ಚಿತ್ರದುರ್ಗ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ಎ ಆರ್ ಓ ಆಗಿ ಯಶೋಧಮ್ಮ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇಂತಹ ಅವರು ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ 202ರಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಿದ್ದ ಎಪಿಆರ್ಓ ಯಶೋಧ (58) ವರ್ಷ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಂದಹಾಗೇ ಶಿಕ್ಷಕಿಯಾಗಿದ್ದಂತ ಯಶೋದಮ್ಮಾ (58) ಅವರನ್ನು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೊಟ್ಟೆಪ್ಪನಹಳ್ಳಿಯಲ್ಲಿ ಎ ಆರ್ ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಅವರಿಗೆ ಲೋ ಬಿಪಿ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯೋ ಮಾರ್ಗಮಧ್ಯದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಇನ್ನೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ 11ಗಂಟೆಗೆ 21.74% ಶೇಕಡಾವಾರು ಮತದಾನವಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 1ಗಂಟೆಗೆ 37.74% ಶೇಕಡಾವಾರು ಮತದಾನವಾಗಿದೆ.

BREAKING: ಭಾರತದಲ್ಲಿ ಮತ್ತೆ X (ಟ್ವಿಟರ್) ಸರ್ವರ್‌ ಡೌನ್‌, ಬಳಕೆದಾರರ ಪರದಾಟ

ಚುನಾವಣೆಯಿಂದ ಪ್ರಧಾನಿ ಮೋದಿಯನ್ನು 6 ವರ್ಷ ಅನರ್ಹತೆ ಕೋರಿ ಹೈಕೋರ್ಟ್‌ಗೆ ಅರ್ಜಿ!

Share.
Exit mobile version