ಕೆಎನ್ಎನ್ಡಿಜಿಟಲ್ಡೆಸ್ಕ್: ಬೆವರಿನ ಕಿರಿಕಿರಿ ಬಹಳ ಜೋರು. ಇದರಿಂದ ಪಾರಾಗುವುದು ಹೇಗೆ ಅನ್ನುವುದೇ ಹೆಚ್ಚಿನವರ ಪ್ರಶ್ನೆ. ಬೆವರು ಸುರಿದು ಅಸಹ್ಯ ವಾಗುತ್ತಿದ್ಯಾ..? ಅದಕ್ಕೆ ಮನೆ ಮದ್ದು ಮಾಡಿ ನೋಡಿ. ಬೇಕಿಂಗ್ ಸೋಡವನ್ನು ಕಂಕುಳ ಕೆಳಗೆ ಹಾಗೂ ಅತಿ ಹೆಚ್ಚು ಬೆವರು ಸುರಿಯುವ ದೇಹದ ಭಾಗಗಳಿಗೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ. ಬೆಳಗ್ಗೆ ಯಥಾವತ್ ಸ್ನಾನ ಮಾಡಿ. ಇದರಿಂದ ಆ ಭಾಗದಲ್ಲಿ ಬೆವರು ಹರಿದು ಕೆಟ್ಟ ವಾಸನೆ ಬರುವುದು ತಪ್ಪುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ದೇಹದಲ್ಲಿ ಬೆವರಿನಿಂದ ಉಂಟಾಗುವ ಕೆಟ್ಟ ವಾಸನೆ ಹೋಗಲಾಡಿಸುತ್ತದೆ. ಬ್ಲ್ಯಾಕ್ ಟೀ ಹೆಚ್ಚು ಬೆವರುವ ದೇಹದ ಭಾಗಕ್ಕೆ ಬ್ಲಾಕ್ ಟಿಯನ್ನು ಹತ್ತಿಯಲ್ಲಿ ಅದ್ದಿಕೊಂಡು ಹಚ್ಚಿಕೊಳ್ಳಿ. ಇನ್ನು ಅಲೋವೆರಾ ದೇಹಕ್ಕೆ ತಂಪು ಬೆವರುವ ಭಾಗಕ್ಕೆ ಅಲೊವೇರಾ ಜೆಲ್ ಹಚ್ಚಿಕೊಂಡರೆ ಬೆವರು ಕಡಿಮೆಯಾಗುವುದಲ್ಲದೆ ದೇಹವನ್ನು ಕೂಲ್ ಆಗಿ ಇಡುತ್ತದೆ.