ಮಡಿಕೇರಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸ್ಥೆ ಎಪಿಡಿಮಿಯಲಾಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ‘ಯುವ ಸ್ಪಂದನ’ ಯೋಜನೆ-ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆ ಒದಗಿಸಲು ಹಾಗೂ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನದಡಿಯಲ್ಲಿ ಕಚೇರಿ ಕೆಲಸಕ್ಕೆ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
21 ರಿಂದ 35 ವರ್ಷದೊಳಗಿನ ಪದವಿ ಹಾಗೂ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ, ಕನ್ನಡವನ್ನು ಬರೆಯುವ ಹಾಗೂ ಸ್ಪಷ್ಟವಾಗಿ ಮಾತನಾಡುವ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು, ಉತ್ತಮ ಅಂರ್ತವ್ಯಕ್ತಿತ್ವ, ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯವನ್ನು ಹೊಂದಿರುವ, ಕೊಡಗು ಜಿಲ್ಲೆಯಲ್ಲಿ ಪ್ರಯಾಣಿಸುವಂತಹ, ಸೇವಾ ಮನೋಭಾವ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳು ಮತ್ತು ಅಂಕಪಟ್ಟಿಗಳೊಂದಿಗೆ ಮೇ, 31 ರಂದು ನೇರ ಸಂದರ್ಶನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಡಿಕೇರಿ ಇಲ್ಲಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಕೊಡಗು, ದೂ.ಸಂ.08272-229985 ಹಾಗೂ 8272-220986 ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.
BREAKING NEWS : ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಯು.ಆರ್.ಸಭಾಪತಿ ಇನ್ನಿಲ್ಲ |UR Sabhapati No More
BREAKING NEWS : ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಯು.ಆರ್.ಸಭಾಪತಿ ಇನ್ನಿಲ್ಲ |UR Sabhapati No More