ಪುಲ್ವಾಮದಲ್ಲಿ ಉಗ್ರರಿಂದ ಗ್ರೇನೆಡ್ ದಾಳಿ : ಓರ್ವ ಯೋಧನಿಗೆ ಗಾಯ – Kannada News Now


India

ಪುಲ್ವಾಮದಲ್ಲಿ ಉಗ್ರರಿಂದ ಗ್ರೇನೆಡ್ ದಾಳಿ : ಓರ್ವ ಯೋಧನಿಗೆ ಗಾಯ

ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಭಾನುವಾರ ಗ್ರೆನೇಡ್ ಎಸೆದಿದ್ದಾರೆ.

ಗ್ರೇನೆಡ್ ದಾಳಿಯಿಂದ ಓರ್ವ ಯೋಧನಿಗೆ ಗಾಯವಾಗಿದ್ದು, ಸಿಆರ್‌ಪಿಎಫ್ ಜವಾನ್ ಅವರ ಹೊಟ್ಟೆಯ ಕೆಳಭಾಗದಲ್ಲಿ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಸದ್ಯ ಉಗ್ರರು ಅಡಗಿರುವ ಪ್ರದೇಶವನ್ನು ಸುತ್ತುವರಿಯಲಾಗಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯ ಎನ್‌ಎಸ್‌ಸಿಎನ್ (ಕೆ-ವೈಎ) ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ರಕ್ಷಣಾ ವಕ್ತಾರರು ಭಾನುವಾರ ತಿಳಿಸಿದ್ದಾರೆ.
error: Content is protected !!