ಮೆಕ್ಸಿಕೋ: ಮೆಕ್ಸಿಕೋದ ಪಶ್ಚಿಮ ಭಾಗದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. 1985 ಮತ್ತು 2017 ರಲ್ಲಿ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪನದ ವಾರ್ಷಿಕೋತ್ಸವದಂದೇ ಈ ಘಟನೆ ಮರುಕಳಿಸಿದೆ.

ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯ ನಂತರ (16:00 GMT) ಭೂಕಂಪ ಸಂಭವಿಸಿದೆ. US ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಮೈಕೋಕಾನ್ ಮತ್ತು ಕೊಲಿಮಾ ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿ ಭೂಮಿಯಿಂದ 15km (9 ಮೈಲುಗಳಷ್ಟು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ಭೂಕಂಪದಿಂದಾಗಿ ಹಲವು ಮನೆಗಳು ಹಾನಿಗೊಳಗಾಗಿವೆ. ಮನೆ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಪೆಸಿಫಿಕ್ ಬಂದರಿನ ಮಂಜನಿಲ್ಲೊದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಮಾಹಿತಿ ನೀಡಿದ್ದಾರೆ.

1985 ಸೆಪ್ಟೆಂಬರ್‌ 19 ರಂದು 8.1 ರ ತೀವ್ರತೆಯ ಭೂಕಂಪನ ಸಂಭವಿಸಿ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ನಂತರ 2017 ರಲ್ಲಿ ಈ ಭೂಕಂಪನದ ವಾರ್ಷಿಕೋತ್ಸವದ ದಿನವೇ ಮತ್ತೆ 7.1 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿ 370 ಮಂದಿ ಸಾವನ್ನಪ್ಪಿದ್ದರು. ಇದೀಗ ಅದೇ ದಿನ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

BREAKING NEWS: ಕಾಶ್ಮೀರದಲ್ಲಿ ಬಾಲಿವುಡ್ ನಟ ʻಇಮ್ರಾನ್ ಹಶ್ಮಿʼ ಮೇಲೆ ಕಲ್ಲು ತೂರಾಟ, ಎಫ್‌ಐಆರ್ ದಾಖಲು| Emraan Hashmi

BIG NEWS: ಇಂದು ಬೆಳಿಗ್ಗೆ 10:30ಕ್ಕೆ ಬಿಜೆಪಿ ಮೇಯರ್‌ಗಳ ಜೊತೆ ಪ್ರಧಾನಿ ಮೋದಿ ಸಭೆ | PM Modi to address all BJP mayors

BIGG NEWS : ವಸತಿ ರಹಿತ ಗ್ರಾಮೀಣ ಬಡಜನತೆಗೆ ಗುಡ್ ನ್ಯೂಸ್ : ಗ್ರಾ.ಪಂ ಮಟ್ಟದಲ್ಲೇ ಫಲಾನುಭವಿ ಆಯ್ಕೆ

Share.
Exit mobile version