ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಆಯೋಜಿಸಲಾಗಿತ್ತು. ಶ್ರೀರಾಂಪುರದಿಂದ ಉತ್ತನಹಳ್ಳಿವರೆಗೆ ರೋಡ್ ಶೋ ನಿಗದಿಯಾಗಿದ್ದ ಸಮಾರೋಪ ಸಮಾರಂಭಕ್ಕೆ ಪೂರ್ವದಲ್ಲಿ ನಡೆಯಬೇಕಾಗಿದ್ದ ರೋಡ್ ಶೋವನ್ನು ರದ್ದು ಮಾಡಲಾಗಿದೆ ಜೆಡಿಎಸ್ ವರಿಷ್ಠ ದೇವೇಗೌಡರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರೋದ್ರಿಂದ ತೆರೆದ ವಾಹನದಲ್ಲಿ ಸಂಚರಿಸುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆ ಈ ರೋಡ್ ಶೋ ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ವೇದಿಕೆಗೆ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಪೂರ್ವದಲ್ಲಿ ನಡೆಯಬೇಕಾಗಿದ್ದ ರೋಡ್ ಶೋ ನೇರವಾಗಿ ವೇದಿಕೆಗೆ ಬಂದು ಕುರ್ಚಿಯಲ್ಲಿ ಕುಳಿತು ಸಾರ್ವಜನಿಕರ ಜತೆ ಸಂವಾದ ನಡೆಸುವರು. ಮೈಸೂರಿನ ಶ್ರೀರಾಂಪುರದಿಂದ ಉತ್ತನಹಳ್ಳಿವರೆಗೆ ರೋಡ್ ಶೋ ನಿಗದಿಯಾಗಿತ್ತು. ರಿಂಗ್ ರಸ್ತೆಯಲ್ಲಿ ಸುಮಾರು 3 ಕಿ.ಮೀ. ತೆರೆದ ವಾಹನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಾಗುವರೆಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಹಿಂದಿನ ವೇಳಾಪಟ್ಟಿ ಪ್ರಕಾರ ಮೂರು ಗಂಟೆಗೆ ರೋಡ್ ಶೋ ನಡೆದು ಬಳಿಕ ನಾಲ್ಕು ಗಂಟೆಗೆ ಸಭಾ ಕಾರ್ಯಕ್ರಮ ನಿಗದಿ…
Author: kannadanewslive
ಕೊಪ್ಪಳ : ಜಿಲ್ಲೆ ಕುಷ್ಟಗಿ ಪಟ್ಟಣದ ದಿ ಕ್ರೈಸ್ತ ಕಿಂಗ್ ಶಾಲೆಯಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ಕ್ರೈಸ್ತ ಕಿಂಗ್ ಶಾಲೆಯಲ್ಲಿ ಪರೀಕ್ಷೆ ಬರೆಯಲು ತಾಲೂಕಿನ ತಳುವಗೆರಿ, ನಿಡಶೇಸಿ, ಹಿರೇಮನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯೋದಕ್ಕಾಗಿ ಬಂದಿದ್ದರು. ಈ ವೇಳೆ ಕಾಲೇಜಿನ ಆವರಣದಲ್ಲಿದ್ದ ಹೆಜ್ಜೇನುಗಳು ಎದ್ದು ದಾಳಿ ಮಕ್ಕಳ ಮೇಲೆ ಅಟ್ಯಾಕ್ ಮಾಡಿದ್ದು, ಅವರಲ್ಲಿ 10 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಕುಷ್ಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳೊಂದಿಗೆ ಬಂದಿರುವ ಪಾಲಕರ ಮೇಲೆಯೂ ದಾಳಿ ನಡೆಸಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಂಗಾಲಾಗಿ ಹೋಗಿದ್ದಾರೆ. ಸುತ್ತಮುತ್ತಲಿನ ಜನರಿಗೆ ಹಾಗೂ ಪೋಷಕರಿಗೆ ಶಾಕ್ ಆಗಿದ್ದು, ತಕ್ಷಮಾತ್ರದಲ್ಲಿ ಹೆಜ್ಜೇನುಗಳಿಂದ ತಪ್ಪಿಸಲು ದಿಕ್ಕಪಾಲಾಗಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. https://kannadanewsnow.com/kannada/indian-journalist-in-us-attacked-by-khalistan-supporters-outside-embassy/
ಬೆಂಗಳೂರು : ಇಂದು ಮತ್ತೆ ಬೆಂಗಳೂರಿನಲ್ಲಿ ಅಮಿತ್ ಷಾ ಆಗಮಿಸಿ ಸಂಚಲನ ಸೃಷ್ಟಿಸಲಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ಸಂಚಾರ ಮಾಡುವ ವಾಹನ ಸವಾರರು ಇಂದು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೀದರ್, ರಾಯಚೂರಿಗೆ ಭೇಟಿ ನೀಡಲಿದ್ದು. ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿ, ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಸಂಸ್ಥಾಪ ಕೆಂಪೇಗೌಡ ಮತ್ತು ಲಿಂಗಾಯತ ಸಮಾಜ ಸುಧಾರಕ ಬಸವೇಶ್ವರ ಸೇರಿದಂತೆ ಮೂರು ಪ್ರತಿಮೆಗಳನ್ನು ಅಮಿತ್ ಶಾ ಅನಾವರಣಗೊಳಿಸಲಿದ್ದಾರೆ. ಸಂಜೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ, ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿರುವ ಗುಜರಾತ್ ಸಮಾಜದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 6.30ಕ್ಕೆ ವಿಧಾನಸೌಧದ ಮುಂದೆ ನಿರ್ಮಿಸಿರುವ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ತದನಂತರ ಬೆಂಗಳೂರು ಹಬ್ಬ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ರಾತ್ರಿ 8.30ಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ, ಖಾಸಗಿ ಹೋಟೆಲ್ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.…
ಬೆಂಗಳೂರು :ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯ. ಕ್ಷೇತ್ರದ ಜನತೆಯ ಮನೆ ಮಗನಾಗಿ ಅವರ ಬೇಕು ಬೇಡಗಳನ್ನು ಚೆನ್ನಾಗಿ ಅರಿತಿದ್ದೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡುತ್ತಾ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದು ಕೆಂಪೇಗೌಡ ಉದ್ಯಾನವನವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಬಹಳ ಸಂತೋಷವಾಗಿದೆ. ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡ್ ನಲ್ಲಿ ನವೀಕರಿಸಲಾಗಿರುವ ಕೆಂಪೇಗೌಡ ಉದ್ಯಾನವನವನ್ನು ಇಂದು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ ಇಷ್ಟೇ ಅಲ್ಲದೇ ನನ್ನ ಕ್ಷೇತ್ರದಲ್ಲಿ ಆಸ್ಪತ್ರೆಗಳು, ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ಹೀಗೆ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಮ್ಮ ಕ್ಷೇತ್ರಕ್ಕೆ ಆಗಿದೆ. ಇಂದರಿಂದ ನನಗೆ ಬಹಳ ಸಂತಸವಾಗಿದೆ ಎಂದು…
