ಸುಭಾಷಿತ :

Monday, March 30 , 2020 12:15 AM

ಬ್ರೇಕಿಂಗ್ : ಪಾಕ್ ಪರ ಆರ್ದ್ರಾ ಘೋಷಣೆ ಪ್ರಕರಣ : 14 ದಿನ ನ್ಯಾಯಾಂಗ ಬಂಧನ


Friday, February 21st, 2020 7:49 pm

ಬೆಂಗಳೂರು : ಇಂದು ಕರವೇ ಕಾರ್ಯಕರ್ತರಿಂದ ನಗರದ ಟೌನ್ ಹಾಲ್ ಬಳಿ, ಕಳೆದ ನಿನ್ನೆ ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ್ದನ್ನು ವಿರೋಧಿಸಿ ಪ್ರತರಿಭಟನೆ ನಡೆಸಲಾಗುತ್ತಿತ್ತು. ಇಂತಹ ಪ್ರತಿಭಟನೆಯ ವೇಳೆಯಲ್ಲಿ ಮತ್ತೋರ್ವ ಯುವತಿ ಆರುದ್ರಾ ಎಂಬಾಕೆ ಪಾಕ್ ಪರ ಘೋಷಣೆ ಕೂಗಿದ್ದಳು. ಯುವತಿಯನ್ನು ಎಸ್ ಜೆ ಪಾರ್ಕ್ ಪೊಲೀಸರು ಬಂಧಿಸಿದ್ದರು. ಇದೀಗ ಇಂತಹ ಯುವತಿಯ ವಿರುದ್ಧ ದೇಶದ್ರೋಹ ಆರೋಪದ ಅಡಿಯಲ್ಲಿ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಇಂತಹ ಆರುದ್ರಾ ಎಂಬ ಯುವತಿಯನ್ನು ನ್ಯಾಯಾಧೀಶ ಮುಂದೆ ಹಾಜರುಪಡಿಸಲಾಗಿತ್ತು. ಇದೀಗ 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಿ, ನ್ಯಾಧೀಶರು ಆದೇಶ ಹೊರಡಿಸಿದ್ದಾರೆ.

ಪಾಕ್ ಪರವಾಗಿ ಟೌನ್ ಹಾಲ್ ಬಳಿ ಘೋಷಣೆ ಕೂಗಿದ್ದ ಆರುದ್ರಾ ಯುವತಿಯನ್ನು ಎಸ್ ಜೆ ಪಾರ್ಕ್ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದರು. ಇಂತಹ ಯುವತಿಯ ವಿರುದ್ಧ ಇದೀಗ ಎಸ್ ಜೆ ಪಾರ್ಕ್ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದರು. ಹೀಗಾಗಿ ಪಾಕ್ ಪರ ಘೋಷಣೆ ಕೂಗಿದ ಯುವತಿ ಆರುದ್ರಾ ವಿರುದ್ಧ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ ಆರೋಪ), 153ಎ(ಶತೃತ್ವ ಬಿತ್ತುವುದು), 153ಬಿ(ಭಾವೈಕ್ಯತೆ ಹಾಗೂ ರಾಷ್ಟೀಯ ಏಕೀಕರಣಕ್ಕೆ ಧಕ್ಕೆ ತರುವುದು) ಸೆಕ್ಷನ್ ಅಡಿ ಕೇಸ್ ದಾಖಲಿಸಲಾಗಿದೆ.

ಈ ಬಳಿಕ ನ್ಯಾಯಾಧೀಶರ ಮುಂದೆ ಆರ್ದ್ರಾ ಹಾಜರು ಪಡಿಸಲಾಯಿತು. 6ನೇ ಎಸಿಎಂಎಂ ನ್ಯಾಯಾಧಿಶರ ಮುಂದೆ ಎಸ್ ಜೆ ಪಾರ್ಕ್ ಪೊಲೀಸರು ಹಾಜರುಪಡಿಸಿದ್ರು. ಕೋರಮಂಗಲದ ಬಳಿ ಇರುವ ನ್ಯಾಯಾಧೀಶ ನಿವಾಸದಲ್ಲಿ ಹಾಜರುಪಡಿಸಿದ ಆರುದ್ರಾ ಅವರಿಗೆ, 14 ದಿನಗಳ ಕಾಲ ನ್ಯಾಯಾಂಗ ಬಂಧನ ಇರಿಸಿ, ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಪಾಕ್ ಪರ ಘೋಷಣೆ ಕೂಗಿದ ಆರುದ್ರಾ ಇದೀಗ ಜೈಲುಪಾಲಾಗಿದ್ದಾರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions