Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಮೈಸೂರು : ಹುಲಿ ದಾಳಿಯಿಂದ ನಿನ್ನೆ ಮೈಸೂರಿನಲ್ಲಿ ರೈತರ ರಾಜಶೇಖರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಕಾರಕ್ಕೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಗ್ರಾಮಸ್ಥರು ಘೆರಾವ್ ಹಾಕಿರುವ ಘಟನೆ ನಡೆದಿದೆ. ಮೈಸೂರಿನ ಕೆಆರ್ ಆಸ್ಪತ್ರೆ ಶವಗಾರದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಮತನ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ ನಿನ್ನೆ ಹುಲಿದಾಳಿಯಿಂದ ರೈತ ರಾಜಶೇಖರ್ ಸಾವನಪ್ಪಿದ್ದ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಜಮೀನಿನಲ್ಲಿ ದನ ಮೆಯಿಸುವಾಗ ಹುಲಿ ದಾಳಿ ಮಾಡಿತ್ತು ಈ ವೇಳೆ ಸರಗೂರು ತಾಲೂಕಿನಲ್ಲಿಯೇ ಸಚಿವ ಈಶ್ವರ ಖಂಡ್ರೆ ಇದ್ದರು ಮೃತದೇಹವನ್ನು ತೆಗೆಯದೆ ಕುಟುಂಬಸ್ಥರು ಮತ್ತು ಜನರು ಪ್ರತಿಭಟಿಸಿದ್ದರು. ಇಂದು ಶವಗಾರದ ಬಳಿ ಸಚಿವ ಈಶ್ವರ ಖಂಡ್ರೆ ಆಗಮಿಸಿದ್ದಾರೆ. ಇವಳೆ ಗ್ರಾಮಸ್ಥರು ಈಶ್ವರ ಖಂಡ್ರೆ ಅವರನ್ನು ತಡೆದು ಘೇರಾವ್ ಪ್ರತಿಭಟನೆ ನಡೆಸಿದರು. ಇವಳೇ ರೈತರು ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು…
ಬೆಂಗಳೂರು : ಡಿಜೆ ಹಳ್ಳಿ ಇನ್ಸ್ಪೆಕ್ಟರ್ ಸುನಿಲ್ ವಿರುದ್ಧ ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ನನ್ನು ಸಸ್ಪೆಂಡ್ ಮಾಡಲಾಗಿದೆ ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದು ಇನ್ಸ್ಪೆಕ್ಟರ್ ಹಾಗೂ ಎ ಎಸ್ ಐ ವಿರುದ್ಧ ಪ್ರಕರಣ ದಾಖಲಾಗಿದ್ದು ಮಾಡಲಾಗಿದೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಹೇಳಿಕೆ ನೀಡಿದರು. ಕಳೆದ ಕೆಲವು ದಿನಗಳ ಹಿಂದೆ ಸಂತ್ರಸ್ತ ಮಹಿಳೆ ಡಿಜಿ ಕಚೇರಿಗೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಮನೆ ಹಾಗೂ ಹೋಟೆಲ್ಗೆ ಕರೆಸಿಕೊಂಡು ಇನ್ಸ್ಪೆಕ್ಟರ್ ಸುನಿಲ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಬ್ಯೂಟಿ ಪಾರ್ಲರ್ ಹಾಕಿ ಬಿಸಿನೆಸ್ ಮಾಡಲು ಹಣ ಕೊಡುತ್ತೇನೆ ಎಂದು ಹೇಳಿ ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸೆಗಿದ್ದಾರೆ. ಖಾಸಗಿ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ದೂರು…
