ಬೆಂಗಳೂರು : ಮೇ-2024ಮಾಹೆಯಲ್ಲಿ ನಡೆಯಲಿರುವ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಗೆ ರಾಜ್ಯದ ಸರ್ಕಾರಿ ಡಿ.ಇಎಲ್.ಇಡಿ ಸಂಸ್ಥೆಗಳು ಹಾಗೂ ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಿಂದ ಪರೀಕ್ಷಾ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2023-24ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ವಾರ್ಷಿಕ ಕಾರ್ಯ ಯೋಜನೆಯಂತೆ ಶೈಕ್ಷಣಿಕ ಅವಧಿಯ ಪರೀಕ್ಷೆಗಳನ್ನು ಮೇ-2024 ಮಾಹೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಹೊಸ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ಲಿಖಿತ (ಥಿಯರಿ) ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 2019-20ನೇ ಸಾಲಿನಿಂದ ಡಿ.ಇಎಲ್.ಇಡಿ ಪರೀಕ್ಷಾ ಪ್ರಕ್ರಿಯೆಗಳನ್ನು Online ವ್ಯವಸ್ಥೆಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಡಿ.ಇಎಲ್.ಇಡಿ. ಪರೀಕ್ಷೆಗೆ Online ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

1. ಸರ್ಕಾರಿ ಡಿ.ಇಎಲ್.ಇಡಿ ಸಂಸ್ಥೆಗಳು ಹಾಗೂ ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದು ನಿಯಮಾನುಸಾರ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಡಿ.ಇಡಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಿರುತ್ತಾರೆ. ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಿಂದ ಹಾಜರಾಗುವ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಮಂಡಲಿಯ https://kseab.karnataka.gov.in 2 Other Exams Portal/DElEd Examination ನಲ್ಲಿ Institute Login ಮೂಲಕ Upload ಮಾಡಲು ಸೂಚಿಸಿದೆ.

2. ದಾಖಲಾತಿ ಅನುಮೋದನಾ ಪಟ್ಟಿ:-

ಸರ್ಕಾರಿ ಡಿ.ಇಎಲ್.ಇಡಿ ಸಂಸ್ಥೆಗಳು ಹಾಗೂ ಮಾನ್ಯತೆ ಪಡೆದು ಅಸ್ತಿತ್ವದಲ್ಲಿರುವ ಖಾಸಗಿ ಡಿ.ಇಎಲ್.ಇಡಿ ಕಾಲೇಜುಗಳಿಗೆ ಸಂಬಂಧಿಸಿದಂತೆ, ಉಲ್ಲೇಖ(2)ರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯರವರ ನಿರ್ದೇಶನ ಮತ್ತು ಮಾರ್ಗದರ್ಶನಗಳಂತೆ, ಉಲ್ಲೇಖ (3)ರ ಆದೇಶ ಮತ್ತು ಸ್ಪಷ್ಟಿಕರಣಗಳಂತೆ ಜಿಲ್ಲಾ ಡಯಟ್ ಪ್ರಾಂಶುಪಾಲರು ಡಿ.ಇಎಲ್.ಇಡಿ ಅಭ್ಯರ್ಥಿಗಳ ನಾಮಪಟ್ಟಿಯನ್ನು (Nominal Roll) ಪರಿಶೀಲಿಸಿ ಅನುಮೋದಿಸುವುದು.

 

 

Share.
Exit mobile version