ಸುಭಾಷಿತ :

Wednesday, April 1 , 2020 1:14 AM

ಭಾರತೀಯ ಯೋಧನನ್ನು ಉಗ್ರರು ಅಪಹರಿಸಿದ್ದಾರೆ ಎಂಬ ವರದಿ ಸುಳ್ಳು ಎಂದ ರಕ್ಷಣಾ ಸಚಿವಾಲಯ


Saturday, March 9th, 2019 9:35 am

ನವದೆಹಲಿ: ರಜೆಯ ಮೇಲೆ ತೆರಳಿದ್ದ ಸೇನಾ ಯೋಧ ಮೊಹಮ್ಮದ್ ಯಾಸೀನ್ ನ ಅಪಹರಣವಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸುಳ್ಳು ಅವರು ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶನಿವಾರ ಪ್ರಕಟಣೆ ಹೊರಡಿಸಿದೆ.

ಶಸ್ತ್ರಸಜ್ಜಿತ ಉಗ್ರರು ಯಾಸೀನ್ ನನ್ನು ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿರುವ ಆತನ ಮನೆಯಿಂದ ಅಪಹರಿಸಿದ್ದಾರೆ ಎಂದು ನಿನ್ನೆ ಸಂಜೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಅದೆಲ್ಲ ಸುಳ್ಳು ಎಂದು ವರದಿಯಾಗಿದೆ.

ಮೊಹಮ್ಮದ್ ಯಾಸೀನ್ ಭಾರತೀಯ ಸೇನೆಯ ಜೆಎಕೆಎಲ್ಐ ಘಟಕಕ್ಕೆ ಸೇರಿದ್ದಾರೆ. ಉಗ್ರರು ಪುಲ್ವಾಮಾದ ನೆವಾದಿಂದ ಬಂದಿರಬಹುದು ಎಂದು ಶಂಕಿಸಲಾಗಿತ್ತು. ಹೀಗಾಗಿ ಪೊಲೀಸರು ಸಾಮೂಹಿಕ ಶೋಧ ಕಾರ್ಯಾಚರಣೆಯನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಕೈಗೊಂಡಿದ್ದರು. ಯೋಧನ ಅಪಹರಣದ ಹಿಂದೆ ಹಿಜ್ ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ ಎ ತೊಯ್ಬಾ ಸಂಘಟನೆಯ ಕೈವಾಡವಿರುವುದನ್ನು ಕೂಡ ಶಂಕಿಸಲಾಗಿತ್ತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions