Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಕಚೇರಿಯಲ್ಲಿಯೇ ಡೀಜಿಪಿ ರಾಮಚಂದ್ರ ರಾವ್ ಮಹಿಳೆಯರ ಜೊತೆಗೆ ಇರುವ ರಾಸಲೀಲೆ ವಿಡಿಯೋ ದೃಶ್ಯ ಇದೀಗ ವೈರಲ್ ಆಗಿದ್ದು ಭಾರಿ ಸಂಚಲನ ಸೃಷ್ಟಿಸಿದೆ ಇದರ ಬೆನ್ನಲ್ಲೇ ರಾಮಚಂದ್ರ ರಾವ್ ಅವರು ಇದೀಗ ಪರಮೇಶ್ವರ್ ಅವರನ್ನು ಭೇಟಿ ಆಗಿದ್ದಾರೆ. ಹೌದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಚ್ಚಿ ಬೀಳಿಸುವಂತ ವಿಡಿಯೋ ಇದೀಗ ವೈರಲ್ ಆಗಿದ್ದು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಆಗಿವೆ. ಕಚೇರಿಯಲ್ಲಿ ಮಹಿಳೆಯರನ್ನು ಖಾಕಿ ಸಮವಸ್ತ್ರದಲ್ಲಿಯೇ ತಮ್ಮ ಮೇಲೆ ಕೂರಿಸಿಕೊಂಡು ಅಪ್ಪಿ ಮುದ್ದಾಡುತ್ತಿರುವ ವಿಡಿಯೋ ವೈರಲಾಗಿದೆ. ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವೈರಲ್ ಆಗಿದೆ. ಒಂದು ವರ್ಷಗಳ ಹಿಂದೆಯೇ ಡೀಜಿಪಿ ರಾಸಲೀಲೆ ದೃಶ್ಯ ಸೆರೆಯಾಗಿತ್ತು. ನಟಿ ರನ್ಯಾರಾವ್ ಪ್ರಕರಣಕ್ಕಿಂತ ಮೊದಲು ಈ ಒಂದು ರಾಸಲೀಲೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಜಿಪಿ ರಾಮಚಂದ್ರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿಯೇ ಬಿಜೆಪಿ ರಾಮಚಂದ್ರ ರಾಸಲೀಲೇ ನಡೆಸಿದ್ದು ಕಚೇರಿಯಲ್ಲಿಯೇ ಕುಳಿತು ಸ್ತ್ರೀಯರಿಗೆ ಮುತ್ತಿಟ್ಟಿರುವ ವಿಡಿಯೋ ವೈರಲ್ ಆಗಿದೆ.…
ಉತ್ತರಪ್ರದೇಶ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಬಾಕ್ಸ್‌ವೊಂದಕ್ಕೆ ಹಾಕಿ ಬೆಂಕಿ ಇಟ್ಟಿರುವ ಘಟನೆ ನಡೆದಿದೆ. ಆರೋಪಿ ರಾಮ್ ಸಿಂಗ್ ಪರಿಹಾರ್‌ಗೆ ಇಬ್ಬರು ಹೆಂಡತಿಯರು. ಆತನ ಮಾಜಿ ಪತ್ನಿ ಸಿಪ್ರಿ ಬಜಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಎರಡನೇ ಪತ್ನಿ ಅದೇ ನಗರದ ಸಿಟಿ ಕೊಟ್ವಾಲಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಮಹಿಳೆಯ ದೇಹವನ್ನು ಸುಟ್ಟ ನಂತರ, ಪರಿಹಾರ್ ಬೂದಿಯನ್ನು ಚೀಲಗಳಲ್ಲಿ ಸಂಗ್ರಹಿಸಿ ಅಪರಾಧವನ್ನು ಮರೆಮಾಡಲು