ಬೆಂಗಳೂರು : ಗೋವಿಂದರಾಜನಗರದಲ್ಲಿ ಮದ್ಯದ ಅಮಲಿನಲ್ಲಿ ಭವಿಷ್ಯ ಹೇಳುತ್ತಿದ್ದ ಸ್ನೇಹಿತನಿಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ ಮಾರಿಮುತ್ತು ಹನ್ನೊಂದು ವರ್ಷದವನಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ ಇದೀಗ ಮತ್ತೊಂದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮಾರಿಮುತ್ತು ವಿಚಿತ್ರ ಮನಸ್ಥಿತಿಯವನಾಗಿದ್ದು, ನರೇಶ್ ಮತ್ತು ಮಾರಿಮುತ್ತು ಸ್ನೇಹಿತರಾಗಿದ್ದು, ಇವರು ಸ್ಥಳೀಯ ಬಾರ್ ಕುಡಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ನರೇಶ್ ಎಂಬ ಸ್ನೇಹಿತನ ಕೈಯನ್ನು ಭವಿಷ್ಯ ನೋಡಿ ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ ಎಂದು ವ್ಯಂಗ್ಯವಾಡಿದ್ದಾನೆ. ಇದಕ್ಕೆ ಸಿಟ್ಟಿಗೆದ್ದು ಮಾರಿಮುತ್ತು & ನರೇಶ್ ಬಾರ್ ಒಳಗಡೆ ಪರಸ್ಪರ ಗಲಾಟೆ, ಹೊಡೆದಾಡಿಕೊಂಡಿದ್ದಾರೆ. ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆ ಸಂಬಂಧಿ ನರೇಶ್ ಪತ್ನಿಯ ದೂರು ನೀಡಿದರು. ಬಳಿಕ ಕೇಸ್ ದಾಖಲಿಸಿಕೊಂಡಿದ್ದರು. ಬಳಿಕ 24 ಗಂಟೆಯಲ್ಲಿ ಹತ್ಯೆಗೈದಿದ್ದು ಮಾರಿಮುತ್ತು ಎಂಬಾತ ಸ್ನೇಹಿತನನ್ನು ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ. https://kannadanewsnow.com/kannada/deadly-wheeling-of-miscreants-in-bengaluru-arrested-for-sharing-video/
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗ್ಳೂರಲ್ಲಿ ನಿಲ್ಲದ ಪುಂಡರ ಡೆಡ್ಲಿ ವ್ಹೀಲಿಂಗ್ ಹಾವಳಿ ಹೆಚ್ಚಾಗಿದ್ದು, ವಿಡಿಯೋ ಶೇರ್ ಮಾಡಿ ಸಿಕ್ಕಿಬಿದ್ದು ಬಂಧಿಸಲಾದ ಘಟನೆ ಬೆಳಕಿಗೆ ಬಂದಿದೆ. ಐಟಿ ಸಿಟಿ ಬೆಂಗಳೂರಲ್ಲಿ ಸದಾ ಜನಜಂಗುಲಿ ಇದ್ದೇ ಇರುತ್ತದೆ. ಈ ನಡುವೆ ರಸ್ತೆಯುದ್ದಕ್ಕೂ ಭಾರೀ ವೇಗವಾಗಿ ವಾಹನಗಳ ಸಂಚರಿಸುವ ಮಧ್ಯೆ ಪುಂಡರು ವ್ಹೀಲಿಂಗ್ ಹರಸಾಹಸ ಮುಂದುವರಿದಿದೆ. ಕೆಐಎಎಲ್ ಏರ್ಪೋರ್ಟ್ ರಸ್ತೆ ಹಾಗೂ ಹೊಸೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಸೆಲೆಬ್ರೆಷನ್ ಮಾಡುತ್ತಿದ್ದರು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಿಕ್ಕಜಾಲ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ವ್ಹೀಲಿಂಗ್ ಮಾಡಿದ ವ್ಯಕ್ತಿಯನ್ನ ಪೊಲೀಸರು ಪತ್ತೆ ಹಚ್ಚಿ ಬೈಕ್ನ್ನ ಜಪ್ತಿ ಮಾಡಿದಲ್ಲದೇ ಫುಲ್ ಕ್ಲಾಸ್ ತೆಗೆದು ಬಂಧಿಸಲಾಗಿದೆ ಎಂದು ವರದಿಯಾಗಿದೆ. https://kannadanewsnow.com/kannada/jds-pancharatna-rath-yatra-in-mysuru-this-evening-hd-deve-gowda-gets-special-crown-from-fans/
ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆ(Karnataka Election)ಗಾಗಿ ಮತದಾರರ ಸೆಳೆಯೋದಕ್ಕೆ ರಾಜ್ಯದೆಲ್ಲೆಡೆ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಈ ಬೆನ್ನಲ್ಲೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ವಾಹನಗಳ ತಪಾಸನೆಯಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳು ಮತದಾರರಿಗಾಗಿ ಕುಕ್ಕರ್, ಸೀರೆ, ಹಣ, ಹಂಚೋದಕ್ಕೆ ಮುಂದಾಗಿದ್ದಾರೆ. ಇದನ್ನು ಮನಗಂಡ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ʼಶನಿವಾರ ರಾತ್ರಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿಬ್ಯಾರಿಕೇಡ್ ಹಾಕಿ ಬೈಕ್, ಕಾರು, ಆಟೋ, ಲಾರಿ ಸೇರಿದಂತೆ ಎಲ್ಲಾ ವಾಹನಗಳ ತಪಾಸನೆಯಲ್ಲಿ ತೊಡಗಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ದಿನವೇ ಎಸ್‌ಜೆ ಪಾರ್ಕ್ ಪೊಲೀಸರಿಂದ ದಾಖಲೆಯಿಲ್ಲದ ಹತ್ತು ಕೆಜಿ ಬೆಳ್ಳಿ ವಸ್ತುಗಳು ವಶಕ್ಕೆ ಪೊಲೀಸರು ಪಡೆದಿದ್ದಾರೆ ಎಂದು ವರದಿಯಾಗಿದೆ. ಚುನಾವಣೆ ಅಧಿಕಾರಿಗಳು ಸಭೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿಗಳಿಗೆ ಹಣ, ವಸ್ತುಗಳು ಸಾಗಾಟ ಮಾಡಿದರೆ ಸೂಕ್ತ ದಾಖಲೆ ನೀಡಬೇಕಾಗುತ್ತದೆ ದಾಖಲೆಯಿಲ್ಲ ವಸ್ತುಗಳು ಪತ್ತೆಯಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈ ಹಿಂದೆಯೇ ಸೂಚನೆ ನೀಡಿದ್ದರು. https://kannadanewsnow.com/kannada/jds-pancharatna-rath-yatra-in-mysuru-this-evening-hd-deve-gowda-gets-special-crown-from-fans/
ನವದೆಹಲಿ : ಎಚ್ 3 ಎನ್ 2 ಜ್ವರವು ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಎಚ್ 3 ಎನ್ 2 ಇನ್ ಫ್ಲುಯೆಂಝಾ ಇನ್ ಫ್ಲುಯೆಂಝಾ ಎ ವೈರಸ್ ಇದು ವಯಸ್ಕರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿಯೂ ದ್ವಿಗುಣಗೊಳ್ಳುವ ಪರಿಸ್ಥಿತಿ ಇದೆ. ವರದಿಯ ಪ್ರಕಾರ, ಎಚ್ 3 ಎನ್ 2 ಇನ್ ಫ್ಲುಯೆಂಝಾ ವೈರಸ್ ಸೋಂಕಿಗೆ ಒಳಗಾದ ಮಕ್ಕಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ವೈರಸ್ ಮಕ್ಕಳಲ್ಲಿ ಸಾಕಷ್ಟು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಈ ರೋಗವು ಮಕ್ಕಳಿಗೆ ಬಹಳ ಕಷ್ಟಕರ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ದೆಹಲಿ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಎಚ್ 3 ಎನ್ 2 ಇನ್ ಫ್ಲುಯೆಂಝಾ ಸೋಂಕಿಗೆ ಒಳಗಾದ ಹಲವಾರು ಮಕ್ಕಳನ್ನು ಐಸಿಯುಗೆ ದಾಖಲಿಸಲಾಗಿದೆ. ಮಕ್ಕಳಲ್ಲಿ ಕಂಡುಬರುವ ಪ್ರಮುಖ ಲಕ್ಷಣಗಳೆಂದರೆ ಶೀತ, ಕೆಮ್ಮು, ಜ್ವರ, ಮೂಗು ಸೋರುವಿಕೆ, ಮೂಗು ಸೋರುವಿಕೆ, ಮೂಗು ಸೋರುವಿಕೆ, ದೇಹದ ನೋವು, ಗಂಟಲು ನೋವು, ಎದೆ ನೋವು, ಉಸಿರಾಟದ ತೊಂದರೆ, ಅತಿಸಾರ, ತಲೆನೋವು, ವಾಂತಿ, ನಿರ್ಜಲೀಕರಣ, ಆಲಸ್ಯ, ದೌರ್ಬಲ್ಯ, ಸೀನುವಿಕೆ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಹೆಚ್ಚಿನ ವಿಷಯವನ್ನು ಬಳಕೆದಾರರು ವೀಡಿಯೊ ಸ್ವರೂಪದಲ್ಲಿ ನೋಡಿ ತಿಳಿದುಕೊಳ್ಳುತ್ತಾರೆ. ಇದಕ್ಕಾಗಿ, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಂತಹ ಅನೇಕ ಅಪ್ಲಿಕೇಶನ್ಗಳು ಲಭ್ಯವಿದೆ. ನಿರಂತರವಾಗಿ ವೀಡಿಯೊಗಳನ್ನು ನೋಡುವಾಗ ಅನೇಕ ಬಾರಿ ಇಂಟರ್ನೆಟ್ ಬಹುಬೇಗಾನೆ ಮುಗಿಯುತ್ತದೆ .ಇದೀಗ ಯೂಟ್ಯೂಬ್ ಮೂಲಕ ಹೆಚ್ಚಿನ ವೀಡಿಯೊಗಳನ್ನು ವೀಕ್ಷಿಸುವವರಿಗೆ ಈ ಸುದ್ದಿ ಸೂಕ್ತವಾಗಿದೆ. ನೀವು ಇಂಟರ್ನೆಟ್ನಿಂದ ಒಂದೇ ವೀಡಿಯೊವನ್ನು ಮತ್ತೆ ಮತ್ತೆ ನೋಡುತ್ತಿದ್ದರೆ, ಅದನ್ನು ಡೌನ್ಲೋಡ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಯೂಟ್ಯೂಬ್ ನಿಂದ ಫೋನ್ ಗೆ ವೀಡಿಯೊಗಳನ್ನು ಡೌನ್ ಲೋಡ್ ಮಾಡುವುದು ಸ್ವಲ್ಪ ಕಷ್ಟವಾದರೂ, ನಿಮ್ಮ ಇಂಟರ್ನೆಟ್ ಅನ್ನು ಬಹಳಷ್ಟು ಉಳಿಸುವ ಮಾರ್ಗ ಇಲ್ಲಿದೆ. ಇಂಟರ್ನೆಟ್ ಇಲ್ಲದೆ ವೀಡಿಯೊಗಳನ್ನು ವೀಕ್ಷಿಸಿ ವೀಡಿಯೊಗಳನ್ನು ವೀಕ್ಷಿಸಲು ನೀವು ಐಒಎಸ್ ಅಥವಾ ಆಂಡ್ರಾಯ್ಡ್ ಫೋನ್ ಅನ್ನು ಬಳಸಿದರೆ, ಈ ವಿಧಾನವು ನಿಮ್ಮ ಇಂಟರ್ನೆಟ್ ಅನ್ನು ಸಾಕಷ್ಟು ಉಳಿಸುತ್ತದೆ. ವೀಡಿಯೊವನ್ನು ಡೌನ್ಲೋಡ್ ಮಾಡಲು, ಮೊದಲು ನೀವು ಯೂಟ್ಯೂಬ್ ಅಪ್ಲಿಕೇಶನ್ಗೆ ಹೋಗಬೇಕು. ಇದರ ನಂತರ, ನೀವು ನಿಮ್ಮ ನೆಚ್ಚಿನ ವೀಡಿಯೊವನ್ನು ಹುಡುಕಬೇಕು. ಪ್ರತಿ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕರೋನವೈರಸ್ ಸಾಂಕ್ರಾಮಿಕ ರೋಗದ ಭಯದಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಜೊತೆಗೆ ಆರೋಗ್ಯಕರ ಆಹಾರ. ತಾಜಾ ಆಹಾರವನ್ನು ಮಾತ್ರ ತಿನ್ನಲು ಆದ್ಯತೆ ನೀಡಿದ್ದಾರೆ. ರಾತ್ರಿ ಉಳಿದ ಆಹಾರಗಳು, ರಾತ್ರಿ ತಯಾರಿಸಿದ ಪಲ್ಯಗಳು, ರೊಟ್ಟಿಗಳು ಇತ್ಯಾದಿಗಳನ್ನು ಪಕ್ಕಕ್ಕೆ ಇಡಲಾಗುತ್ತದೆ. ಹೆಚ್ಚಿನ ಬಿಸಿ ಆಹಾರಗಳು ಮತ್ತು ತಾಜಾ ಹಣ್ಣುಗಳಿಗೆ ಆದ್ಯತೆ ನೀಡಲಾಗುತ್ತದೆ. ಆದಾಗ್ಯೂ, ಶೀತ ರೊಟ್ಟಿಗಳು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿಯಲ್ಲಿ ತಯಾರಿಸಿದ ಚಪಾತಿಗಳು ಉಳಿದರೆ, ಅವುಗಳನ್ನು ಬೆಳಿಗ್ಗೆ ಉಪಾಹಾರವಾಗಿ ತೆಗೆದುಕೊಳ್ಳಬಹುದು. ವಿಶೇಷವಾಗಿ ಮಧುಮೇಹಿಗಳಿಗೆ, ಅಂತಹ ಚಡ್ಡಿ ಚಪಾತಿಗಳನ್ನು ತಮ್ಮ ಆಹಾರದಲ್ಲಿ ಸೇರಿಸುವುದರಿಂದ ಅದ್ಭುತ ಪ್ರಯೋಜನಗಳಿವೆ. ಬೆಳಿಗ್ಗೆ ಆ ಚಪಾತಿಗಳನ್ನು ಚಹಾ ಅಥವಾ ಯಾವುದೇ ಉತ್ತಮ ಸಲಾಡ್ ಮತ್ತು ಕರಿಯೊಂದಿಗೆ ಸೇವಿಸುವುದರಿಂದ ಸಕ್ಕರೆ ಪೀಡಿತ ರೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ತಯಾರಿಸಿದ ಚಪಾತಿಗಳು.. ಬೆಳಿಗ್ಗೆ, ಪೋಷಕಾಂಶ ಇಲ್ಲದೇ ಇರೋದಿಲ್ಲ, ಅವುಗಳಲ್ಲಿರುವ ಪೋಷಕಾಂಶಗಳು ಒಂದೇ ಆಗಿರುತ್ತವೆ. ಅದಕ್ಕಾಗಿಯೇ…