ಬಾಗಲಕೋಟೆ: ಸರ್ಕಾರಿ ಪಾಲಿಟೆಕ್ನಿಕ್ ಮುಧೋಳ ಸಂಸ್ಥೆಯಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 11 ಕೊನೆಯ ದಿನವಾಗಿದ್ದು, ಸಿವಿಲ್,ಕಂಪ್ಯೂಟರ್ ಸೈನ್ಸ, ಇಲೆಕ್ಟ್ರಾನಿಕ್ಸ, ಮತ್ತು ಕಮ್ಯುನಿಕೇಶನ, ಮೆಕ್ಯಾನಿಕಲ್ ಇಂಜನಯರಿಂಗ್ ಹೀಗೆ 4 ವಿಭಾಗಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ನೀವು ಲ್ಯಾಪ್ ಟಾಪ್, ಮೊಬೈಲ್ ರಿಪೇರಿಗೆ ಕೊಡ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ 35% ಅಂಕಗಳನ್ನು ಪಡೆದು ಉತ್ತೀರ್ಣರಾದವರಿಗೆ ಮತ್ತು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶವನ್ನು ನೇರವಾಗಿ ನೀಡಲಾಗುವುದು. ಡಿಪ್ಲೋಮಾ ಪರೀಕ್ಷೆಯನ್ನು ಕನ್ನಡ ಮಾದ್ಯಮದಲ್ಲಿಯೂ ಕೂಡಾ ಬರೆಯಲು ಅವಕಾಶವಿರುತ್ತದೆ.
ಪ್ರವೇಶ ಪಡೆಯಲು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಂಕ ಪಟ್ಟಿ, ವರ್ಗಾವಣೆ ಪತ್ರ ಅಥವಾ ಎನ್‍ಓಸಿ, ಜಾತಿ ಪ್ರಮಾಣ ಪತ್ರ, ಮತ್ತು ಕನಿಷ್ಠ 5 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಲ್ಲಿಸಿ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ 9448038834, 9513263865 ಗೆ ಸಂಪರ್ಕಿಸಬಹುದಾಗಿದೆ ಎಂದು ಮುಧೋಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸಂಜೀವ ಕುಮಾರ ಚವ್ಹಾಣ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸಿಲಿಕಾನ್ ಸಿಟಿ’ಯನ್ನು ‘ಸ್ವಿಮ್ಮಿಂಗ್ ಪೂಲ್’ ಮಾಡಿದ ಹೆಗ್ಗಳಿಕೆ ‘ಬಿಜೆಪಿ ಸರ್ಕಾರ’ದ್ದು – ಮಾಜಿ ಸಿಎಂ HDK