ ನಾರಾಯಣ ಮಿಶ್ರಾರ ಪೀಠ ಹೇಳಿದೆ. ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್​ಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್ ಮುಂದೆ ಬಾಕಿಯಿವೆ. ಆದ್ದರಿಂದ ಸವೋನ್ನತ ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ವೈವಾಹಿಕ ಅತ್ಯಾಚಾರಕ್ಕೆ ಯಾವುದೇ ಕ್ರಿಮಿನಲ್ ದಂಡ ಶಿಕ್ಷೆ ವಿಧಿಸಲಾಗದು ಎಂದು ಕೋರ್ಟ್ ಹೇಳಿದೆ. ತಮ್ಮ ಮದುವೆ ಒಂದು ಅಪವಿತ್ರ ಸಂಬಂಧ ವಾಗಿದೆ ಎಂದು ದೂರುದಾರ ಮಹಿಳೆ ಅರ್ಜಿಯಲ್ಲಿ ಆರೋಪಿಸಿದ್ದಾಳೆ. ಪತಿ ತನ್ನನ್ನು ಮೌಖಿಕ ಹಾಗೂ ದೈಹಿಕ ನಿಂದನೆ ಹಾಗೂ ಬಲವಂತಕ್ಕೆ ಒಳಪಡಿಸಿದ್ದಾನೆ ಎಂಬುದು…

Read More

ಮಧ್ಯಪ್ರದೇಶದ ಇಂದೋರ್​ ನಗರ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ತೃತೀಯಲಿಂಗಿಯೊಬ್ಬರು ತನ್ನ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ. ಅಸ್ತಿತ್ವ ಸೋನಿ ಪುರುಷನಾಗಿ ಬದಲಾಗುವ ಮುನ್ನ ಅಲ್ಕಾ ಸೋನಿ ಎಂದು ಕರೆಯಲಾಗುತ್ತಿತ್ತು. ಅಸ್ಥಾ ಎಂಬಾಕೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬದ ಸದಸ್ಯರು ಒಪ್ಪಿದ್ದಾರೆ. ಅಲ್ಕಾ ಸೋನಿಯಾಗಿ ಹುಟ್ಟಿ, ಕೆಲವು ವರ್ಷಗಳ ಬಳಿಕ ತಾನು ಹೆಣ್ಣಲ್ಲ ಎಂದು ಭಾವಿಸಿ, ಗಂಡಾಗಿ ಬದಕಲು ನಿರ್ಧರಿಸಿದ ಬಳಿಕ ತನ್ನ 47ನೇ ಹುಟ್ಟುಹಬ್ಬದಂದು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಅಸ್ತಿತ್ವ ಎಂದು ಹೆಸರು ಬದಲಾಯಿಸಿಕೊಂಡು ಇದೀಗ ತನ್ನ ಬಹುಕಾಲದ ಗೆಳತಿಯನ್ನು ವರಿಸಿದ್ದಾರೆ. ಭಿನ್ನಲಿಂಗೀಯ ಸಂಬಂಧದಲ್ಲಿರುವ ತೃತೀಯಲಿಂಗಿಗಳು, ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈ ಅಭೂತಪೂರ್ವ ವಿವಾಹವು ನಡೆದಿದೆ. ತಮ್ಮ ಸಂಪ್ರದಾಯದ ಪ್ರಕಾರ ನವವಿವಾಹಿತರು ಡಿಸೆಂಬರ್ 11ರಂದು ಸಪ್ತಪದಿ…

Read More

ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಎರಡು ವರ್ಷಗಳಲ್ಲಿ ದಾಖಲೆಯ 12.92 ಕೋಟಿ ಜನರು ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2021 ರಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಉದ್ಘಾಟಿಸಿದ್ದರು. ಅಂದಿನಿಂದ, ಮಹಾದೇವನ ಸನ್ನಿಧಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮತ್ತು ಶ್ರಾವಣ ಪವಿತ್ರ ಮಾಸದಲ್ಲಿ ದೇವಾಲಯವು ಅಪಾರ ಸಂಖ್ಯೆಯ ಭಕ್ತರನ್ನು ಕಂಡಿದೆ. ಶ್ರಾವಣ ತಿಂಗಳೊಂದರಲ್ಲೇ 1.6 ಕೋಟಿಗೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜುಲೈನಲ್ಲಿ 72 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರೆ, ಆಗಸ್ಟ್‌ನಲ್ಲಿ ಈ ಸಂಖ್ಯೆ 95.6 ಲಕ್ಷದಷ್ಟಿತ್ತು. ಜನವರಿ 2023 ರಿಂದ ಡಿಸೆಂಬರ್ ವರೆಗೆ ದೇವಾಲಯವು 5.3 ಕೋಟಿ ಜನರನ್ನು ಕಂಡಿತು. ಈ ಹಿಂದೆ ದೇವಾಲಯದ ವಿಸ್ತೀರ್ಣ ಕೇವಲ 3000 ಚದರ ಅಡಿ ಇತ್ತು. 2021 ರಲ್ಲಿ, ಇದನ್ನು ಸುಮಾರು 5 ಲಕ್ಷ ಚದರ ಅಡಿಗಳಿಗೆ ವಿಸ್ತರಿಸಲಾಯಿತು, ಇದು ದೇವಾಲಯದ…

Read More