ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಡಿದಿದ್ದಾರೆ. ಪಂಚಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡದ್ದಕ್ಕೆ ಮತ್ತೆ ಗುಡುಗಿದ್ದಾರೆ. ಆಗಸ್ಟ್ 22 ಸರ್ಕಾರಕ್ಕೆ ಕೊನೆಯ ಡೆಡ್ ಲೈನ್ ನೀಡಿದ್ದು, ಒಂದು ವೇಳೆ 2ಎ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯಕ್ಕೆ ಕಲ್ಪಿಸದೇ ಇದ್ದರೇ ಸಿಎಂ ಮನೆ ಮುಂದೆ ತಾವೇ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.
BIG NEWS: ರಾಜ್ಯದ ‘ಸರ್ಕಾರಿ ಜಮೀನು’ಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದ ‘ರೈತ’ರಿಗೆ ಗುಡ್ ನ್ಯೂಸ್
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಗಸ್ಟ್ 22 ಡೆಡ್ ಲೈನ್. ಆಗಿಲ್ಲ ಅಂದ್ರೆ ನಾನೇ ಸಿಎಂ ಬೊಮ್ಮಾಯಿ ಮನೆ ಮುಂದೆ ನಾನು ಪ್ರತಿಭಟನೆಗೆ ಕುಳ್ಳುತ್ತೇನೆ. ಬೊಮ್ಮಾಯಿ ಸಕಾರಾತ್ಮಕವಾಗಿ ಇದ್ದಾರೆ. ಆಗಸ್ಟ್ 22ಕ್ಕೆ ಪ್ರತಿಭಟನೆ ಮುಂದುಡಿದ್ದೇವೆ. ಬೆಂಗಳೂರಲ್ಲಿ ಆಗಸ್ಟ್ 23ಕ್ಕೆ ಅಭಿನಂದನೆ ಸಮಾರಂಭ ಆಗಿರಬೇಕು. ಇಲ್ಲ ಬೇರೆ ಎನಾದರೂ ಆಗಿರುತ್ತೆ ಎಂದರು.
BIG NEWS: ಶೀಘ್ರವೇ ಪಂಚಮಸಾಲಿ ಸಮುದಾಯದವರಿಗೆ ಸಿಹಿಸುದ್ದಿ ಸಿಗಲಿದೆ – ಸಚಿವ ಸಿಸಿ ಪಾಟೀಲ್
ಬೊಮ್ಮಾಯಿ ಹಾಗೂ ಸಿ.ಸಿ ಪಾಟೀಲ್ ಮೇಲೆ ಭರವಸೆ ಇದೆ. ಸರ್ಕಾರದ ಪರವಾಗಿ ಸಿಸಿ ಪಾಟೀಲ್ ಇದಾರೆ, ಸಮುದಾಯದ ಪರವಾಗಿ ನಾನು ಇದ್ದೇನೆ. ನಮ್ಮ ಪರಿವಾರ ಇದೆ. 2ಎ ಮೀಸಲಾತಿ ಸಿಗುವವರೆಗೂ ನಾನು ಸರ್ಕಾರಿ ಹುದ್ದೆ ಏರಲ್ಲ ಎಂದರು.
ಶಿವಮೊಗ್ಗ: ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸರ್ಕಾರದ ಎರಡು ತಿಂಗಳ ಟೈಮ್ ಕೇಳಿದೆ. ಎರಡು ತಿಂಗಳೊಗೆ ಆಗಿಲ್ಲ ಎಂದ್ರೆ ಮತ್ತೆ ಪ್ರತಿಭಟನೆ ಮಾಡ್ತೇವೆ. ಸ್ವಾತಂತ್ರ್ಯ ಒಂದೇ ಸಾರಿ ಬಂತಾ. ಸಾಕಷ್ಟು ಬಾರಿ ಹೋರಾಟ ಮಾಡಿದಾಗಲೇ ಬಂದಿದೆ. ಪ್ರತಿಭಟನೆ ,ಹಾರಾಟ, ಹೋರಾಟ, ಮುಖ ಸವರೋದು, ಮಾಡಬೇಕಾಗುತ್ತದೆ. ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಒಂದೇ ಬಾರಿಗೆ ಕೊಟ್ಟು ಬಿಡುತ್ತಾರಾ. ಕಾಯುತ್ತೇವೆ.. ಕೊಡಲಿಲ್ಲ ಎಂದರೆ ಮತ್ತೊಮ್ಮೆ ಹೋರಾಟ ಮಾಡ್ತೇವೆ ಎಂಬುದಾಗಿ ಗುಡುಗಿದರು.