ಬೆಂಗಳೂರು: ಉದ್ಯೋಕಾಂಕ್ಷಿಗಳು ಉದ್ಯೋಗಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗಿ, ಕಳಂಕಿತರಾಗಬಾರದು. ಸಾರ್ವಜನಿಕ ಉದ್ಯೋಗಾಕಾಂಕ್ಷಿಗಳು ಪ್ರಾಮಾಣಿಕರು, ಶುದ್ಧ ಹಸ್ತರೂ ಆಗಿರಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಕಿವಿಮಾತು ಹೇಳಿದೆ.
Rain in Karnataka: ರಾಜ್ಯಾಧ್ಯಂತ ಮುಂದಿನ 5 ದಿನ ಮಳೆ: ಕರಾವಳಿಯಲ್ಲಿ 2 ದಿನ ಆರೆಂಜ್ ಅಲರ್ಟ್
2013ರಲ್ಲಿ ಆರಂಭವಾದ ನೇಮಕ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರ ಆರೋಪಗಳ ಕುರಿತಂತೆ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ ಕೃಷ್ಣ ಭಟ್ ಅವರನ್ನೊಳಗೊಂಡ ಪೀಠವು, ಈ ಅಭಿಪ್ರಾಯ ಪಟ್ಟಿದೆ.
ನೇಮಕ ಪ್ರಕ್ರಿಯೆಯ ಭಾಗವಾದ ಪರೀಕ್ಷೆಯಲ್ಲಿನ ಅಕ್ರಮಗಳು ನಡೆದಿವೆ ಎಂದು ಕಂಡುಬಂದಿದ್ದಕ್ಕೆ ಸಮಂಜಸವಾದ ವಿಚಾರಣೆ ನಡೆಸಿ, ಸತ್ಯಾಂಶ ತಿಳಿದ ನಂತ್ರವೂ ಉದ್ಯೋಗ ನೀಡುವ ಏಜೆನ್ಸಿಗಳು ಎಡವಬಾರದು ಎಂದು ಹೇಳಿದೆ.
ಈ ಸಮಸ್ಯೆಗಳಿರೋ ಜನರು ʻಹಾಲು ಸೇವಿಸುವʼ ಮುನ್ನ ಹುಷಾರ್ʻ.! | Health Tips
ಸಾರ್ವಜನಿಕ ನೇಮಕ ಪ್ರಕ್ರಿಯೆಯಲ್ಲಿ ಅನ್ಯಾಯದ ಕ್ರಮಗಳಿಂದ ಭಾಗವಹಿಸುವ ವ್ಯಕ್ತಿಗಳಿಗೆ ಒಲವು ತೋರಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.