ಕೈವ್: ರಷ್ಯಾದ ಕ್ಷಿಪಣಿಯು ಶುಕ್ರವಾರ ಮುಂಜಾನೆ ಉಕ್ರೇನ್‌ನ ಕಪ್ಪು ಸಮುದ್ರದ ಒಡೆಸಾದ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಹು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡದ ಮೇಲೆ ನಡೆದ ರಷ್ಯಾದ ಕ್ಷಿಪಣಿ ದಾಳಿ ಪರಿಣಾಮವಾಗಿ ಸತ್ತವರ ಸಂಖ್ಯೆ ಈಗ 10 ಕ್ಕೆ ಏರಿದೆ” ಎಂದು ಒಡೆಸಾ ಪ್ರಾದೇಶಿಕ ಆಡಳಿತದ ವಕ್ತಾರ ಸೆರ್ಹಿ ಬ್ರಾಚುಕ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹಿಂದಿನ ವರದಿಗಳು ತಿಳಿಸಿವೆ. ಘಟನೆಯ ವಿವರಗಳನ್ನು ಇನ್ನೂ ರಾಯಿಟರ್ಸ್ ಸ್ಪಷ್ಟವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
Big news: ʻಗರ್ಭದಲ್ಲಿರುವಾಗಲೇ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲʼ: ಹೈಕೋರ್ಟ್ ಮಹತ್ವದ ತೀರ್ಪು