ಈ ಒಂದು ಚಮಚ ಜ್ಯೂಸ್ ಇದ್ರೆ ಸಾಕು ಆರೋಗ್ಯ, ತ್ವಚೆ ಎರಡೂ ಸೂಪರ್ ಆಗಿರುತ್ತೆ… – Kannada News Now


Beauty Tips Health Lifestyle

ಈ ಒಂದು ಚಮಚ ಜ್ಯೂಸ್ ಇದ್ರೆ ಸಾಕು ಆರೋಗ್ಯ, ತ್ವಚೆ ಎರಡೂ ಸೂಪರ್ ಆಗಿರುತ್ತೆ…

ಸ್ಪೆಷಲ್ ಡೆಸ್ಕ್ : ಸೋರೆಕಾಯಿಯನ್ನು ಸಾರು ಮಾಡಲು ಮಾತ್ರ ಅಲ್ಲ, ಸೌಂದರ್ಯ, ಆರೋಗ್ಯಕ್ಕೂ ಬಳಕೆ ಮಾಡಲಾಗುತ್ತದೆ. ಅದು ಹೇಗೆ ಎಂದರೆ ಜ್ಯೂಸ್ ಮೂಲಕ. ಹೌದು ಈ ಜ್ಯೂಸ್‌ನ್ನು ಬಳಕೆ ಮಾಡಿದರೆ ಆರೋಗ್ಯಕ್ಕೆ ಅತ್ಯಂತ ಉತ್ತಮ. ಇದರಲ್ಲಿರುವ ವಿಟಾಮಿನ್‌ ಬಿ, ಸಿ ಮತ್ತು ಅ್ಯಂಟಿ ಆಕ್ಸಿಡೆಂಟ್‌ನಂತಹ ಅಂಶಗಳು ತ್ವಚೆ ಹಾಗೂ ಶರೀರದ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ಒಂದು ಚಮಚ ಸೋರೆಕಾಯಿ ರಸ ಸೇವನೆ ಮಾಡಿದರೆ ಅದರಿಂದ ಏನೆಲ್ಲ ಪ್ರಯೋಜನ ಇದೆ ತಿಳಿಯಿರಿ….

ಕೂದಲ ಬೆಳವಣಿಗೆ : ಒಂದು ಚಮಚ ಸೋರೆಕಾಯಿ ರಸಕ್ಕೆ 2 ಚಮಚ ನೆಲ್ಲಿಕಾಯಿ ಪುಡಿ ಮಿಕ್ಸ್‌ ಮಾಡಿ. ಇದನ್ನು ಕೂದಲಿಗೆ ಹಚ್ಚಿ, 20 ನಿಮಿಷದ ನಂತರ ತೊಳೆಯಿರಿ. ಇದನ್ನು ವಾರದಲ್ಲಿ 2 ಅಥವಾ 3 ಬಾರಿ ಮಾಡುತ್ತ ಬಂದರೆ ಕೂದಲು ಬೇಗನೆ ಬೆಳೆಯುತ್ತದೆ.

ಇನ್‌ಫೆಕ್ಷನ್‌ : ಒಂದು ಚಮಚ ಸೋರೆಕಾಯಿ ರಸಕ್ಕೆ ಅಲೋವೆರಾ ಜೆಲ್‌ ಸೇರಿಸಿ, ಅದನ್ನು ಇನ್‌ಫೆಕ್ಷನ್‌ ಆದ ಜಾಗಕ್ಕೆ ಹಚ್ಚಬೇಕು. ಇದರಿಂದ ಸ್ಕಿನ್‌ ಇನ್‌ಫೆಕ್ಷನ್‌ ದೂರವಾಗುತ್ತದೆ.

ಶೀತ- ನೆಗಡಿ : ಒಂದು ಚಮಚ ಸೋರೆಕಾಯಿ ರಸಕ್ಕೆ ಜೇನು ಮಿಕ್ಸ್‌ ಮಾಡಿ ಸೇವಿಸಿದರೆ ಶೀತ – ಕೆಮ್ಮು ನಿವಾರಣೆಯಾಗುತ್ತದೆ.

ಜೀರ್ಣಕ್ರಿಯೆ : ಜೀರ್ಣಕ್ರಿಯೆ ಸರಾಗವಾಗಿ ಆಗಬೇಕು ಎಂದಾದರೆ ಒಂದು ಚಮಚ ಸೋರೆಕಾಯಿ ರಸಕ್ಕೆ ಒಂದು ಚಮಚ ಜೇನು ಬೆರೆಸಿ ಸೇವನೆ ಮಾಡಿ. ಇದರಿಂದ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಗ್ಲೋ ಪಡೆಯಿರಿ : ಮುಖದ ಅಂದ ಹೆಚ್ಚಿಸಬೇಕಾದರೆ ಒಂದು ಚಮಚ ಸೋರೆಕಾಯಿ ರಸ, ಒಂದು ಚಮಚ ಕಡ್ಲೆ ಹಿಟ್ಟು, ಮೊಸರು ಮತ್ತು ಸೌತೆಕಾಯಿ ಪೇಸ್ಟ್‌ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ, 20 ನಿಮಿಷದ ನಂತರ ತೊಳೆಯಿರಿ. ಇದರಿಂದ ಮುಖ ಹೊಳೆಯುತ್ತದೆ.

ಆಸಿಡಿಟಿ : ಒಂದು ಚಮಚ ಸೋರೆ ರಸಕ್ಕೆ ಒಂದು ಚಮಚ ಜೇನು ಮಿಕ್ಸ್‌ ಮಾಡಿ ಕುಡಿದರೆ ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.