ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನ ಬಂದಿಸದೇ ಪೊಲೀಸರೆ ಪರೋಕ್ಷ ರಕ್ಷಣೆ ನೀಡಿ ಕಾನೂನು ಅವ್ಯವಸ್ಥೆಗೆ ಕಾರಣರಾಗಿದ್ದವರಿಗೆ ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ನೀಡಿದ ಡೋಸ್ ಗೆ ಅಧಿ ಕಾರಿಗಳು ಆರೋಪಿಯನ್ನ 24 ಗಂಟೆಯೊಳಗೆ ಬಂದಿಸಿ ತಮ್ಮ ದಕ್ಷತೆ ಮೆರೆದಿದ್ದಾರೆ.

ಪ್ರಕರಣದ ಹಿನ್ನಲೆ: ಚಾಮರಾಜನಗರ ಉಪ್ಪಾರ ಬೀದಿಯಲ್ಲಿ ಗಣಪತಿ ಕೂರಿಸಿ ಡಿಜೆ ಸೌಂಡ್ ಆಪ್ ಮಾಡಲು ಹೇಳಿದ ಪೊಲೀಸರ ಮೇಲೆ ಕಲ್ಲೆಸೆದಲ್ಲದೆ ಗಲಾಟೆ ಕೂಟ ಮಾಡಿ ನಾಪತ್ತೆಯಾಗಿಧ್ದರು. ನಂತರ ಆರೋಪಿಗಳ ಹುಡುಕಲು ಠಾಣೆಯ ಇನ್ಸ್ ಪೆಕ್ಟರ್ ಗಳು ರಾಜಕೀಯ ಪ್ರಲೋಭನೆಗೆ ಒಳಗಾಗಿ ಮೀನಾಮೇಷ ಎಣಿಸಿದ್ದರು.  ಚಾಮರಾಜನಗರ ಪಟ್ಟಣ ಠಾಣೆಯ ಇನ್ಸ್ ಪೆಕ್ಟರ್ ತಿಮ್ಮರಾಜು ಅವರು ಅನಾರೋಗ್ಯ ನಿಮಿತ್ತ ರಜೆ ಹಾಕಿದ್ದರು ಅದರ ಉಸ್ತುವಾರಿಯನ್ನ ಚಿಕ್ಕರಾಜಶೆಟ್ಟಿ ಅವರಿಗೆ ನೀಡಲಾಗಿತ್ತು‌ . ಸ್ವಲ್ಪ ದಿನದಲ್ಲೆ ಇಲಾಖೆಲಿ ಗಂಭೀರತೆ ಪಡೆದು ನಂತರ ಮಹಿಳಾ ಠಾಣೆಯ ಶೇಖರ್ ಅವರಿಗೆ ನೀಡಿ ಒಂದೆ ದಿನಕ್ಕೆ ಅವರು ಪ್ರಕರಣದಿಂದ ನಿರ್ಗಮಿತರಾದರು ನಂತರ ರಾಮಸಮುದ್ರ ಠಾಣೆಯ ಇನ್ಸ್ ಪೆಕ್ಟರ್ ಆನಂದ್ ಅವರಿಗೆ ನೀಡಿದರು. ಅಲ್ಲಿಯ ತನಕ ವಾರಗಟ್ಟಲೆ ಆದರೂ ಮೂವರು ಇನ್ಸ್ ಪೆಕ್ಟರ್ ಗಳು ತಮ್ಮದೆ ಆದ ಇಲಾಖೆ ಪಿಎಸ್ಐ ಮೇಲಿನ ಹಲ್ಲೆ ಆರೋಪಿಗಳ ಹೆಡೆಮುರಿ ಕಟ್ಟೋದು ಬಿಟ್ಟು ಮೌನವಾಗೆ ಬಿಟ್ಟರು. ಇಷ್ಟಕ್ಕೂ ಈ ಸಣ್ಣ ಗಲಾಟೆ ಯಾಕೆ ಹಳ್ಳ ಹಿಡಿಯುತ್ತಿದೆ ಯಾವ್ದೊ ಪ್ರಲೋಭನೆಗೆ ಮಣಿದಿದೆ ಎಂದು ರಾಜ್ಯ ಕಾ.ಸು.ಎಡಿಜಿಪಿ ಅಲೋಕ್ ಕುಮಾರ್ ಅವರ ಕನ್ನಡ ನ್ಯೂಸ್ ನೌ ಗಮನಕ್ಕೆ ತಂದ ಕೂಡಲೆ ಚಾಮರಾಜನಗರ ಜಿಲ್ಲೆಯ ಪೊಲೀಸ್ ಅದಿಕಾರಿಗಳಿಗೆ ಚಳಿ ಬಿಡಿಸಿದರಲ್ಲದೆ ಆರೋಪಿ ಬಂದಿಸದೆ ಇದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದ ಕೂಡಲೆ ದಿನದ 24 ಗಂಟೆಯೊಳಗೆ ಪ್ರಮುಖ ಆರೋಪಿ ಕೆ.ಟಿ.ನಾಗ ಹಾಗೂ ಅವರ ತಂಡವರನ್ನ ಬಂದಿಸಿದ್ದಾರೆ.

ಒಟ್ಟಾರೆ ಪೊಲೀಸ್ ಸಿಬ್ಬಂದಿಗಳ ಮೇಲಿನ ಹಲ್ಲೆಯನ್ನ ಮಾಡಿದವರ ಮೇಲೆ ಕ್ರಮ ಜರುಗಿಸಬೇಕಾದ ಇನ್ಸ್ ಪೆಕ್ಟರ್ ಗಳೇಕೆ ಮೌನಕ್ಕೆ ಜಾರಿದರು? ಒಂದು ಪ್ರಕರಣಕ್ಕೆ ಎಡಿಜಿಪಿ ಅವರಿಂದಲೆ ಎಚ್ಚರಿಕೆ ಪುಷ್ಪಾರ್ಚನೆಯಾದ ಮ್ಯಾಲೆ ಇವರು ಕರ್ತವ್ಯ ನಿರ್ವಹಿಸುತ್ತಾರೆ ಎಂದರೆ ಇವರ ಬೇಜಬ್ದಾರಿತನ ಮೇಲ್ನೊಟಕ್ಕೆ ತಿಳಿಯುತ್ತದೆ. ಆರೋಪಿಗಳ ಹಿಡಿದು ತಂದವರು, ಗಲಾಟೆ ಆದಾಗಲೂ ಇದ್ದ ಇನ್ಸ್ ಪೆಕ್ಟರ್ ಒಬ್ಬರೆ ಆಗಿದ್ದು ಅಂದು ಆರೋಪಿಗಳ ಬಂದಿಸದೆ ಅಲೋಕ್ ಕುಮಾರ್ ಅವರ ಖಡಕ್ ಆದೇಶದಿಂದ ಹಿಡಿದು ತಂದಿರೋದು ನೋಡಿದತೆ ಮೇಲ್ನೊಟಕ್ಕೆ ಆರೋಪಿಗಳ ರಕ್ಷಣೆಗೆ ನಿಂತಿರುವುದನ್ನ ಅಲ್ಲಗಳೆಯುವಂತಿಲ್ಲ ಎಂದರೆ ತಪ್ಪಾಗಲಾರದು.

Share.
Exit mobile version