ಹಾವೇರಿ: ುವ ಕೇಂದ್ರ, ಓಂ ಯುವಕ ಸಂಘ, ಸ್ವಾಮಿ ವಿವೇಕಾನಂದ ಯುವಕ ಸಂಘ, ವರ್ಷಾ ಯುವ ಕ್ರೀಡಾ ಸಂಘ ಬೆಂಚಿಹಳ್ಳಿ ಹಾಗೂ ಹಾವೇರಿ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಸಹಯೋಗದಲ್ಲಿ ಯುವಜನತೆಗೆ ಜಲ ಜಾಗರಣ ಅಭಿಯಾನ ಕುರಿತು ತರಬೇತಿ ಮತ್ತು “ಮಳೆ ನೀರಿನ ಮರುಬಳಕೆ” ಕುರಿತು ಭಾಷಣ ಸ್ಪರ್ಧೆ ಇತ್ತೀಚೆಗೆ ಹಾವೇರಿ ನಗರದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಜರುಗಿತು.
ಸ್ಪರ್ಧೆಯಲ್ಲಿ ಧರಣಿ ವೆಂಕಣಗೌಡರ ಪ್ರಥಮ, ಪ್ರತಿ ತಳಮನಿ ದ್ವಿತೀಯ ಹಾಗೂ ಮೇಘಾ ತಳಮನಿ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಯುವ ಕೇಂದ್ರ ಅಧಿಕಾರಿ ಭುಕ್ಯಾ ಸಂಜೀವ ವಹಿಸಿದ್ದರು. ಕಲ್ಮೇಶ್ವರ ಪಿ.ಯು.ಕಾಲೇಜ್ ಪ್ರಾಂಶುಪಾಲ ರಮೇಶ ಮುದ್ನಾಳ, ವಿ.ಕೆ.ಹಲಗಣ್ಣನವರ, ಪಿ.ಸಿ.ಶೆಲವಡಿಮಠ, ಕಾರ್ಯನಿರ್ವಾಹಕ ಇಂಜಿನೀಯರ್ ಚನ್ನವೀರನಗೌಡ್ರ ಬಸವರಾಜ್, ಶ್ರೀ ಕಲೇಶ್ವರ ಪಿಯು ಕಾಲೇಜ್ ಮುಖ್ಯಪಾಧ್ಯಯರು ರಮೇಶ ಮುದ್ನಾಳ, ಎಸ್.ಬಿ.ಗಾಜಿಪುರ, ಎಸ್.ಬಿ.ಹೂಗಾರ, ರವಿ.ಸಿ.ವಿ. ಆರ್.ಸಿ.ಬೆನಕಣ್ಣನವರ, ಗಣೇಶ ವೆಂ.ರಾಯ್ಕರ, ಚಂದ್ರಕಲಾ ನರೇಗಲ್ ವಿವೇಕಾನಂದ ಇಂಗಳಗಿ, ವ್ಹಿ.ಕೆ. ಹಲಗಣ್ಣನವರ, ಎಸ್.ಬಿ. ಗಾಜಿಪುರ, ಎಸ್.ಬಿ.ಹೂಗಾರ ರವಿ.ಸಿ.ವಿ ಇತರು ಉಪಸ್ಥಿತರಿಂದರು.