ಮಂಡ್ಯ : ಮಂಡ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬಸ್ ರಿವರ್ಸ್ ತೆಗೆಯುವಾಗ ಅವಘಢ ನಡೆದಿದೆ. ಊಟ ಮಾಡುತ್ತ ಕುಳಿತಿದ್ದ ಮಹಿಳೆ ಮೇಲೆ ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದು, ಮತ್ತೊರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಂಡ್ಯದ ಕೆಆರ್‌ಎಸ್ ನಲ್ಲಿ ರಾತ್ರಿ ನಡೆದಿದೆ. ಕೇರಳ ಮೂಲದ ಕೌಸಲ್ಯ ಮೃತ ಮಹಿಳೆ ಎಂದು ತಿಳಿದುಬಂದಿದೆ. ಮಂಡ್ಯದ ಕೆಆರ್ ಎಸ್ ಗೆ ಪ್ರವಾಸಕ್ಕೆ ಬಂದಿದ್ದ ಕೌಸಲ್ಯ. ಕೆಆರ್‌ಎಸ್ ವೀಕ್ಷಣೆ ಬಳಿಕ ಪಾರ್ಕಿಂಗ್ ಬಳಿ ಕೌಸಲ್ಯ ಹಾಗ ನಾರಾಯಣಿ ಊಟ ಮಾಡ್ತಿದ್ದರು. ಈ ವೇಳೆ ಬಸ್ ಚಾಲಕ ಹಿಂದೆ ಇದ್ದ ಮಹಿಳೆಯರನ್ನ ಗಮನಿಸದೆ ರಿವರ್ಸ್ ತೆಗೆದುಕೊಂಡಿದ್ದಾನೆ. ಮಕ್ಕಳನ್ನ ಪ್ರವಾಸಕ್ಕೆ ಕರೆತಂದಿದ್ದ ಕೆರಳ ಮೂಲದ ಬಸ್ ಇದಾಗಿದ್ದು, ಬಸ್ ಗುದ್ದಿದ ಪರಿಣಾಮ ಕೌಸಲ್ಯ ಸಾವನನಪ್ಪಿದ್ದರೆ, ನಾರಾಯಣಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಓಂ ಅಂಜನೇಯಾಯ ವಿದ್ಯಮಹೆ – ಅಂಜನಾದೇವಿಯ ಪುತ್ರನಾದ ಹನುಮಂತನನ್ನು ನಾವು ಧ್ಯಾನಿಸುತ್ತೇವೆ. ವಾಯುಪುತ್ರಾಯ ಧೀಮಹಿ – ವಾಯುದೇವನ ಮಗನಾದ ಹನುಮಂತನಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತೇವೆ. ತನ್ನೋ ಹನುಮಾನ್ ಪ್ರಚೋದಯಾತ್ – ಆ ಮಹಾ ವೀರ ಹನುಮಂತ ನಮ್ಮ ಬುದ್ಧಿಯನ್ನು, ಶಕ್ತಿ, ಧೈರ್ಯವನ್ನು ಪ್ರೇರೇಪಿಸಲಿ. ಉಪಯೋಗ ಮತ್ತು ಪ್ರಯೋಜನಗಳು: 1. ಭಯ ನಿವಾರಣೆ – ಭೂತ, ಪ್ರೇತ, ದೆವ್ವ ಅಥವಾ ಅಶುಭ ಶಕ್ತಿಗಳಿಂದ ರಕ್ಷಣೆ ಪಡೆಯಲು ಈ ಮಂತ್ರ ಅತ್ಯಂತ ಪರಿಣಾಮಕಾರಿ. 2. ಶಕ್ತಿ ಮತ್ತು ಧೈರ್ಯ ವೃದ್ಧಿ – ಹನುಮಂತ ಶಕ್ತಿಯ ಸಂಕೇತ. ಈ ಮಂತ್ರ ಜಪ ಮಾಡಿದರೆ ದೈಹಿಕ ಮತ್ತು ಮಾನಸಿಕ ಶಕ್ತಿ ಎರಡೂ ಹೆಚ್ಚಾಗುತ್ತವೆ. 3. ಮನುಷ್ಯನ ಬುದ್ಧಿ, ಸ್ಮರಣೆ ಮತ್ತು ಏಕಾಗ್ರತೆ – ವಿದ್ಯಾರ್ಥಿಗಳು ಮತ್ತು ಪರೀಕ್ಷೆಗೆ ತಯಾರಿ ಮಾಡುವವರು ಈ ಮಂತ್ರವನ್ನು ಪ್ರತಿ ದಿನ 11 ಅಥವಾ 21 ಸಲ ಜಪಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ. 4. ಆತ್ಮವಿಶ್ವಾಸ ಮತ್ತು ಧೈರ್ಯ – ಜೀವನದ ಸಂಕಷ್ಟದಲ್ಲಿ ಆತ್ಮವಿಶ್ವಾಸ…