ನದಿಗೆ ಎಸೆದಿದ್ದ. ಆಕೆಯ ಉಳಿದ ಅವಶೇಷಗಳನ್ನು ಟ್ರಂಕ್‌ನಲ್ಲಿ ವಿಲೇವಾರಿ ಮಾಡಲು, ಅದನ್ನು ತನ್ನ ಪತ್ನಿ ಗೀತಾಳ ಮನೆಗೆ ಕಳುಹಿಸಲು ಸಂಚು ರೂಪಿಸಿದ್ದ. ಪರಿಹಾರ್ ತನ್ನ ಲಿವ್-ಇನ್ ಸಂಗಾತಿ ಪ್ರೀತಿಯನ್ನು ಕೊಲೆ ಮಾಡಿದ್ದಾನೆ. ಆಕೆ ತನ್ನಿಂದ ಭಾರಿ ಮೊತ್ತದ ಹಣವನ್ನು ಬೇಡಿಕೆ ಇಟ್ಟಿದ್ದಳು. ಹೀಗಾಗಿ, ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈಗಾಗಲೇ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡಿದ್ದಳು ಎಂದು ವಿಚಾರಣೆ ವೇಳೆ…
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಚ್ಚಿ ಬೆಳೆಸುವಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಆಗಿವೆ. ಕಚೇರಿಯಲ್ಲಿ ಮಹಿಳೆಯರನ್ನು ಖಾಕಿ ಸಮವಸ್ತ್ರದಲ್ಲಿಯೇ ತಮ್ಮ ಮೇಲೆ ಕೂರಿಸಿಕೊಂಡು ಅಪ್ಪಿ ಮುದ್ದಾಡುತ್ತಿರುವ ವಿಡಿಯೋ ವೈರಲಾಗಿದೆ. ಹೌದು ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವೈರಲ್ ಆಗಿದೆ. ಒಂದು ವರ್ಷಗಳ ಹಿಂದೆಯೇ ಡೀಜಿಪಿ ರಾಸಲೀಲೆ ದೃಶ್ಯ ಸೆರೆಯಾಗಿತ್ತು. ನಟಿ ರನ್ಯಾರಾವ್ ಪ್ರಕರಣಕ್ಕಿಂತ ಮೊದಲು ಈ ಒಂದು ರಾಸಲೀಲೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಜಿಪಿ ರಾಮಚಂದ್ರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿಯೇ ಬಿಜೆಪಿ ರಾಮಚಂದ್ರ ರಾಸಲೀಲೇ ನಡೆಸಿದ್ದು ಕಚೇರಿಯಲ್ಲಿಯೇ ಕುಳಿತು ಸ್ತ್ರೀಯರಿಗೆ ಮುತ್ತಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಕಚೇರಿಯಲಿಯೇ ಕುಳಿತು ಮಹಿಳೆಯರಿಗೆ ಮುತ್ತಿಟ್ಟಿರುವ ದೃಶ್ಯ ಸೆರೆಯಾಗಿದೆ. ಚೇರ್ ಮೇಲೆ ಕುಳಿತುಕೊಂಡು ಮಹಿಳೆಯನ್ನು ಅಪ್ಪಿಕೊಂಡಿದ್ದಾರೆ. ಸದ್ಯ ಈ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಚಾರವಾಗಿ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಶಿವಮೊಗ್ಗ : ಕಳೆದ ಜನೆವರಿ 7 ರಂದು ಸಿಎಂ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಎಂದು ದಾಖಲೆ ಬರೆದಿದ್ದಾರೆ. ಅಷ್ಟೆ ಅಲ್ಲದೇ ಮೇ ಮೊದಲ ಅಥವಾ ಎರಡನೇ ವಾರದಲ್ಲಿ 17ನೇ ಬಾರಿ ದಾಖಲೆ ಬಜೆಟ್ ಕೂಡ ಮಂಡನೆ ಮಾಡಲಿದ್ದಾರೆ.