ಶಿವಮೊಗ್ಗ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಆರ್.ಕೆ.ವಿ.ವೈ ಯೋಜನೆಯಡಿ ಕುರಿ/ಮೇಕೆ ಸಾಕಾಣಿಕೆಗಾಗಿ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಸಾಮಾನ್ಯ ವರ್ಗದ 18 ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು, ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರುಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ ಕಚೇರಿ ಅಥವಾ ಕುರಿಗಾರರ ಸಂಘದ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಫೆ. 20 ರೊಳಗಾಗಿ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -7406897075, ಶಿಕಾರಿಪುರ-9972957278, ಭದ್ರಾವತಿ-8722365101, ಸಾಗರ-9481255897, ಸೊರಬ-9900632880, ತೀರ್ಥಹಳ್ಳಿ-08181-228521 ಮತ್ತು ಹೊಸನಗರ-9449623236 ಗಳನ್ನು ಸಂಪರ್ಕಿಸುವುದು.
BREAKING NEWS: ಬೆಂಗಳೂರಿನಲ್ಲಿ ಸರಣಿ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು, ನಾಲ್ವರಿಗೆ ಗಾಯ
BIGG NEWS : ತುಮಕೂರು ದೇಶದ ಅತಿದೊಡ್ಡ ಔದ್ಯೋಗಿಕ ಜಿಲ್ಲೆಯಾಗಿ ಬೆಳೆಯಲಿದೆ : ಪ್ರಧಾನಿ ಮೋದಿ