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ 31ರ ಒಳಗೆ ಧರ್ಮಸ್ಥಳ ಪ್ರಕರಣ ಸಂಪೂರ್ಣಗೊಳ್ಳುತ್ತದೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಜಿ ಪರಮೇಶ್ವರ್ ಮಹತ್ವದ ಸುಳಿವು ನೀಡಿದ್ದು, ಅಕ್ಟೋಬರ್ 31ರ ಒಳಗಾಗಿ ಸೊಸೈಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಧರ್ಮಸ್ಥಳ ವಿರುದ್ಧ ರೂಪಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ ನಲ್ಲಿ ಎಸ್ಐಟಿ ವರದಿ ನೀಡುವುದಾಗಿ ಹೇಳಿದೆ ಅಕ್ಟೋಬರ್ 31ರ ಒಳಗೆ ತನಿಖಾ ವರದಿ ಕೊಡಬಹುದು ಒಂದೆರಡು ದಿನ ಹಿಂದೆ ಮುಂದೆ ಆಗಬಹುದು ಅಷ್ಟೇ ಎಲ್ಲವನ್ನು ಸೇರಿಸಿ ಕೊಡಲು ಹೇಳಿದ್ದೇವೆ ಯಾವ ರೀತಿ ವರದಿ ಕೊಡುತ್ತಾರೆ ಅನ್ನುವುದು ನೋಡಬೇಕು ಅಂತ ಹೇಳಿದ್ದಾರೆ ಎಂದು ಜಿ ಪರಮೇಶ್ವರ್ ತಿಳಿಸಿದರು
ಬೆಂಗಳೂರು : ಕೆ.ಎಚ್ ಮುನಿಯಪ್ಪ ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ಮುನಿಯಪ್ಪ ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದು, ಆ ಮೂಲಕ ಗೃಹ ಸಚಿವ ಜಿ ಪರಮೇಶ್ವರ್ ಅವರು ರಾಜ್ಯದಲ್ಲಿ ಸಿಎಂ ಬದಲಾವಣೆ ನಡುವೆ ದಲಿತ ಸಿಎಂ ದಾಳ ಉರುಳಿ ಸಿದ್ಧ ಎನ್ನುವ ಕುತೂಹಲ ಹೆಚ್ಚಾಗಿದೆ. ಬೆಂಗಳೂರಲ್ಲಿ ಮಾತನಾಡಿದ ಅವರು, ತುಳಿತಕ್ಕೆ ಒಳಗಾಗಿರುವ ವರ್ಗಕ್ಕೆ ಆಡಳಿತ ಬೇಕಿದೆ. ಆ ವರ್ಗಕ್ಕೆ ಆಡಳಿತ ಸಿಗುತ್ತೆ ಎಂದರೆ ಸಂತೋಷ. ಆದರೆ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುನಿಯಪ್ಪ ಅವರು ಎರಡು ಬಾರಿ ಎಂಪಿ ಆಗಿದ್ದಾರೆ ಎರಡು ಬಾರಿ ಎಂಪಿಯಾಗಿರುವುದು ಸಾಮಾನ್ಯವಲ್ಲ. ಅವರು ಹಿರಿಯರಾಗಿದ್ದಾರೆ ಅವರು ಕೇಂದ್ರದಲ್ಲಿ ಕೂಡ ಸಚಿವರಾಗಿದ್ದರು. ಕೇಂದ್ರದಲ್ಲಿ ಸಚಿವರಾದ ಬಳಿಕ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಅವರು ಸಮರ್ಥರಿದ್ದು ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಹಾಗಾಗಿ ಅವರು ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ. ನಾವೆಲ್ಲ ಒಂದು ವರ್ಗಕ್ಕೆ…
