ನವದೆಹಲಿ: ಎಟಿಎಂಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳಲ್ಲಿ ( Debit and Credit Card ) ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ಮೀರಿದರೆ, ಎಟಿಎಂಗಳ ಮೇಲಿ ನಗದು ಹಿಂಪಡೆಯುವ ಶುಲ್ಕಗಳು ( withdrawal charges on ATMs ) ಜನವರಿ 1, 2022ರಿಂದ ಹೆಚ್ಚಳವಾಗುವ ಮೂಲಕ, ಬ್ಯಾಂಕ್ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಇಂದು, ನಾಳೆ ರಾಜ್ಯದಲ್ಲಿ ಸಾಧಾರಣ ಮಳೆ ಮುನ್ಸೂಚನೆ : ಹವಾಮಾನ ಇಲಾಖೆಯಿಂದ ಮುನ್ಸೂಚನೆ
ಈ ಬಗ್ಗೆ ಮಾಹಿತಿ ಪ್ರಕಟಿಸಿರುವಂತ ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank of India – RBI ), ಬಳಕೆದಾರರಿಗೆ ಉಚಿತ ಮಾಸಿಕ ಅನುಮತಿಮಿತಿಯನ್ನು ಮೀರಿ ನಗದು ಮತ್ತು ನಗದು ರಹಿತ ಎಟಿಎಂ ವಹಿವಾಟುಗಳ ಶುಲ್ಕವನ್ನು ( cash and non-cash ATM transactions ) ಹೆಚ್ಚಿಸಲು ದೇಶದ ಬ್ಯಾಂಕುಗಳಿಗೆ ಈಗ ಅನುಮತಿ ನೀಡಲಾಗಿದೆ. ದರಗಳಲ್ಲಿನ ಈ ಬದಲಾವಣೆಯು ಜನವರಿ 1, 2022ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಆರ್ ಬಿಐ, ಈ ಹಿಂದೆ ಹೊರಡಿಸಿದ ಸುತ್ತೋಲೆಯಲ್ಲಿ, ಹೆಚ್ಚಿನ ವಿನಿಮಯ ಶುಲ್ಕವನ್ನು ಬ್ಯಾಂಕುಗಳಿಗೆ ಸರಿದೂಗಿಸಲು ಮತ್ತು ವೆಚ್ಚಗಳಲ್ಲಿ ಸಾಮಾನ್ಯ ಹೆಚ್ಚಳವನ್ನು ಗಮನಿಸಿದರೆ, ಪ್ರತಿ ವಹಿವಾಟಿಗೆ ಗ್ರಾಹಕರ ಶುಲ್ಕವನ್ನು 21 ರೂ.ಗಳಿಗೆ ಹೆಚ್ಚಿಸಲು ಅವರಿಗೆ ಅನುಮತಿ ನೀಡಲಾಗಿದೆ. ಈ ಹೆಚ್ಚಳವು ಜನವರಿ 1, 2022 ರಿಂದ ಜಾರಿಗೆ ಬಂದಲಿದೆ ಎಂದು ತಿಳಿಸಿದೆ.
ಆರ್ ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್ ಎಟಿಎಂಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸು ವಹಿವಾಟು ಶುಲ್ಕವು ರೂ 21 + ಜಿಎಸ್ಟಿ ಡಬ್ಲ್ಯೂ.ಎಫ್ ಶುಲ್ಕವನ್ನು ದಿನಾಂಕ 01-01-22ರಿಂದ ಜಾರಿಗೊಳಿಸುತ್ತಿರೋದಾಗಿ ಆಕ್ಸಿಸ್ ಬ್ಯಾಂಕ್ ಮಾಹಿತಿ ನೀಡಿದೆ.