ಬೆಳಗಾವಿ: 2019ರ ಪ್ರವಾಹ ಸಂದರ್ಭದಲ್ಲಿ ಅಥಣಿ ತಾಲೂಕಿನಾದ್ಯಂತ ನಡೆದ ಕಾಮಗಾರಿಗಳಲ್ಲಿ ನಡೆದ ಗೋಲ್ಮಾಲ್ ಆರೋಪದ ಹಿನ್ನೆಲೆಯಲ್ಲಿ ಹೆಸ್ಕಾಂನ 20 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ 13 ಮಂದಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ , ಕಿರಿಯ ಎಂಜಿನಿಯರ್ಗಳು ಸೇರಿದಂತೆ 20 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಏಪ್ರಿಲ್ 2018ರಿಂದ ಅಗಸ್ಟ್ 2019ರ ಅವಧಿಯಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಥಣಿ ವಿಭಾಗಕ್ಕೆ ಭೇಟಿ ನೀಡಿದ್ದ ಹೆಸ್ಕಾಂ ಅಧಿಕಾರಿಗಳು ಪರಿಶೀಲಿಸಿದ್ದರು. 2019ರ ಪ್ರವಾಹ ಸಂದರ್ಭದಲ್ಲಿ ಅಥಣಿ ತಾಲೂಕಿನಾದ್ಯಂತ ನಡೆದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಬಳಿಕ ತನಿಖೆಯಲ್ಲಿಯೂ ಅಕ್ರಮ ದೃಢವಾಗಿತ್ತ. ಈ ಹಿನ್ನೆಲೆ ಹೆಸ್ಕಾಂನ 20 ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
‘SSP’ ವಿದ್ಯಾರ್ಥಿ ವೇತನ : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ
ಉಸ್ತುವಾರಿ ಜಿಲ್ಲೆ ಬದಲಾದ ಮಾತ್ರಕ್ಕೆ ‘ಮಂಡ್ಯ’ ಬಿಟ್ಟು ಕೊಡುವುದಿಲ್ಲ : ಸಚಿವ ನಾರಾಯಣಗೌಡ