ಹಾಸನ : ಮೂರು ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದರ ಹಿನ್ನೆಲೆಯಲ್ಲಿ ಟೈಲರ್ ಶಾಪ್ ಮಹಿಳೆಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಹಾಸನದಲ್ಲಿ ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿಗೆ ರಸ್ತೆಯಲ್ಲಿಯೇ ಮಹಿಳೆಯರು ಹಲ್ಲೆ ಮಾಡಿದ್ದಾರೆ. ಮಹಿಳೆಯರು ಹೇಮಾವತಿಯನ್ನು ಎಳೆದಾಡಿ ಥಳಿಸಿದ್ದಾರೆ. ಹೇಮಾವತಿ ವಿರುದ್ಧ ಸುಮಾರು 3 ಕೋಟಿಗು ಅಧಿಕ ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಚಿನ್ನಾಭರಣವನ್ನು ಅಡವಿಟ್ಟು ಗ್ರಾಹಕರು ಲಕ್ಷಾಂತರ ರೂಪಾಯಿ ಹಣ ಆಕೆಗೆ ಕೊಟ್ಟಿದ್ದಾರೆ. ಕೊಡಚಾದ್ರಿ ಚಿಟ್ಸ್ ನಲ್ಲಿ ಒಂದು ಕೋಟಿ ರೂಪಾಯಿ ಚೀಟಿ ಹಾಕಿದ್ದೇನೆ ಎಂದು ಎಲ್ಲರಿಗೂ ತೋರಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ. ಮಹಿಳಾ ಗ್ರಾಹಕರನ್ನೆ ಟಾರ್ಗೆಟ್ ಮಾಡಿ ವಂಚನೆ ಆರೋಪ ಕೇಳಿಬಂದಿಸದೆ. ಅಲ್ಲದೆ ಮಗಳನ್ನು ವಿದೇಶದಲ್ಲಿ ಇಂಜಿನಿಯರಿಂಗ್ ಓದಿಸುವುದಕ್ಕೆ ಸಾಲ ಮಾಡಿದ್ದಾರೆ ಒಂದು ಕೋಟಿ ಮನೆ ಖರೀದಿಸಿದ್ದೇನೆ ಎಂದು ಸಾಲ ಪಡೆದಿದ್ದ ಹೇಮಾವತಿ ಜ್ಯೋತಿ ಡ್ರೆಸ್ ಮೇಕರ್ಸ್ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದಳು. ಹಾಸನದ ಅರಳಿಪೇಟೆ…
ಬೆಂಗಳೂರು : ಲೋಕಾಯುಕ್ತ ಉಪಲೋಕಾಯುಕ್ತ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದು, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಲೋಕಾಯುಕ್ತ ಉಪಲೋಕಾಯುಕ್ತ ಹೆಸರಲ್ಲಿ ವಂಚಕರು ಗಾಳ ಹಾಕಿದ್ದಾರೆ. ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಹೆಸರು ನಮೂದಿಸಿ ಕಿಡಿಗೇಡಿಗಳು ಕರೆ ಮಾಡಿದ್ದಾರೆ. ಹೌದು ಬಿಬಿಎಂಪಿ AEE ಗೆ ಕರೆ ಮಾಡಿದ್ದಾರೆ ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಬಿ ಎಸ್ ಪಾಟೀಲ್ ಅಂತ ಹೆಸರು ಬಂದಿದೆ. ಉಪಲೋಕಾಯುಕ್ತ ಫನೀಂದ್ರ ಅವರ ಹೆಸರು ಕೂಡ ಬಂದಿದೆ. ಈ ವಿಚಾರವಾಗಿ ದೂರು ಸಹ ದಾಖಲಾಗಿದ್ದು, ಎರಡು ಬಾರಿ ಕರೆ ಮಾಡಿದರು ಬಿಬಿಎಂಪಿ AEE ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಲುಕಾಯುಕ್ತ ಕಚೇರಿಗೆ ತೆರಳಿದ್ದಾರೆ. ಸುಳ್ಳು ಕರೆ ಬಂದಿದ್ದರ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಇನ್ಸ್ಪೆಕ್ಟರ್ ರಿಂದ ದೂರು ದಾಖಲಾಗಿದ್ದು, ದೂರಿನ ಆಧಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಂಧ್ರಪ್ರದೇಶದಿಂದ ಕರೆ ಬಂದಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಯಾರು ಕರೆ ಮಾಡಿದ್ದಾರೆ ಎನ್ನುವುದರ ಕುರಿತು…
ಬೀದರ್ : ಸಾವು ಅನ್ನೋದು ಯಾವ ಸಮಯದಲ್ಲಿ ಹೇಗೆ ಬರುತ್ತೆ ಅಂತ ಹೇಳುವುದಕ್ಕೆ ಆಗಲ್ಲ ಆದರೆ ಬೀದರ್ನಲ್ಲಿ ಮನಕಲಕುವ ಒಂದು ಘಟನೆ ನಡೆದಿದ್ದು ಪತ್ನಿ ಸಾವನಪ್ಪಿದ 3 ಗಂಟೆಯ ಬಳಿಕ ಪತಿ ಸಹ ಸಾವನಪ್ಪಿದ್ದು ಇಬ್ಬರನ್ನು ಒಟ್ಟಿಗೆ ಅಂತ್ಯಕ್ರಿಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಡೆದಿದೆ. ಹೌದು ಗ್ರಾಮದ ಗುಂಡಪ್ಪ ಹೋಡಗೆ (85), ಲಕ್ಷ್ಮಿಬಾಯಿ ಹೋಡಗೆ (83) ಸಾವಿನಲ್ಲೂ ಒಂದಾದ ದಂಪತಿ ಎಂದು ತಿಳಿದುಬಂದಿದೆ. ಆರೇಳು ದಶಕ ಇಡೀ ಜೀವನವನ್ನು ಒಟ್ಟಿಗೆ ಕಳೆದಿದ್ದ ದಂಪತಿ ಒಂದೇ ದಿನ ಸಾವಿಗೀಡಾದ ಘಟನೆಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರಿದ್ದಾರೆ. ಸ್ವಗ್ರಾಮದ ಹೊಲದಲಿ ದಂಪತಿಗಳಿಬ್ಬರನ್ನು ಅಕ್ಕ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಂಪತಿಗಳಿಬ್ಬರು ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊದಲು ಲಕ್ಷ್ಮೀಬಾಯಿ ಹೋಡಗೆ ಅವರು ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಸಾವಿನ ಸುದ್ದಿ ವಿಷಯ ತಿಳಿದು ಮೂರು ಗಂಟೆ ನಂತರ…
SHOCKING : ಹಾಸನದಲ್ಲಿ ಭೀಕರ ಮರ್ಡರ್ : ಮಿಕ್ಸ್ಚರ್ ಕೊಡದಿದ್ದಕ್ಕೆ ಹೆಂಡತಿ, ಮಕ್ಕಳೆದುರೆ ಚಾಕು ಇರಿದು ಬರ್ಬರ ಹತ್ಯೆ!
ಹಾಸನ : ಹಾಸನದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಎಣ್ಣೆ ಹೊಡೆಯಲು ಮಿಕ್ಸ್ಚರ್ ಕೊಡೋದಕ್ಕೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾರ್ ಕ್ಯಾಶಿಯರಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಹೆಂಡತಿ ಮಕ್ಕಳ ಎದುರಿನಲ್ಲಿ ಇರಿದು ಕೊಲ್ಲಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಅಶೋಕ್ ವೈನ್ಸ್ ಬಾರ್ ಕ್ಯಾಷಿಯರ್ ಕೊಲೆಯಾದ ವ್ಯಕ್ತಿ. ಹಾಸನ ಮೂಲದ ಕುಮಾರ್ ಎಂದು ತಿಳಿದುಬಂದಿದೆ ಸುಭಾಷ್ ಕೊಲೆಗೈದು ಪರಾರಿಯಾಗಿದ್ದು, ಕುಮಾರ್ ಬಾರ್ ಬಾಗಿಲು ಮುಚ್ಚುವ ವೇಳೆ ಸುಭಾಷ್ ಕುಮಾರ್ ಗೆ ಚಾಕು ಇರಿದು ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾನೆ ಆರೋಪಿ ಸುಭಾಷ್ ಗೋಸ್ಕರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..














