ಬೆಂಗಳೂರು: ಇಲ್ಲಿನ ಕೃಷಿ ವಿಶ್ವವಿದ್ಯಾನಿಲಯದ ಬೇಕರಿ ತರಬೇತಿ ಕೇಂದ್ರದ ವತಿಯಿಂದ “ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ಕುರಿತು ಸರ್ಟಿಫಿಕೇಟ್ ಕೋರ್ಸ್”ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ. ಪಾಸ್/ಫೇಲ್ ಆಗಿರಬೇಕು. ನಿಗಧಿತ ಅರ್ಜಿ ಫಾರಂಗಳನ್ನು 10 ರೂಪಾಯಿ ಸಂದಾಯಿಸಿ, ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560024, ಇವರಿಂದ ಪಡೆದುಕೊಂಡು ಭರ್ತಿಮಾಡಿದ ಅರ್ಜಿಯನ್ನು ಮೇ 26 ಸಂಜೆ 4 ಗಂಟೆಯೊಳಗೆ ಇದೇ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ 080-23513370 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.