ಒಟ್ಟಾರೆಯಾಗಿ ದಾಖಲೆರಾಮಯ್ಯರಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದಾರೆ. ಇದೀಗ ಜನವರಿ 22ರಂದು ಕರೆದಿರುವ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಅಧಿವೇಶನವಿರಬಹುದು. ಈ ಅಧಿವೇಶನವನ್ನು ವಿದಾಯದ ಭಾಷಣವಾಗುವ ಸಾಧ್ಯತೆ ಇದೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪನವರು ಅಧಿವೇಶನ ಕರೆದಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ. 22ನೇ ತಾರೀಕಿನಿಂದ ಅಧಿವೇಶನ ಕರೆಯುತ್ತಿದ್ದಾರೆ. ಅವರು ಮಾಡುತ್ತಿರುವ ತರಾತುರಿ ನೋಡುತ್ತಿದ್ದರೆ ನನಗೆ ಅವರದು (ಸಿಎಂ ಸಿದ್ದರಾಮಯ್ಯ) ಇದು ಕೊನೆ ಅಧಿವೇಶನ ಅನ್ನಿಸಲು ಪ್ರಾರಂಭವಾಗುತ್ತಿದೆ. ಹೀಗಾಗಿ ಹೊಸ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ಅನಿಸುತ್ತದೆ. ಬರಲಿ, ಯಾರು ಬಂದರೂ ಇನ್ನು ಮುಂದೆಯಾದರೂ ಅಭಿವೃದ್ಧಿ ಮಾಡುವುದರ ಬಗ್ಗೆ ಯೋಚನೆ ಮಾಡಬೇಕು.
ಗದಗ : ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ಆಗಿರುವಾಗ ಚಿನ್ನ ಸಿಕ್ಕ ಬೆನ್ನಲ್ಲೆ, ರಾಜ್ಯ ಸರ್ಕಾರ ಇಡೀ ಗ್ರಾಮದಲ್ಲಿ ಉತ್ಖನನ ನಡೆಸಲು ನಿರ್ಧರಿಸಿದ್ದು ಇಂದು ನಾಲ್ಕನೇ ದಿನ ಉತ್ಪನನ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಅಲ್ಲಿಗೆ ಬಂದಂತಹ ಸ್ವಾಮೀಜಿ ಒಬ್ಬರು ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಿನ್ನದ ಚಾಮುಂಡೇಶ್ವರಿ ಮೂರ್ತಿ ಇದೆ ಎಂದು ಹೈಡ್ರಾಮ ಮಾಡಿದ್ದಾರೆ. ಲಕ್ಕುಂಡಿಯಲ್ಲಿ ನಾಲ್ಕನೇ ದಿನ ಉತ್ಖನ ಕಾರ್ಯ ಮುಂದುವರೆದಿದ್ದು, ಇದೆ ಸಂದರ್ಭದಲ್ಲಿ ಸ್ವಾಮೀಜಿ ಒಬ್ಬರು ಹೈಡ್ರಾಮಾ ಮಾಡಿದ್ದಾರೆ. ನಾನು ಪವಾಡ ಪುರುಷ ಅಂತ ಹೇಳಿಕೊಂಡು ಬಂದ ಸ್ವಾಮೀಜಿ ನಾನು ನಿಂತ ಜಾಗದಲ್ಲಿ ಮೈಸೂರು ಚಾಮುಂಡೇಶ್ವರಿ ಮೂರ್ತಿ ಇದೆ. ಸಾವಿರ ಕೆಜಿಯ ಚಾಮುಂಡಿ ಮೂರ್ತಿ ಇದೆ. ಬಂಗಾರ, ವಜ್ರ ಖಚಿತ ಮೂರ್ತಿ ಇದೆ. 