ನವದೆಹಲಿ: ಡಿಜಿಟಲ್ ಆರ್ಥಿಕತೆಯ ಕ್ಷೇತ್ರದಲ್ಲಿ ಈಗಾಗಲೇ ಸುಮಾರು 88-90 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ. ಇದೇ ವೇಳೆ ಅವರು ನಾವು ಡಿಜಿಟಲ್ ಆರ್ಥಿಕತೆಯ ಮೂರು ದೊಡ್ಡ ಆಧಾರ ಸ್ತಂಭಗಳಾದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಐಟಿ ಮತ್ತು ಐಟಿ ಸೇವೆಗಳು ಮತ್ತು ನವೋದ್ಯಮಗಳನ್ನು ನೋಡಿದರೆ, ಈಗಾಗಲೇ ಸುಮಾರು 88-90 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಅಂತ ತಿಳಿಸಿದರು.

ಇನ್ನೂ ಖಾಸಗಿ ಮಾಧ್ಯಮವೊಂದರ ಪ್ರಕಾರ , ಮುಂದಿನ ಎರಡು ವರ್ಷಗಳಲ್ಲಿ 1 ಕೋಟಿ ಉದ್ಯೋಗಗಳನ್ನು ದಾಟುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವರು ಹೇಳಿದರು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ದತ್ತಾಂಶದ ಪ್ರಕಾರ ದೇಶದಲ್ಲಿ ಪ್ರತಿ ತಿಂಗಳು ಸುಮಾರು 16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ವೈಷ್ಣವ್ ಈ ಹಿಂದೆ ಹೇಳಿದ್ದರು ಅಂತ ಇದೇ ವೇಳೆ ಖಾಸಗಿ ಮಾಧ್ಯಮ ವರದಿ ಮಾಡಿದೆ.

Share.
Exit mobile version