ನವದೆಹಲಿ: ಗೂಗಲ್’ನ ಭಾರಿ ವಜಾಗಳ ನಂತ್ರ ಕ್ಯಾಲಿಫೋರ್ನಿಯಾ ಮೂಲದ ಟೆಕ್ ದೈತ್ಯ ಗೂಗಲ್ ಮತ್ತೊಮ್ಮೆ ಹಣವನ್ನ ಮರುಹಂಚಿಕೆ ಮಾಡಲು ಪ್ರಯತ್ನಿಸುತ್ತಿದ್ದು, ವೆಚ್ಚ ಕಡಿತ ಕ್ರಮಗಳನ್ನ ಪ್ರಾರಂಭಿಸಿದೆ.
ಗೂಗಲ್ ಕಂಪನಿಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಆದ್ಯತೆ ನೀಡುವುದರೊಂದಿಗೆ ಸಧ್ಯ ಹೊಸ ವೆಚ್ಚ ಕಡಿತ ಕ್ರಮಗಳು ಸಿಬ್ಬಂದಿಯನ್ನ ನಿರುತ್ಸಾಹಗೊಳಿಸಿದೆ. ವರದಿ ಪ್ರಕಾರ, ಗೂಗಲ್ ತನ್ನ ಸಿಬ್ಬಂದಿಗಳಿಗೆ ಕೆಲವು ಸವಲತ್ತುಗಳನ್ನ ಕಡಿತಗೊಳಿಸುವ ಬಗ್ಗೆ ಗೂಗಲ್ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್ ಅವರಿಂದ ಸೋರಿಕೆಯಾದ ಮೆಮೋ ತಿಳಿಸಿದೆ. ಇದು ಉಚಿತ ತಿಂಡಿಗಳು, ಪಾನೀಯಗಳು ಮತ್ತು ಸೆಲ್ಟ್ಜರ್ ನೀರನ್ನ ನಿಲ್ಲಿಸುವುದನ್ನ ಒಳಗೊಂಡಿದೆ.
ಈ ಬದಲಾವಣೆಗಳು “ಆಹಾರ ತ್ಯಾಜ್ಯವನ್ನ ಕಡಿಮೆ ಮಾಡುತ್ತೆ ಮತ್ತು ಪರಿಸರಕ್ಕೆ ಉತ್ತಮವಾಗಿರುತ್ತದೆ” ಎಂದು ಮೆಮೋ ವಾದಿಸಿದೆ. ಇನ್ನು ಗೂಗಲ್ ವಿಶ್ವದಾದ್ಯಂತ ತನ್ನ ಕಚೇರಿಗಳಲ್ಲಿ ಕನಿಷ್ಠ 1,300 ಮೈಕ್ರೋ-ಕಿಚನ್ಗಳನ್ನು ಹೊಂದಿದ್ದು, ತನ್ನ ಸಿಬ್ಬಂದಿಗೆ ಹಲವಾರು ಔತಣಗಳನ್ನ ಒದಗಿಸುತ್ತದೆ.
ಇನ್ನು ಇದಷ್ಟೇ ಅಲ್ಲದೇ ಲ್ಯಾಪ್ಟಾಪ್ಗಳಂತಹ ವೈಯಕ್ತಿಕ ಸಾಧನಗಳಿಗೆ ಧನಸಹಾಯ ನೀಡುವುದನ್ನ ಕಂಪನಿಯು ನಿಲ್ಲಿಸುತ್ತಿದೆ ಎಂದು ವರದಿ ಸೂಚಿಸುತ್ತದೆ.
“ಮುಖ್ಯವಾಹಿನಿಗೆ ಹಿಂತಿರುಗಿ” ; ‘ಈಶಾನ್ಯ ಉಗ್ರ’ರಿಗೆ ಪ್ರಜಾಪ್ರಭುತ್ವದ ಭಾಗವಾಗುವಂತೆ ‘ಅಮಿತ್ ಶಾ’ ಕರೆ