ಬೆಂಗಳೂರು:ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ಅಂಗ ಸಂಸ್ಥೆಯಾದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಬೆಂಗಳೂರು ವತಿಯಿಂದ ನಡೆಸಲಾಗುವ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ಜುಲೈ 1 ರಿಂದ ಪ್ರಾರಂಭಿಸಲಾಗುತ್ತಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮತ್ತು ರಾಮನಗರ ಜಿಲ್ಲೆÀಗಳ ಖಾಸಗಿ ಅಭ್ಯರ್ಥಿಗಳಿಂದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಂದ ಮತ್ತು ಎಲ್ಲಾ ವಿವಿಧ ಸಹಕಾರ ಸಂಘ/ಬ್ಯಾಂಕ್‍ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿ ಪಡೆಯುವುದರಿಂದ ಸಹಕಾರ ಸಂಘ / ಸಂಸ್ಥೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುತ್ತದೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಅದ್ಯತೆ ನೀಡಲಾಗುವುದು.

ಈ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೂ ಸಹ ಪ್ರವೇಶ ಪಡೆಯಲು ಅವಕಾಶವಿರುತ್ತದೆ. ವಯೋಮಿತಿ 16 ವರ್ಷ ದಾಟಿದವರಾಗಿರಬೇಕು. ಅರ್ಜಿಯನ್ನು ಮೇ 31 ರ ಒಳಗಾಗಿ ಸಲ್ಲಿಸುವುದು. ತರಬೇತಿ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 500/- ಶಿಷ್ಯ ವೇತನ ನೀಡಲಾಗುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಮಾಸಿಕ ರೂ. 600/- ಶಿಷ್ಯ ವೇತನ ನೀಡಲಾಗುವುದು.

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್, ಸಹಕಾರ ಭವನ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಕಟ್ಟಡ, ನಂ 1/3, 2ನೇ ಮಹಡಿ, 3ನೇ ಮುಖ್ಯರಸ್ತೆ, ಕನ್ನಡ ಸಾಹಿತ್ಯ ಪರಿಷತ್ ಹಿಂಭಾಗ, ಮಕ್ಕಳಕೂಟ ಹತ್ತಿರ, ಚಾಮರಾಜಪೇಟೆ, ಬೆಂಗಳೂರು ಹಾಗೂ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಈ ಜಿಲ್ಲೆಯ ಜಿಲ್ಲಾ ಸಹಕಾರ ಸಂಘಗಳಲ್ಲೂ ಸಹ ಅರ್ಜಿ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9902189872, 9036256781 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Share.
Exit mobile version