ಬಳ್ಳಾರಿ : ಕೆನರಾ ಬ್ಯಾಂಕ್ ದೇಶಪಾಂಡೆ ಅರ್ಸೆಟಿ ದಾಂಡೇಲಿ ಹಾಗೂ ಟಾಟಾ ಮೋಟರ್ಸ್ ಧಾರಾವಾಡ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಉಚಿತ ಲಘು ವಾಹನಾ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
20 ರಿಂದ 45 ವರ್ಷ ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ ಮತ್ತು ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಏಪ್ರಿಲ್ 10 ರೊಳಗಾಗಿ ದಾಂಡೇಲಿಯ ಹಸನಮಾಳದ ಕೆನೆರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಕೇಂದ್ರ, ಇಲ್ಲಿಗೆ ಸಲ್ಲಿಸಬಹುದಾಗಿದೆ. ವ್ಯಾಟ್ಸ್ಪ್ ನಂಬರ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯಲ್ಲಿ ಊಟೋಪಚಾರ ಹಾಗೂ ವಸತಿ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.08284-298547, 9632149217, 9449782425 ಗೆ ಸಂಪರ್ಕಿಬಹುದಾಗಿದೆ.
Job Alert: ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಜಿಲ್ಲಾ ತರಬೇತಿ ಕೇಂದ್ರ(ಆರೋಗ್ಯ), ಶಿವಮೊಗ್ಗ ಇಲ್ಲಿಗೆ ಆರೋಗ್ಯ ಶಿಕ್ಷಣಾಧಿಕಾರಿ(ಹೆಚ್ಇಓ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯ ವಯಸ್ಸು 60 ರಿಂದ 65 ವರ್ಷಗಳ ಒಳಗಿದ್ದು, ಹಿರಿಯ ಆರೋಗ್ಯ ಸಹಾಯಕರು ಅಥವಾ ಇನ್ನೂ ಹೆಚ್ಚಿನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ವಹಿಸಿದ ಹಾಗೂ ತರಬೇತಿ ನೀಡಿದ ಅನುಭವ ಮತ್ತು ಸಾಮಥ್ರ್ಯವಿರಬೇಕು.ಅರ್ಜಿಯನ್ನು ಜಿಲ್ಲಾ ತರಬೇತಿ ಕೇಂದ್ರ(ಆರೋಗ್ಯ), ಶಿವಮೊಗ್ಗ ಇಲ್ಲಿಗೆ ದಿನಾಂಕ: 03-04-2023 ರೊಳಗೆ ಸಲ್ಲಿಸಬೇಕೆಂದು ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.