10 ಅಡಿ ಆಳ ತೆಗೆದರೆ ಮೂರ್ತಿ ಸಿಗುತ್ತೆ. ನಾನು ರಾಣಿ ಚೆನ್ನಮ್ಮನ ವಂಶಸ್ಥ ಎಸ್.ಸಿ ಹಿರೇಮಠ ಅಂತ ಸ್ವಾಮೀಜಿ ಈ ಒಂದು ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರು : ಮುಂಬರುವ ಜಿಬಿಎ ಚುನಾವಣೆಗೆ ಈ ಬಾರಿ ಇವಿಎಂ ಮಷಿನ್ ಗೆ ಕೊಕ್ ನೀಡಲಾಗಿದ್ದು ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಈ ಬಾರಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಈವಿಎಂ ಬಳಕೆ ಮಾಡಲಾಗಿತ್ತು. ಹಾಗಾಗಿ ಮೇ 25 ರ ನಂತರ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ಈವಿಎಂ ಬಳಕೆಗೆ ಕೊಕ್ ನೀಡಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ನಮ್ಮದು ಸ್ವತಂತ್ರ ಸಂಸ್ಥೆ. ಇದು ನಮ್ಮದೇ ಸ್ವಂತ ನಿರ್ಧಾರ ಎಂದು ಚುನಾವಣಾ ಆಯೋಗ ತಿಳಿಸಿದೆ. ಇವಿಎಂ ಬ್ಯಾಲೆಟ್ ಪೇಪರ್ ಎರಡರಲ್ಲೂ ದೋಷವಿಲ್ಲ ಸುಪ್ರೀಂ ಕೋರ್ಟ್ ಬ್ಯಾಲೆಟ್ ಪೇಪರ್ ಬಳಸಬೇಡಿ ಎಂದಿಲ್ಲ ನಾವ್ಯಾಕೆ ಬ್ಯಾಲೆಟ್ ಪೇಪರ್ ಬಳಸಬಾರದು ಎಂದು ಚುನಾವಣಾ ಆಯೋಗ ಪ್ರಶ್ನಿಸಿದೆ.
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾರ್ ಲೈಸೆನ್ಸ್ ಗಾಗಿ ಬಾರ್ ಮಾಲೀಕರ ಬಳಿ ಅಬಕಾರಿ ಡಿಸಿ ಜಗದೀಶ್ ನಾಯಕ್ 75 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಈ ವೇಳೆ 25 ಲಕ್ಷ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬಕಾರಿ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಲೋಕಾಯುಕ್ತಕ್ಕೆ ಲಕ್ಷ್ಮೀನಾರಾಯಣ ಎಂಬವರು ದೂರು ನೀಡಿದ್ದಾರೆ. ಬಾರ್ ಪರವಾನಿಗೆ ನೀಡಲು ಲಂಚ ಕೇಳಿದ ಆರೋಪ ಹಿನ್ನೆಲೆಯಲ್ಲಿ ಸಚಿವ ತಿಮ್ಮಾಪುರ ವಿರುದ್ಧ ಲಕ್ಷ್ಮಿನಾರಾಯಣ ದೂರು ನೀಡಿದ್ದಾರೆ.
