ಆರೋಗ್ಯ ಸೇತು : ಸರ್ಕಾರ ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಿದ್ದೇಕೆ? ಇದರ ಅವಶ್ಯಕತೆ ಏನು ನೋಡೋಣ… – Kannada News Now


Health India Lifestyle

ಆರೋಗ್ಯ ಸೇತು : ಸರ್ಕಾರ ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಿದ್ದೇಕೆ? ಇದರ ಅವಶ್ಯಕತೆ ಏನು ನೋಡೋಣ…

ಸ್ಪೆಷಲ್ ಡೆಸ್ಕ್ :ವಿಶ್ವಾದ್ಯಂತ ಕೊರೋನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ದೇಶಗಳು ತಂತ್ರಜ್ಞಾನವನ್ನು ಬಳಸುತ್ತಿವೆ. ಒಂದು ದೇಶದಲ್ಲಿ ಡ್ರೋನ್‌ಗಳು ವೈದ್ಯಕೀಯ ವಸ್ತುಗಳನ್ನು ಸಾಗಿಸುತ್ತಿದ್ದರೆ, ರೋಬೋಟ್‌ಗಳು ಒಂದು ದೇಶದಲ್ಲಿ ವೈದ್ಯರಿಗೆ ಸಹಾಯ ಮಾಡುತ್ತಿವೆ. ಯಾಕೆಂದರೆ ಎಲ್ಲಾ ದೇಶಗಳಿಗೆ ಈ ದಿನಗಳಲ್ಲಿ ಕೊರೋನಾ ಟ್ರ್ಯಾಕಿಂಗ್ ಮಾಡುವುದು ಅವಶ್ಯಕವಾಗಿದೆ.

ಭಾರತ ಸರ್ಕಾರ ಕೊರೋನಾ ಸೋಂಕನ್ನು ಟ್ರ್ಯಾಕ್ ಮಾಡುವ ಸಲುವಾಗು ಆರೋಗ್ಯ ಸೇತು ಆಪ್ ಲಾಂಚ್ ಮಾಡಿದೆ. ಇದನ್ನು ಕೇವಲ 20 ದಿನಗಳಲ್ಲಿ 80 ದಶಲಕ್ಷಕ್ಕೂ ಹೆಚ್ಚು ಜನ ಡೌನ್‌ಲೋಡ್ ಮಾಡಿದ್ದಾರೆ. ಇದೀಗ ಗೃಹ ಸಚಿವಾಲಯ ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ಇದು ಮೇ 4 ರಿಂದ ಜಾರಿಗೆ ಬರಲಿದೆ ಮತ್ತು ಮೇ 17 ರವರೆಗೆ ಮುಂದುವರಿಯುತ್ತದೆ.

ಲಾಕ್‌ಡೌನ್ 3.0 ರ ಈ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಖಾಸಗಿ ವಲಯದ ಉದ್ಯೋಗಿಗಳು ಮತ್ತು ಕಂಟೈನ್‌ಮೆಂಟ್ ವಲಯಕ್ಕೆ ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯಗೊಳಿಸಲಾಗಿದೆ. ಕರೋನಾ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಎಷ್ಟು ಪರಿಣಾಮಕಾರಿ ಮತ್ತು ಸೋಂಕನ್ನು ತಡೆಗಟ್ಟುವಲ್ಲಿ ಸರ್ಕಾರಕ್ಕೆ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ…

