ಬಾಗಲಕೋಟೆ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ( District Employment Exchange Office ) ವತಿಯಿಂದ ಜುಲೈ 1 ರಿಂದ 31 ವರೆಗೆ ಉಚಿತ ಬೇಸಿಕ್ ಕಂಪ್ಯೂಟರ ತರಬೇತಿ ( Basic Computer Training ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತರಬೇತಿಯಲ್ಲಿ 18 ರಿಂದ 35 ವರ್ಷ ದೊಳಗಿದ್ದು, ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ತರಬೇತಿಯಲ್ಲಿ ಭಾಗವಹಿಸುವವರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿಗಳ ಪ್ರತಿಗಳೊಂದಿಗೆ ಖುದ್ದಾಗಿ ಬಂದು ಹೆಸರು ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂಸಂ.08354-235337, 8147111236, 7019606100ಗೆ ಸಂಪರ್ಕಿಸಬಹುದಾಗಿದೆ.