ಧಾರವಾಡ: ಹೆಚ್.ಡಿ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ದೇವೇಗೌಡರ ಮಗನಾಗಿದ್ದರೂ ಇಂತಹ ತಳಬುಡ ಇಲ್ಲದ ಹೇಳಿಕೆ ಕೊಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ನಗರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮಾನಸಿಕ ಸ್ಥಿತಿ ತಪ್ಪಿದಂತೆ ಅನಿಸುತ್ತಿದೆ. ಅವರ ಪಕ್ಷದಿಂದ ಜನ ಓಡಿ ಹೋಗುತ್ತಿದ್ದಾರೆ. ಅವರ ನಾಯಕರೇ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಏನು ಮಾಡಬೇಕು, ಏನು ಮಾತನಾಡಬೇಕು ತಿಳಿಯದಾಗಿದೆ ಎಂದರು.
ಆದರೆ ಅವರು ಈ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಮೋದಿ ಸರ್ಕಾರದಲ್ಲಿ ಜಾತಿ, ಪಂಥ ನೋಡದೆ ಯೋಗ್ಯರಿದ್ದವರಿಗೆ ಸಿಎಂ ಮಾಡುತ್ತಾರೆ ಎಂದ ಅವರು, ಇದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ, ಈ ರೀತಿಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರ ಅಲ್ಲ ಎಂದರು.