ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವಂತ ವಿವಿಧ 283 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ 12ನೇ ತರಗತಿ ಪಾಸ್ ಆಗಿರೋರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು afcat.cdac.in ತಾಣಕ್ಕೆ ಭೇಟಿ ನೀಡಿ, ಭಾರತೀಯ ವಾಯು ಪಡೆಯಲ್ಲಿ ಖಾಲಿ ಇರುವಂತ ಫ್ಲೈಯಿಂಗ್ ಬ್ರಾಂಚ್ ಮತ್ತು ಪರ್ಮನೆಂಟ್ ಕಮಿಷನ್ ( PC ), ಶಾರ್ಟ್ ಸರ್ವಿಸ್ ಕಮಿಷನ್ ( SSC ) ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ: ಭಾರತೀಯ ವಾಯುಪಡೆ ( Indian Air Force ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 12ನೇ ತರಗತಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಪಾಸ್ ಆಗಿರಬೇಕು. ಅಲ್ಲದೇ ಮೂರು ವರ್ಷದ ಬಿಇ ಅಥವಾ ಬಿ.ಟೆಕ್ ಪದವಿ ಕೋರ್ಸ್ ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
ವಯೋಮಿತಿ –ಹುದ್ದೆಯ ಅನುಸಾರ ಫ್ಲೈಯಿಂಗ್ ಬ್ರಾಂಚ್ ಗೆ 20 ರಿಂದ 24 ವರ್ಷ, ಗ್ರೌಂಡ್ ಡ್ಯೂಟಿ ಶಾಖೆ ಹುದ್ದೆಗಳಿಗೆ 20 ರಿಂದ 26 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 30-06-2022 ಕೊನೆಯ ದಿನಾಂಕವಾಗಿದೆ. ಈ ಸಂಬಂಧಿಸಿದಂತ ಹೆಚ್ಚಿನ ಮಾಹಿತಿಗಾಗಿ afcat.cdac.in ಜಾಲತಾಣಕ್ಕೆ ಭೇಟಿ ನೀಡಿ, ಪಡೆಯಬಹುದಾಗಿದೆ.