ವಾಷಿಂಗ್ಟನ್: ಅಮೆರಿಕದ ದಕ್ಷಿಣ ಮತ್ತು ಮಧ್ಯಪಶ್ಚಿಮ ಭಾಗಗಳಲ್ಲಿ ಶುಕ್ರವಾರ ಮುಂಜಾನೆಯಿಂದ ಶನಿವಾರದವರೆಗೆ ಸಂಭವಿಸಿದ ವಿನಾಶಕಾರಿ ಚಂಡಮಾರುತಗಳು ಮತ್ತು ಸುಂಟರಗಾಳಿಗೆ ಸುಮಾರು 21 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನ್ಯಾಷನಲ್ ವೆದರ್ ಸರ್ವೀಸ್ನ ಸ್ಟಾರ್ಮ್ ಪ್ರಿಡಿಕ್ಷನ್ ಸೆಂಟರ್ ಪ್ರಕಾರ, ಶುಕ್ರವಾರ ಮತ್ತು ಶನಿವಾರದಂದು ರಾಜ್ಯಾದ್ಯಂತ 60 ಕ್ಕೂ ಹೆಚ್ಚು ಸುಂಟರಗಾಳಿಗಳು ವರದಿಯಾಗಿವೆ. ದೊಡ್ಡ ಮತ್ತು ವಿನಾಶಕಾರಿ ಸುಂಟರಗಾಳಿ ಶುಕ್ರವಾರ ಮಧ್ಯಾಹ್ನ ಅರ್ಕಾನ್ಸಾಸ್ನಲ್ಲಿ ಲಿಟಲ್ ರಾಕ್ ಮತ್ತು ಇತರೆಡೆ ಅಪ್ಪಳಿಸಿತು ಎಂದು US ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಕಾನ್ಸಾಸ್ ಡಿಪಾರ್ಟ್ಮೆಂಟ್ ಆಫ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ನ ವಕ್ತಾರರಾದ ಲಾತ್ರೇಶಾ ವುಡ್ರಫ್ ಮಾತನಾಡಿ, ಕ್ರಾಸ್ ಕೌಂಟಿಯಲ್ಲಿ ಲಿಟಲ್ ರಾಕ್ನ ಈಶಾನ್ಯದಲ್ಲಿ ಸುಂಟರಗಾಳಿ ಅಬ್ಬರಕ್ಕೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ವೈನ್ನಲ್ಲಿ ಹಲವು ಮನೆಗಳಿ ಹಾನಿಯಾಗಿಗೆ ಎಂದು ತಿಳಿಸಿದ್ದಾರೆ. ನಿರಾಶ್ರಿತರಿಗೆ ಸರ್ಕಾರ ಸೌಲಭ್ಯ ನೀಡುತ್ತಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.
BIGG NEWS : ಕರ್ನಾಟಕ ವಿಧಾನಸಭಾ ಚುನಾವಣೆ: ಈವರೆಗೆ ಜಪ್ತಿಯಾದ ಹಣ, ದಾಖಲಾದ ದೂರು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
BIG NEWS : ನೇಪಾಳ ಅಧ್ಯಕ್ಷ ʻರಾಮಚಂದ್ರ ಪೌಡೆಲ್ʼ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | Ramchandra Paudel
BIGG NEWS : ಕರ್ನಾಟಕ ವಿಧಾನಸಭಾ ಚುನಾವಣೆ: ಈವರೆಗೆ ಜಪ್ತಿಯಾದ ಹಣ, ದಾಖಲಾದ ದೂರು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
BIG NEWS : ನೇಪಾಳ ಅಧ್ಯಕ್ಷ ʻರಾಮಚಂದ್ರ ಪೌಡೆಲ್ʼ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | Ramchandra Paudel