ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಮನುಷ್ಯನಿಗೆ ದೇಹಕ್ಕೆ ಯಾವ ಸಮಯದಲ್ಲಿ ಯಾವ ಪೌಷ್ಟಿಕ ಸತ್ವ ಸಿಗಬೇಕು ಎಂದಿರುತ್ತದೆ ಅದು ಸಿಗಲೇಬೇಕು. ಅದರಲ್ಲಿ ಸ್ವಲ್ಪ ಕೊರತೆ ಕಂಡುಬಂದರೂ ಸಹ ಆರೋಗ್ಯಕ್ಕೆ ಹಾನಿ ಖಂಡಿತ. ಜನರು ಆರೋಗ್ಯದ ದೃಷ್ಟಿಯಲ್ಲಿ ತಾವು ಸೇವನೆ ಮಾಡಬೇಕಾದ ಪೌಷ್ಟಿಕ ಸತ್ವಗಳನ್ನು ಆಹಾರಗಳ ರೂಪದಲ್ಲಿ ಸೇವಿಸಬೇಕಾಗುತ್ತದೆ. ಆದರೆ ಮೊದಲು ತಮ್ಮ ಆರೋಗ್ಯದ ಪರೀಕ್ಷೆ ಮಾಡಿಸಿ ಯಾವುದರ ಪ್ರಮಾಣ ನಿಜವಾಗಲು ಕೊರತೆ ಇದೆ ಎಂದು ತಿಳಿದುಕೊಳ್ಳಬೇಕು.

BIGG NEWS : ರಾಜಕೀಯವಾಗಿ ಬೆಳೆಯುತ್ತಿದ್ದ’ ನನ್ನ ಮಗನ ಸಾವಿಗೆ ನ್ಯಾಯಬೇಕು ‘ : ಮೃತ ಚಂದ್ರಶೇಖರ್ ‘ತಾಯಿ ಕಣ್ಣೀರ ಮಾತು ‘

ಈ ಲೇಖನದಲ್ಲಿ ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭಾವಸರ್ ಸವಲಿಯಾ ಅವರು ವಿವಿಧ ಕಾರಣಗಳಿಗೆ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಂಡುಬರುವ ಕಬ್ಬಿಣದ ಅಂಶದ ಕೊರತೆಯನ್ನು ಆಹಾರ ಪದಾರ್ಥಗಳ ಮೂಲಕ ಹೇಗೆ ಸರಿದೂಗಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ..ಮುಂದೆ ಓದಿ….

ಕಪ್ಪು ಎಳ್ಳು

  • ಎಳ್ಳಿನ ಬೀಜಗಳಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಕಬ್ಬಿಣ, ತಾಮ್ರ, ಜಿಂಕ್, ಸೆಲೆನಿಯಮ್ ಮತ್ತು ವಿಟಮಿನ್ ಬಿ6 ಜೊತೆಗೆ ಫೋಲೆಟ್ ಹಾಗೂ ವಿಟಮಿನ್ ಈ ಪ್ರಮಾಣ ಹೆಚ್ಚಾಗಿದೆ.
  • ನೀವು ಇವುಗಳನ್ನು ಡ್ರೈ ರೋಸ್ಟ್ ಮಾಡಿ ಸೇವಿಸಬಹುದು ಅಥವಾ ಜೇನುತುಪ್ಪ ಮತ್ತು ಸಾಧಾರಣ ಹಸುವಿನ ತುಪ್ಪದ ಜೊತೆಗೆ ಮಿಶ್ರಣ ಮಾಡಿ ಉಂಡೆಗಳನ್ನಾಗಿ ತಯಾರಿಸಿಕೊಂಡು ಬೇಕೆಂದಾಗ ತಿನ್ನಬಹುದು. ತುಂಬಾ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಲಾಡು ಇದಾಗಿದ್ದು, ಡಾ. ದೀಕ್ಷಾ ಹೇಳುವ ಪ್ರಕಾರ ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡುತ್ತದೆ

BIGG NEWS : ರಾಜಕೀಯವಾಗಿ ಬೆಳೆಯುತ್ತಿದ್ದ’ ನನ್ನ ಮಗನ ಸಾವಿಗೆ ನ್ಯಾಯಬೇಕು ‘ : ಮೃತ ಚಂದ್ರಶೇಖರ್ ‘ತಾಯಿ ಕಣ್ಣೀರ ಮಾತು ‘

ಖರ್ಜೂರ ಮತ್ತು ಒಣದ್ರಾಕ್ಷಿ

  • ಒಣದ್ರಾಕ್ಷಿ ಮತ್ತು ಖರ್ಜೂರ ಡ್ರೈಫ್ರೂಟ್ಸ್ ಜಾತಿಗೆ ಸೇರಿದ ಆಹಾರ ಪದಾರ್ಥಗಳಾಗಿವೆ. ಇವುಗಳಲ್ಲಿ ಕೂಡ ಕಬ್ಬಿಣದ ಪ್ರಮಾಣ, ಮೆಗ್ನೀಷಿಯಂ, ಕಾಪರ್ ಮತ್ತು ವಿಟಮಿನ್ ಎ ಹಾಗೂ ವಿಟಮಿನ್ ಸಿ ಹೆಚ್ಚಾಗಿದೆ.
  • ಪ್ರತಿದಿನ ಎರಡರಿಂದ ಮೂರು ಖರ್ಜೂರಗಳನ್ನು ಸೇವನೆ ಮಾಡುವುದರಿಂದ ಮತ್ತು ಒಣ ದ್ರಾಕ್ಷಿ ಹಣ್ಣುಗಳನ್ನು ಸಂಜೆಯ ಸಮಯದಲ್ಲಿ ಸ್ನಾಕ್ಸ್ ತರಹ ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಒಳ್ಳೆಯ ಚೇತರಿಕೆ ಮತ್ತು ಚೈತನ್ಯ ಕಂಡು ಬರಲಿದ್ದು, ಕಬ್ಬಿಣದ ಕೊರತೆ ಕಡಿಮೆಯಾಗುತ್ತದೆ.

ಬೀಟ್ ರೂಟ್ ಮತ್ತು ಕ್ಯಾರೆಟ್

* ಬೀಟ್ ರೂಟ್ ಮತ್ತು ಕ್ಯಾರೆಟ್ ಮಿಶ್ರಣ ಮಾಡಿ ಒಂದು ಕಪ್ ತಿನ್ನುತ್ತೀರಿ ಎಂದರೆ ನಿಮಗಿಂತ ಆರೋಗ್ಯವಂತರು ಬೇರೆ ಇಲ್ಲ ಎನ್ನಬಹುದು

*ಡಾ. ದೀಕ್ಷಾ ಹೇಳುವ ಪ್ರಕಾರ ಇವುಗಳ ಮಿಶ್ರಣದ ಜ್ಯೂಸ್ ತಯಾರಿಸಿ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅತ್ಯಂತ ಆರೋಗ್ಯಕರವಾದ ಪಾನೀಯ ನಿಮ್ಮ ದೇಹ ಸೇರುವುದು ಮಾತ್ರವಲ್ಲದೆ ನೀವು ಇಡೀ ದಿನ ಹೆಚ್ಚು ಚೈತನ್ಯದಿಂದ ಕೂಡಿರಲು ಅನುಕೂಲವಾಗುತ್ತದೆ.

*ನಿಮ್ಮ ದೇಹಕ್ಕೆ ನಿಂಬೆಹಣ್ಣಿನ ರಸ ವಿಟಮಿನ್ ಸಿ ಪ್ರಮಾಣವನ್ನು ಕೊಡುತ್ತದೆ ಮತ್ತು ನೀವು ಸೇವನೆ ಮಾಡುವ ಇತರ ಆಹಾರಗಳಲ್ಲಿ ಕಂಡು ಬರುವ ಕಬ್ಬಿಣದ ಪ್ರಮಾಣ ಹೆಚ್ಚಾಗಿ ಹೀರಿಕೊಳ್ಳುವಂತೆ ನೋಡಿಕೊಳ್ಳುತ್ತದೆ.

BIGG NEWS : ರಾಜಕೀಯವಾಗಿ ಬೆಳೆಯುತ್ತಿದ್ದ’ ನನ್ನ ಮಗನ ಸಾವಿಗೆ ನ್ಯಾಯಬೇಕು ‘ : ಮೃತ ಚಂದ್ರಶೇಖರ್ ‘ತಾಯಿ ಕಣ್ಣೀರ ಮಾತು ‘

Share.
Exit mobile version