ದಾವಣಗೆರೆ : ಕಳೆದ ಕೆಲವು ತಿಂಗಳ ಹಿಂದೆ ಬೆಳಗಾವಿಯಲ್ಲಿರುವ ಕಿರು ಮೃಗಾಲಯದಲ್ಲಿ ನಿಗೂಢವಾಗಿ 25ಕ್ಕೂ ಹೆಚ್ಚು ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇದೀಗ ಚುಕ್ಕಿ ಜಿಂಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಆನಗೋಡು ಗ್ರಾಮದ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಡೆದಿದೆ. ಕಳೆದ ಮೂರೇ ದಿನದಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಸಾವನ್ನಪ್ಪಿದ್ದು, ಮೃಗಾಯಲದಲ್ಲಿ ಹೆಮರಾಜಿಕ್ ಸೆಫ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗ ಹರಡಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮೃಗಾಲಯದಲ್ಲಿ ಸದ್ಯ 170 ಚುಕ್ಕೆ ಜಿಂಕೆಗಳಿದ್ದು, ಅವುಗಳನ್ನು ಉಳಿಸಿಕೊಳ್ಳಲು ವೈದ್ಯರು ರೋಗನಿರೋಧಕ ಚಿಕಿತ್ಸೆ ಆರಂಭಿಸಿದ್ದಾರೆ. ಇನ್ನೂ ಚಿಕಿತ್ಸೆ ನಡೆಯುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ಹೇರಿದ್ದಾರೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪಿಯುಸಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಸಾನಾ ಕಾಲೇಜಿನ ಹಾಸ್ಟೆಲ್ ನಲ್ಲಿ ಅಯಾನ್ ಸುಂಕದ ಎನ್ನುವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಹುಬ್ಬಳ್ಳಿಯ ಭೈರಿದೇವರಕೊಪ್ಪ ಬಳಿ ಇರುವ ಕಾಲೇಜಿನಲ್ಲಿ ಮೃತದೇಹ ಪತ್ತೆಯಾಗಿದೆ. ಹಾಸ್ಟೆಲ್ ಮೂರನೇ ಮಹಡಿಯೇ ಕೆಳಗೆ ಅಯಾನ್ ಶವ ಪತ್ತೆಯಾಗಿದೆ. ಸೈನ್ಸ್ ವಿಭಾಗದಲ್ಲಿ ಅಯಾನ್ ಸುಂಕದ ಓದುತ್ತಿದ್ದ. ಎಂದು ಹೇಳಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕಮಲೂರು ಮೂಲದ ಆಯಾನ್ ಸುಂಕದೆಂದು ತಿಳಿದು ಬಂದಿದ್ದು, ಆತನ ಮೃತ ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬೆಂಗಳೂರು : ಕನ್ನಡದ ಅತ್ಯುನ್ನತ ರಿಯಾಲಿಟಿ ಶೋ ಗಳಲ್ಲಿ ಒಂದಾಗಿದ್ದ ಬಿಗ್ ಬಾಸ್ ಸೀಸನ್ 12 ಕ್ಕೆ ನಿನ್ನೆ ತೆರೆ ಬಿದ್ದಿದೆ. ಇವಂದು ಫಿನಾಲೆಯಲ್ಲಿ ಗಿಲ್ಲಿ ನಟ ವಿಜೇತರಾಗಿ ಹೊರಹೊಮ್ಮಿದ್ದು ಬಿಗ್ ಬಾಸ್ ಕಪ್ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನ ಕೂಡ ಗೆದ್ದಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಗಿಲ್ಲಿ ನಟ, ತುಂಬಾ ಖುಷಿ ಆಯ್ತು ನನಗೆ. ನಂಬೋಕೆ ಆಗ್ತಿಲ್ಲ. ಹೊರಗಡೆ ಬಂದ್ಮೇಲೆ ಇದೆಲ್ಲ ನಿಜನಾ ಅನ್ನಿಸ್ತಿದೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಆಶಯ ವ್ಯಕ್ತಪಡಿಸಿದರು. ದೊಡ್ಡಮ್ಮ ದೊಡ್ಡಮ್ಮ ದ್ವಾಸೆ ಕೊಡು ಹಾಡನ್ನ ಸ್ಕೂಲ್‌ಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು. ಆಮೇಲೆ ಇಷ್ಟು ಫೇಮಸ್ ಆಯ್ತು ಆ ಹಾಡು. ಮಕ್ಕಳಿಗೆಲ್ಲ ಇಷ್ಟ ಆಗಿದೆ ಅನ್ನೋದು ಆಚೆ ಬಂದ್ಮೇಲೆ ಗೊತ್ತಾಯ್ತು ಎಂದು ಖುಷಿ ವ್ಯಕ್ತಪಡಿಸಿದರು. ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು…