  • ಆರೋಗ್ಯ ಸೇತು ಹೇಗೆ ಕಾರ್ಯ ನಿರ್ವಹಿಸುತ್ತದೆ?
    ಆರೋಗ್ಯ ಸೆತು ಅಪ್ಲಿಕೇಶನ್ ಜಿಪಿಎಸ್ ಮತ್ತು ಬ್ಲೂಟೂತ್ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಂಪರ್ಕ ಟ್ರ್ಯಾಕಿಂಗ್ ಅಪ್ಲಿಕೇಶನ್ ಆಗಿದೆ. ಈ ಎರಡು ತಂತ್ರಜ್ಞಾನಗಳ ಸಹಾಯದಿಂದ, ಬಳಕೆದಾರರ ಸ್ಥಳವನ್ನು ಟ್ರ್ಯಾಕ್ ಮಾಡಲಾಗುತ್ತದೆ.
  • ಇದು ಬ್ಲೂಟೂತ್ ಮತ್ತು ಜಿಪಿಎಸ್ ಆಧಾರಿತ ಜನರನ್ನು ಎಚ್ಚರಿಸುತ್ತದೆ. ಉದಾಹರಣೆಗೆ, ನಿಮ್ಮ ಫೋನ್‌ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಇದ್ದರೆ ಮತ್ತು ನೀವು ಈಗಾಗಲೇ ಕರೋನಾ ಸೋಂಕು ಪತ್ತೆಯಾದ ಕೆಲವು ಪ್ರದೇಶಕ್ಕೆ ಹೋದರೆ, ಆರೋಗ್ಯ ಸೇತು ಅಪ್ಲಿಕೇಶನ್ ನಿಮ್ಮನ್ನು ಎಚ್ಚರಿಸುತ್ತದೆ. ನೀವು ಇರುವ ಪ್ರದೇಶದಲ್ಲಿ ಸೋಂಕಿನ ಅಪಾಯವಿದೆ ಎಂದು ಇದು ನಿಮಗೆ ತಿಳಿಸುತ್ತದೆ.
  • ಆರೋಗ್ಯ ಸೇತು ಅಪ್ಲಿಕೇಶನ್ ನಿಮ್ಮ ಸ್ಥಳದಿಂದ ಸೋಂಕಿನ ಪ್ರಕರಣ ಎಷ್ಟು ದೂರದಲ್ಲಿದೆ ಎಂದು ಹೇಳುತ್ತದೆ. ಒಟ್ಟಾರೆಯಾಗಿ, ಆರೋಗ್ಯ ಸೇತು ಅಪ್ಲಿಕೇಶನ್ ನಿಮಗೆ ಸುರಕ್ಷಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ.
  • ಆರೋಗ್ಯ ಸೇತು ಆಪ್ ಕರೋನಾ ಅನುಮಾನಾಸ್ಪದ ಬಳಕೆದಾರರ ಸ್ಥಳವನ್ನು 30 ದಿನಗಳವರೆಗೆ ಸಂಗ್ರಹಿಸುತ್ತದೆ, ಆದರೆ ಸೋಕಿತರಲ್ಲದವರ ವರದಿಯನ್ನು ೪೫ ದಿನಗಳ ನಂತರ ಮತ್ತು ಅ ಸೋಂಕಿತರ ಡೇಟಾವನ್ನು 60 ದಿನಗಳ ನಂತರ ಅಳಿಸಲಾಗುತ್ತದೆ.

ಗೌಪ್ಯತೆಯ ಬಗ್ಗೆ ಸಂದೇಹ ಬೇಡ :
ಆರೋಗ್ಯ ಸೇತು ಅಪ್ಲಿಕೇಶನ್‌ ಗೌಪ್ಯತೆಯ ಬಗ್ಗೆ ನಿಮಗೆ ಸಂದೇಹವೇ ಬೇಡ. ಯಾಕೆಂದರೆ, ಈ ಅಪ್ಲಿಕೇಶನ್ ನಿಮ್ಮ ಫೋನ್‌ನ ಗ್ಯಾಲರಿ ಫೋಟೋಗಳನ್ನು ತೆಗೆದುಕೊಳ್ಳುವುದಿಲ್ಲ, ಜೊತೆಗೆ ನಿಮ್ಮ ಕಾಂಟಾಕ್ಟ್ ಲಿಸ್ಟ್ ಕೂಡ ಪರಿಶೀಲನೆ ಮಾಡುವುದಿಲ್ಲ. ಆದರೆ ಆರೋಗ್ಯ ಸೆತು ಅಪ್ಲಿಕೇಶನ್ ನಿಮ್ಮ ಫೋನ್‌ನ ಗುರುತನ್ನು ಪರಿಶೀಲಿಸುತ್ತದೆ. ಆರೋಗ್ಯ ಸೆತು ಅಪ್ಲಿಕೇಶನ್‌ಗೆ ಬ್ಲೂಟೂತ್, ಲೊಕೇಷನ್ ಮತ್ತು ನೆಟ್‌ವರ್ಕ್ ಅಗತ್ಯವಿದೆ.

ಭಾರತದ ಹೊರತಾಗಿ, ಇತರ ದೇಶಗಳು ಸಹ ಆರೋಗ್ಯ ಸೇತುವಿನಂತಹ ಆ್ಯಪ್‌ಗಳನ್ನು ಬಳಸುತ್ತಿವೆ. ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ಇಂತಹ ಪ್ರಯೋಗವನ್ನು ಮೊದಲು ಪ್ರಾರಂಭಿಸಿದವು. ದಕ್ಷಿಣ ಕೊರಿಯಾದಲ್ಲಿ, ಸಂಪರ್ಕ ಟ್ರ್ಯಾಕಿಂಗ್ ಅಪ್ಲಿಕೇಶನ್ ಅನ್ನು ಖಾಸಗಿ ಡೆವಲಪರ್ ಅಭಿವೃದ್ಧಿಪಡಿಸಿದ್ದಾರೆ, ಸಿಂಗಾಪುರದಲ್ಲಿ ಸರ್ಕಾರವು ಅಂತಹ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಚೀನಾ ಕ್ಯೂಆರ್ ಕೋಡ್‌ಗಳನ್ನು ಬಳಸಲು ಪ್ರಾರಂಭಿಸಿದೆ. ಈ ದೇಶಗಳಲ್ಲಿ ಅಪ್ಲಿಕೇಶನ್ ಬಳಸುವ ಮೊದಲು ಮತ್ತು ನಂತರ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.