ಬೆಂಗಳೂರು: ಲ್ಯಾಪ್ ಟಾಪ್, ಮೊಬೈಲ್ ಕೆಟ್ಟೋದ್ರೇ.. ಅಂಗಡಿಗೆ ರಿಪೇರಿಗಾಗಿ ಕೊಂಡೊಯ್ಯುತ್ತೇವೆ. ಇಲ್ಲವೇ ಮನೆಗೆ ಬಂದು ರೆಡಿ ಮಾಡಿಕೊಡೋರು ಇದ್ರೇ.. ಕೊಟ್ಟು ರಿಪೇರಿ ಮಾಡಿಸೋರು ಇರ್ತಾರೆ. ಆದ್ರೇ.. ಕೆಲವೊಮ್ಮೆ ಹೀಗೆ ರಿಪೇರಿಗೆ ಕೊಟ್ಟಾಗ ಏನ್ ಆಗುತ್ತೆ ಅನ್ನೋ ಬಗ್ಗೆ ಮುಂದೆ ಓದಿ.. ಜೊತೆಗೆ ಎಚ್ಚರಿಕೆ ವಹಿಸೋದು ಮರೆಯಬೇಡಿ..
BIG NEWS: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.?
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಹಿಳೆಯೊಬ್ಬರು ತಮ್ಮ ಲ್ಯಾಪ್ ಟಾಪ್ ರಿಪೇರಿಗಾಗಿ ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ ಪ್ರವೀಣ್ ರಾವ್ ಎಂಬಾತನನ್ನು ಮನೆಗೆ ಕರೆಸಿ ರಿವೇರಿ ಮಾಡಿಸಿದ್ದರು. ರಿಪೇರಿ ಮಾಡಿಕೊಂಡು, ಅದಕ್ಕೆ ಚಾರ್ಜ್ ಕೂಡ ಪಡೆದು, ಪ್ರವೀಣ್ ರಾವ್ ತೆರಳಿದ್ದಾನೆ.
‘ಸಿಲಿಕಾನ್ ಸಿಟಿ’ಯನ್ನು ‘ಸ್ವಿಮ್ಮಿಂಗ್ ಪೂಲ್’ ಮಾಡಿದ ಹೆಗ್ಗಳಿಕೆ ‘ಬಿಜೆಪಿ ಸರ್ಕಾರ’ದ್ದು – ಮಾಜಿ ಸಿಎಂ HDK
ಆದ್ರೇ.. ಕೆಲವೇ ದಿನಗಳಲ್ಲಿಯೇ.. ಲ್ಯಾಪ್ ಟಾಪ್ ರಿಪೇರಿ ಮಾಡಿಸಿದ್ದಂತ ಮಹಿಳೆಗೆ ಆಕೆಯದ್ದೇ ಖಾಸಗೀ ಪೋಟೋಗಳು, ಲ್ಯಾಪ್ ಟಾಪ್ ರಿಪೇರಿ ಮಾಡಿದ್ದಂತ ಪ್ರವೀಣ್ ರಾವ್ ನಿಂದ ಬರಲು ಶುರುವಾಗಿವೆ. ಈ ಪೋಟೋ ಕಂಡಂತ ಮಹಿಳೆ ಬೆಚ್ಚಿ ಬಿದ್ದಿದ್ದಾರೆ. ಇದಷ್ಟೇ ಅಲ್ಲದೇ ಆಕೆಯ ಪತಿಗೂ ಈ ಖಾಸಗೀ ಪೋಟೋಗಳನ್ನು ಕಳುಹಿಸಿ, ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಿದ್ರೇ.. ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ.
ಪ್ರವೀಣ್ ರಾವ್ ಬೆದರಿಕೆಗೆ ಬೆಚ್ಚಿದಂತ ಮಹಿಳೆಯ ಪತಿ, ಬಾಗಲಗುಂಟೆ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ, ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ ಪ್ರವೀಣ್ ರಾವ್ ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ, ಮಹಿಳೆ ಮನೆಗೆ ಲ್ಯಾಪ್ ಟಾಪ್ ರಿಪೇರಿಗೆ ತೆರಳಿದ್ದಾಗ, ಆಕೆಯ ಲ್ಯಾಪ್ ಟಾಪ್ ನಲ್ಲಿದ್ದಂತ ಖಾಸಗೀ ಪೋಟೋ ಕದ್ದಿರೋದಾಗಿ ತಿಳಿಸಿದ್ದಾನೆ. ಆತನ ವಿರುದ್ಧ ಎಫ್ಐಆರ್ ದಾಖಿಲಿಸಿ, ಜೈಲಿಗಟ್ಟಿದ್ದಾರೆ.
ಸೋ.. ಹೀಗೆ ಯಾರ್ ಯಾರಾರಿಗೋ ನಿಮ್ಮ ಮೊಬೈಲ್ ಹಾಳಾಗಿದೆ.. ಲ್ಯಾಪ್ ಟಾಪ್ ಕೆಟ್ಟೋಗಿದೆ ಅಂತ ರಿಪೇರಿಗಾಗಿ ಕೊಡುವಾಗ ಎಚ್ಚರಿಕೆ ವಹಿಸಿ.. ಮುಂದೆ ನಿಂತು ಸರಿ ಮಾಡಿಸೋದು ಮರೆಯಬೇಡಿ..