ರಾಜ್ಯದ ಜನತೆ ಗಮನಕ್ಕೆ: ಆ.16ರಿಂದ ಸಾರ್ವಜನಿಕರಿಗೆ ‘ರಾಜಭವನ’ ವೀಕ್ಷಣೆಗೆ ಅವಕಾಶ

ಬೆಂಗಳೂರು: ಸಾರ್ವಜನಿಕರಿಗೆ ಆಗಸ್ಟ್.16ರಿಂದ ರಾಜಭವನ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಸಾರ್ವಜನಿಕರು ತಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.16ರಿಂದ 18ರವರೆಗೆ ಒಟ್ಟು ಮೂರು ದಿನಗಳ ಕಾಲ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಮೂರೂ ದಿನ ಸಂಜೆ 6ರಿಂದ 7.30ರವರೆಗೆ ರಾಜಭವನ ವೀಕ್ಷಿಸಬಹುದು. ಸಾರ್ವಜನಿಕರು ಸರಕಾರದಿಂದ ವಿತರಿಸಿದ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ರಾಜಭವನ ಪ್ರವೇಶದ … Continue reading ರಾಜ್ಯದ ಜನತೆ ಗಮನಕ್ಕೆ: ಆ.16ರಿಂದ ಸಾರ್ವಜನಿಕರಿಗೆ ‘ರಾಜಭವನ’ ವೀಕ್ಷಣೆಗೆ ಅವಕಾಶ