ಶಿವಮೊಗ್ಗ: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ( District Court ) ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ ಹುದ್ದೆಗಳಿಗೆ ( Peon Job ) ಹಾಗೂ ಬಿಂಬಾಕಿ ಉಳಿದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ https://districts.ecourts.gov.in/shivamogga/online-recruitment ಅಥವಾ https://karnatakajudiciary.kar.nic.in/districtrecruitment.asp ಗೆ ಭೇಟಿ ನೀಡಿ ದಿನಾಂಕ 25-02-2022ರ ಇಂದಿನಿಂದ ದಿನಾಂಕ 24-03-2022ರ ರಾತ್ರಿ 11.59ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
BIGG BREAKING NEWS: ‘ಉಕ್ರೇನ್’ನಲ್ಲಿ ಇಂಟರ್ನೆಟ್ ಸ್ಥಗಿತ | Russia-Ukraine Crisis
ಹುದ್ದೆಗಳ ಸಂಖ್ಯೆ – 27
ವೇತನ ಶ್ರೇಣಿ – 17,000 ದಿಂದ 28,950
ಶೈಕ್ಷಣಿಕ ವಿದ್ಯಾರ್ಹತೆ – 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ಬರಬೇಕು.
ವಯೋಮಿತಿ – ಕನಿಷ್ಠ 18, ಗರಿಷ್ಠ ಸಾಮಾನ್ಯ ವರ್ಗ 35, 2ಎ, 2ಬಿ, 3ಎ, 3ಬಿ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ-1 40 ವರ್ಷ
ಅರ್ಜಿ ಶುಲ್ಕ – ಸಾಮಾನ್ಯ ವರ್ಗದವರಿಗೆ ರೂ.200, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೂ ರೂ.100. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಿಯಿಂದ ವಿನಾಯ್ತಿ ನೀಡಲಾಗಿದೆ.
ಆಯ್ಕೆ ವಿಧಾನ – ಅರ್ಹತಾ ಪರೀಕ್ಷೆ ಆಧಾರದ ಮೇಲೆ 1:10 ಅನುಪಾತದಲ್ಲಿ ಸಂದರ್ಶನದ ಮೂಲಕ ಆಯ್ಕೆ.