ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಪ್ರ ತೀದಿನ ಸೇವಿಸುವ ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳು ಬರುತ್ತದೆ ಹಾಗೆ ನಾವು ತಿನ್ನುವ ಕೆಟ್ಟ ಆಹಾರಗಳು ದೇಹದ ಮೇಲೆ ಹಾಗೇ ಆರೋಗ್ಯದ ಮೇಲೆ ಹಾನಿಯಾಗುತ್ತದೆ. ಕೆಟ್ಟ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣದಂತಹ ಸಮಸ್ಯ ಉಂಟಾಗುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಲಬದ್ದತೆ ಸಾಮನ್ಯ ಸಮಸ್ಯೆಯಾಗಿದೆ.
ಅನೇಕರು ಈ ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದಾರೆ. ಆಹಾರ ಸೇವಿಸುವ ಪ್ರಕ್ರಿಯೆ ಎಷ್ಟು ಸರಾಗವಾಗಿ ಆಗುತ್ತದೆಯೋ ಹಾಗೆ ಅದೆ ರೀತಿ ದೇಹದಲ್ಲಿ ತಿಂದ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಕೂಡ ಚೆನ್ನಾಗಿ ಆಗಬೇಕು. ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಮಲದ ರೂಪದಲ್ಲಿ ದೇಹದಿಂದ ಹೊರಹೋಗುತ್ತದೆ. ದೇಹದಲ್ಲಿ ತಿಂದ ಆಹಾರ ಸರಿಯಾಗಿ ಜೀರ್ಣಾವಾದರೆ ಈ ಮಲಬದ್ಧತೆ ಬರುವುದಿಲ್ಲ . ದೇಹದಲ್ಲಿ ನಿರ್ಜಲೀಕರಣ ಆದಾಗ ಮಲಬದ್ಧತೆ ಸಮಸ್ಯೆ ಮಾತ್ರವಲ್ಲದೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ .
ಮಲಬದ್ಧತೆ ಸಮಸ್ಯೆ ತುಂಬಾ ಸಮಯದಿಂದ ಕಾಡುತ್ತಿದ್ದರೆ, ಆಗ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ ಎರಡು ಗ್ಲಾಸ್ ಆಗುವಷ್ಟು ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಇದರಿಂದ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಬಹುಾಗಿದೆ.
ಮಲಬದ್ಧತೆಯನ್ನು ನಿಲ್ಲಿಸಲು ಹರಳೆಣ್ಣೆ ತುಂಬಾ ಸಹಕಾರಿಯಾಗಿದೆ. ಸಂಶೋಧನೆಯ ಪ್ರಕಾರ ಹರಳೆಣ್ಣೆ ಯಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು ಎಂದು ಸಾಬೀತಾಗಿದೆ. ಹಾಲಿಗೆ ಸ್ವಲ್ಪ ಹರಳೆಣ್ಣೆ ಮಿಕ್ಸ್ ಮಾಡಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ರಾತ್ರಿ ಮಲಗುವ ಮೊದಲು ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಊಟವಾದ ನಂತರ ತಣ‍್ಣಗಾದ ಹಾಲಿನಲ್ಲಿ 2 ಚಮಚ ಹರಳೆಣ್ಣೆ ಮಿಶ್ರಣ ಮಾಡಿ ಕುಡಿಯಬೇಕು ಇದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.